Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ವಿಮಾನ ಅಪಹರಿಸಿ 2 ಲಕ್ಷ ಡಾಲರ್ ಪಡೆದು ಕೆಳಗೆ ಹಾರಿದ್ದ ಕೂಪರ್..! ಈತನ ಕಥೆ ಎಂಥ ದೊಡ್ಡ ಮಿಸ್ಟರಿ ಗೊತ್ತಾ?
ವಿಮಾನವನ್ನ ಅದು ತಲುಪಬೇಕಾದ ಸ್ಥಳದಿಂದ ಬೇರೆ ಕಡೆ ಹೈಜಾಕ್ ಮಾಡುವ ಕುರಿತು ನಾವು ನಿಜ ಜೀವನದ ಕೆಲವು ಘಟನೆಗಳ ಕುರಿತು ಕೇಳಿದ್ದೇವೆ. ಸಿನಿಮಾಗಳೂ ಕೂಡ ಬಂದಿವೆ. ಆದ್ರೆ ಒಬ್ಬನ ಈ ಪ್ಲಾನ್ ಕೂಡ ಇಂದಿಗೂ ಮಿಸ್ಟರಿ ಆಗಿ ಸಿನಿಮಾ ಆಗಿಯೂ ಎಲ್ಲರ ಕುತೂಹಲಕ್ಕೆ ಕಾರಣವಾಗಿ ಉಳಿದಿದೆ. ಡಿ.ಬಿ ಕೂಪರ್ ಅಮೆರಿಕನ್ ಇತಿಹಾಸದಲ್ಲಿ ಬಗೆಹರಿಯದೆ ಉಳಿದಿರುವ ಬಹುದೊಡ್ಡ ಮಿಸ್ಟರಿ ಕಥೆ.
ಆತ ಒಬ್ಬನೇ ಇಡೀ ವಿಮಾನ ಎತ್ತಂಗಡಿ ಮಾಡಿ ಹಣಕ್ಕೆ ಆಗ್ರಹಿಸಿ, ಹಣವನ್ನು ಪಡೆದು ವಿಮಾನ ಬಿಟ್ಟು ಕೆಳಗೆ ಹಾರಿದ್ದ. ಆದ್ರೆ ಇಂದಿಗೂ ಆತ ಎಲ್ಲಿದ್ದಾನೆ, ಹಣ ಎಲ್ಲಿದೆ? ವಿಮಾನದಿಂದ ಹಾರಿದವನು ಏನಾದ ಎಂಬುದು ದಶಕಗಳಿಂದ ಹುಡುಕಿದರು ಉತ್ತರ ಸಿಗದ ಬಹುದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಹಾಗಾದ್ರೆ ಯಾರಿವನು ಕೂಪರ್, ಆತ ವಿಮಾನ ಅಪಹರಣ ಮಾಡಿದ್ದೇಕೆ? ಆತನ ಪ್ಲಾನ್ ಏನಾಗಿತ್ತು ನೋಡಿ.

ಡಿ,ಬಿ ಕೂಪರ್ ಅಥವಾ ಡಾನ್ ಕೂಪರ್ ಒಬ್ಬ ಕಾರ್ಗೋ ವಿಮಾನದಲ್ಲಿ ಕೆಲಸಕ್ಕಿದ್ದ ಸಿಬ್ಬಂದಿ. ಆತ ನವೆಂಬರ್ 24, 1971 ರಂದು ವಾಷಿಂಗ್ಟನ್‌ನ ಸಿಯಾಟಲ್‌ನಿಂದ ಪೋರ್ಟ್‌ಲ್ಯಾಂಡ್‌ಗೆ ತೆರಳುತ್ತಿದ್ದ ಬೋಯಿಂಗ್ 727 ವಿಮಾನ ಏರಿದ್ದ. ಸೂಟು ಬೂಟು ಧರಿಸಿದ್ದ ಆತ ವಿಮಾನ ಖಾಲಿಯಿದ್ದರೂ ಕೊನೆಯ ಸೀಟ್‌ನ ಮಧ್ಯದಲ್ಲಿ ಕುಳಿತಿದ್ದ.
ವಿಮಾನ ಟೇಕ್ ಆಫ್ ಆದ ಬಳಿಕ ಗಗನಸಖಿಯಾಗಿದ್ದ ಫ್ಲೋರೆನ್ಸ್ ಶ್ಕಾಫ್ನರ್ ಎಂಬಾಕೆಯ ಕರೆದು ಆಕೆಯ ಕೈಗೆ ಒಂದು ನೋಟು ಇಟ್ಟು ಅದರಲ್ಲಿ ಬರೆದಿರುವುದನ್ನು ಓದುವಂತೆ ಹೇಳಿದ. ಆ ನೋಟಿನ ಮೇಲೆ 'ನನ್ನ ಬಳಿ ಇರುವ ಸೂಟ್‌ಕೇಸ್‌ನಲ್ಲಿ ಬಾಂಬ್ ಇದೆ' ನನ್ನ ಪಕ್ಕದ ಸೀಟಿನಲ್ಲಿ ಕೂರುವಂತೆ ಆಕೆಗೆ ತಿಳಿಸಿದ್ದ. ಆಕೆ ಮೊದಲು ಇದನ್ನು ನಂಬದೆ ಆತ ಬಳಿಕ ಮಾತುಕತೆಗೆ ಇಳಿದಾಗ ಆತ ಸೂಟ್ ಕೇಸ್ ತೆರೆದು ಬಾಂಬ್ ಇರುವುದನ್ನು ಆಕೆಗೆ ತೋರಿಸಿದ್ದ.
