Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಯುಎಸ್ಎ-ಪಾಕ್ ಪಂದ್ಯ ನೋಡಲು ಮಾರುವೇಷದಲ್ಲಿ ಧೋನಿ..? ಇದರ ಸತ್ಯವೇನು?
ಕ್ರಿಕೆಟ್ ಪ್ರೇಮಿಗಳಿಗೆ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಹಬ್ಬ ಆರಂಭಗೊಂಡಿದೆ. ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟಿ-20 ವಿಶ್ವಕಪ್ ನಡೆಯುತ್ತಿದೆ. ನೀವು ಕ್ರಿಕೆಟ್ ಪ್ರೇಮಿಗಳಾಗಿದ್ದರೆ ಇತ್ತೀಚಿಗೆ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ವಿವರಿಸುವ ಅಗತ್ಯವಿರುವುದಿಲ್ಲ. ಏಕೆಂದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಹೊಸ ಹೊಸ ತಂಡಗಳು ಸಹ ಆಡುತ್ತಿವೆ.
ಈ ಅವಿಸ್ಮರಣೀಯ ಸಮಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ದಿಗ್ಗಜರು ಅಮೆರಿಕದಲ್ಲಿ ಬೀಡು ಬಿಟ್ಟಿದ್ದಾರೆ. ಕ್ರಿಕೆಟರ್‌ಗಳು ಅಮೆರಿಕದಲ್ಲಿ ಕಂಡುಬಂದಿದ್ದಾರೆ. ಇತ್ತ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ ಸಹ ಅಮೆರಿಕದಲ್ಲಿ ಇದ್ದಾರೆ ಎನ್ನಲಾಗುತ್ತಿದೆ.

ಆದರೆ ಇತ್ತೀಚಿಗೆ ನಡೆದ ಪಾಕಿಸ್ತಾನ್ ಹಾಗೂ ಅಮೆರಿಕ ನಡುವಿನ ಪಂದ್ಯ ವೀಕ್ಷಿಸಲು ಅವರು ಮಾರು ವೇಷದಲ್ಲಿ ಹೋಗಿದ್ದಾರೆಯೇ ಎಂಬ ಗೊಂದಲವೊಂದು ಕಾಡಲು ಆರಂಭಿಸಿದೆ, ಏಕೆಂದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋವೊಂದು ಇಂತಹದೊಂದು ಅನುಮಾನಕ್ಕೆ ಕಾರಣವಾಗಿದೆ.
ಹೌದು ಧೋನಿ ಮಾರುವೇಷ ಧರಿಸಿ ಪಾಕಿಸ್ತಾನ ಹಾಗೂ ಅಮೆರಿಕ ನಡುವಿನ ಪಂದ್ಯ ವೀಕ್ಷಿಸಿದ್ದಾರೆ ಎಂದು ಸಾವಿರಾರು ಮಂದಿ ಈ ಫೋಟೋಗಳ ಹಂಚಿಕೊಳ್ಳುತ್ತಿದ್ದಾರೆ. ಬಿಳಿ ಗಡ್ಡ ಹಾಗೂ ತಲೆ ಮೇಲೆ ಬಟ್ಟೆ ಹಾಕಿಕೊಂಡಿರುವ ವ್ಯಕ್ತಿಯ ಫೋಟೋ ಇದಾಗಿದ್ದು, ಎಲ್ಲರೂ ಇದು ಎಂಎಸ್ ಧೋನಿ ಎಂದು ಹಂಚಿಕೊಳ್ಳುತ್ತಿದ್ದಾರೆ.
ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಪಾಕಿಸ್ತಾನ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ರೋಮಾಂಚಕ ಪಂದ್ಯದ ವೇಳೆ ಉದ್ದನೆಯ ಗಡ್ಡ, ಬಿಳಿ ಸ್ಕಾರ್ಫ್, ಬಿಳಿ ಕುರ್ತಾ ಮತ್ತು ಸನ್ ಗ್ಲಾಸ್‌ನೊಂದಿಗೆ ಸಂಪೂರ್ಣ ಎಂಎಸ್ ಧೋನಿಯನ್ನು ಹೋಲುವ ವ್ಯಕ್ತಿಯ ಫೋಟೋ ಹಂಚಿಕೊಳ್ಳಲಾಗಿದೆ. ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಫೋಟೋ, "ಎಂಎಸ್ ಧೋನಿ ಪಾಕ್ ಮತ್ತು ಯುಎಸ್‌ಎ ಪಂದ್ಯವನ್ನು ಮಾರುವೇಷದಲ್ಲಿ ವೀಕ್ಷಿಸುತ್ತಿದ್ದಾರೆ" ಎಂದು ಬರೆಯಲಾಗಿದೆ.
ಪ್ರಸ್ತುತ ನಡೆಯುತ್ತಿರುವ ICC ಪುರುಷರ T20 ವಿಶ್ವಕಪ್ 2024, ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಸಹ-ಆತಿಥ್ಯ ವಹಿಸಿದ್ದು, ಇದು US ವಿಶ್ವ ಕಪ್ ಅನ್ನು ಮೊದಲ ಬಾರಿಗೆ ಆತಿಥ್ಯ ವಹಿಸಿರುವುದರಿಂದ ಐತಿಹಾಸಿಕವಾಗಿದೆ. ಅದರೆ ಈ ಫೋಟೋದಲ್ಲಿರುವುದು ಧೋನಿ ಅಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ.
ಆದರೆ ಧೋನಿ ಅಭಿಮಾನಿಗಳು ಈ ಫೋಟೋ ನೋಡಿದ ಬಳಿಕ ಗೊಂದಲಕ್ಕೆ ಒಳಗಾಗಿದ್ದಾರೆ, ಧೋನಿ ಏಕೆ ಮಾರು ವೇಷದಲ್ಲಿ ಕ್ರಿಕೆಟ್ ವೀಕ್ಷಿಸಲು ತೆರಳುತ್ತಾರೆ ಎಂದು ಶಾಕ್‌ಗೆ ಒಳಗಾಗಿದ್ದಾರೆ. ಆದರೆ ಈ ಫೋಟೋದಲ್ಲಿರುವುದು ಧೋನಿ ಅಲ್ಲ ಬದಲಿಗೆ ಅವರಂತೆ ಕಾಣುವ ವ್ಯಕ್ತಿಯಾಗಿದ್ದಾರೆ.
ನಿನ್ನೆ ನಡೆದ ಅಮೆರಿಕ ಹಾಗೂ ಪಾಕ್ ನಡುವಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ಯುಎಸ್‌ಎಗೆ ಶರಣಾಗಿದೆ. ಸೂಪರ್ ಓವರ್ ಗೇಮ್‌ನಲ್ಲಿ ಪಾಕ್ ಸೋಲು ಕಂಡಿದೆ. ಈ ಮೂಲಕ ಟೂರ್ನಿಯಲ್ಲಿ ತಾನು ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಯುಎಸ್‌ಎ ತಂಡ 4 ಅಂಕಗಳಿಸಿ ಮೊದಲ ಸ್ಥಾನದಲ್ಲಿದೆ. ಇತ್ತ ಭಾನುವಾರ ಪಾಕಿಸ್ತಾನ ಭಾರತದ ಎದುರು 2ನೇ ಪಂದ್ಯ ಆಡಲಿದೆ. ಭಾರತ ತಾನು ಆಡಿರುವ ಮೊದಲ ಪಂದ್ಯದಲ್ಲಿ ಐರ್ಲ್ಯಾಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿ 2 ಅಂಕ ಪಡೆದು 2ನೇ ಸ್ಥಾನದಲ್ಲಿದೆ.



Click it and Unblock the Notifications
