Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಾಲ್‌ನೊಳಗೆ ನುಗ್ಗಿದ 100ಕ್ಕೂ ಹೆಚ್ಚು ನಾಯಿಗಳು..! ಕೋಳಿ ಕಾಲು ತೋರಿಸಿ ಹಿಡಿದ ಜನ..!
ಮಾನವನ ಅತ್ಯಂತ ಪ್ರಿಯವಾದ ನಂಬಿಕಸ್ಥ ಪ್ರಾಣಿ ಅಂದ್ರೆ ಅದು ನಾಯಿಗಳು, ನೀಯತ್ತಿಗೆ ಮತ್ತೊಂದು ಹೆಸರು ಸಹ ನಾಯಿಗಳೇ. ನಾಯಿಗಳು ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು, ಈಗಂತು ನಾಯಿಗಳ ಸಾಕುವುದು ಪ್ರತಿಷ್ಠೆಯ ಜೊತೆಗೆ ಬೆರೆತು ಹೋಗಿದೆ. ಕೆಲವರು ಲಕ್ಷ ಲಕ್ಷ ರೂಪಾಯಿ ನೀಡಿ ವಿದೇಶದಿಂದಲೂ ನಾಯಿಗಳ ಸಾಕುತ್ತಾರೆ.
ಅಚ್ಚರಿ ಅಂದರೆ ನಾಯಿಗಳ ಸಾಕುವಿಕೆ ಈಗ ಉದ್ಯಮವಾಗಿಯೂ ಪಾರ್ಪಟ್ಟಿದೆ. ಸಾವಿರ ರೂಪಾಯಿಯಿಂದ ಹಿಡಿದು ಲಕ್ಷದವರೆಗೂ ನಾಯಿಗಳೀಗೆ ನೀಡಿ ಖರೀದಿಸಿ ಅವುಗಳನ್ನು ಮನೆ ಮಕ್ಕಳಂತೆ ಸಾಕುತ್ತಾರೆ. ಇನ್ನು ನಾಯಿಗಳ ಬೆಲೆ ಮಾತ್ರ ಹೆಚ್ಚಾಗಿದಲ್ಲ. ನಾಯಿಗಳಿಗೆಂದೆ ವಿಶೇಷ ಉಡುಗೆಗಳು, ತಿಂಡಿ, ಆಟಿಕೆ ಸೇರಿ ಹತ್ತು ಹಲವು ಬಗೆಯ ಸೋಪು, ಶಾಂಪು, ಮೆಡಿಸಿನ್‌ಗಳೂ ಸಹ ಮಾರುಕಟ್ಟೆಯಲ್ಲಿವೆ.

ಈಗ ನಾಯಿ ಸಾಕುವುದು ಸಹ ಐಷಾರಾಮಿ ವಸ್ತುಗಳ ಸಾಲಿಗೆ ಸೇರಿಬಿಟ್ಟಿದೆ. ಇಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ಯೋಗ ಶಾಲೆಯಲ್ಲಿ, ಹೋಟೆಲ್, ಕೆಫೆಗಳಲ್ಲೂ ಸಾಕು ನಾಯಿಗಳ ಇಟ್ಟುಕೊಂಡು ಗ್ರಾಹಕರನ್ನು ಆಕರ್ಪಿಸುವ ಕೆಲಸ ನಡೆಯುತ್ತಿದೆ. ಯೋಗಾ ಶಾಲೆಗಳಲ್ಲಿ ಚಿಕ್ಕ ಚಿಕ್ಕ ನಾಯಿ ಮರಿಗಳು ಯೋಗ ಮಾಡುವವರ ಮನಸ್ಸಿಗೆ ಮುದ ನೀಡುತ್ತವೆ.
ಇನ್ನೊಂದೆಡೆ ಕೆಫೆಗಳಲ್ಲಿ ಸಾಕು ನಾಯಿಗಳು ಗ್ರಾಹಕರ ಆಕರ್ಷಿಸುತ್ತವೆ. ಗ್ರಾಹಕರು ಕೆಫೆಗೆ ಬಂದಾಗ ಅವರೊಂದಿಗೆ ಈ ನಾಯಿಗಳು ಬೆರೆಯುತ್ತವೆ. ಅವರು ಮತ್ತೆ ಅದೇ ಕೆಫೆಗಳಿಗೆ ಭೇಟಿ ನೀಡುವಂತೆ ಮಾಡುತ್ತಿವೆ. ಹೀಗಾಗಿ ನಾಯಿಗಳು ವ್ಯಾಪಾರ ವ್ಯವಹಾರಕ್ಕೂ ಈಗ ಸಹಕಾರಿಯಾಗಿವೆ.
ಆದ್ರೆ ಇಲ್ಲೊಂದು ಕಡೆ 100 ಹೆಚ್ಚು ನಾಯಿಗಳು ಮಾಲ್‌ಗೆ ನುಗ್ಗಿ ದಾಂಧಲೆ ಸೃಷ್ಟಿಸಿವೆ. ಹೌದು ಚೀನಾದ ನಗರವೊಂದರಲ್ಲಿ ಪೆಟ್ ಕೆಫೆಯಿಂದ ತಪ್ಪಿಸಿಕೊಂಡ 100ಕ್ಕೂ ಹೆಚ್ಚು ಸೈಬೀರಿಯನ್ ಹಸ್ಕಿಗಳು ಮಾಲ್ ಒಂದಕ್ಕೆ ನುಗ್ಗಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅವು ಮಾಲ್‌ನಲ್ಲಿ ಅಡ್ಡಾದಿಡ್ಡಿಯಾಗಿ ಓಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ನಾಯಿಗಳು ಮಾಲ್‌ಗೆ ನುಗ್ಗಿದ್ದೇಕೆ..?
