Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇ 2023 ವೃತ್ತಿ ಭವಿಷ್ಯ: ಈ ತಿಂಗಳು ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ 7 ರಾಶಿಗಳಿಗೆ ಅನುಕೂಲಕರ, 5 ರಾಶಿಯವರು ಜಾಗ್ರತೆ
ಈ ತಿಂಗಳ ರಾಶಿಫಲ ನೋಡಿದಾಗ ವೃತ್ತಿ ಜೀವನಕ್ಕೆ ಸಂಬಂಧ ಪಟ್ಟಂತೆ ಹೇಳುವುದಾದರೆ ಕೆಲವು ರಾಶಿಯವರಿಗೆ ತುಂಬಾ ಅದ್ಭುತವಾಗಿದೆ, ಇನ್ನು ಕೆಲವರಿಗೆ ದೊಡ್ಡ ಸಮಸ್ಯೆ ಇರಲ್ಲ, ಮತ್ತೆ ಕೆಲವರು ಏರಳಿತ ಕಾಣಬಹುದು. ಮೇ ತಿಂಗಳ ಭವಿಷ್ಯದ ಪ್ರಕಾರ ನಿಮ್ಮ ರಾಶಿಗೆ ಈ ತಿಂಗಳು ಹೇಗಿರಲಿದೆ ಎಂದು ನೋಡೊಣ ಬನ್ನಿ:
ಮೇಷ ರಾಶಿ
ವೃತ್ತಿಜೀವನದ ದೃಷ್ಟಿಯಿಂದ ಈ ತಿಂಗಳು ನಮಗೆ ಅದ್ಭುತವಾಗಿದೆ. ನೀವು ಊಹಿಸಿದಂತೆಯೇ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ನಿಮಗೆ ವಹಿಸಿದ ಜವಾಬ್ದಾರಿಯನ್ನು ತುಂಬಾ ಚೆನ್ನಾಗಿ ನಿಭಾಯಿಸುವುದರಿಂದ ಬಾಸ್ ನಿಮ್ಮ ಕೆಲಸ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ವ್ಯಾಪಾರಿಗಳು ದೊಡ್ಡ ಹೂಡಿಕೆ ಮಾಡಬಹುದು, ಇದರ ಫಲಿತಾಂಶ ತಿಂಗಳ ಅಂತ್ಯದ ವೇಳೆಗೆ ನೀವು ನಿರೀಕ್ಷೆ ಮಾಡಿದಂತೆ ಸಿಗಲಿದೆ. ನಿರುದ್ಯೋಗಿಗಳು ಈ ತಿಂಗಳು ಉತ್ತಮ ಅವಕಾಶವನ್ನು ಪಡೆಯುತ್ತಾರೆ.

ವೃಷಭ ರಾಶಿ
ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಬೆಂಬಲ ದೊರೆಯುವುದರಿಂದ ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ಮೇಲಾಧಿಕಾರಿಗಳ ಸಲಹೆ ಸೂಚನೆ ನಿಮ್ಮ ಕೆಲಸಗಳಿಗೆ ಅನುಕೂಲಕರವಾಗಲಿದೆ, ಈ ತಿಂಗಳು ನೀವು ಅರ್ಧಕ್ಕೆ ನಿಲ್ಲಿಸಿದ ಕೆಲಸ ಮತ್ತೆ ಶುರುವಾಗಲಿದೆ. ಆರ್ಥಿಕ ಲಾಭ ದೊರೆಯಲಿದೆ. ನೀವು ಕೆಲಸಕ್ಕಾಗಿ ದೂರ ಪ್ರಯಾಣಿಸಬೇಕಾಗಬಹುದು. ನಿಮ್ಮ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಲಿದೆ. ತಿಂಗಳ ಕೊನೆಯಲ್ಲಿ ಕೆಲವು ದೊಡ್ಡ ಮತ್ತು ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ನಿಮ್ಮ ಶ್ರಮಕ್ಕೆ ಈ ತಿಂಗಳು ಉತ್ತಮ ಫಲ ಪಡೆಯುವಿರಿ.
