Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಾರ್ಗೇಟ್ ಸಮುದ್ರ ತೀರದಲ್ಲಿ ವಿಚಿತ್ರ ಜೀವಿ ಪತ್ತೆ..! ಉತ್ತರ ಸಿಗದೆ ಶಾಕ್ ಆದ ಮಂದಿ..!
ಇತ್ತೀಚಿಗೆ ಸಮುದ್ರ ತೀರಗಳು ಹಲವು ಕುತೂಹಲಕಾರಿ ಜೀವಿಗಳು ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಿರುವುದನ್ನು ನಾನವು ನೋಡಿದ್ದೇವೆ. ವಿಚಿತ್ರ ಮೀನುಗಳು ಕಾಣಿಸಿಕೊಳ್ಳುವುದು ಸಾವಿರಾರು ಮೀನುಗಳು ಸಮುದ್ರದ ದಂಡೆಗೆ ಬರುವುದು, ಅಪರೂಪದ ಮೀನುಗಳು, ಆಳ ಸಮುದ್ರದಲ್ಲಿ ಜೀವಿಸುಂತಹ ಮೀನುಗಳು ಸಮುದ್ರದ ಮೇಲ್ಮೈಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿರುವುದುನ್ನು ನಾವೂ ಕೂಡ ನೋಡಿದ್ದೇವೆ.
ಆದ್ರೆ ಇಲ್ಲೊಂದು ವಿಚಿತ್ರ ಘಟನೆ ಈಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಹಾಗೆ ಇದನ್ನು ನಂಬಲಾಗದೆ ಹಲವರು ಆಘಾತಕ್ಕೊಳಗಾಗಿದ್ದಾರೆ. ಏಲಿಯನ್ ರೀತಿ ಮುಖ ಹೊಂದಿರುವ ವಿಚಿತ್ರ ಮೀನನ್ನು ಹೋಲುವ ಜೀವಿಯಿಂದು ಸಮುದ್ರ ದಂಡೆಯಲ್ಲಿ ಪತ್ತೆಯಾಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ನೋಡಲು ಭಯ ಹುಟ್ಟಿಸುವಂತಹ ವಿಚಿತ್ರ ಜೀವಿ ಕಂಡು ಜನ ಬೆಚ್ಚಿಬಿದ್ದಿದ್ದಾರೆ.

ದೊಡ್ಡ ಮೀನನ ಅಸ್ಥಿಪಂಜರದಂತೆ ಕಾಣುವ ರೆಕ್ಕೆ ಕೈಗಳಂತಹ ರಚನೆ ಹೊಂದಿರುವ ನಿಗೂಢ ಆಕೃತಿಯ ಜೀವಿಯೊಂದು ಪತ್ತೆಯಾಗಿದೆ. ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಈ ಕುರಿತು ನೆಟ್ಟಿಗರು ಒಂದೊಂದು ರೀತಿಯ ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ಹಾಗಾದ್ರೆ ಈ ಫೋಟೋದಲ್ಲಿರುವ ಜೀವಿ ಯಾವುದು? ಇದು ನಿಜವಾಗಲು ನಡೆದಿದ್ದಾ ಅಥವಾ ಎಡಿಟ್ ಮಾಡಲಾದ ಫೋಟೋವೇ ಎಂಬುದನ್ನು ತಿಳಿದುಕೊಳ್ಳೋಣ. ಸದ್ಯ ಈ ರೀತಿ ವಿಚಿತ್ರ ಜೀವಿ ಇಂಗ್ಲೆಂಡ್‌ನ ಮಾರ್ಗೇಟ್ ನಗರದ ಸಮುದ್ರ ತೀರದಲ್ಲಿ ಇದು ಪತ್ತೆಯಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ಕೂಡ ವರದಿ ಮಾಡಿದೆ. ಪೌಲಾ ರೇಗನ್ ತನ್ನ ಪತಿ ಡೇವ್ ಜೊತೆ ಮಾರ್ಗೇಟ್‌ನ ಕಡಲ ತೀರದಲ್ಲಿ ವಾಕಿಂಗ್ ಮಾಡುವಾಗ ಈ ಅಸ್ಥಿ ಪಂಜರದಂತಹ ಜೀವಿ ಕಣ್ಣಿಗೆ ಬಿದ್ದಿದೆ.
