Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬಿಹಾರದಿಂದ ಮೌಂಟ್ ಎವರೆಸ್ಟ್ ಗೋಚರ: ವೈರಲ್ ಆಗುತ್ತಿದೆ ವಿಡಿಯೋ
ವಿಶ್ವದ ಅತ್ಯಂತ ಎಚ್ಚರದ ಪರ್ವತ ಶ್ರೇಣಿಯಾಗಿರುವ ಮೌಂಟ್ ಎವರೆಸ್ಟ್ ಅದ್ಭುತ ನೈಸರ್ಗಿಕ ವಿಸ್ಮಯವಾಗಿದೆ. ನೇಪಾಳ, ಭಾರತದ ಗಡಿಯಲ್ಲಿ ಕಂಡುಬರುವ ಆಕಾಶದೆತ್ತರದ ಪರ್ವತ ಶ್ರೇಣಿಗಳಲ್ಲಿ ಈ ಮೌಂಟ್ ಎವರೆಸ್ಟ್ ಕೂಡ ಒಂದಾಗಿದೆ. ಹಾಗೆ ಈ ಮೌಂಟ್ ಎವರೆಸ್ಟ್ ಅನ್ನು ಏರಲು ವರ್ಷವು ಸಾವಿರಾರು ಮಂದಿ ಅಲ್ಲಿಗೆ ತರಳುತ್ತಾರೆ. ನೋಡಲು ಎಷ್ಟು ಸುಂದರವಾಗಿದೆಯೋ ಅದರ ಬಳಿ ತೆರಳುವುದು ಕೂಡ ಅಷ್ಟೇ ಅಪಾಯಕಾರಿಯಾಗಿದೆ.
ಆದ್ರೆ ಈಗ ಮೌಂಟ್ ಎವರೆಸ್ಟ್ ದೂರದ ಬಿಹಾರದಿಂದಲೂ ಗೋಚರವಾಗುತ್ತಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಾಯುಮಾಲಿನ್ಯ ಕಡಿಮೆಯಾದ ಕಾರಣದಿಂದಾಗಿ ಬಿಹಾರದಿಂದಲೂ ನಾವು ಮೌಂಟ್ ಎವರೆಸ್ಟ್ ನೋಡಬಹುದು ಎಂದು ಹೇಳಲಾಗಿರುವ ವಿಡಿಯೋ ಹರಿದಾಡಿದ್ದು ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ.

ಭಾರತದ ಕಿರೀಟ ಎಂದೇ ಕರೆಯಲಾಗುವ ಈ ಸುಂದರ ದೃಶ್ಯಗಳು ಬಿಹಾರದಿಂದ ಸೆರೆಹಿಡಿಯಲಾಗಿದೆ. ಬಿಹಾರದ ಜೈನಗರದಲ್ಲಿ ರೆಕಾರ್ಡ್ ಮಾಡಲಾದ ವೀಡಿಯೊವು ಮೌಂಟ್ ಎವರೆಸ್ಟ್ ನೂರಾರು ಕಿಲೋಮೀಟರ್ ದೂರದಲ್ಲಿದ್ದರು ಸುಂದರವಾಗಿ ಕಾಣಿಸುತ್ತಿದೆ. ಜೈನಗರವು ಮಧುಬನಿ ಜಿಲ್ಲೆಯ ಗಡಿ ಪಟ್ಟಣವಾಗಿದೆ. ಇದು ಬಿಹಾರದ ಗಡಿ ಪ್ರದೇಶದ ಪಟ್ಟಣ. ಕಳೆದ ಕೆಲ ದಿನ ಹಿಂದೆ ಭಾರೀ ಮಳೆಯ ಪರಿಣಾಮವಾಗಿ ವಾಯು ಮಾಲಿನ್ಯ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಸೂರ್ಯನ ಬೆಳಕಿನ ಕಾರಣದಿಂದಾಗಿ ಪರ್ವತ ಶ್ರೇಣಿ ಚೆನ್ನಾಗಿ ಕಾಣಿಸುತ್ತಿದೆ. ಸೂರ್ಯನ ಬೆಳಕಿನಲ್ಲಿ ಶಿಖರಗಳು ಬಣ್ಣ ಬದಲಾಯಿಸುವುದು ಕೂಡ ನೋಡಬಹುದು. ಈ ವಿಡಿಯೋ ನೋಡಿದ ಮಂದಿ ಅಚ್ಚರಿಗೊಳಗಾಗಿದ್ದಾರೆ. ಇದು ಮಾಲಿನ್ಯ ಮುಕ್ತ ಪರಿಸರದ ಕೊಡುಗೆ ಎಂದು ಕರೆದಿದ್ದಾರೆ. ಆದ್ರೆ ಇದೇ ರೀತಿಯ ಪರಿಸರ ನಿತ್ಯ ನೋಡಲು ಸಾಧ್ಯವಿಲ್ಲ.
