Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ದಿನಕ್ಕೆ 24 ಗಂಟೆಯಲ್ಲ 25 ಗಂಟೆ..! ಚಂದ್ರನಿಂದ ಕಡಿಮೆಯಾಗಿದೆ ಭೂಮಿ ವೇಗ..!!
ಚಂದ್ರ ಮತ್ತು ಭೂಮಿ ನಡುವೆ ನೇರಾನೇರ ಸಂಬಂಧವಿದೆ ಅನ್ನೋದು ನಮಗೆ ತಿಳಿದುರುವ ಸಂಗತಿ, ಭೂಮಿ ಮೇಲಿನ ಹಲವು ವ್ಯತ್ಯಾಸಗಳಿಗೆ ಚಂದ್ರ ನೇರ ಕಾರಣವಾಗಿರುತ್ತೆ. ಹಗಲು ರಾತ್ರಿ, ಗಂಟೆ, ತಾಪಮಾನಕ್ಕೂ ಚಂದ್ರನಿಗೂ ಸಂಬಂಧವಿದೆ. ಹಿಂದಿನಂತೆ ಚಂದ್ರನಂಬುದು ಬರಿ ಕನಸಾಗಿ ಉಳಿದಿಲ್ಲ. ಬದಲಿಗೆ ಚಂದ್ರನ ಮೇಲೂ ಮಾನವ ಕಾಲಿಟ್ಟು ಆ ಭೂಮಿಯ ವಶಕ್ಕೆ ಈಗ ಮುಂದಾಗಿದ್ದಾನೆ.
ಆದರೆ ಚಂದ್ರನಲ್ಲಿ ಉಂಟಾಗುತ್ತಿರುವ ಒಂದೇ ಒಂದು ಬದಲಾವಣೆ ಈಗ ಭೂಮಿಯ ಮೇಲೂ ಪರಿಣಾಮ ಬೀರುತ್ತಿದೆ. ಆದ್ರೆ ಈಗ ಚಂದ್ರ ನಿಧಾನವಾಗಿ ಭೂಮಿಯಿಂದ ದೂರಾಗುತ್ತಿದ್ದಾನೆ ಎಂಬುದು ಅಧ್ಯಯನಗಳು ತಿಳಿಸಿವೆ. ನಮ್ಮ ಭೂಮಿಗಿರುವ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರ ಮುಂದೊಂದು ದಿನ ಭೂಮಿಯಿಂದ ದೂರಾಗಲಿದ್ದಾನೆ ಎಂಬ ಆತಂಕ ಎದುರಾಗಿದೆ.

ಇದೇ ಕಾರಣವೀಗ ದಿನದಲ್ಲಿ 24 ಗಂಟೆಯಿಂದ 25 ಗಂಟೆ ಹೆಚ್ಚಾಗುವ ಲಕ್ಷಣವೂ ಇದೆ ಎಂದು ತಜ್ಞರು ಹೇಳಿದ್ದಾರೆ. ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯದ ತಂಡವು 90 ಮಿಲಿಯನ್ ವರ್ಷಗಳಷ್ಟು ಹಳೆಯದಾದ ರಚನೆಯಿಂದ ಬಂಡೆಯ ಮೇಲೆ ಕೇಂದ್ರೀಕರಿಸಿದೆ, ಭೂಮಿಯಿಂದ ಚಂದ್ರ ಕ್ರಮೇಣ ದೂರ ಸರಿಯುತ್ತಿದ್ದಾನೆ ಎಂದು ಕಂಡುಕೊಂಡರು.
ಇದರ ಪರಿಣಾಮವಾಗಿ ದಿನದಲ್ಲಿ 24 ಗಂಟೆಯ ಬದಲು 25 ಗಂಟೆ ಆಗಿರಲಿದೆ. ಹೌದು ನಿಮಗೆ ಅಚ್ಚರಿಯಾಗಬಹುದು. ದಿನದಲ್ಲಿ 25 ಗಂಟೆ ಅಂದರೆ ಒಂದು ಗಂಟೆ ಹೆಚ್ಚಾಗಿರಲಿದೆ. ಇದಕ್ಕೆ ಭೂಮಿಯಿಂದ ಚಂದ್ರ ದೂರ ಸರಿಯುತ್ತಿರುವುದೇ ಕಾರಣವಾಗಿದೆ. ಪ್ರತಿ ವರ್ಷ ಚಂದ್ರ ಸುಮಾರು 3.8 ಸೆಂ.ಮೀ ದೂರ ಸರಿಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಹೀಗಾದಾಗ ಭೂಮಿಯ ತಿರುಗುವಿಕೆಯ ವೇಗ ನಿಧಾನವಾಗುತ್ತದೆ.