ಮಿಥುನ ರಾಶಿ
ಕೆಲಸದ ದೃಷ್ಟಿಯಿಂದ ಮಿಥುನ ರಾಶಿಯವರಿಗೆ ಮೇ ತಿಂಗಳು ಏರಿಳಿತಗಳಿಂದ ಕೂಡಿರಲಿದೆ. ಈ ಅವಧಿಯಲ್ಲಿ ಕೆಲಸದ ಬಗ್ಗೆ ಅಭದ್ರತೆ ಕಾಡಬಹುದು, ಇದರಿಂದ ಆತ್ಮವಿಶ್ವಾಸ ಕಡಿಮೆಯಾಗಲಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಆತ್ಮವಿಶ್ವಾಸದ ಕೊರತೆಯಿಂದಾಗಿ ನನ್ನಿಂದ ಸಾಧ್ಯವೇ ಎಂಬ ಸಂಶಯ ಕೂಡ ಕಾಡುವುದು. ಈ ಅವಧಿಯಲ್ಲಿ ನೀವು ಅವಸರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ವ್ಯಾಪಾರಸ್ಥರು ಹಣದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಬಾರದು, ಇಲ್ಲದಿದ್ದರೆ ಹಣದ ನಷ್ಟವಾಗುವುದು.
ಕರ್ಕ ರಾಶಿ
ಮೇ ತಿಂಗಳು ಕರ್ಕ ರಾಶಿಯವರಿಗೆ ಅನುಕೂಲಕರವಾಗಿದೆ. ನಿಮಗೆ ಅನೇಕ ಹೊಸ ಅವಕಾಶಗಳು ದೊರೆಯಬಹುದು. ಉದ್ಯೋಗಿಗಳ ಕೆಲಸದಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ, ವ್ಯಾಪಾರಸ್ಥರು ಈ ಅವಧಿಯಲ್ಲಿ ಲಾಭ ಗಳಿಸುವಿರಿ. ಸರ್ಕಾರಿ ಉದ್ಯೋಗಿಯಾಗಿದ್ದರೆ ಬಯಸಿದ ವರ್ಗಾವಣೆ ಸಿಗಲಿದೆ. ವ್ಯಾಪಾರಸ್ಥರಿಗೆ ಉತ್ತಮ ಹಣ ದೊರೆಯಲಿದೆ. ಉದ್ಯೋಗಿಗಳ ಆದಾಯವೂ ಹೆಚ್ಚಾಗಬಹುದು. ಸಹೋದ್ಯೋಗಿಗಳೊಂದಿಗೆ ಸಮನ್ವಯವು ಉತ್ತಮವಾಗಿರುತ್ತದೆ. ಒಟ್ಟಾರೆಯಾಗಿ, ಈ ತಿಂಗಳು ನೀವು ಆತ್ಮವಿಶ್ವಾಸದಿಂದ ಕೂಡಿರುತ್ತೀರಿ.
ಸಿಂಹ ರಾಶಿ
ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು, ನಿಮ್ಮ ಕೆಲಸದಲ್ಲಿ ಪ್ರಗತಿಯನ್ನು ಕಾಣುತ್ತೀರಿ. ನೀವು ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ತಿಂಗಳು ನಿಮಗೆ ಒಳ್ಳೆಯ ಅವಕಾಶಗಲೂ ದೊರೆಯಲಿದೆ. ಬಹುದಿನಗಳಿಂದ ವಿದೇಶದಲ್ಲಿ ಹೋಗಿ ಉದ್ಯೋಗ ಮಾಡಲು ಪ್ರಯತ್ನಿಸುತ್ತಿದ್ದರೆ ಈ ತಿಂಗಳು ನಿಮಗೆ ಒಳ್ಳೆಯ ಅವಕಾಶ ದೊರೆಯಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ತುಂಬಾ ಉತ್ತಮವಾಗಿರಲಿದೆ ನಿಮ್ಮ ಕಠಿಣ ಪರಿಶ್ರಮ ಮತ್ತು ತಿಳುವಳಿಕೆಯಿಂದ ನೀವು ಉತ್ತಮ ಹಣವನ್ನು ಗಳಿಸಲು ಸಾಧ್ಯವಾಗುವುದು.
