ತಿಂಗಳ ಭವಿಷ್ಯ: ವರ್ಷದ ಕೊನೆಯ ತಿಂಗಳು ದ್ವಾದಶ ರಾಶಿಗಳಿಗೆ ಹೇಗಿರಲಿದೆ?

ಗ್ರಹಗತಿಗಳ ಸ್ಥಾನದ ಪ್ರಕಾರ ಡಿಸೆಂಬರ್‌ ತಿಂಗಳು ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ?

Monthly Horoscope

ವೃಷಭ ರಾಶಿ
ವೃಷಭ ರಾಶಿಯಲ್ಲಿ ಗುರು ಹನ್ನೆರಡನೇ ಮನೆಯಲ್ಲಿ, ರಾಹು ಐದನೇ ಮನೆಯಲ್ಲಿ, ಕೇತು ಹನ್ನೊಂದನೇ ಮನೆಯಲ್ಲಿದೆ, ಶನಿಯು 10ನೇ ಮನೆಯಲ್ಲಿ ಇರಲಿದೆ. ಶುಕ್ರ 7 ಹಾಗೂ 8ನೇ ಮನೆಯಲ್ಲಿ ಇರಲಿದೆ. ಮಂಗಳ ಎಂಟನೇ ಮನೆಯಲ್ಲಿ ಇರಲಿದೆ. ಈ ಗ್ರಹಗಳ ಸ್ಥಾನವು ಸಂಬಂಧಗಳಲ್ಲಿ ಸಮಸ್ಯೆ ಯಾವುದೇ ರಿಸ್ಕ್ ತೆಗೆದುಕೊಳ್ಳಬೇಡಿ, ಹೊಸ ಹೂಡಿಕೆಗಳನ್ನು ಮಾಡಬೇಡಿ. ಇಲ್ಲದಿದ್ದರೆ ವ್ಯಾಪಾರಸ್ಥರು ಸಮಸ್ಯೆಗಳನ್ನು ಎದುರಿಸಬಹುದು. ವೃತ್ತಿ ಜೀವನದಲ್ಲಿಯೂ ಸವಾಲುಗಳು ಎದುರಾಗಬಹುದು. ಡಿಸೆಂಬರ್ ತಿಂಗಳು ಆರ್ಥಿಕ ಜೀವನ ಸಾಮಾನ್ಯವಾಗಿರಲಿದೆ. ಈ ತಿಂಗಳು ನಿಮ್ಮ ಖರ್ಚುಗಳು ತುಂಬಾನೇ ಹೆಚ್ಚಾಗುವ ಸಾಧ್ಯತೆಯಿದೆ, ಅದೇ ಸಮಯದಲ್ಲಿ ನಿಮ್ಮ ಆದಾಯವೂ ಹೆಚ್ಚಾಗುವುದರಿಂದ ದೊಡ್ಡ ಸಸ್ಯೆ ಇರಲ್ಲ. ಸಂಬಂಧದಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು, ಕೋಪ ನಿಯಂತ್ರಿಸಿ.

ಮಿಥುನ ರಾಶಿ
ಗುರು 11ನೇ ಮನೆಯಲ್ಲಿ, ರಾಹು 4 ಮನೆಯಲ್ಲಿ, ಕೇತು 10 ಮನೆಯಲ್ಲಿದೆ, ಶನಿಯು 9ನೇ ಮನೆಯಲ್ಲಿ ಇರಲಿದೆ. ಶುಕ್ರ 6 ಹಾಗೂ6ನೇ ಮನೆಯಲ್ಲಿ ಇರಲಿದೆ. ಈ ತಿಂಗಳು ನಿಮಗೆ ಸಾಧಾರಣವಾಗಿರಲಿದೆ. ವೃತ್ತಿ ಜೀವನದಲ್ಲಿ ಈ ತಿಂಗಳಿನಲ್ಲಿ ಮಿಶ್ರ ಫಲ. ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಹೆಚ್ಚು ಶ್ರಮಹಾಕಬೇಕು. ರಾಹು ಹತ್ತನೇ ಮನೆಯಲ್ಲಿರುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಈ ತಿಂಗಳು ಪ್ರೇಮ ಸಂಬಂಧಗಳಿಗೆ ಉತ್ತಮವಾಗಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ.

