Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳ ಮೊಬೈಲ್ ಚಟ ನಿಮಿಷದಲ್ಲಿ ಬಿಡಿಸಿ! ಹೇಗೆ ಅನ್ನೋದಕ್ಕೆ ಈ ವಿಡಿಯೋ ನೋಡಿ
ಮಕ್ಕಳು ಈಗ ಮೊಬೈಲ್ ಬಳಕೆ ಮಾಡುವುದು ಎಲ್ಲರಿಗೂ ಹೊಸ ರೀತಿಯ ತಲೆನೋವು. ಮೊಬೈಲ್ ಬಳಸದೆ ಇರುವ ಮಕ್ಕಳನ್ನು ನೋಡೋದೇ ಕಷ್ಟವಾಗಿದೆ. ಅವರು ಬೆಳಗ್ಗೆಯಿಂದ ಸಂಜೆವರೆಗೂ ಮೊಬೈಲ್ ಬಳಸುವುದರಲ್ಲೇ ಮುಳುಗುವುದು ನೋಡಬಹುದು. ಅದ್ರಲ್ಲೂ ಶಾಲೆಗೆ ತೆರಳುವ ಮಕ್ಕಳು ಓದಿನತ್ತ ಗಮನಹರಿಸದೆ ಕೇವಲ ಮೊಬೈಲ್ ಬಳಕೆಯಲ್ಲೇ ಸಮಯ ಕಳೆಯುತ್ತಾರೆ.
ತಂದೆ ತಾಯಿಗೆ ಮಕ್ಕಳ ಮೊಬೈಲ್ ಬಳಕೆಯ ಅಭ್ಯಾಸ ಬಿಡಿಸುವುದೇ ದೊಡ್ಡ ಹರಸಾಹಸ ಆಗಿರಲಿದೆ. ಅವರಿಗೆ ಮೊಬೈಲ್ ನೀಡಿದ್ರೆ ಊಟ ತಿಂಡಿ ಮಾಡುವುದು, ಮಲಗಿ ನಿದ್ರೆ ಮಾಡುವುದು ನೋಡಬಹುದು. ಇದು ಈಗನ ದೊಡ್ಡ ಸಮಸ್ಯೆಯೂ ಹೌದು. ಹೀಗಾಗಿ ಮೊಬೈಲ್ ಬಳಕೆಯಿಂದ ಮಕ್ಕಳನ್ನು ದೂರ ಇಡಲೆಂದು ಹಲವು ರೀತಿಯ ಸಾಹಸ ಮಾಡುತ್ತಾರೆ.

ಹಾಗೆ ಈಗ ಇಲ್ಲೊಂದು ವಿಡಿಯೋದಲ್ಲಿ ತಾಯಿಯೊಬ್ಬರು ಮಗಳ ಮೊಬೈಲ್ ಬಳಕೆ ಬಿಡಿಸುವ ಕುರಿತು ಮಾಡಿರುವ ಟ್ರಿಕ್ಸ್ ಎಲ್ಲರಿಗೂ ಅಚ್ಚರಿ ಎನಿಸಿದೆ. ತಾಯಿಯೊಬ್ಬಳು ಚಿಕ್ಕ ಮಗಳ ಮೊಬೈಲ್ ಅಭ್ಯಾಸ ಬಿಡಿಸಲು ಹಲವು ರೀತಿ ಸಾಹಸ ಮಾಡಿ ಕೊನೆಗೂ ಒಂದು ಅಸಮಾನ್ಯ ಐಡಿಯಾ ಮಾಡಿ ಅಚ್ಚರಿ ಹುಟ್ಟಿಸಿದ್ದಾರೆ.
ತಾಯಿಯೊಬ್ಬರು ತನ್ನ ಚಿಕ್ಕ ಮಗಳು ಮೊಬೈಲ್ ಫೋನ್ ಕೇಳುವುದನ್ನು ತಡೆಯಲು ಅಸಾಮಾನ್ಯ ಐಡಿಯಾ ಬಳಸಿದ ನಂತರ ಹಗುರವಾದ ಆದರೆ ಪರಿಣಾಮಕಾರಿ ವೀಡಿಯೊ ವೈರಲ್ ಆಗುತ್ತಿದೆ. crazy___aditi___ ಎಂಬ ಇನ್‌ಸ್ಟಾಗ್ರಾಮ್ ಪುಟವು ಹಂಚಿಕೊಂಡಿರುವ ಈ ಕ್ಲಿಪ್, ಸರಳ ತಮಾಷೆಯು ಆಶ್ಚರ್ಯಕರವಾಗಿ ಪರಿಣಾಮಕಾರಿ ಪಾಠವಾಗಿ ಹೇಗೆ ಬದಲಾಯಿತು ಎಂಬುದನ್ನು ತೋರಿಸುತ್ತದೆ.
