Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಕಾಶದಲ್ಲಿ ಮಿನುಗಿದ ನಿಗೂಢ ನೀಲಿ ಬೆಳಕು..! ವಿಸ್ಮಯಕಾರಿ ವಿಡಿಯೋ..!
ಆಕಾಶದಲ್ಲಿ ಚಿತ್ರ ವಿಚಿತ್ರ ಘಟನೆಗಳು, ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಅವು ಪ್ರತಿಬಾರಿ ನಡೆದಾಗಲೂ ಜನರನ್ನು ಅಷ್ಟೇ ಕುತೂಹಲಕ್ಕೆ ತಳ್ಳುತ್ತವೆ. ಜೊತೆಗೆ ಮತ್ತಷ್ಟು ಊಹಾಪೋಹಗಳು ಹುಟ್ಟಿಕೊಳ್ಳುತ್ತವೆ. ಆಕಾಶದಲ್ಲಿ ವಿಸ್ಮಯಗಳು ನಡೆಯುವುದು ಹೊಸತೇನು ಅಲ್ಲ. ವಿಚಿತ್ರ ರೀತಿಯ ವಸ್ತುಗಳು ಕಾಣಿಸಿಕೊಳ್ಳುವುದು, ವಿಚಿತ್ರ ಬೆಳಕು, ಯುಎಫ್‌ಓಗಳು ಕಂಡಿರುವ ಪಟ್ಟಿಯೇ ಇಲ್ಲಿ ಇಡಬಹುದು.
ಆದರೆ ಇದೇ ರೀತಿಯ ಮತ್ತೊಂದು ಘಟನೆ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಮೆರಿಕದ ಅರಿಝೋನಾದಲ್ಲಿ ನಿಗೂಢವಾದ ನೀಲಿ ಬಣ್ಣದ ಹೊಳೆಯುವ ವಸ್ತುವೊಂದು ಆಕಾಶದಲ್ಲಿ ಕಂಡುಬಂದಿದೆ. ಸದ್ಯ ಈ ವಸ್ತು ಯಾವುದು ಎಂಬುದು ಚರ್ಚೆಯ ವಿಷಯವಾಗಿದ್ದು, ಅಲ್ಲಿನ ನಿವಾಸಿಗಳು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಈ ವಿಸ್ಮಯವನ್ನು ಸೆರೆಹಿಡಿದಿದ್ದಾರೆ.

UFO ದೃಶ್ಯಗಳು ಏರಿಕೆಯನ್ನು ಅನುಭವಿಸುವುದರೊಂದಿಗೆ, ಈ ಘಟನೆಯು ಸಂಶೋಧಕರು ಮತ್ತು ಸಾಮಾನ್ಯ ಜನರ ಗಮನವನ್ನು ಸೆಳೆದಿದೆ, ಅಂತಹ ವಿಚಿತ್ರ ಘಟನೆಗಳ ಹಿಂದಿನ ರಹಸ್ಯಗಳನ್ನು ಬಿಚ್ಚಿಡಲು ಎಲ್ಲರೂ ಉತ್ಸುಕರಾಗಿದ್ದಾರೆ. ಸ್ಕಾಟ್ಸ್‌ಡೇಲ್ ನಿವಾಸಿಯೊಬ್ಬರು ಸಹಚರರೊಂದಿಗೆ ಸಂಜೆಯ ವಿಹಾರಕ್ಕೆ ಹೊರಟಾಗ, ವಸ್ತುವನ್ನು ಗುರುತಿಸಿ ರೆಕಾರ್ಟ್ ಮಾಡಿಕೊಂಡಿದ್ದಾರೆ.
