Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಎರಡೆರಡು ಬಾರಿ ಮೃತಪಟ್ಟಿದ್ದ ಇಂಗ್ಲೆಂಡ್ ಪಾರ್ಲಿಮೆಂಟ್ ಎಂಪಿ..! ಹೇಗೆ ಗೊತ್ತಾ?
ಒಬ್ಬ ವ್ಯಕ್ತಿ ಉಸಿರು ನಿಲ್ಲಿಸಿದ ಅಂದ ಮೇಲೆ ಆತ ದೇಹ ತ್ಯಜಿಸಿದ್ದಾನೆ ಎಂದರ್ಥ. ಒಬ್ಬ ವ್ಯಕ್ತಿ ಒಮ್ಮೆ ಪಾತ್ರವೇ ಮರಣ ಹೊಂದಲು ಸಾಧ್ಯ. ಇದು ಸಾರ್ವತ್ರಿಕ ನಿಯಮ ಎನ್ನಬಹುದು. ಆದ್ರೆ ಯಾರಾದ್ರು ಎರಡು ಬಾರಿ ಮರಣ ಹೊಂದುವುದು ನೋಡಿದ್ದೀರಾ? ಅಥವಾ ಎಲ್ಲಾದ್ರು ಕೇಳಿದ್ದೀರಾ? ಸಾಮಾನ್ಯ ಜನರಾದರೆ ಯಾರು ಕೂಡ ಈ ಘಟನೆಯನ್ನು ಅದ್ಟೊಂದು ತಲೆಕೆಸಿಡಿಸಿಕೊಳ್ಳುವುದಿಲ್ಲ.
ಆದ್ರೆ ಇಲ್ಲೊಬ್ಬ ಎರಡು ಬಾರಿ ಮರಣ ಹೊಂದಿರುವ ಇತಿಹಾಸ ಹೊಂದಿದ್ದಾನೆ. ಜಾನ್ ಸ್ಟೋನ್‌ಹೌಸ್ ಎಂಬ ಇಂಗ್ಲೆಂಡ್‌ನ ಸಂಸತ್ತಿನ ಮಾಜಿ ಸದಸ್ಯ ಆತ ತಂತಹದೊಂದು ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದಾರೆ. ಆತ ಮೊದಲ ಬಾರಿಗೆ 1974ರಲ್ಲಿ ಮೃತಪಟ್ಟಿದ್ದರೆ ಮತ್ತೊಮ್ಮೆ 1988ರಲ್ಲಿ ಮೃತಪಟ್ಟರು. ಅರೆ ಒಬ್ಬನೇ ವ್ಯಕ್ತಿ ಎರಡು ಬಾರಿ ಮೃತಪಡುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದ್ರೆ ಇದಕ್ಕೆ ಉತ್ತರ ಖಂಡಿತ ಇದೆ.

ಹಾಗಾದ್ರೆ ಆತ ಎರಡು ಬಾರಿ ಮೃತಪಟ್ಟಿದ್ದು ಹೇಗೆ? ಇದು ಸಾಧ್ಯವಾಗಿದ್ದು ಹೇಗೆ ಎಂದು ನಿಮಗೆ ಕಾಡುತ್ತಿರಬಹುದು. ಆತ ಮಾಡಿದ್ದು ಇಷ್ಟೆ. ಮೊದಲ ಬಾರಿಗೆ ಆತ ತನ್ನ ಸಾವನ್ನೇ ನಕಲಿ ಮಾಡಿದ್ದ. ಅಂದ್ರೆ ಸತ್ತಂತೆ ನಾಟಕವಾಡಿದ್ದ, ಇಡೀ ದೇಶ ಆತ ಬದುಕಿಲ್ಲ ಅಂತಲೇ ನಂಬಿತ್ತು. ನವೆಂಬರ್ 20, 1974 ರಂದು ಮೊದಲ ಬಾರಿಗೆ ಆತ ಮೃತಪಟ್ಟಿರುವುದಾಗಿ ವರದಿಯಾಗಿತ್ತು. ಆದ್ರೆ ಇದಾದ ಒಂದು ತಿಂಗಳ ಬಳಿಕ ಆತ ಆಸ್ಟ್ರೇಲಿಯಾದಲ್ಲಿ ಸಿಕ್ಕಿಬಿದ್ದಾಗ ಮೃತಪಟ್ಟಿರುವುದು ನಾಟಕ ಎಂದು ತಿಳಿದಬಂದಿತ್ತು.