ಆದ್ರೆ ಮತ್ತೆ ಕೆಲವರು ಇದು ನೈಜ ವಿಡಿಯೋ ಅಲ್ಲವೇ ಅಲ್ಲ ಎಂದು ವಾದಿಸಿದ್ದಾರೆ. ಏಕೆಂದರೆ ಬಿಹಾರದಿಂದ ಮೌಂಟ್ ಎವರೆಸ್ಟ್ ಬರೋಬ್ಬರಿ 500 ಕಿ,ಮೀ ಗಿಂತಲೂ ದೂರವಿದೆ. ಇಷ್ಟೊಂದು ದೂರದಲ್ಲಿನ ಮೌಟ್ ಎವರೆಸ್ಟ್ ಇಷ್ಟು ಸ್ವಚ್ಛೆಂದವಾಗಿ ಕಾಣಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಕೆಲವರ ಪ್ರಕಾರ ಇದು ಎಐ ಅಥವಾ ಎಡಿಟ್ ಮಾಡಲಾದ ವಿಡಿಯೋ ಎಂದು ಸಹ ವಾದಿಸಿದ್ದಾರೆ.
ಈ ಪೋಸ್ಟ್ ಅನ್ನು 'ಸತ್ಯಮರಾಜ್_ಇನ್' ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕಳೆದ ಎರಡು ದಿನದ ಹಿಂದೆ ಮೌಂಟ್ ಎವರೆಸ್ಟ್‌ನ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಈಗ ಸುಮಾರು 8 ಮಿಲಿಯನ್ ವೀಕ್ಷಣೆ ಕಂಡಿದೆ. ಹಾಗೆ ಹಲವರು ಇದನ್ನು ಸುಳ್ಳು ಎಂದು ಸಹ ಕರೆದಿದ್ದಾರೆ. ಆದರೆ ಈ ವಿಡಿಯೋ ಸತ್ಯಾಸತ್ಯತೆ ಏನೆಂಬುದು ತಿಳಿದುಬಂದಿಲ್ಲ.
ಆದ್ರೆ ಇದಕ್ಕೂ ಮೊದಲು ಸಹ ಮೌಂಟ್ ಎವರೆಸ್ಟ್ ಬಿಹಾರದಿಂದ ಕಾಣಿಸಿತ್ತು. ಲಾಕ್‌ಡೌನ್ ಸಮಯದಲ್ಲಿ ಕೂಡ ಇಂತಹ ಹಲವು ವಿಡಿಯೋಗಳು ಹಾಗೆ ಫೋಟೋಗಳು ಹರಿದಾಡಿದ್ದವು. ಇದಾದ ಬಳಕ ಮಾಲಿನ್ಯ ಹೆಚ್ಚಳದಿಂದಾಗಿ ವಿಸಿಬಿಲಿಟಿ ಕಡಿಮೆಯಾಗಿತ್ತು, ಆದ್ರೆ ಈಗ ನಿರಂತರ ಮಳೆ ಸುರಿದ ಕಾರಣಕ್ಕೆ ಮತ್ತೆ ಎವರೆಸ್ಟ್ ಕಾಣಿಸಿಕೊಂಡಿದೆ.
ಸದ್ಯ ಈಗ ಉತ್ತರ ಭಾರತದ ಹಲವು ಭಾಗದಲ್ಲಿ ವರ್ಷದ ಮೊದಲ ಹಿಮ ಬೀಳುತ್ತಿದೆ. ಚಳಿಗಾಲದ ಆರಂಭದ ದಿನದಲ್ಲಿ ಹಿಮ ಬೀಳಲು ಆರಂಭಿಸುತ್ತದೆ. ಆದ್ರೆ ಮಳೆಯಾಗಿರುವ ಕಾರಣದಿಂದಾಗಿ ಅಲ್ಲಿ ಹಿಮ ಬೀಳುವಿಕೆ ಕೂಡ ಕಡಿಮೆಯಾಗಿದೆ. ಇದರಿಂದ ಹಿಮಾಲಯ ಪರ್ವತ ಶ್ರೇಣಿ ಕಾಣಿಸುತ್ತಿದೆ. ಹಾಗೆ ಬಿಹಾರದ ಈ ಪ್ರದೇಶ ಹಿಮಾಲಯಕ್ಕೆ ಬಹಳ ಹತ್ತಿರದಲ್ಲಿದೆ, ಹಾಗೆ ಮಾಲಿನ್ಯ ಕಡಿಮೆಯಾಗಿರುವ ಪರಿಣಾಮ ಗೋಚರವಾಗುತ್ತಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.



Click it and Unblock the Notifications