ಪ್ರತ್ಯಕ್ಷ ದರ್ಶಿಗಳ ಪ್ರಕಾರ, ಈ ನೀಲಿ ಆಕಾರದ ಬೆಳಕು ಮೇಲೆ ಕೆಳಗೆ ಚಲಿಸುತ್ತಿತ್ತು ಎಂದಿದ್ದಾರೆ. ಆಕಾಶದಲ್ಲಿ ಸುಮಾರು 30 ನಿಮಿಷಕ್ಕೂ ಹೆಚ್ಚು ಹೊತ್ತು ಕಂಡುಬಂದಿದೆ ಎಂದಿದ್ದಾರೆ. ಆದರೆ ಅಲ್ಲಿಂದ ಯಾವ ಶಬ್ದವೂ ಕೇಳಿಬರುತ್ತಿರಲಿಲ್ಲ. ಕೆಲವೊಮ್ಮೆ ಬೆಳಕು ಮಂದವಾಗಿದ್ದರೆ ಇನ್ನೂ ಕೆಲವೊಮ್ಮೆ ಪ್ರಕಾಶವಾಗಿ ಹೊಳೆಯುತ್ತಿತ್ತು ಎಂದು ವಿವರಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಇನ್‌ಸ್ಟಾಗ್ರಾಮ್ ಪುಟದಲ್ಲಿನ ಪೋಸ್ಟ್‌ನ ಪ್ರಕಾರ, "ನನ್ನ ಐಫೋನ್ 13 ಪ್ರೊನಲ್ಲಿ ಚಿತ್ರೀಕರಿಸಲಾಗಿದೆ, ನಾನು ನನ್ನ ನಾಯಿಯನ್ನು ನನ್ನ ಅಪಾರ್ಟ್ಮೆಂಟ್‌ನ ಕೆಳಗೆ ವಾಕ್ ಮಾಡಲು ಕರೆದುಕೊಂಡು ಹೋಗುತ್ತಿದ್ದೆ ಮತ್ತು ವಿಚಿತ್ರವಾದ ನೀಲಿ ಬೆಳಕನ್ನು ನೋಡಿದೆ. ಅದು ಆಕಾಶದಲ್ಲಿ ನೇತಾಡುವ ಹಗ್ಗದಂತೆ ಕಾಣುತ್ತದೆ ಮತ್ತು ಮೇಲಕ್ಕೆ ಮತ್ತು ಕೆಳಕ್ಕೆ ಹೋಗುತ್ತಿರುವುದನ್ನು ನಾನು ಗಮನಿಸಿದೆ. ಇದು ಹಾದುಹೋಗುವ ವಿಮಾನಗಳಿಗಿಂತ ಎತ್ತರವಾಗಿತ್ತು, ನಮಗೆ ಹತ್ತಿರದಲ್ಲಿ ವಿಮಾನ ನಿಲ್ದಾಣವಿರಬಹುದು, ಆದ್ದರಿಂದ ವಿಮಾನಗಳು ತುಂಬಾ ಸಾಮಾನ್ಯವಾಗಿದೆ. ಅದು 30 ನಿಮಿಷಗಳ ಕಾಲ ಮೇಲಕ್ಕೆ ಮತ್ತು ಕೆಳಕ್ಕೆ ನೇತಾಡಿತು ಮತ್ತು ನಂತರ ಕಣ್ಮರೆಯಾಯಿತು'' ಎಂದು ವಿವರಿಸಲಾಗಿದೆ.
UFO ವರದಿಯಲ್ಲಿ ಅಗ್ರಸ್ಥಾನದಲ್ಲಿದೆ ಅರಿಝೋನಾ
ಆಕಾಶದಲ್ಲಿ ಕೆಲವು ಗುರುತಿಸಲಾಗದ ವಸ್ತುಗಳು ಪದೇ ಪದೇ ಕಾಣಿಸಿಕೊಳ್ಳಲು ಆರಂಭಿಸಿದಾಗ ಅಮೆರಿಕ ಸರ್ಕಾರ ಇದರ ಅಂಕಿ ಅಂಶ ಸಂಗ್ರಹಕ್ಕೆ ಮುಂದಾಗಿತ್ತು, ಈ ಹಾರುವ ತಟ್ಟೆಗಳ ಕುರಿತ ಅಧ್ಯಯನವೊಂದು ಅಮೆರಿಕ ಸರ್ಕಾರವನ್ನೇ ಅಲುಗಾಡಿಸಿತ್ತು. ಹೀಗಾಗಿ ಅವರು ಈ ಯುಎಫ್‌ಓಗಳ ದತ್ತಾಂಶ ಸಂಗ್ರಹಣೆಗಾಗಿ ಸಂಸ್ಥೆಯೊಂದನ್ನು ಕಟ್ಟಿದರು.