ಆತ ಪ್ರವಾಸಕ್ಕೆಂದು ಫ್ಲೋರಿಡಾಗೆ ತೆರಳಿದ್ದ ವೇಳೆ ಸಮುದ್ರದಲ್ಲಿ ಈಜಲು ಹೋದಾಗ ಮರೆಯಾಗಿದ್ದರು, ಆದ್ರೆ ಆತ ಯಾರಿಗೂ ಹೇಳದೆ ಅಲ್ಲಿಂದ ಪಲಾಯನ ಮಾಡಿದ್ದ. ಆದ್ರೆ ಆತನಿಗಾಗಿ ಹುಡುಕಾಟ ನಡೆದಿತ್ತು, ಕೊನೆಗೆ ಆತ ಸಮುದ್ರದಲ್ಲಿ ಕೊಚ್ಚಿ ಹೋಗಿರುವುದಾಗಿ ಹಾಗೆ ಶತ್ರುಗಳ ದಾಳಿಗೆ ಸಿಲುಕಿರುವುದಾಗಿ ವರದಿಯಾಗಿತ್ತು. ಎಲ್ಲರೂ ಆತ ಮೃತಪಟ್ಟಿದ್ದಾನೆ ಎಂದು ಭಾವಿಸಿದ್ದರು.
ಸ್ಟೋನ್ ಹೌಸ್ ಒಂದು ಕಂಪನಿ ಕಟ್ಟಿದ್ದ ಆತ ನಂತರ ರಾಜಕೀಯಕ್ಕೆ ಇಳಿದಿದ್ದರು, ರಾಜಕೀಯದಲ್ಲಿ ಹೆಸರು ಮಾಡಿ ಸರ್ಕಾರದ ಅಡಿ ಹಲವು ಹುದ್ದೆ ಅಲಂಕರಿಸಿದರು, ಆದ್ರೆ ಉದ್ಯಮಿಯಾಗಿ ಹೆಸರು ಮಾಡಲಿಲ್ಲ, ಬದಲಿಗೆ ಅವರ ಕಂಪನಿ ನಷ್ಟದತ್ತ ಸಾಗಿತ್ತು, ನೆಲಕ್ಕೆ ಕುಸಿದಿತ್ತು. ಇದು ಹಗಲು ರಾತ್ರಿ ಎನ್ನದೆ ಅವರನ್ನು ಕಾಡಿತ್ತು. ಹೀಗಾಗಿ ತನ್ನ ಸಾವಿನ ನಾಟಕ ಮಾಡಲು ಆತ ಪ್ಲಾನ್ ಮಾಡಿದ್ದ.
ಸಾವಿನ ನಾಟಕ ಆಡಿದ್ದೇಕೆ?
ಆತ ತನ್ನ ಕಂಪನಿ ಉಳಿಸಲು ದೊಡ್ಡ ಪ್ಲಾನ್ ಮಾಡಿದ್ದ ಇದಕ್ಕಾಗಿ ತನಗಾಗಿ ಒಂದು ಜೀವ ವಿಮೆ ಮಾಡಿಸಿದ್ದ. ಹಾಗೆ ಆತನ ಕಂಪನಿ ದಿವಾಳಿಯಾಗಿತ್ತು. ಬರೋಬ್ಬರಿ 125,000 ಯುರೋ ಮೌಲ್ಯದ ಇನ್ಸುರೆನ್ಸ್ ಹಣಕ್ಕಾಗಿ ಆತ ಸಾವಿನ ನಾಟಕ ಮಾಡಿದ್ದ. ಈ ನಾಟಕಕ್ಕೂ ಮುನ್ನ ನೀರಿನಲ್ಲಿ ಮುಳುಗಿ ಸತ್ತಿರುವಂತೆ ತಿಳಿಸಲು ಪ್ಲಾನ್ ಮಾಡಿದ್ದ ಆತ ಸರ್ಕಾರದ ಹೋಮ್ ಮಿನಿಸ್ಟರ್ ಬಳಿ ತನ್ನ ಕಾನೂನು ಹುದ್ದೆ ನೀಡುವಂತೆ ಕೇಳಿದ್ದ. ಏಕೆಂದರೆ ಈ ವಿಮಾ ನಿಯಮಗಳಲ್ಲಿ ಕೆಲವೊಂದು ನಿಯಮ ಬದಲಾಯಿಸಲು ಆತ ಮುಂದಾಗಿದ್ದ. ಅದ್ರೆ ಅದು ಸಾಧ್ಯವಾಗಲಿಲ್ಲ.