ಕರ್ಕ ರಾಶಿ
ಕರ್ಕ ರಾಶಿಯಲ್ಲಿ ಕೇತು ಕೂಡ ನಾಲ್ಕನೇ ಮನೆಯಲ್ಲಿ ಇದೆ ಈ ಸ್ಥಾನ ಅಷ್ಟು ಅನುಕೂಲಕರವಲ್ಲ. ಬುಧ ನಾಲ್ಕನೇ ಮನೆಯಲ್ಲಿ ಇರಲಿದೆ. ಇದರಿಂದಾಗಿ ಖರ್ಚು ಹೆಚ್ಚಾಗಲಿದೆ, ಈ ಅವಧಿಯಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ಈ ತಿಂಗಳಿನಲ್ಲಿ ಕರ್ಕ ರಾಶಿಯವರು ವೃತ್ತಿ, ಆರ್ಥಿಕ ಜೀವನ ಮತ್ತು ಆರೋಗ್ಯದಲ್ಲಿ ಏರಿಳಿತಗಳನ್ನು ಕಾಣಬಹುದು. ಗುರು 10ನೇ ಮನೆಯಲ್ಲಿ ಇರುವುದರಿಂದ ವೃತ್ತಿ ಜೀವನದಲ್ಲಿ ಹಲವು ಸವಾಲುಗಳು ಎದುರಾಗುವುದು. ಆರ್ಥಿಕವಾಗಿಯೂ ಈ ಅವಧಿ ಸವಾಲಿನಿಂದ ಕೂಡಿರಲಿದೆ. ಈ ತಿಂಗಳಿನಲ್ಲಿ ಅತಿಯಾದ ಕೆಲಸದ ಹೊರೆ, ಅಡೆತಡೆಗಳನ್ನು ಎದುರಿಸಬೇಕಾಗಬಹುದು, ದ್ವಂತ ವ್ಯವಹಾರ ಮಾಡುವವರೂ ಈ ತಿಂಗಳಿನಲ್ಲಿ ಸವಾಲುಗಳನ್ನು ಎದುರಿಸಬಹುದು. ಆರ್ಥಿಕವಾಗಿಯೂ ಈ ತಿಂಗಳು ಸವಾಲುಗಳು ಎದುರಾಗಬಹುದು. ಅತಿಯಾದ ಖರ್ಚು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು. ಈ ತಿಂಗಳಿನಲ್ಲಿ ಆರೋಗ್ಯದ ಕಡೆಗೆ ಗಮನಹರಿಸಿ.

ಸಿಂಹ ರಾಶಿ
ನೀವು ಈ ತಿಂಗಳು ಸಿಂಹ ರಾಶಿಯವರಿಗೆ ಮಿಶ್ರಫಲ. ಒಂಬತ್ತನೇ ಮನೆಯಲ್ಲಿ ಗುರುವಿದೆ. ಈ ತಿಂಗಳು, ಗುರುವಿನ ಸ್ಥಾನವು ಅನುಕೂಲಕರವಾಗಿದೆ. ಶನಿಯ ಸ್ಥಾನದಿಂದಾಗಿ ನಿಮ್ಮ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ನೀವು ಕೆಲವು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬಹುದು, ನಿಮ್ಮ ಆರ್ಥಿಕ ಜೀವನವು ಅನುಕೂಲಕರವಾಗಿರುತ್ತದೆ. ಆರ್ಥಿಕ ದೃಷ್ಟಿಯಿಂದ ಈ ತಿಂಗಳು ಅನುಕೂಲಕರವಾಗಿದೆ. ಈ ತಿಂಗಳಿನಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.