ಆಕೆ ಇದರಿಂದ ಶಾಕ್‌ಗೆ ಒಳಗಾದರು ಶಾಂತವಾಗಿ ಆತನ ಮಾತು ಆಲಿಸಿದಳು, ಆತ ನನಗೆ 200,000 ಡಾಲರ್ ಹಣ ಹಾಗೂ ಎರಡು ಪ್ಯಾರಚೂಟ್ ವ್ಯವಸ್ಥೆ ಮಾಡುವಂತೆ ಬೇಡಿಕೆ ಇಟ್ಟಿದ್ದ. ಈ ಬೇಡಿಕೆ ಹಾಗೂ ಆತನ ನೋಟನ್ನು ಹಿಡಿದು ಆಕೆ ಪೈಲಟ್ ಇದ್ದ ಕಾಕ್‌ಪಿಟ್ ತೆರಳಿ ಮಾಹಿತಿ ನೀಡಿದ್ದಳು ಈ ಮಾಹಿತಿಯನ್ನ ಪೈಲಟ್ ತಡಮಾಡದೆ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮುಟ್ಟಿಸುತ್ತಾರೆ. ಆದ್ರೆ ಈ ವಿಚಾರ ಎಫ್‌ಬಿಐ ವರೆಗೂ ಹೋಗಿತ್ತಲ್ಲದೆ ಆತನ ಎಲ್ಲಾ ಬೇಡಿಕೆ ಈಡೇರಿಸಲು ಮುಂದಾಗುತ್ತಾರೆ. ಇಷ್ಟಾದರು ವಿಮಾನದಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಈ ಕುರಿತು ವಿಚಾರ ತಿಳಿದಿರುವುದಿಲ್ಲ.

ವಿಮಾನ ತನ್ನ ಸಿಯಾಟಲ್ ನಿಲ್ದಾಣಕ್ಕೆ ಬಂದಿಳಿಯುತ್ತದೆ. ಈ ವೇಳೆ ಸಿಬ್ಬಂದಿ ಒಬ್ಬ ಹಣ ತುಂಬಿದ್ದ ಬ್ಯಾಗ್ ಹಾಗೂ ಪ್ಯಾರಾಚೂಟ್ ತಂದು ನೀಡುತ್ತಾನೆ. ಇದಾದ ಬಳಿಕ ಎಲ್ಲಾ ಪ್ರಯಾಣಿಕರು ವಿಮಾನದಿಂದ ಇಳಿಯುತ್ತಾರೆ. ಆದ್ರೆ ಪೈಲಟ್, ಟೀನಾ ಎಂಬ ಗಗನಸಖಿ ಹಾಗೆ ಕೂಪರ್ ಅದೇ ವಿಮಾನದಲ್ಲಿ ಮತ್ತೆ ಹಾರಾಟ ಆರಂಭಿಸುತ್ತಾರೆ. ಇಲ್ಲಿಯೇ ವಿಮಾನಕ್ಕೆ ಮತ್ತೆ ಇಂಧನ ತುಂಬಿಸಲಾಗಿರುತ್ತೆ.
ವಿಮಾನವನ್ನು ಈಗ ಹೇಗೆ ಹಾರಿಸಬೇಕು? ಎಷ್ಟು ವೇಗದಲ್ಲಿ ಹಾರಿಸಬೇಕು ಎಂಬುದನ್ನು ಹೇಳುತ್ತಾನೆ. ಹಾಗೆ ಮೆಕ್ಸಿಕೋ ಸಿಟಿ ಕಡೆ ಹಾರಿಸಲು ಆತ ಹೇಳುತ್ತಾನೆ. ಆದ್ರೆ ವಿಮಾನದಲ್ಲಿರುವ ಇಂಧನ ಅಷ್ಟು ದೂರ ಬರುವುದಿಲ್ಲ ಎಂದಾದ ಪೈಲಟ್ ವಿರುದ್ಧ ಕೂಗಾಡಿ ಅದೇ ಮಾರ್ಗದಲ್ಲಿ ಹೋಗುವಂತೆ ಹೇಳುತ್ತಾನೆ. ಇದಾಗಿ ಕೆಲ ಹೊತ್ತಿನಲ್ಲಿ ಗಗನಸಖಿಯನ್ನು ಕಾಕ್‌ಪಿಟ್‌ಗೆ ಕಳುಹಿಸುತ್ತಾನೆ. ತಾನು ಪ್ಯಾರಾಚೂಟ್ ಹಾಕಿಕೊಂಡು ಹಣದ ಬ್ಯಾಗ್ ಎತ್ತಿಕೊಂಡು ಜಿಗಿಯಲು ಆತ ಸಿದ್ಧನಾಗುತ್ತಾನೆ.
