Latest Updates
-
ಪಾರ್ಸಿ ಹೊಸ ವರ್ಷದ ಸಂಭ್ರಮ: ನಿಮ್ಮ ಪಾರ್ಸಿ ಸಂಬಂಧಿಕರ ಮನೆಗೆ ಹೋಗುವಾಗ ಈ ಶಿಷ್ಟಾಚಾರಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ -
ಸ್ವಾತಂತ್ರ್ಯ ದಿನದ ಸಂಭ್ರಮ: ಟೆರೇಸ್ ಮೇಲೆ ಗಾಳಿಪಟ ಹಾರಿಸುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ: ಸಿಹಿ ತಿನಿಸುಗಳ ಸವಿಯ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ, ಇಲ್ಲಿದೆ ಸಿಂಪಲ್ ಟಿಪ್ಸ್! -
ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಆರೋಗ್ಯದ ಜಾಗೃತಿ: ಮಳೆಗಾಲದಲ್ಲಿ ಯಾವ ಆಹಾರ ಸೇವಿಸುವುದು ಸುರಕ್ಷಿತ? -
ಸ್ವಾತಂತ್ರ್ಯ ದಿನಾಚರಣೆ: ಮಳೆಯಲ್ಲೂ ಮಿಂಚಲು ಇಲ್ಲಿದೆ ಸಿಂಪಲ್ ಟ್ರೈಕಲರ್ ಫ್ಯಾಷನ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: 10 ನಿಮಿಷದಲ್ಲಿ ತ್ರಿರಂಗ ಲುಕ್ನಲ್ಲಿ ಮಿಂಚುವುದು ಹೇಗೆ? -
ಸ್ವಾತಂತ್ರ್ಯ ದಿನದ 'ತಿರಂಗಾ ರೈಡ್': ಮಳೆಗಾಲದಲ್ಲಿ ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿವೆ ಬೆಸ್ಟ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: ಪರೇಡ್ ವೀಕ್ಷಿಸುವ ಮುನ್ನ ಈ 10 ನಿಮಿಷದ ವ್ಯಾಯಾಮ ಮರೆಯದಿರಿ! -
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು!
ಬೆಟ್ಟದ ಮೇಲೆ ದಿಢೀರ್ ಪ್ರತ್ಯೆಕ್ಷವಾದ ಲೋಹದ ಕಂಬ.! ನಿಗೂಢ ರಸಹ್ಯಕ್ಕೆ ಕಾರಣವೇನು?
ಮಾನವರಿಗೆ ಅನ್ಯ ಗ್ರಹ ಅಲ್ಲಿನ ಜೀವಿಗಳು, ಬೇರೆ ಲೋಕದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಏಲಿಯನ್‌ಗಳು, ಯುಎಫ್‌ಓ ಗಳು ಹೀಗೆ ನಿತ್ಯ ಹತ್ತಾರು ರೀತಿಯ ವಿಷಯಗಳು ನಮ್ಮ ಕಿವಿಗೆ ಬೀಳುತ್ತಲೇ ಇರುತ್ತದೆ. ಅದರಲ್ಲೂ ಇತ್ತೀಚಿಗೆ ಯುಎಫ್‌ಓಗಳ (Unidentified Flying Object) ಕುರಿತಾಗಿ ಹೊಸ ಹೊಸ ವಿಚಾರಗಳು ಹೊರಬೀಳುತ್ತಿವೆ. ಕಳೆದೆರಡು ದಿನಗಳ ಹಿಂದೆಯಷ್ಟೇ ಅಮೆರಿಕದ ಪೆಂಟಗಾನ್ ಈ ಯುಎಫ್‌ಓ ಕುರಿತು ಅಚ್ಚರಿಯ ಹೇಳಿಕೆ ನೀಡಿ ಸುದ್ದಿಯಾಗಿತ್ತು.