ಚೀನಾದ ಶೆನ್‌ಜೆನ್ ಗುವಾಂಗ್‌ಡಾಂಗ್‌ನಲ್ಲಿರುವ ಪೆಟ್ ಕೆಫೆಯ ಮಾಲೀಕ ಬಾಗಿಲು ಹಾಕಿ ಚಿಲಕ ಹಾಕುವುದನ್ನು ಮರೆತ್ತಿದ್ದಾಗ ಈ ಅಚಾತುರ್ಯ ನಡೆದಿದೆ ಎಂದು ವರದಿಯಾಗಿದೆ. ಆತನ ತಪ್ಪಿನಿಂದ ಕೆಫೆಯೊಳಗಿದ್ದ ಸುಮಾರು 100ಕ್ಕೂ ಹೆಚ್ಚು ಸೈಬೀರಿಯನ್ ಹಸ್ಕಿಗಳು ತಪ್ಪಿಸಿಕೊಂಡಿವೆ. ಈ ಕೆಫೆ ಮುಂದೆ ಇದ್ದ ದೈತ್ಯ ಮಾಲ್‌ನೊಳಗೆ ನಾಯಿಗಳು ಓಡಿವೆ.
ಈ ನಾಯಿಗಳು ಬೊಗಳುತ್ತಾ ಕಂಡ ಕಂಡಲೆಲ್ಲಾ ಓಡತೊಡಗಿವೆ. ತಕ್ಷಣ ಎಚ್ಚೆತ್ತ ಕೆಫೆ ಸಿಬ್ಬಂದಿ ನಾಯಿಗಳ ಹಿಡಿಯಲು ಅವುಗಳ ಹಿಂಬಾಲಿಸಿದ್ದಾರೆ. ಆದರೆ ನಾಯಿಗಳು ಇಂತಹ ಸಮಯ ಮತ್ತೆಂದು ಸಿಗದು ಎಂದು ಇಡಿ ಮಾಲ್‌ನ ತುಂಬೆಲ್ಲಾ ಬೊಗಳುತ್ತಾ ಓಡಾಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಈ ವಿಚಿತ್ರ ಸನ್ನಿವೇಶಕ್ಕೆ ಎದುರಾದ ಒಂದಿಷ್ಟು ಮಂದಿ ಇದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಮಾಲ್‌ನೊಳಗೆ ರಾಶಿ ರಾಶಿ ನಾಯಿಗಳೂ ಓಡಿಬರುವುದನ್ನು ಕಂಡು ಅವರಿಗೂ ಅಚ್ಚರಿಯಾಗಿದೆ. ಆದರೆ ನಾಯಿಗಳು ಅಲ್ಲಿದ್ದ ಯಾರಿಬ್ಬರಿಗೂ ಹಾನಿ ಮಾಡದೆ ಅವರ ಬಳಿಯಿಂದ ಓಡುತ್ತಿವೆ. ಯಾರ ಕೈಗೂ ಸಿಗದಂತೆ ತಪ್ಪಿಸಿಕೊಂಡು ಮುಂದೆ ಮುಂದೆ ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಕೋಳಿ ಕಾಲು ಕಂಡು ವಾಪಾಸು ಬಂದ ನಾಯಿಗಳು
ಕೆಫೆ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರು ನಾಯಿಗಳ ಹಿಡಿಯಲು ಸಾಧ್ಯವಾಗಿರಲಿಲ್ಲ. ಒಂದಿಷ್ಟು ನಾಯಿಗಳು ಓಡಿ ಓಡಿ ಸುಸ್ತಾಗಿ ಮಾಲ್‌ನಲ್ಲಿ ಸಿಕ್ಕಿಬಿದ್ದವು. ಒಂದಿಷ್ಟು ನಾಯಿಗಳನ್ನು ಜನರೇ ಹಿಡಿದು ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಇನ್ನೂ ಕೆಲ ನಾಯಿಗಳು ಜನ ಹತ್ತಿರ ಬಂದ ತಕ್ಷಣ ಜಾಗ ಖಾಲಿ ಮಾಡುತ್ತಿದ್ದವು. ಕೊನೆಗೆ ಇವುಗಳ ಹಿಡಿಯಲು ಫಾರಂ ಕೋಳಿಗಳ ಕಾಲುಗಳನ್ನು ತರಲಾಗಿತ್ತು. ಕೋಳಿ ಕಾಲು ನೀಡುವ ಆಸೆ ತೋರಿಸಿ ಅವುಗಳನ್ನು ಹಿಡಿಯಲಾಗಿತ್ತು. ಬರೋಬ್ಬರಿ 2 ಗಂಟೆಗಳ ಕಾಲ ಅಡ್ಡಾಡಿಸಿದ ನಾಯಿಗಳು ಕೊನೆಗೂ ಸಿಬ್ಬಂದಿ ಕೈಗೆ ಸಿಕ್ಕಬಿದ್ದವು.



Click it and Unblock the Notifications
