Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಆಗಸದಲ್ಲಿ ಪತ್ತೆಯಾದ 3I/ATLAS ಎಂಬ ನಿಗೂಢ ವಸ್ತು: ಬಾಬಾ ವಂಗಾ ಹೇಳಿದ್ದು ನಿಜವಾಗುತ್ತಾ?
ಆಗಸದಲ್ಲಿ ನಡೆಯುವಂತಹ ಹಲವು ವಿದ್ಯಮಾನಗಳು ನಡೆಯುವುದು ಸಾಮಾನ್ಯ. ಅದ್ರಲ್ಲೂ ಅಚ್ಚರಿ ಎಂಬಂತೆ ಹೊಸ ಗ್ರಹ ಪತ್ತೆಯಾಗುವುದು, ಗ್ಯಾಲಕ್ಸಿಗಳ ಕುರಿತಾದ ಮಾಹಿತಿ ಸೇರಿ ಉಲ್ಕೆಗಳು, ಅಸ್ಟ್ರೋಯ್ಡ್‌ಗಳು ಚಲಿಸುವುದು ಹೀಗೆ ರೀತಿಯ ಅಚ್ಚರಿಗಳು ನಡೆಯುವುದು ಸಾಮಾನ್ಯ. ಆದ್ರೆ ಈಗ ನಮ್ಮ ಸೌರಮಂಡಲದಲ್ಲಿ ನಡೆಯುತ್ತಿರುವ ಅಚ್ಚರಿಯ ವಿಚಾರವೊಂದು ಎಲ್ಲರನ್ನು ಚಿಂತೆಗೆ ಹಾಗೂ ಆಲೋಚಿಸುವಂತೆ ಮಾಡಿದೆ.
ಗುರು ಗ್ರಹದ ಬಳಿಯಲ್ಲಿ ಅನಾಮಿಕ ಹಾಗೆ ನಿಗೂಢ ವಸ್ತುವೊಂದು ಪತ್ತೆಯಾಗಿದೆ. ಇದನ್ನು 3I/ATLAS ಎಂದು ಕರೆಯಲಾಗಿದೆ. ಇದು ಗಂಟೆಗೆ ಸುಮಾರು 1.3 ಲಕ್ಷ ಮೈಲುಗಳಷ್ಟು ವೇಗದಲ್ಲಿ ಚಲಿಸುತ್ತಿದೆ ಎಂದು ಕೂಡ ಹೇಳಲಾಗಿದೆ. ಇದು ಗಾತ್ರದಲ್ಲಿ ಸುಮಾರು 10ರಿಂದ 20 ಕಿಮೀ ದೊಡ್ಡದಾಗಿದೆ ಎಂದು ಅಂದಾಜಿಸಲಾಗಿದೆ. ಆದ್ರೆ ಈ ವಸ್ತು ಎಲ್ಲಿಂದ ಬಂದಿದೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿ ಉಳಿಸಿದೆ.

3I/ATLAS ಎಂಬ ನಿಗೂಢ ವಸ್ತುವು ಗಂಟೆಗೆ 1.3 ಲಕ್ಷ ಮೈಲುಗಳಷ್ಟು ವೇಗದಲ್ಲಿ ಚಲಿಸುತ್ತಿದೆ ಎಂದು ವರದಿಯಾಗಿದೆ. ಇದು 10-20 ಕಿಲೋಮೀಟರ್ ದೊಡ್ಡ ಗಾತ್ರದಲ್ಲಿದೆ ಎಂದು ಕೂಡ ಅಂದಾಜಿಸಲಾಗಿದೆ. ವಿಜ್ಞಾನಿಗಳು ಚಿಲಿಯಲ್ಲಿ ದೂರದರ್ಶಕವನ್ನು ಬಳಸಿಕೊಂಡು 3I/ATLAS ಅನ್ನು ಪತ್ತೆಹಚ್ಚಿದರು, ಮತ್ತು ಅದರ ವೇಗ ಮತ್ತು ಪಥವು ಅದರ ಮೂಲ ಮತ್ತು ಭೂಮಿಗೆ ಸಂಭಾವ್ಯ ಬೆದರಿಕೆಯ ಬಗ್ಗೆ ಆಸಕ್ತಿ ಹುಟ್ಟುಹಾಕಿದೆ.
ಬಾಬಾ ವಂಗಾ ಹೇಳಿದ್ದ ಏಲಿಯನ್ ಭವಿಷ್ಯ ನಿಜವಾಗುತ್ತಾ?
ಇನ್ನು ನಿಗೂಢ ವಸ್ತು ಪತ್ತೆಯಾದ ಬಳಿಕ ಏಲಿಯನ್ ಕುರಿತ ಚರ್ಚೆ ದೊಡ್ಡದಾಗಿದೆ. ಅದ್ರಲ್ಲು ಬಾಬಾ ವಂಗಾ ಹೇಳಿರುವಂತೆ 2025ಕ್ಕೆ ಏಲಿಯನ್ ಭೂಮಿಯ ಮೇಲೆ ಮೊದಲ ಬಾರಿಗೆ ಸಂಪರ್ಕ ಮಾಡಲಿದ್ದಾವ ಎಂಬ ಅನುಮಾನ ಕೂಡ ಕಾಡುತ್ತಿದೆ. ಆದ್ರೆ ಬಾಬಾ ವಂಗಾ ಪ್ರಕಾರ 2125ರಲ್ಲಿ ಮೊದಲ ಬಾರಿಗೆ ಏಲಿಯನ್ ಭೂಮಿ ಮೇಲೆ ಇಳಿಯಲಿದ್ದಾರೆ ಎಂದಿದ್ದಾರೆ. ಈ ವರ್ಷದಿಂದ ಇನ್ನೂ ನೂರು ವರ್ಷಗಳ ಮುಂದೆ ಈ ಘಟನೆ ನಡೆಯಬಹುದಾದರು ಈಗ ಏಲಿಯನ್ ಇರುವಿಕೆಯ ಕುರಿತ ಚರ್ಚೆ ಮತ್ತಷ್ಟು ದೊಡ್ಡದಾಗುತ್ತಿದೆ.