ವೃಶ್ಚಿಕ ರಾಶಿಯವರಲ್ಲಿ ಗುರು ನಿಮ್ಮ ಆರನೇ ಮನೆಯಲ್ಲಿ, ಶನಿ ನಾಲ್ಕನೇ ಮನೆಯಲ್ಲಿ ಇರಲಿದೆ. ಈ ತಿಂಗಳಿನಲ್ಲಿ ಶುಕ್ರ, ಬುಧ, ಮಂಗಳನ ಸ್ಥಾನ ನಿಮಗೆ ಅನುಕೂಲಕರವಲ್ಲ. 12ನೇ ಮನೆಯಲ್ಲಿ ಕೇತು ಇರಲಿದೆ. ಗುರು 6ನೇ ಮನೆಯಲ್ಲಿ ಇರಲಿದೆ, ಆದ್ದರಿಂದ ಹಣಕಾಸಿನ ವಿಷಯದಲ್ಲಿ ತುಂಬಾನೇ ಜಾಗ್ರತೆವಹಿಸಬೇಕು. ಶನಿಯು ನಿಮ್ಮ ನಾಲ್ಕನೇ ಮನೆಯಲ್ಲಿರುತ್ತಾನೆ. ಈ ಸ್ಥಾನ ನಿಮಗೆ ಅನುಕೂಲಕರವಲ್ಲ, ವೃತ್ತಿ ಜೀವನದಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು. ಗುರುವಿನ ಸ್ಥಾನವು 6ನೇ ಮನೆಯಲ್ಲಿ ಇದ್ದರೆ ವೃತ್ತಿಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ತಿಂಗಳಿನಲ್ಲಿ ಖರ್ಚು ಅಧಿಕವಿರಲಿದೆ. ಆರೋಗ್ಯಕ್ಕಾಗಿ ಹಣ ಖರ್ಚಾಗುವುದು.

ಡಿಸೆಂಬರ್‌ ತಿಂಗಳಿನಲ್ಲಿ ಗುರುವು ಐದನೇ ಮನೆಯಲ್ಲಿ ಸ್ಥಿತರಿರುವುದರಿಂದ ಧನು ರಾಶಿಯವರಿಗೆ ಉತ್ತಮ ಫಲಿತಾಂಶ ಸಿಗಲಿದೆ. ಶನಿಯು ಮೂರನೇ ಮನೆಯಲ್ಲಿ ಇರಲಿದೆ. ಶುಕ್ರನು ಅನುಕೂಲಕರ ಸ್ಥಾನದಲ್ಲಿರುತ್ತಾನೆ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ. ವೃತ್ತಿ ಜೀವನದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ಶನಿಯ ಈ ಸ್ಥಾನವು ಈ ಜನರ ವೃತ್ತಿಜೀವನದಲ್ಲಿ ಸ್ಥಿರತೆಯನ್ನು ಸೂಚಿಸುತ್ತದೆ. ಶನಿಯು ಮೂರನೇ ಮನೆಯಲ್ಲಿರುವುದರಿಂದ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುವುದು. ಗುರು 5ನೇ ಮನೆಯಲ್ಲಿ ಇರುವುದರಿಂದ ಆರ್ಥಿಕವಾಗಿ ಒಳ್ಳೆಯದಿದೆ. ಆರೋಗ್ಯದ ದೃಷ್ಟಿಯಿಂದ ಈ ಅವಧಿ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ಪ್ರೀತಿ, ವೈವಾಹಿಕ ಜೀವನ ಚೆನ್ನಾಗಿರಲಿದೆ.

ವೃತ್ತಿ ಜೀವನದ ದೃಷ್ಟಿಯಿಂದ ನೋಡುವುದಾದರೆ ಈ ತಿಂಗಳ ಮಿಶ್ರಫಲ. ಶನಿಯು ಎರಡನೇ ಮನೆಯಲ್ಲಿ, ಕೇತು ಒಂಬತ್ತನೇ ಮನೆಯಲ್ಲಿ ಇರಲಿದೆ. ಗುರು ಉಪಸ್ಥಿತಿಯು ವಿದೇಶದಲ್ಲಿ ಹೊಸ ಅವಕಾಶಗಳನ್ನು ನೀಡುವ ಸಾಧ್ಯತೆಯಿದೆ. ಈ ತಿಂಗಳು ನಿಮ್ಮ ಆರ್ಥಿಕ ಜೀವನದಲ್ಲಿ ನೀವು ಮಿಶ್ರ ಫಲಗುರು ನಾಲ್ಕನೇ ಮನೆಯಲ್ಲಿ ಇರುವುದರಿಂದ ಕುಟುಂಬದಲ್ಲಿ ಖರ್ಚು ಹೆಚ್ಚಾಗಲಿದೆ. ಈ ತಿಂಗಳು ನೀವು ಬಯಸಿದ ಲಾಭವನ್ನು ಗಳಿಸಲು ಸಾಧ್ಯವಾಗದಿರಬಹುದು. ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇದೆ, ಆದ್ದರಿಂದ ಈ ತಿಂಗಳು ಹೆಚ್ಚು ಜಾಗರೂಕರಾಗಿರಬೇಕು. ಆರೋಗ್ಯದ ಬಗ್ಗೆ ನೋಡುವುದಾದರೆ ಈ ತಿಂಗಳಿನಲ್ಲಿ ದೊಡ್ಡ ಆರೋಗ್ಯ ಸಮಸ್ಯೆಗಳಿರಲ್ಲ. ಕುಟುಂಬ ಜೀವನದಲ್ಲಿ ಏರಳಿತಗಳಿರಲಿದೆ.