ಇದು 200 ಮಿಲಿಯನ್ ವರ್ಷಗಳ ನಂತರ ದಿನದಲ್ಲಿ 25 ಗಂಟೆಗೆ ಕಾರಣವಾಗುತ್ತದೆ. ಇದಕ್ಕು ಮೊದಲು ಭೂಮಿ ಕೇವಲ 18 ಗಂಟೆಯಲ್ಲಿ ಒಂದು ಸುತ್ತು ಬರುತ್ತಿತ್ತು, ಈ ವೇಗ ಕಡಿಮೆಯಾಗುತ್ತಾ ಬಂದು ಈಗ ದಿನಕ್ಕೆ 24 ಗಂಟೆಯಾಗಿದೆ. ಅಚ್ಚರಿ ಎಂದರೆ ಭೂಮಿ ತನ್ನ ಕಕ್ಷೆಯಲ್ಲಿ ಒಂದು ಸುತ್ತು ಬರಲು 24 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ 4 ವರ್ಷಗಳಿಗೊಮ್ಮೆ ಅಧಿಕ ವರ್ಷವೂ ಬರುತ್ತದೆ. ಇದೆಲ್ಲ ಒಂದಕ್ಕೊಂದು ಸಂಬಂಧ ಹೊಂದಿರುವುದರಿಂದ ಚಂದ್ರ ಭೂಮಿಯಿಂದ ದೂರಾಗುವುದು ಭೂಮಿಯ ಚಲನೆಯ ವೇಗ ಕಡಿಮೆ ಮಾಡಲಿದೆ. ಈ ವಿದ್ಯಮಾನವು ಪ್ರಾಥಮಿಕವಾಗಿ ಭೂಮಿ ಮತ್ತು ಚಂದ್ರನ ನಡುವಿನ ಗುರುತ್ವಾಕರ್ಷಣೆಯ ಪರಸ್ಪರ ಕ್ರಿಯೆಗಳಿಗೆ ಕಾರಣವಾಗಿದೆ.
ಚಂದ್ರನ ಗಾತ್ರವೂ ಕುಗ್ಗುತ್ತಿದೆ
ಇತ್ತೀಚಿಗೆ ನಡೆಸಿದ್ದ ಅಧ್ಯಯನವೊಂದರಲ್ಲಿ ಚಂದ್ರನ ತನ್ನ ಗಾತ್ರದಲ್ಲಿ ಕುಗ್ಗುತ್ತಿದ್ದಾನಂತೆ. ಕಳೆದ ನೂರಾರು ಮಿಲಿಯನ್ ವರ್ಷಗಳಿಂದ ಚಂದ್ರನು ತ್ರಿಜ್ಯದಲ್ಲಿ ಕುಗ್ಗುತ್ತಿದ್ದಾನೆ. ಪ್ರಸ್ತುತ, ಅದರ ಮಧ್ಯಭಾಗವು ಸುಮಾರು 50 ಮೀಟರ್ ನಷ್ಟು ಗಾತ್ರದಲ್ಲಿ ಕುಗ್ಗಿದೆಯಂತೆ. ಅಂದರೆ ಬರೋಬ್ಬರಿ 164 ಅಡಿಗಳಷ್ಟು ಚಂದ್ರ ಗಾತ್ರದಲ್ಲಿ ಚಿಕ್ಕವನಾಗಿದ್ದಾನೆ. ಈ ಚಿತ್ರಗಳನ್ನು ನಾಸಾದ ಗಗನಯಾನ ಯೋಜನೆಯಾಗಿರುವ ಅಪೋಲೊ ಗಗನಯಾತ್ರಿಗಳು ಮತ್ತು ಇತ್ತೀಚೆಗೆ ಲೂನಾರ್ ರೀಕಾನೈಸೆನ್ಸ್ ಆರ್ಬಿಟರ್‌ನಿಂದ ಸೆರೆ ಹಿಡಿದಿದ್ದಾರೆ.
ಚಂದ್ರನ ಒಳಮೈ ತಂಪಾಗಿದ್ದು ಅಲ್ಲಿ ಉಂಟಾಗುತ್ತಿರುವ ಕಂಪನಗಳು ಈ ತ್ರಿಜ್ಯ ಕುಸಿಯುವಂತೆ ಮಾಡುತ್ತಿದೆ. ಜೊತೆಗೆ ಚಂದ್ರನ ಕ್ರಸ್ಟ್ ಪಾಯಿಂಟ್ ಅಂದರೆ ಹೊರ ಮೇಲ್ಮೈ ಸಹ ಅತ್ಯಂತ ದುರ್ಬಲವಾಗಿದೆ. ಇವು ನೂರಾರು ಬಿರುಕುಗಳಿಂದ ಕೂಡಿದೆ. ಅಲ್ಲದೆ ಆಗಾಗ ಸಂಭವಿಸುವ ಕಂಪನಗಳು ಈ ಬಿರುಕುಗಳ ಗಾತ್ರ ಹೆಚ್ಚಾಗಲು ಮತ್ತಷ್ಟು ಬಿರುಕು ಮೂಡಲು ಕಾರಣವಾಗಿದೆ. ಅಲ್ಲದೆ ಭೂಮಿ ಗುರುತ್ವಾಕರ್ಷಣಾ ಬಲವು ಸಹ ಚಂದ್ರನ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡುತ್ತಿದೆ. ಇದು ಚಂದ್ರನ ಗಾತ್ರ ಚಿಕ್ಕದಾಗುವಂತೆ ಮಾಡುತ್ತಿದೆ ಎಂದು ಅಧ್ಯಯನಗಳಲ್ಲಿ ತಿಳಿದುಬಂದಿದೆ.



Click it and Unblock the Notifications