ಆದರೆ ಇದೀಗ ವೇಲ್ಸ್ ಬೆಟ್ಟದ ಮೇಲೆ ವಿಚಿತ್ರ ಲೋಹದ ಕಂಬವೊಂದು ಕಂಡುಬಂದಿದ್ದು ಭಾರೀ ಕುತೂಹಲ ಮೂಡಿಸಿದೆ. ನ್ಯೂಯಾರ್ಕ್ ಪೋಸ್ಟ್ ಮಾಡಿರುವ ವರದಿಯ ಪ್ರಕಾರ, ವೇಲ್ಸ್ ಬೆಟ್ಟದ ಮೇಲೆ ದೈತ್ಯ ಆಕೃತಿಯ ಲೋಹದ ಕಂಬವೊಂದು ಪ್ರತ್ಯಕ್ಷವಾಗಿದೆ. ಇದು ಅಲ್ಲಿನ ಸ್ಥಳೀಯರು ಸೇರಿ ಹಲವರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಈ ಲೋಹದ ಕಂಬವು ಬರೋಬ್ಬರಿ 10 ಅಡಿ ಎತ್ತರವಿದ್ದು, ಸಂಪೂರ್ಣ ಉಕ್ಕಿನಿಂದ ಮಾಡಲ್ಪಟ್ಟಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.ವೇಲ್ಸ್ ನಗರದ ಪೋವಿಸ್ ಪಟ್ಟಣದ ಸಮೀಪವಿರುವ ಹೇ ಬ್ಲಫ್ ಎಂಬ ಪ್ರದೇಶದಲ್ಲಿ ಈ ಲೋಹದ ಕಂಬ ಕಂಡುಬಂದಿದೆ. ಮೊದಲಿಗೆ ಇದನ್ನು ಮಳೆ ನೀರು ಸಂಗ್ರಹಿಸುವ ಅಥವಾ ಮಳೆ ಮಾಪನಕ್ಕಾಗಿ ಹವಾಮಾನ ಇಲಾಖೆ ಮಾಡಿರುವ ರಚನೆ ಎಂದು ನಂಬಲಾಗಿತ್ತು. ಆದರೆ ಹವಾಮಾನ ಇಲಾಖೆಗೂ ಈ ಲೋಹದ ಕಂಬಕ್ಕೂ ಯಾವ ಸಂಬಂಧವೂ ಇಲ್ಲ ಎಂದು ತಿಳಿದುಬಂದಿತು.
ಈ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ಏಲಿಯನ್‌ಗಳ ಕೈವಾಡವೆಂದು ವಾದಿಸುತ್ತಿದ್ದಾರೆ, ಇನ್ನೂ ಕೆಲವರು ಇದೊಂದು ಮಾರ್ಕೆಟಿಂಗ್ ತಂತ್ರವಾಗಿದೆ. ಈ ಲೋಹದ ಕಂಬದತ್ತ ಗಮನ ಸೆಳೆಯಲು ಬೇಕಂತಲೇ ಈ ರೀತಿ ಮಾಡಲಾಗಿದೆ ಎಂದು ವಾದಿಸಲಾಗುತ್ತಿದೆ.
ಆದರ ಈ ರೀತಿಯ ಲೋಹದ ಕಂಬ ಕಾಣಿಸಿಕೊಂಡಿದ್ದು ಇದೇನು ಮೊದಲಲ್ಲ. ಇದಕ್ಕೂ ಮೊದಲು ವಿಶ್ವದ ಹಲವು ಭಾಗದಲ್ಲಿ ಈ ರೀತಿ ಕಾಣಿಸಿಕೊಂಡಿತ್ತು. ಆದರೆ ಈ ಕುರಿತು ಕೆಲವು ಚರ್ಚೆಗಳು ನಡೆದು ಬಳಿಕ ಈ ವಿಚಾರವು ತೆರೆಮರೆಗೆ ಸರಿದಿತ್ತು. ಇದಕ್ಕೂ ಮೊದಲು ಫೆಬ್ರವರಿ 2021 ರಲ್ಲಿ, ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಆಗ್ನೇಯ ಟರ್ಕಿಯಲ್ಲಿ 10-ಅಡಿ ಎತ್ತರದ ಲೋಹದ ಕಂಬ ಕಾಣಿಸಿಕೊಂಡಿತು, ನಂತರ ಸದ್ದಿಲ್ಲದೆ ಕಣ್ಮರೆಯಾಯಿತು.