ಈ ತಿಂಗಳು, ರಾಹು ಎರಡನೇ, ಕೇತು ಎಂಟನೇ , ಶನಿಯು ಮೊದಲ ಮನೆಯಲ್ಲಿ ಇರುವುದರಿಂದ ವೃತ್ತಿಯಲ್ಲಿ ಸವಾಲುಗಳು, ಜವಾಬ್ದಾರಿಗಳು ಮತ್ತು ತೊಂದರೆಗಳನ್ನು ಉಂಟುಮಾಡಬಹುದು. ಆದರೆ ಮಂಗಳವು 11ನೇ ಮನೆಯಲ್ಲಿ ಇರುವುದರಿಂದ ಇದು ಉತ್ತಮ ಫಲಿತಾಂಶ ನೀಡಲಿದೆ. ಈ ಗ್ರಹಗಳ ಸ್ಥಾನದಿಂದಾಗಿ ವೃತ್ತಿ ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗಬಹುದು. ಕೆಲಸದಲ್ಲಿ ಅಧಿಕ ಒತ್ತಡವಿರಲಿದೆ. ಮಂಗಳನ ಸ್ಥಾನ ವೃತ್ತಿಜೀವನಕ್ಕೆ ಅನುಕೂಲಕರವಾಗಿದೆ. ಡಿಸೆಂಬರ್ ತಿಂಗಳು ವೃತ್ತಿ ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗಬಹುದು. ಈ ತಿಂಗಳು ಆರ್ಥಿಕ ಜೀವನದಲ್ಲಿ ನಿಮಗೆ ಸವಾಲುಗಳು ಎದುರಾಗಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಧಾರಣವಾಗಿರಲಿದೆ. ವೈವಾಹಿಕ ಜೀವನದಲ್ಲಿ ಸಾಮರಸ್ಯದ ಕೊರತೆಯನ್ನು ಎದುರಿಸಬೇಕಾಗಬಹುದು.

ಶನಿಯು ಹನ್ನೆರಡನೇ ಮನೆ ಇದೆ. ಗುರು 2ನೇ ಮನೆಯಲ್ಲಿ ಇರಲಿದೆ. ರಾಹು-ಕೇತುಗಳ ಸಂಯೋಗವು ಮೊದಲ ಮತ್ತು ಏಳನೇ ಮನೆಯಲ್ಲಿರಲಿದೆ. ಈ ಗ್ರಹಗಳ ಸ್ಥಾನವು ಹಣ ಸಂಪಾದಿಸುವಲ್ಲಿ ಉಳಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಈ ಅವಧಿಯಲ್ಲಿ ಕೆಲಸದಲ್ಲಿ ಅಡೆತಡೆಗಳು, ಹೆಚ್ಚಿನ ಜವಾಬ್ದಾರಿಗಳು, ಉದ್ಯೋಗದಲ್ಲಿ ಹಠಾತ್ ಬದಲಾವಣೆ, ಉದ್ಯೋಗ ನಷ್ಟ ಇತ್ಯಾದಿ ಸವಾಲುಗಳನ್ನು ಎದುರಿಸಬೇಕಾಗಬಹುದು. ಈ ತಿಂಗಳು ನೀವು ಹಣವನ್ನು ಗಳಿಸುವಲ್ಲಿ ಸವಾಲುಗಳನ್ನು ಎದುರಿಸಬಹುದು, ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು.

English summary

Monthly Horoscope: December Month 2023 Horoscope In Kannada

Monthly Horoscope: Here are December 2023 12 zodiac prediction read on
X
Desktop Bottom Promotion