Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
ಆಕಾಶದಲ್ಲಿ ಚಿತ್ರ ವಿಚಿತ್ರ ಘಟನೆಗಳು, ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಅವು ಪ್ರತಿಬಾರಿ ನಡೆದಾಗಲೂ ಜನರನ್ನು ಅಷ್ಟೇ ಕುತೂಹಲಕ್ಕೆ ತಳ್ಳುತ್ತವೆ. ಜೊತೆಗೆ ಮತ್ತಷ್ಟು ಊಹಾಪೋಹಗಳು ಹುಟ್ಟಿಕೊಳ್ಳುತ್ತವೆ. ಆಕಾಶದಲ್ಲಿ ವಿಸ್ಮಯಗಳು ನಡೆಯುವುದು ಹೊಸತೇನು ಅಲ್ಲ. ವಿಚಿತ್ರ ರೀತಿಯ ವಸ್ತುಗಳು ಕಾಣಿಸಿಕೊಳ್ಳುವುದು, ವಿಚಿತ್ರ ಬೆಳಕು, ಯುಎಫ್‌ಓಗಳು ಕಂಡಿರುವ ಪಟ್ಟಿಯೇ ಇಲ್ಲಿ ಇಡಬಹುದು.
ನೀವು ಏಲಿಯನ್ ಕಂಡ ಕಥೆಗಳ ಕೇಳಿರುತ್ತೀರಿ. ಅಷ್ಟೆ ಏಕೆ ಅಲ್ಲಿ ಇಲ್ಲಿ ಯಾವುದೋ ವಿಚಿತ್ರ ಪ್ರಾಣಿ ಕಾಣಿಸಿಕೊಂಡ ಬಗ್ಗೆಯೂ ನೋಡಿರ್ತೀರಿ. ಆದರೆ ಇದೇ ರೀತಿಯ ಮತ್ತೊಂದು ಘಟನೆ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದ ಆಕಾಶದಲ್ಲಿ ವಿಚಿತ್ರ ರೀತಿಯ ವಸ್ತು ಕಂಡುಬಂದಿರುವುದು ಜನರ ಗಮನ ಸೆಳೆದಿದೆ.

ಅಮೆರಿಕದ ಹಲವು ಭಾಗದಲ್ಲಿ ಈ ರೀತಿ ವಿಚಿತ್ರ ಘಟನೆಗಳು ಸರಣಿಯಾಗಿ ನಡೆಯುತ್ತಿವೆ. ಇದೀಗ ನೀಲಿ ಆಕಾಶ ಬಿಳಿಯಾದ ಆಕೃತಿಯೊಂದು ಕಾಣಿಸಿಕೊಂಡು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಆಕಾಶದಲ್ಲಿ ಬೇರೆ ಯಾವುದೇ ಮೋಡವಿರದಿದ್ದರೂ ಮದ್ಯದಲ್ಲಿ ಬಿಳಿ ಬಣ್ಣದ ಚಿಕ್ಕದಾದ ವಸ್ತುವೊಂದು ಕಾಣಿಸುತ್ತಿದೆ.
ಆ ಆಕೃತಿ ಚಲಿಸಿದಂತೆ ಹಾಗೂ ಸುತ್ತು ಬರುತ್ತಿರುವಂತೆ ಕಾಣಿಸುತ್ತಿದ್ದು, ಅಲ್ಲಿದ್ದ ಜನರು ತಮ್ಮ ಮೊಬೈಲ್‌ನಲ್ಲಿ ಈ ದೃಶ್ಯ ಸೆರೆಹಿಡಿದಿದ್ದಾರೆ. ಈಗ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಯಾಲಿಫೋರ್ನಿಯಾದ ಸಿಕ್ವೊಯಾ ಪಾರ್ಕ್‌ನ ಮೇಲೆ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಿಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋ ಗಾಳಿಯಲ್ಲಿ ವಿವರಿಸಲಾಗದ ವಸ್ತುವೊಂದು ನಿಧಾನವಾಗಿ ಚಲಿಸುತ್ತಿರುವುದನ್ನು ತೋರಿಸುತ್ತದೆ.
ಆದರೆ ಈ ವಿಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿಯ ಮಾತುಗಳು ಈ ವಿಡಿಯೋದಲ್ಲಿ ಸೆರೆಯಾಗಿದೆ. ಆತ ಆಕೃತಿ ಮನುಷ್ಯನಂತೆ ಹೋಲುತ್ತಿದೆ. ಕೈಗಳಿರುವಂತೆ ಕಾಣುತ್ತಿದೆ. ಇದು ವಾಸ್ತವಿಕವಾಗಿ ವ್ಯಕ್ತಿಯನ್ನು ಹೋಲುತ್ತದೆ. ಇದು ವ್ಯಕ್ತಿಯಂತೆ ಕಾಣುತ್ತದೆ, ಆದರೂ ಇದು ಸಾಧ್ಯವಿಲ್ಲ ಎಂದು ಆತ ಹೇಳುತ್ತಿದ್ದಾನೆ.