ಈ ರಾಷ್ಟ್ರೀಯ UFO ರಿಪೋರ್ಟಿಂಗ್ ಸೆಂಟರ್‌ನ ದತ್ತಾಂಶದ ಪ್ರಕಾರ ಇಡೀ ವಿಶ್ವದಲ್ಲಿ ಅತೀ ಹೆಚ್ಚಿ ಯುಎಫ್‌ಓ ವರದಿಗಳು ಈ ಅರಿಝೋನಾ ಪ್ರದೇಶದಲ್ಲಿ ಕಂಡು ಬರುತ್ತಿವೆ. 1974ರ ಬಳಿಕ ಈ ಪ್ರದೇಶದಲ್ಲಿ ಅತೀ ಹೆಚ್ಚು ವರದಿಗಳಾಗಿವೆ ಎಂದು ದತ್ತಾಂಶಗಳು ವಿವರಿಸುತ್ತಿವೆ. ಈವರೆಗಿನ 1,70,000 ವರದಿಗಳಲ್ಲಿ 5 ಸಾವಿರಕ್ಕೂ ಹೆಚ್ಚು ವರದಿಯೂ ಈ ಅರಿಝೋನಾ ಪ್ರದೇಶದಲ್ಲಿ ಕಂಡುಬಂದಿವೆ.
ಮಣಿಪುರದಲ್ಲೂ ಕಂಡಿತ್ತು ಯುಎಫ್‌ಓ?
ಕಳೆದ ವರ್ಷ ನವೆಂಬರ್‌ನಲ್ಲಿ ಮಣಿಪುರದ ಇಂಪಾಲ ವಿಮಾನ ನಿಲ್ದಾಣದ ಮೇಲೆ ಈ ರೀತಿಯ ಯುಎಫ್‌ಓ ಕಂಡುಬಂದಿತ್ತು ಎನ್ನಲಾಗಿದೆ. ಹೀಗಾಗಿ ಮೂರು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಹಾಗೂ ಎರಡು ವಿಮಾನಗಳ ಮಾರ್ಗ ಬದಲಿಸಲಾಗಿತ್ತು. ಇಷ್ಟೇ ಅಲ್ಲ ಇಡೀ ವಿಮಾಣ ನಿಲ್ದಾಣ 4 ಗಂಟೆಗಳ ಕಾಲ ಮುಚ್ಚಲ್ಪಟ್ಟಿತ್ತು. ಆದರೆ ತನಿಖೆಯಲ್ಲಿ ಅದೊಂದು ಡ್ರೋನ್ ಎಂದು ತಿಳಿದುಬಂದಿತ್ತು. ಆದರೆ ಡ್ರೋನ್ ನಿಷೇಧಿತ ಪ್ರದೇಶವಾಗಿದ್ದು, ಅಲ್ಲಿ ಡ್ರೋನ್ ಹಾರಿಸಲು ಸಾಧ್ಯವೇ ಇರಲಿಲ್ಲ. ಹೀಗಿದ್ದರೂ ಅಲ್ಲಿ ಡ್ರೋನ್ ಹಾರಾಟವಾಗಿದ್ದು ಹೇಗೆ ಎಂಬುದು ಪ್ರಶ್ನೆಯಾಗಿಯೇ ಉಳಿದಿತ್ತು.



Click it and Unblock the Notifications