ಒಂದು ತಿಂಗಳ ಬಳಿಕ ಆತ ಆಸ್ಟ್ರೇಲಿಯಾದಲ್ಲಿ ಪೊಲೀಸರ ಕಣ್ಣಿಗೆ ಬಿದ್ದಿದ್ದ ಆದರೆ ಜೋ ಮಾರ್ಕಮ್ ಎಂಬ ಹೆಸರು ಇಟ್ಟುಕೊಂಡಿದ್ದ. ಆದ್ರೆ ಆತನನ್ನು ಪೊಲೀಸರು ಹುಡುಕಿ ಮರಳಿ ಕರೆತಂದರು. ಇದು ಇಡೀ ದೇಶದಲ್ಲಿ ಭಾರೀ ತಲ್ಲಣ ಸೃಷ್ಟಿಸಿತ್ತು. ಆದ್ರೆ ಲೇಬರ್ ಪಾರ್ಟಿ ಆತನನ್ನು ಹೊರಹಾಕಲಿಲ್ಲ. ಮತ್ತೆ ತನ್ನ ಪಾರ್ಟಿಗೆ ಸೇರಿಸಿಕೊಂಡಿತು. ಬಹುಮತ ಕುಸಿಯುವ ಆತಂಕದಲ್ಲಿದ್ದ ಪಾರ್ಟಿ ಆತನ ಕರೆದು ಸೇರಿಸಿಕೊಂಡಿತು.
ಇಷ್ಟೆಲ್ಲಾ ಮಾಡಿದ್ದ ಆತ ಹಣ ಮಾಡುವ ಹುಚ್ಚು ಬಿಟ್ಟಿರಲಿಲ್ಲ. ಹೀಗಾಗಿ ಅತ್ಯಂತ ಗೌಪ್ಯ ವಿಚಾರಗಳನ್ನು ಆತ ಹಣಕ್ಕಾಗಿ ಮತ್ತೊಂದು ರಾಷ್ಟ್ರಕ್ಕೆ ತಿಳಿಸಲು ಮುಂದಾಗಿದ್ದ ಮಿಲಿಟರಿ ವಿಚಾರಗಳನ್ನು ಸ್ಲೋವಾಕಿಯಾಗೆ ರವಾನಿಸಲು ಆರಂಭಿಸಿದ್ದ. ಆದ್ರೆ ಇದರ ಹಿಂದೆ ಬ್ಲಾಕ್ ಮೇಲ್ ತಂತ್ರವಿತ್ತು ಎಂದು ನಂಬಲಾಗಿತ್ತು. ಆತನಿಗೆ ಹನಿಟ್ರ್ಯಾಪ್ ಮಾಡಿ ಈ ಮಾಹಿತಿಯನ್ನು ಪಡೆಯಲಾಗಿತ್ತು ಎಂದು ಸಹ ಹೇಳಲಾಗಿದೆ.
ತನಿಖೆ ನಡೆದು ಸ್ಟೋನ್‌ಹೌಸ್ 7 ವರ್ಷ ಜೈಲು ವಾಸ ಅನುಭವಿಸಿದ. ಆದ್ರೆ 2 ವರ್ಷಕ್ಕೆ ಆತ ಜೈಲಿನಿಂದ ಹೊರಬಂದ. ಜೈಲಿನಲ್ಲಿದ್ದಾಗ 3 ಬಾರಿ ಹೃದಯಾಘಾತ ಸಂಭವಿಸಿತ್ತು. ಬಳಿಕ 1988ರಲ್ಲಿ ಆತ ಮೃತಪಟ್ಟಾಗ ಮೂರು ಪುಸ್ತಕ ಬರೆದಿದ್ದ. ಲೇಬರ್ ಪಾರ್ಟಿಯಿಂದಲೂ ಹೊರಬಿದ್ದಿದ್ದ.



Click it and Unblock the Notifications