ಏನಿದು 3I/ATLAS?
ಹಾರ್ವರ್ಡ್‌ನ ಪ್ರಾಧ್ಯಾಪಕ ಅವಿ ಲೋಬ್ ಸೇರಿದಂತೆ ಕೆಲವು ವಿಜ್ಞಾನಿಗಳು, ಅದರ ಅಸಾಮಾನ್ಯ ಗುಣಲಕ್ಷಣಗಳಿಂದಾಗಿ 3I/ATLAS ಅನ್ಯಲೋಕದ ಬಾಹ್ಯಾಕಾಶ ನೌಕೆಯಾಗಿರಬಹುದು ಎಂದು ಹೇಳಿಕೊಂಡಿದ್ದಾರೆ. ನಾಸಾ ಪ್ರಕಾರ, 3I/ATLAS ಧೂಮಕೇತು ನಮ್ಮ ಸೌರವ್ಯೂಹದ ಹೊರಗಿನಿಂದ ಪತ್ತೆಯಾದ ಮೂರನೇ ನಿಗೂಢ ವಸ್ತುವಾಗಿದೆ ಎಂದಿದೆ.
ಈ 3I/ATLAS ಅಕ್ಟೋಬರ್ 30, 2025 ರ ಸುಮಾರಿಗೆ ಸೂರ್ಯನಿಗೆ ಸುಮಾರು 130 ಮಿಲಿಯನ್ ಮೈಲುಗಳು ದೂರದಲ್ಲಿ ತನ್ನ ಹತ್ತಿರದ ಬಿಂದುವನ್ನು ತಲುಪುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಹಾಗೆ ಇದು ಮಂಗಳ ಗ್ರಹದ ಕಕ್ಷೆಯೊಳಗೆ ಉಳಿಯಲಿದೆ ಎಂದು ತಿಳಿದುಬಂದಿದೆ. ಹಾಗೆ ಅಧ್ಯಯನಗಳ ಪ್ರಕಾರ ಈ ನಿಗೂಢ ವಸ್ತು ನವೆಂಬರ್ 2025ರಲ್ಲಿ ಭೂಮಿಯ ಅತ್ಯಂತ ಸಮೀಪಕ್ಕೆ ಬರಬಹುದು ಎನ್ನಲಾಗಿದೆ. ಆದ್ರೆ ಇದರಿಂದ ಭೂಮಿಗೆ ಯಾವುದೇ ರೀತಿಯ ಹಾನಿಯೂ ಇಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
2025ರ ಜುಲೈ 1 ರಂದು ಪತ್ತೆಯಾದ 3I/ATLAS ಗಂಟೆಗೆ 130,000 ಮೈಲುಗಳಿಗಿಂತ ಹೆಚ್ಚು ವೇಗದಲ್ಲಿ ಬಾಹ್ಯಾಕಾಶದಲ್ಲಿ ಚಲಿಸುತ್ತಿದೆ. ಆರಂಭದಲ್ಲಿ ಅದರ ನಡವಳಿಕೆಯು ಧೂಮಕೇತುವಿನಂತೆ ಕಂಡುಬಂದರೂ, ತಜ್ಞರು ಶೀಘ್ರದಲ್ಲೇ ವಿಚಿತ್ರ ವೇಗವರ್ಧನೆ ಗಮನಿಸಿದ್ದರು. ಇದು 'ಔಮುವಾಮುವಾ ಮತ್ತು 2I/ಬೋರಿಸೊವ್' ನಂತಹ ಹಿಂದಿನ ಅಂತರತಾರಾ ಸಂದರ್ಶಕರೊಂದಿಗೆ ಹೋಲಿಕೆಗಳ ಮಾಡಲು ಕಾರಣವಾಯಿತು. ಆದ್ರೆ ಇದೆಲ್ಲದಕ್ಕಿಂತಲೂ ಇದು ವಿಚಿತ್ರ ಎನಿಸಿದೆ. ಔಮುವಾಮುವಾ ಎಂದರೆ ಅನ್ಯಲೋಕದ ತಂತ್ರಜ್ಞಾನವಾಗಿರಬಹುದು. ಹಾರ್ವರ್ಡ್ ಖಗೋಳ ಭೌತಶಾಸ್ತ್ರಜ್ಞ ಅವಿ ಲೋಬ್, ಈಗ 3I/ATLAS ಒಂದು ಕಣ್ಗಾವಲು ಬಾಹ್ಯಾಕಾಶ ನೌಕೆಯಾಗಿರಬಹುದು ಎಂದು ಕರೆದಿದ್ದಾರೆ. ಅಂದರೆ ಅದು ಕೂಡ ನಮ್ಮಂತೆ ಬೇರೊಂದು ಗ್ಯಾಲಕ್ಸಿಯಿಂದಲೂ ಬಂದಿರಬಹುದು ಎಂದು ಹೇಳಿದ್ದಾರೆ.



Click it and Unblock the Notifications