ವಿಚಿತ್ರ ಅಸ್ಥಿಪಂಜರ ನೋಡಿದ ದಂಪತಿ ತಕ್ಷಣ ಅದರ ಫೋಟೋ ತೆಗೆದಿದ್ದಾರೆ. ಇಬ್ಬರು ಅದರ ಜೊತೆಗೆ ಸೆಲ್ಪೀ ಸಹ ಕ್ಲಿಕ್ಕಿಸಿದ್ದಾರೆ. ಇದಾದ ಕೆಲವೇ ಸಮಯದಲ್ಲಿ ಅಲ್ಲಿ ಜನರು ಸೇರಿದ್ದಾರೆ. ಸಮುದ್ರ ತೀರಕ್ಕೆ ಬಂದವರು ಈ ವಿಚಿತ್ರ ಆಕೃತಿ ಕಂಡು ನಿಬ್ಬೆರಗಾಗಿದ್ದಾರೆ, ಆದ್ರೆ ಯಾವುದಿದು ಜೀವಿ, ತೀರಕ್ಕೆ ಹೇಗೆ ಬಂದಿದೆ ಎಂಬುದು ತಿಳಿಯದೆ ಅಚ್ಚರಿಗೊಳಗಾಗಿದ್ದಾರೆ.
ನಾವು ಇದನ್ನು ಫೋಟೋ ತೆಗೆದುಕೊಳ್ಳದಿದ್ದರೆ ಯಾವು ಕೂಡ ಇದು ಸತ್ಯ ಎಂದು ನಂಬುತ್ತಿರಲಿಲ್ಲ ಎಂದು ಪೌಲಾ ರೇಗನ್ ಹೇಳಿದ್ದಾರೆ. ಹಾಗೆ ಮೊದಲಿಗೆ ಅದು ಮರದ ತುಂಡು ಅಥವಾ ಬಹುಶಃ ಸತ್ತ ಸೀಲ್ ಇರಬಹುದು ಎಂದು ಭಾವಿಸಿದ್ದೆ. ಆದ್ರೆ ಹತ್ತಿರಕ್ಕೆ ಬಂದಾಗ ಮನುಷ್ಯರ ಅಸ್ಥಿತಿ ಪಂಜರದಂತೆ ಅದರ ರಚನೆ ಕಂಡಿತು. ಆದರೆ ಅದರ ಹಿಂಭಾಗ ಮೀನಿನ ಬಾಲದಂತೆ ಇತ್ತು. ಇದು ಮೃದುವಾದ ವಸ್ತುವಾಗಿತ್ತು ಎಂದು ಆಕೆ ವಿವರಿಸಿದ್ದಾಳೆ.
ಆದ್ರೆ ಇದು ಯಾವ ಪ್ರಾಣಿ ಇಲ್ಲಿಗೆ ಹೇಗೆ ಬಂದಿತು ಎಂಬುದನ್ನು ಯಾರು ಸಹ ಹೇಳಲಾಗಲಿಲ್ಲ. ಹಾಗೆ ಅಲ್ಲಿ ನೆರೆದಿದ್ದವರು ಕೂಡ ಅದನ್ನು ಪರಿಶೀಲಿಸಲು ಮುಂದಾದರು. ಹಾಗೆ ಒಬ್ಬೊಬ್ಬರು ಒಂದೊಂದು ರೀತಿ ಅಭಿಪ್ರಾಯ ಹೊರಹಾಕಿದರು. ಕೆಲವರ ಪ್ರಕಾರ ಇದು ದೊಡ್ಡ ಕ್ರೂಸ್ ಹಡಗಿನಲ್ಲಿದ್ದ ಆಟಿಕೆಯ ವಸ್ತು ಅಥವಾ ಅಲಂಕಾರಿಕ ವಸ್ತು ಆಗಿರಬಹುದು ಎಂದರು. ಹಾಗೆ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಮತ್ತೆ ಕೆಲವರು ಹೇಳಿದರು. ಇದೊಂದು ಗಮನ ಸೆಳೆಯುವ ಟ್ರಿಕ್ಸ್ ಎಂದು ಹಲವು ಹೇಳಿದರು.
ಆದ್ರೆ ಇಷ್ಟಾದರು ಈ ವಿಚಿತ್ರ ಆಕೃತಿ ಹಿಂದಿರುವ ಕಾರಣವೇನು? ಅದನ್ನು ಯಾರು ತಂದು ಹಾಕಿದ್ದಾರೆ? ಎಲ್ಲಿಂದ ಬಂದಿದೆ ಹೀಗೆ ಯಾವುದೇ ಪ್ರಶ್ನೆಗಳಿಗೂ ಉತ್ತರಗಳು ಸಿಕ್ಕಿಲ್ಲ. ಈ ಫೋಟೋಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇವೆ.



Click it and Unblock the Notifications