ತಾಯಿಯು ಮಲಗಿದ್ದ ತನ್ನ ಮಗಳ ಕಣ್ಣಿನ ಸುತ್ತಲೂ ಕಾಜಲ್ ಹಚ್ಚಿದ್ದಾರೆ. ಮಗು ಎಚ್ಚರಗೊಂಡು ಕನ್ನಡಿಯಲ್ಲಿ ಮುಖವನ್ನು ನೋಡಿಕೊಂಡದಾಗ ಭಯ ಆವರಿಸಿದೆ. ಆಕೆ ತನ್ನ ಕಣ್ಣುಗಳ ಕೆಳಗೆ ಉಂಟಾಗಿರುವ ಕಪ್ಪು ಕಲೆಗಳನ್ನು ನೋಡಿ ಶಾಕ್ ಆಗಿದ್ದಾಳೆ. ಹಾಗೆ ತಾಯಿಯ ಬಳಿ ಬಂದಾಗ ತಾಯಿ ಇದು ಹೆಚ್ಚು ಮೊಬೈಲ್ ಬಳಕೆ ಮಾಡುವುದರಿಂದ ಆಗಿದೆ. ಅದಕ್ಕೆ ಹೆಚ್ಚು ಮೊಬೈಲ್ ಬಳಕೆ ಮಾಡಬಾರದು ಎಂದು ತಾಯಿ ಮಗಳಿಗೆ ಬುದ್ದಿ ಮಾತು ಹೇಳುತ್ತಿದ್ದಾಳೆ.
ಹಾಗೆ ಮೊಬೈಲ್ ಬಳಕೆ ಕಡಿಮೆ ಮಾಡಿದರೆ ಎಲ್ಲಾ ಕಪ್ಪು ಕಲೆಗಳು ನಿವಾರಣೆಯಾಗಲಿದೆ. ಮೊದಲಿನಂತೆ ಬಿಳಿಯಾಗಲಿದೆ ಎಂದು ಮಗಳನ್ನು ಆಕೆ ಒಪ್ಪಿಸುತ್ತಾಳೆ. ಇದಾದ ಬಳಿಕ ಭಯಭೀತಳಾಗಿದ್ದರೂ ಮನವರಿಕೆಯಾದ ಹುಡುಗಿ ಇನ್ನು ಮುಂದೆ ಫೋನ್‌ಗಾಗಿ ಒತ್ತಾಯಿಸುವುದಿಲ್ಲ ಎಂದು ಭರವಸೆ ನೀಡಿದಳು. ಈ ವಿಡಿಯೋ ನೋಡಿದ ನೆಟ್ಟಿಗರಲ್ಲಿ ಅಚ್ಚರಿಯ ಜೊತೆಗೆ ನಗು ತರಿಸಿದೆ. ಈ ಐಡಿಯಾ ನಾವು ಮಾಡಿ ನೋಡುವುದಾಗಿ ಹೇಳುವುದು ನೋಡಬಹುದು.
ಈ ಬಾಲ್ಯದ ಕಹಿ ಘಟನೆ ಮೊಬೈಲ್‌ಗಿಂತ ಅಪಾಯಕಾರಿ ಎಂದು ಒಬ್ಬರು ಬಳಕೆದಾರರು ಹೇಳಿದ್ದಾರೆ. ಹಾಗೆ ಮೊಬೈಲ್ ಬಳಕೆ ಬಳಸುವುದನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಇದು ಸುಲಭ ದಾರಿ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಪೋಷಕರು ಈ ರೀತಿ ಐಡಿಯಾ ಮಾಡುವುದು ಬಹಳ ಉತ್ತಮ. ಮಕ್ಕಳಿಗೆ ಹೊಡೆದು, ಗದರಿಸಿ ಅವರಿಂದ ಮೊಬೈಲ್ ಕಿತ್ತುಕೊಳ್ಳುವ ಬದಲು ಈ ರೀತಿ ಐಡಿಯಾಗಳು ಒಳ್ಳೆ ಫಲಿತಾಂಶ ನೀಡಲಿವೆ.
ಇದರಿಂದ ಮಕ್ಕಳ ಮೇಲೆ ಗಾಢ ಪರಿಣಾಮ ಬೀರುವುದು ನೋಡಬಹುದು. ಅವರಲ್ಲಿ ಇದು ನಿಜ ಎನಿಸಬಹುದು. ಇದರಿಂಧ ಮೊಬೈಲ್ ಬಳಕೆಯಿಂದ ದೊಡ್ಡ ಹಾನಿಯಾಗುತ್ತದೆ ಎನ್ನುವುದನ್ನು ಮಕ್ಕಳ ಮನಸ್ಸಿಗೆ ತಾಕುವಂತೆ ಹೇಳಬಹುದು. ನೀವು ಕೂಡ ಈ ರೀತಿಯ ಐಡಿಯಾ ಮಾಡಿ ಮಕ್ಕಳ ಮೊಬೈಲ್ ಬಳಕೆ ಅಭ್ಯಾಸವನ್ನು ಬಿಡಿಸಬಹುದು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.



Click it and Unblock the Notifications