ಈ ವಿಡಿಯೋವನ್ನು ಹತ್ತಾರು ಮಂದಿ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅಮೆರಿಕದಲ್ಲಿ ಈ ರೀತಿ ನಿರಂತರವಾಗಿ ಸಂಭವಿಸುತ್ತಿರುವ ವಿಚಿತ್ರ ಘಟನೆಗಳಿಗೆ ಸ್ಪಷ್ಟನೆ ಬೇಕಾಗಿದೆ ಎಂದು ಮನವಿ ಮಾಡುತ್ತಿದ್ದಾರೆ.
ನೀಲಿ ಆಕಾರದ ಬೆಳಕು ಮೂಡಿತ್ತು
ಈ ಮೊದಲು ಅರಿಝೋನಾದಲ್ಲಿ ನಿಗೂಢವಾದ ನೀಲಿ ಬಣ್ಣದ ಹೊಳೆಯುವ ವಸ್ತುವೊಂದು ಆಕಾಶದಲ್ಲಿ ಕಂಡುಬಂದಿತ್ತು. ಸದ್ಯ ಈ ವಸ್ತು ಯಾವುದು ಎಂಬುದು ಚರ್ಚೆಯ ವಿಷಯವಾಗಿತ್ತು, ಅಲ್ಲಿನ ನಿವಾಸಿಗಳು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಈ ವಿಸ್ಮಯವನ್ನು ಸೆರೆಹಿಡಿದಿದ್ದರು.
ಪ್ರತ್ಯಕ್ಷ ದರ್ಶಿಗಳ ಪ್ರಕಾರ, ಈ ನೀಲಿ ಆಕಾರದ ಬೆಳಕು ಮೇಲೆ ಕೆಳಗೆ ಚಲಿಸುತ್ತಿತ್ತು ಎಂದಿದ್ದರು. ಆಕಾಶದಲ್ಲಿ ಸುಮಾರು 30 ನಿಮಿಷಕ್ಕೂ ಹೆಚ್ಚು ಹೊತ್ತು ಕಂಡುಬಂದಿದೆ ಎಂದಿದ್ದರು. ಆದರೆ ಅಲ್ಲಿಂದ ಯಾವ ಶಬ್ದವೂ ಕೇಳಿಬರುತ್ತಿರಲಿಲ್ಲ. ಕೆಲವೊಮ್ಮೆ ಬೆಳಕು ಮಂದವಾಗಿದ್ದರೆ ಇನ್ನೂ ಕೆಲವೊಮ್ಮೆ ಪ್ರಕಾಶವಾಗಿ ಹೊಳೆಯುತ್ತಿತ್ತು ಎಂದು ವಿವರಿಸಿದ್ದರು. ಆದರೆ ಈ ಘಟನೆ ನಡೆದು ಕೆಲ ದಿನಗಳ ನಂತರ ಈ ಮನುಷ್ಯನ ಆಕೃತಿ ಹೋಲುವ ವಸ್ತು ಪತ್ತೆಯಾಗಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ.
ಭಯ ಹುಟ್ಟಿಸಿದ ಬ್ರೆಜಿಲ್ ವಿಡಿಯೋ
ಕಳೆದ ಜನವರಿಯಲ್ಲಿ ಬ್ರೆಜಿಲ್‌ನ ದ್ವೀಪವೊಂದರ ಬೆಟ್ಟದ ಮೇಲೆ ಮಾನವನಂತಿರುವ ಎರಡು ಜೀವಿಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದು ಭೂಮಿಯ ಮೇಲೆ ಅನ್ಯಗ್ರಹ ಜೀವಿಗಳ ಭೇಟಿಯ ಬಗ್ಗೆ ಮತ್ತೆ ಕಿಡಿ ಹೊತ್ತಿಸಿತ್ತು. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಜೀವಿಗಳು 10-ಅಡಿ ಎತ್ತರದವು ಮತ್ತು ಆಗ್ನೇಯ ಬ್ರೆಜಿಲ್‌ನ ಕರಾವಳಿಯಿಂದ ಮೂರು ಕಿಲೋಮೀಟರ್‌ಗಿಂತ ಹೆಚ್ಚು ದೂರದಲ್ಲಿರುವ ಇಲ್ಹಾ ಡೊ ಮೆಲ್ ಎಂಬ ದ್ವೀಪದಲ್ಲಿ ಕಾಣಿಸಿಕೊಂಡಿತ್ತು.



Click it and Unblock the Notifications