ಕನ್ಯಾ ರಾಶಿ
ವೃತ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ಈ ತಿಂಗಳಿನಲ್ಲಿ ಬಗೆಹರಿಸಲು ಸಾಧ್ಯವಾಗುವುದು. ನಿಮ್ಮ ಸಂಭಾಷಣೆ ಕೌಶಲ್ಯದಿಂದ ನಿಮ್ಮ ಕೆಲಸದಲ್ಲಿರುವ ಸಮಸ್ಯೆ ದೂರ ಮಾಡಿಕೊಳ್ಳುತ್ತೀರಿ. ವ್ಯಾಪಾರಸ್ಥರಿಗೆ ಈ ತಿಂಗಳು ತುಂಬಾ ದುಬಾರಿಯಾಗಲಿದೆ. ನಿಮ್ಮ ವ್ಯವಹಾರಕ್ಕಾಗಿ ನೀವು ಬ್ಯಾಂಕಿನಿಂದ ಸಾಲ ಪಡೆದಿದ್ದರೆ, ಅದರ ಕಂತುಗಳನ್ನು ಮರುಪಾವತಿ ಮಾಡುವಲ್ಲಿ ನಿರ್ಲಕ್ಷ್ಯ ಮಾಡಬೇಡಿ. ತಿಂಗಳ ಅಂತ್ಯವು ನಿಮಗೆ ಸ್ವಲ್ಪ ಸಮಾಧಾನ ಉಂಟಾಗಲಿದೆ.
ತುಲಾ ರಾಶಿ
ಈ ತಿಂಗಳು ಕೆಲಸದಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ. ಈ ಸಮಯದಲ್ಲಿ ನೀವು ಕೆಲವು ದೊಡ್ಡ ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಆದರೆ ಆತುರದ ನಿರ್ಧಾರಗಳು ಸಮಸ್ಯೆ ತರಬಹುದು , ಜಾಗ್ರತೆ. ನೀವು ಪರಿಣಿತರಿಂದ ಸಲಹೆ ಪಡೆದ ಬಳಿಕ ಕೆಲವೊಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಹಣಕಾಸಿನ ದೃಷ್ಟಿಯಿಂದ ಈ ತಿಂಗಳು ನಿಮಗೆ ಉತ್ತಮವಾಗಿದೆ. ಉದ್ಯೋಗಿಗಳ ಆದಾಯ ಹೆಚ್ಚಾಗಲಿದೆ. ಆದರೆ ಉದ್ಯಮಿಗಳು ಕೆಲಸಕ್ಕೆ ಸಂಬಂಧಿಸಿದಂತೆ ಸಾಕಷ್ಟು ಓಡಬೇಕಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಕೆಲಸದ ಸ್ಥಳದಲ್ಲಿ ನೀವು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಗ್ರಹಗಳ ನಕಾರಾತ್ಮಕ ಸ್ಥಾನದ ಪರಿಣಾಮವನ್ನು ನಿಮ್ಮ ನಡವಳಿಕೆ ಕೆಲಸದಲ್ಲಿ ತೊಂದರೆ ಉಂಟು ಮಾಡಬಹುದು. ಚಿಕ್ಕ ವಿಷಯಕ್ಕೆ ಕೋಪಗೊಳ್ಳುವ ಸ್ವಭಾವ ನಿಮ್ಮ ಕೆಲಸ ಕಾರ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ, ಅಡೆತಡೆಗಳು ಅಧಿಕವಿರಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ನೋಡುವುದಾದರೆ ಆರ್ಥಿಕ ಸಮಸ್ಯೆ ಉಂಟಾಗಬಹುದು.
ಧನು ರಾಶಿ
ಈ ತಿಂಗಳು ನಿಮ್ಮ ವೃತ್ತಿ ಜೀವನದಲ್ಲಿ ಹೊಸ ತಿರುವು ಸಿಗಬಹುದು. ನಿಮ್ಮ ಸರಿಯಾದ ನಿರ್ಧಾರಗಳಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಆದಾಯ ಹೆಚ್ಚಾಗಲಿದೆ. ವ್ಯಾಪಾರಿಗಳು ಯಾವುದೇ ಹಳೆಯ ಸಾಲವಿದ್ದರೆ ಅದರಿಂದ ಮುಕ್ತರಾಗಲು ಸಾಧ್ಯವಾಗುವುದು. ನೀವು ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ ಯಶಸ್ಸನ್ನು ಪಡೆಯಬಹುದು. ತಿಂಗಳ ಕೊನೆಯಲ್ಲಿ ಹೊಸ ವ್ಯವಹಾರ ಪ್ರಸ್ತಾಪವನ್ನು ಪಡೆಯುವ ಬಲವಾದ ಸಾಧ್ಯತೆಯೂ ಇದೆ.
