Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
Nag Panchami 2025: ನಾಗ ಪಂಚಮಿ ಯಾವಾಗ? ಜುಲೈ 28 ಅಥವಾ 29? ಇಲ್ಲಿದೆ ಸರಿಯಾದ ದಿನಾಂಕ
ಹಿಂದೂ ಧರ್ಮದಲ್ಲಿ ನಾಗ ಪಂಚಮಿಗೆ ವಿಶೇಷ ಮಹತ್ವವಿದೆ. ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಸರ್ಪ ದೇವತೆ ಮತ್ತು ಶಿವನನ್ನು ಪೂಜಿಸುವುದರಿಂದ ಕಾಲ ಸರ್ಪ ದೋಷದಿಂದ ಮುಕ್ತಿ ಸಿಗುತ್ತದೆ. ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ನಾಗ ಪಂಚಮಿ ವಿಶೇಷವಾಗಿ ಹಾವುಗಳ ಆರಾಧನೆಗೆ ಪ್ರಸಿದ್ಧವಾಗಿದೆ ಮತ್ತು ಇದು ಪ್ರಕೃತಿಗೆ ಗೌರವವನ್ನು ತೋರಿಸುವ ಸಂಕೇತವಾಗಿದೆ. 2025ರಲ್ಲಿ ನಾಗರ ಪಂಚಮಿ ಹಬ್ಬವನ್ನು ಯಾವಾಗ ಆಚರಿಸಬೇಕು (Nag Panchami 2025 Date) ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ನಾಗರ ಪಂಚಮಿಯ (Nagara Panchami) ಆಚರಣೆಯ ಸಂದರ್ಭದಲ್ಲಿ, ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ, ಹುತ್ತಗಳಿಗೆ ಹಾಲು ಮತ್ತು ಬೆಳ್ಳಿಯ ಆಭರಣಗಳನ್ನು ಅರ್ಪಿಸಿ ನಾಗದೇವರನ್ನು ಪ್ರಾರ್ಥಿಸುತ್ತಾರೆ. ತಮ್ಮನ್ನು ಕಾಪಾಡುವಂತೆ ಬೇಡಿಕೊಳ್ಳುತ್ತಾರೆ. ಅಣ್ಣ-ತಂಗಿಯರ ಬಾಂಧವ್ಯದ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂಬ ನಂಬಿಕೆ ಇದೆ. ನಾಗರಪಂಚಮಿಯ ಸಮಯದಲ್ಲಿ ವಾತಾವರಣವು ಶಾಂತವಾಗಿರುತ್ತದೆ. ಇದು ಸಾತ್ವಿಕತೆಯನ್ನು ಗ್ರಹಿಸಲು ಅನುಕೂಲಕರವಾಗಿದೆ. ಪಂಚಪ್ರಾಣಗಳೇ ಪಂಚನಾಗಗಳೆಂದು ಪರಿಗಣಿಸಲ್ಪಡುತ್ತವೆ. ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವನ್ನು ಪ್ರಾರ್ಥಿಸುವುದು ಮಂಗಳಕರವೆಂದು ಹೇಳಲಾಗುತ್ತದೆ. ಈ ಬಾರಿ ನಾಗ ಪಂಚಮಿ ಯಾವಾಗ? ಸರಿಯಾದ ದಿನಾಂಕ ತಿಳಿಯಿರಿ.

2025 ರಲ್ಲಿ ನಾಗರ ಪಂಚಮಿ ಯಾವಾಗ?
ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯು ಜುಲೈ 28, 2025 ರಂದು ರಾತ್ರಿ 11.24 ಗಂಟೆಗೆ ಪ್ರಾರಂಭವಾಗುತ್ತಿದೆ. ಈ ದಿನಾಂಕವು ಜುಲೈ 30 ರಂದು ಮಧ್ಯಾಹ್ನ 12.46 ಗಂಟೆಗೆ ಕೊನೆಗೊಳ್ಳುತ್ತದೆ. ಈ ಪರಿಸ್ಥಿತಿಯಲ್ಲಿ, ನಾಗ ಪಂಚಮಿ ಹಬ್ಬವನ್ನು ಮಂಗಳವಾರ, ಜುಲೈ 29, 2025 ರಂದು ಆಚರಿಸಲಾಗುತ್ತದೆ.
ಪೂಜಾ ಶುಭ ಸಮಯ
ಧಾರ್ಮಿಕ ದೃಷ್ಟಿಕೋನದಿಂದ ಶುಭ ಸಮಯದಲ್ಲಿ ಪೂಜೆ ಮಾಡಿದರೆ, ಅದರ ಪ್ರಯೋಜನಗಳು ದ್ವಿಗುಣಗೊಳ್ಳುತ್ತವೆ. ನಾಗ ಪಂಚಮಿಯಂದು ಪೂಜೆಯ ಮುಖ್ಯ ಮುಹೂರ್ತಗಳು ಈ ಕೆಳಗಿನಂತಿವೆ.
- ಬೆಳಗಿನ ಮುಹೂರ್ತ: ಬೆಳಗ್ಗೆ 5.42 ರಿಂದ 8.31 ರವರೆಗೆ
- ಚೋಘಡಿಯ ಮುಹೂರ್ತ: ಬೆಳಗ್ಗೆ 10.47 ರಿಂದ ಮಧ್ಯಾಹ್ನ 12.28 ರವರೆಗೆ
- ಮಧ್ಯಾಹ್ನ ಶುಭ ಸಮಯ: ಮಧ್ಯಾಹ್ನ 3.51 ರಿಂದ ಸಂಜೆ 5.32 ರವರೆಗೆ
ಈ ಶುಭ ಸಮಯದಲ್ಲಿ, ಸರ್ಪ ದೇವರನ್ನು ಸರಿಯಾದ ರೀತಿಯಲ್ಲಿ ಪೂಜಿಸುವುದು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗುತ್ತದೆ.