ಜೊತೆಗೆ ಅದರ ಮೇಲೆ ಪ್ರಾಚೀನ ತುರ್ಕಿಕ್ ಭಾಷೆಯಾದ ಗೋಕ್ತುರ್ಕ್ ವರ್ಣಮಾಲೆಯಲ್ಲಿ "ಆಕಾಶವನ್ನು ನೋಡಿ, ಚಂದ್ರನನ್ನು ನೋಡಿ" ಎಂಬ ರಹಸ್ಯ ಸಂದೇಶವನ್ನು ಕೆತ್ತಲಾಗಿತ್ತು. ಆದರೆ ಈ ಲೋಹದ ಕಂಬವನ್ನು ಸರ್ಕಾರವೇ ಅಲ್ಲಿ ಹಾಕಿರುವುದಾಗಿ ಒಪ್ಪಿಕೊಂಡಿತು. ತನ್ನ ಬಾಹ್ಯಾಕಾಶ ಯೋಜನೆಯ ಭಾಗವಾಗಿ ಅದನ್ನು ಪ್ರಚಾರ ಮಾಡಲು ಈ ರೀತಿ ಮಾಡಿರುವುದಾಗಿ ತಿಳಿಸಿತ್ತು.
2020 ರಲ್ಲಿ ಉತಾಹ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಎರಡು ರೀತಿಯ ರಚನೆಗಳು ಕಂಡುಬಂದಿತ್ತು. ಅದೇ ವರ್ಷ, ಐಲ್ ಆಫ್ ವೈಟ್‌ನಲ್ಲಿ ಮತ್ತೊಂದು 10-ಅಡಿ ಎತ್ತರದ ಇದೇ ರೀತಿಯ ಕಂಬ ಕಂಡುಬಂದಿತ್ತು. ಬಳಿಕ ಇದೊಂದು ಪ್ರವಾಸಿ ತಾಣದಂತೆ ಬದಲಾಯಿತು. ನವೆಂಬರ್ 2020 ರಲ್ ರೊಮೇನಿಯಾದಲ್ಲಿ ಮತ್ತೊಂದು ಬೃಹತ್ ಉಕ್ಕಿನ ಏಕಶಿಲೆ ಕಾಣಿಸಿಕೊಂಡಿತು ಮತ್ತು ಅದನ್ನು ಯಾರು ಹಾಕಿದರು ಎಂಬುದು ರಹಸ್ಯವಾಗಿಯೇ ಉಳಿಯಿತು.
ಭಾರತದಲ್ಲೂ ಕಂಡುಬಂದಿತ್ತು ಈ ಲೋಹದ ಕಂಬ
ಹೌದು ಭಾರತದಲ್ಲೂ ಈ ಕಂಬ ಕಂಡುಬಂದು ಬಳಿಕ ನಾಪತ್ತೆಯಾಗಿತ್ತು. ಅಹಮದಾಬಾದ್‌ನ ಥಾಲ್ತೇಜ್ ಪ್ರದೇಶದ ಸಿಂಫನಿ ಪಾರ್ಕ್‌ನಲ್ಲಿ ಸುಮಾರು 6 ಅಡಿ ಎತ್ತರದ ಹೊಳೆಯುವ ಸ್ಟೈನ್‌ಲೆಸ್ ಸ್ಟೀಲ್‌ನ ಕಂಬವೊಂದು ದಿಢೀರ್ ಎಂದು ಪ್ರತ್ಯಕ್ಷವಾಗಿತ್ತು. ಆದರೆ ನಿಗೂಢವಾಗಿ ಕಣ್ಮರೆಯಾಯಿತು. ಆದರೆ ಈ ಲೋಹದ ಕಂಬ ಹೇಗೆ ಬಂತು ಎಲ್ಲಿಗೆ ಮಾಯವಾಯಿತು? ಯಾರು ತಂದವರು ಎಂಬ ಪ್ರಶ್ನೆಗಳು ಹಾಗೆ ನಿಗೂಢವಾಗಿ ಉಳಿದವು.



Click it and Unblock the Notifications