Latest Updates
-
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಕರ್ನಾಟಕ ಬಂದ್ 2026: ಬೆಂಗಳೂರಿನಲ್ಲಿ ಜನಜೀವನ ಹೇಗಿದೆ? ಇಲ್ಲಿದೆ ಇಂದಿನ ಲೇಟೆಸ್ಟ್ ಅಪ್ಡೇಟ್ -
ಎಡಗೈ ಬಳಸುವವರೇ ಗಮನಿಸಿ: ಕುತ್ತಿಗೆ ಮತ್ತು ಮಣಿಕಟ್ಟಿನ ನೋವಿಗೆ ಇಲ್ಲಿದೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ಕ್ಯಾಂಪಸ್ ಪ್ರೇಮಿಗಳೇ ಎಚ್ಚರ! ರ್ಯಾಗಿಂಗ್ನಿಂದ ಪಾರಾಗಲು ಮತ್ತು ಸುರಕ್ಷಿತವಾಗಿರಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ಮುಂಬೈ ಭೂಕುಸಿತದ ಎಚ್ಚರಿಕೆ: ಮಳೆಗಾಲದಲ್ಲಿ ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ ಕ್ರಮಗಳನ್ನು ಪಾಲಿಸಿ
ನಾಗರ ಪಂಚಮಿ ಬಳಿಕ ಈ 5 ರಾಶಿಗಳ ಅದೃಷ್ಟವೇ ಬದಲಾಗಲಿದೆ
ಹಿಂದೂಗಳ ಪ್ರಮುಖ ಹಬ್ಬವಾದ ನಾಗರಪಂಚಮಿ ಹಬ್ಬ ಆಗಸ್ಟ್ 21ಕ್ಕೆ ಬಂದಿದೆ, ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನ ನಾಗರ ಪಂಚಮಿಯನ್ನು ಆಚರಿಸಲಾಗುವುದು. ನಾಗರ ಪಂಚಮಿ ಹಬ್ಬ ಬಂತೆಂದರೆ ಸಾಲು-ಸಾಲು ಹಬ್ಬಗಳ ಸಂಭ್ರಮ ಶುರುವಾಗಲಿದೆ. ರಕ್ಷಾ ಬಂಧನ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ , ನವರಾತ್ರಿ, ದಸರಾ, ದೀಪಾವಳಿ ಹೀಗೆ ಪ್ರಮುಖ ಹಬ್ಬಗಳು ಬರಲಿದೆ.

ನಾಗರ ಪಂಚಮಿ ಹಬ್ಬವನ್ನು ದೇಶದ ಎಲ್ಲಾ ಕಡೆ ಆಚರಿಸುವ ವಿಧಾನ ಒಂದೇ ರೀತಿ ಇದೆ. ಈ ದಿನ ಹಾವಿನ ಹುತ್ತಕ್ಕೆ ಹಾಲೆರೆದು, ಹಾವಿನ ಮೂರ್ತಿಗಳನ್ನು ಪೂಜಿಸಿ ನಾಗದೇವನ ಆಶೀರ್ವಾದ ಕೋರಲಾಗುವುದು. ಈ ದಿನದಂದು ಶೇಷನಾಗ ಹಾಗೂ ಶ್ರೀವಿಷ್ಣುವನ್ನು ಭಕ್ತಿಯಿಂದ ಆರಾಧಿಸಲಾಗುವುದು.