ನಾಗರ ಪಂಚಮಿಯ ಮಹತ್ವ
ಈ ದಿನದಂದು ಭಕ್ತರು ನಾಗದೇವನಿಗೆ ಹಾಲು, ಶ್ರೀಗಂಧ, ಹೂವು, ಅಕ್ಕಿ ಇತ್ಯಾದಿಗಳನ್ನು ಅರ್ಪಿಸಿ ಉಪವಾಸ ಆಚರಿಸಿ ಪೂಜಿಸುತ್ತಾರೆ. ನಾಗಪಂಚಮಿಯಂದು ಮಾಡುವ ಪೂಜೆಯಿಂದ ಭಯ, ರೋಗ, ದುಃಖ ಮತ್ತು ಕಾಲಸರ್ಪ ದೋಷ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯ ದೋಷಗಳಿಂದ ಬಳಲುತ್ತಿರುವವರಿಗೆ ಈ ದಿನ ವಿಶೇಷವಾಗಿ ಶುಭವಾಗಿದೆ.
ಉಪವಾಸದ ಮಹತ್ವ ಏನು?
ನಾಗರ ಪಂಚಮಿಯಂದು ಆಚರಿಸಲಾಗುವ ಉಪವಾಸದ ಮಹತ್ವವು ಸತ್ಯೇಶ್ವರಿ ಎಂಬ ದೇವಿಯ ಕಥೆಯೊಂದಿಗೆ ತಳುಕು ಹಾಕಿಕೊಂಡಿದೆ. ಸತ್ಯೇಶ್ವರಿ ದೇವಿಯು ಸತ್ಯೇಶ್ವರ ಎಂಬ ಸಹೋದರನನ್ನು ಹೊಂದಿದ್ದಳು. ನಾಗರ ಪಂಚಮಿಯ ಹಿಂದಿನ ದಿನ ಸತ್ಯೇಶ್ವರನು ಮರಣ ಹೊಂದಿದನು. ತಮ್ಮ ಸಹೋದರನ ಅಗಲಿಕೆಯಿಂದ ದುಃಖಿತಳಾದ ಸತ್ಯೇಶ್ವರಿ ಅಂದು ಆಹಾರವನ್ನು ತ್ಯಜಿಸಿದಳು. ಆಗ ಆಕೆಗೆ ಆಕೆಯ ಸಹೋದರನು ನಾಗರೂಪದಲ್ಲಿ ಕಾಣಿಸಿಕೊಂಡನು ಎಂದು ಹೇಳಲಾಗುತ್ತದೆ. ಆ ದಿನದಿಂದ, ಮಹಿಳೆಯರು ತಮ್ಮ ಸಹೋದರನ ಹೆಸರಿನಲ್ಲಿ ಉಪವಾಸವನ್ನು ಆಚರಿಸುವ ಸಂಪ್ರದಾಯವು ಬೆಳೆದು ಬಂದಿದೆ.
ಸಹೋದರನಿಗೆ ದೀರ್ಘಾಯುಷ್ಯ ದೊರೆಯಲಿ
ಈ ಉಪವಾಸದ ಮತ್ತೊಂದು ಉದ್ದೇಶವೆಂದರೆ, ಸಹೋದರನಿಗೆ ದೀರ್ಘಾಯುಷ್ಯ ದೊರೆಯಲಿ ಮತ್ತು ಅವನು ಎಲ್ಲಾ ರೀತಿಯ ದುಃಖಗಳು ಹಾಗೂ ಸಂಕಟಗಳಿಂದ ದೂರವಿರಲಿ ಎಂದು ಪ್ರಾರ್ಥಿಸುವುದು. ನಾಗರ ಪಂಚಮಿಯ ಹಿಂದಿನ ದಿನದಂದು, ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಹೋದರೆ, ಅದು ಆಕೆಯ ಸಹೋದರನಿಗೆ ಒಳಿತನ್ನುಂಟು ಮಾಡುತ್ತದೆ ಮತ್ತು ಅವನಿಗೆ ರಕ್ಷಣೆಯನ್ನು ನೀಡುತ್ತದೆ ಎಂಬ ನಂಬಿಕೆ ಇದೆ.
ಹಾವುಗಳಿಗೆ ಹಾಲುಣಿಸುವ ಸಂಪ್ರದಾಯ
ಗ್ರಾಮೀಣ ಪ್ರದೇಶಗಳಲ್ಲಿ ನಾಗರ ಪಂಚಮಿಯಂದು ಹಾವುಗಳಿಗೆ ಹಾಲುಣಿಸುವ ಸಂಪ್ರದಾಯ ಇನ್ನೂ ಜೀವಂತವಾಗಿದೆ. ಅನೇಕ ತಜ್ಞರು ಇದನ್ನು ಪರಿಸರಕ್ಕೆ ಹಾನಿಕಾರಕವೆಂದು ಪರಿಗಣಿಸಿದರೂ, ಅನೇಕ ಭಕ್ತರು ಇದನ್ನು ಇನ್ನೂ ನಂಬಿಕೆಯ ಸಂಕೇತವಾಗಿ ಮಾಡುತ್ತಾರೆ. ದೇವಾಲಯಗಳಲ್ಲಿ ನಾಗ ದೇವರ ವಿಗ್ರಹ ಅಥವಾ ಚಿತ್ರವನ್ನು ಹಾಲು, ಅರಿಶಿನ ಮತ್ತು ಶ್ರೀಗಂಧದಿಂದ ಅಭಿಷೇಕ ಮಾಡಿ ಪೂಜಿಸಲಾಗುತ್ತದೆ.



Click it and Unblock the Notifications