ಹಿಂದೆ ಈ ವಿಮಾನದಲ್ಲಿ ಮೆಟ್ಟಿಲುಗಳ ಬಾಗಿಲು ಇರುತ್ತಿತ್ತು ಈ ಬಾಗಿಲು ತೆಗೆದ ಆತ ವಿಮಾನದಿಂದ ಜಿಗಿಯುತ್ತಾನೆ. ಆದ್ರೆ ಇದೆಲ್ಲ ವಿಮಾನದಲ್ಲಿದ್ದ ಸಿಬ್ಬಂದಿ ತಿಳಿಯುವಾಗ ತಡವಾಗಿರುತ್ತದೆ. ಇಷ್ಟೇ ಅಂದಿನಿಂದ ಇಂದಿನವರೆಗೂ ಆತ ಎಲ್ಲಿದ್ದಾನೆ? ಹಣ ಎಲ್ಲಿದೆ? ಬದುಕಿದ್ದಾನೆಯೇ? ಅಥವಾ ಸತ್ತಿದ್ದಾನಾ ಎಂಬ ಕುರಿತು ಒಂದು ಸಣ್ಣ ಸುಳಿವು ಕೂಡ ಸಿಕ್ಕಿಲ್ಲ.
ಆತ ಜಿಗಿದ ಬಳಿಕ ವಿಮಾನವನ್ನ ಹತ್ತಿರದ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗುತ್ತದೆ. ಅಂದು ರಾತ್ರಿಯಿಂದಲೇ ತನಿಖೆ ನಡೆಯುತ್ತದೆ. ಆದ್ರೆ ಎಲ್ಲಿಯೂ ಆತನ ಸುಳಿವು ಸಿಗುವುದಿಲ್ಲ. ಆದ್ರೆ ಈ ಘಟನೆ ನಡೆದ 10 ವರ್ಷದ ಬಳಿಕ ವಾಷುಗಲ್ ನದಿ ತೀರದಲ್ಲಿ 8 ವರ್ಷದ ಬಾಲಕನಿಗೆ ಒಂದು ಬ್ಯಾಗ್ ಪತ್ತೆಯಾಗುತ್ತೆ. ಈ ಬ್ಯಾಗ್‌ನಲ್ಲಿ 20 ಡಾಲರ್ ನೋಟುಗಳು ಪತ್ತೆಯಾಗುತ್ತವೆ. ಇದು ಡಿ.ಬಿ ಕೂಪರ್‌ಗೆ ನೀಡಿದ್ದ ನೋಟು ಎಂದು ತಿಳಿಯುತ್ತೆ. ಏಕೆಂದರೆ ಆತನಿಗೆ 2 ಲಕ್ಷ ಡಾಲರ್ ನೀಡುವ ಮುನ್ನ ಎಲ್ಲಾ ನೋಟುಗಳ ಸೀರಿಯಲ್ ನಂಬರ್ ರೆಕಾರ್ಡ್ ಮಾಡಲಾಗುತ್ತದೆ. ಹಾಗೆ ಈ ನಂಬರ್ ಎಲ್ಲಾದರು ಪತ್ತೆಯಾದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಜಾಹೀರಾತು ನೀಡಲಾಗಿರುತ್ತೆ.
ಆದ್ರೆ ಈ ನದಿ ತೀರದಲ್ಲಿ ಸುಮಾರು 5 ಸಾವಿರ ಡಾಲರ್ ಮಾತ್ರ ಪತ್ತೆಯಾಗುತ್ತದೆ. ಉಳಿದ ಹಣವೆಲ್ಲಿ, ಆತ ಎಲ್ಲಿ ಹೋದ ಎಂಬುದು ಪತ್ತೆ ಆಗುವುದೇ ಇಲ್ಲ. ಇಂದಿಗೂ ಇದೊಂದು ದೊಡ್ಡ ಮಿಸ್ಟರಿಯಾಗಿ ಉಳಿದಿದೆ. ಹಾಗೆ ಅಂದು ಸಿಕ್ಕ ನೋಟುಗಳಲ್ಲಿ ಕೆಲವೊಂದನ್ನು ಆ ಬಾಲಕ ಹರಾಜು ಹಾಕಿ ಲಕ್ಷ ಲಕ್ಷ ಡಾಲರ್ ಹಣ ಗಳಿಸಿದ್ದಾನೆ.



Click it and Unblock the Notifications