ಈ ಹಬ್ಬದ ಹಿನ್ನೆಲೆಯ ವಿಶೇಷತೆ ನೋಡುವುದಾರೆ
ಮಳೆಗಾಲದಲ್ಲಿ ಹಾವುಗಳು ಹುತ್ತವನ್ನು ಸೇರಿರುತ್ತದೆ, ಈ ಅವಧಿಯಲ್ಲಿ ಕೃಷಿ ಚಟುವಟಿಕೆ ಮಾಡಲಾಗುವುದು, ಈ ಸಮಯದಲ್ಲಿ ನಮಗೇನೂ ತೊಂದರೆ ಮಾಡಬೇಡ ಎಂದು ಕೋರಿ ಹಾವಿಗೆ ಪೂಜೆಯನ್ನು ಸಲ್ಲಿಸಲಾಗುವುದು. ಭಕ್ತಿಗೆ ಶಕ್ತಿಯಿದೆ ಎಂಬುವುದನ್ನು ತಳ್ಳಿ ಹಾಕುವಂತಿಲ್ಲ.. ಮೂಕ ಪ್ರಾಣಿಗಳಿಗೆ ಯಾವುದೇ ಹಾನಿ ಮಾಡದಿದ್ದರೆ ಅವು ಕೂಡ ಏನೂ ತೊಂದರೆ ಮಾಡುವುದಿಲ್ಲ, ಹಾವನ್ನು ಪೂಜಿಸಿದರೆ ಪೂಜಾ ಭಾವನೆಯಿಂದ ಮನುಷ್ಯರು ಅದರ ಮೇಲೆ ದಾಳಿ ಮಾಡುವುದು ಕೂಡ ಕಡಿಮೆಯಾಗುವುದು, ಈ ಉದ್ದೇಶದಿಂದ ನಾಗರ ಪಂಚಮಿ ಆಚರಣೆಯನ್ನು ನಮ್ಮ ಪೂರ್ವಜರು ಪ್ರಾರಂಭಿಸಿರಬಹುದು ಅಲ್ವಾ? ಏನೇ ಆಗಲಿ ಈ ಹಬ್ಬ ನಮಗೆ ಸಂತೋಷವನ್ನು ಹೊತ್ತು ಬರುವುದಂತು ನಿಜ. ಈ ನಾಗರ ಪಂಚಮಿ ಹಬ್ಬ ಎಲ್ಲರಿಗೂ ಒಳಿತು ಮಾಡಲಿ, ಜ್ಯೋತಿಷ್ಯ ಪ್ರಕಾರ ಈ ನಾಗ ಪಂಚಮಿ ಬಳಿಕ ಈ ರಾಶಿಯವರಿಗೆ ಶುಭ ಸಮಯ:
ಮೇಷ ರಾಶಿ
ಮೇಷ ರಾಶಿಯವರ ವೃತ್ತಿ ಜೀವನದಲ್ಲಿ ಪ್ರಗತಿ ಉಂಟಾಗಲಿದೆ. ವ್ಯಾಪಾರಸ್ಥರು ಉತ್ತಮ ಲಾಭ ಪಡೆಯುವಿರಿ, ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ವ್ಯಾಪಾರ ವಿಸ್ತರಿಸಲಿದೆ.
ವೃಶ್ಚಿಕ ರಾಶಿ
ನೀವು ಏನಾದರೂ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ ನಾಗರಪಂಚಮಿ ಉತ್ತಮ ದಿನವಾಗಿರುತ್ತದೆ. ನೀವು ಎಲ್ಲಿ ಬೇಕಾದರೂ ಹೂಡಿಕೆ ಮಾಡಬಹುದು. ವ್ಯಾಪಾರಸ್ಥರಿಗೆ ತುಂಬಾ ಒಳ್ಳೆಯದಿದೆ.
ಧನು ರಾಶಿ
ಈ ದಿನವು ಧನು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ನೀವು ಹಣ ಗಳಿಸುವ ಅವಕಾಶಗಳನ್ನು ಪಡೆಯುತ್ತೀರಿ. ಹೂಡಿಕೆಯಿಂದಲೂ ಲಾಭವಾಗಲಿದೆ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ.
ಮಕರ ರಾಶಿ
ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳು ನಾಗರ ಪಂಚಮಿ ಬಳಿಕ ಪೂರ್ಣಗೊಳ್ಳಲಿವೆ. ನೀವು ಮಾಡುವ ಯಾವುದೇ ಕೆಲಸದಲ್ಲಿ ನೀವು ಯಶಸ್ವಿಯಾಗುತ್ತೀರಿ. ಕುಟುಂಬದಲ್ಲಿ ಸಂತೋಷ ಇರುತ್ತದೆ. ನಿಮ್ಮ ಆದಾಯ ಹೆಚ್ಚಾಗಲಿದೆ.
ಕುಂಭ ರಾಶಿ
ನೀವು ಹಣ ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ, ನಿಮ್ಮ ಸಂಪತ್ತು ವೃದ್ಧಿಸಲಿದೆ. ಮದುವೆಯ ಮಾತುಕತೆಗಳು ಯಶಸ್ವಿಯಾಗಲಿದೆ, ವೈವಾಹಿಕ ಜೀವನ ಚೆನ್ನಾಗಿರಲಿದೆ.



Click it and Unblock the Notifications