ಮಕರ ರಾಶಿ
ವೃತ್ತಿಜೀವನದ ವಿಷಯದಲ್ಲಿ, ಮೇ ತಿಂಗಳು ಏರಿಳಿತಗಳಿಂದ ಕೂಡಿರಲಿದೆ. ಈ ಸಮಯದಲ್ಲಿ ಯಾವುದೇ ಅಪಾಯಕಾರಿ ನಿರ್ಧಾರವನ್ನು ತೆಗೆದುಕೊಳ್ಖಬೇಡಿ. ನಿಮ್ಮ ಪ್ರಸ್ತುತ ಕೆಲಸದಲ್ಲಿ ನೀವು ಅತೃಪ್ತರಾಗಿದ್ದರೆ, ಉದ್ಯೋಗವನ್ನು ಬದಲಾಯಿಸುವ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ, ತಾಳ್ಮೆಯಿಂದ ಕಾದು ಸರಿಯಾದ ಅವಕಾಶ ಸಿಕ್ಕ ಮೇಲಷ್ಟೇ ಕೆಲಸ ಬದಲಾಯಿಸಿ. ಯಾವುದೇ ಪ್ರಮುಖ ಹೂಡಿಕೆ ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಲು ವ್ಯಾಪಾರಸ್ಥರಿಗೆ ಸಲಹೆ ನೀಡಲಾಗುವುದು. ಈ ತಿಂಗಳಿನಲ್ಲಿ ದುರ್ಬಲ ಆರೋಗ್ಯದಿಂದಾಗಿ ನಿಮ್ಮ ಕೆಲಸಗಳ ಮೇಲೂ ಪ್ರಭಾವ ಬೀರಲಿದೆ.
ಕುಂಭ ರಾಶಿ
ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವು ಬಲವಾಗಿರುತ್ತದೆ. ಈ ಅವಧಿಯಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯಬಹುದು. ನೀವು ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ. ಆದರೆ ಅಹಂಕಾರದ ವರ್ತನೆ ತೋರಬೇಡಿ. ಉದ್ಯಮಿಗಳು ಪಾಲುದಾರಿಕೆಯಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ, ನಿಮ್ಮ ಯೋಜನೆಯಂತೆ ಮುಂದುವರಿಯಬಹುದು. ತಿಂಗಳ ಕೊನೆಯಲ್ಲಿ, ನೀವು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ನೀವು ಹಣದ ಕೊರತೆಯಿಂದ ಕಷ್ಟಪಡುತ್ತಿದ್ದರೆ ಈ ತಿಂಗಳು ನಿಮ್ಮ ಈ ಸಮಸ್ಯೆ ಬಗೆಹರಿಯಲಿದೆ.
ಮೀನ ರಾಶಿ
ತಿಂಗಳ ಆರಂಭವು ನಿಮಗೆ ಅದ್ಭುತವಾಗಿರುತ್ತದೆ. ಕೆಲಸಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ದೊಡ್ಡ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ವಿದೇಶ ಪ್ರವಾಸ ಮಾಡುವ ಪ್ರಯತ್ನ ಮಾಡುತ್ತಿದ್ದರೆ ನಿಮ್ಮ ಆಸೆಯೂ ಈ ತಿಂಗಳಿನಲ್ಲಿ ನೆರವೇರುತ್ತದೆ. ನೀವು ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ತಿಂಗಳು ನಿಮಗೆ ತುಂಬಾ ಲಾಭದಾಯಕವಾಗಿರುತ್ತದೆ. ಈ ಅವಧಿಯಲ್ಲಿ ನೀವು ವ್ಯಾಪಾರ ವಿಸ್ತರಣೆಗೆ ಸಹ ಯೋಜಿಸಬಹುದು.



Click it and Unblock the Notifications