Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಹಿಳೆಯರೇ ತಿಂಗಳ ಕೊನೆಯಲ್ಲಿ ದುಡ್ಡು ಉಳಿತಿಲ್ವಾ? ಹಾಗಾದ್ರೆ ಈ ರೀತಿ ಮಾಡಿ
ಗಂಡ ದುಡಿಯೋದಕ್ಕೆ ಹೊರಗಡೆ ಹೋದ್ರೆ ಹೆಂಡತಿ ಮನೆ ಹಾಗೂ ಮಕ್ಕಳನ್ನು ನೋಡಿಕೊಳ್ಳುತ್ತಾಳೆ. ಸಾಮಾನ್ಯವಾಗಿ ಮಧ್ಯಮ ವರ್ಗದವರಾದರೆ ಗಂಡನ ತಿಂಗಳ ಸಂಭಳ ಅದೇ ತಿಂಗಳಿಗೆ ಸರಿಯಾಗುತ್ತದೆ. ಅಳೆದು-ತೂಗಿ ಖರ್ಚು ಮಾಡಬೇಕು. ಇನ್ನೂ ಗಂಡ ಮನೆ ಖರ್ಚಿಗಾಗಿ ಕೊಟ್ಟ ದುಡ್ಡಿನಲ್ಲಿ ಉಳಿತಾಯ ಮಾಡೋದು ದೂರದ ಮಾತೇ ಸರಿ.
ಆದ್ರೆ ಇದೇ ದುಡ್ಡಿನಲ್ಲಿ ಗೃಹಿಣಿಯರಿಗೆ ತಿಂಗಳ ಖರ್ಚಿನಲ್ಲಿ ಯಾವ ರೀತಿ ಉಳಿತಾಯ ಮಾಡಬೇಕು ಅನ್ನೋದನ್ನ ನಾವು ಹೇಳಿಕೊಡ್ತೀವಿ. ಯಾವ ರೀತಿ ಯೋಜನೆಗಳನ್ನು ರೂಪಿಸಿಕೊಂಡರೆ ತಿಂಗಳ ಕೊನೆಯಲ್ಲಿ ಇಂತಿಷ್ಟು ಸೇವ್ ಮಾಡ್ಬಹುದು ಅನ್ನೋದ್ರ ಬಗ್ಗೆ ಟಿಪ್ಸ್ ಕೊಡ್ತೀವಿ.

1. ಬಜೆಟ್ ಪ್ಲಾನ್ ಮಾಡಿ
ಎಷ್ಟೇ ದುಡ್ಡಿದ್ದರೂ ತಿಂಗಳ ಕೊನೆಯಲ್ಲಿ ಎಲ್ಲಿ? ಹೇಗೆ ಖರ್ಚಾಯ್ತು ಅನ್ನೋದೇ ಗೊತ್ತಾಗೋದಿಲ್ಲ. ಅದಕ್ಕಾಗಿ ಮೊದಲಿಗೆ ಒಂದು ಪಟ್ಟಿ ತಯಾರಿಸಿ ಅದರಲ್ಲಿ ಈ ತಿಂಗಳ ಮನೆಯ ಖರ್ಚು, ತರಕಾರಿ, ಅಡುಗೆ ಸಾಮಾಗ್ರಿ, ಕರೆಂಟ್ ಬಿಲ್, ವಾಟರ್ ಬಿಲ್ ಎಲ್ಲವನ್ನೂ ಸೇರಿಸಿ. ಆಗ ನಿಮಗೆ ಒಂದು ಲೆಕ್ಕ ಸಿಗುತ್ತೆ. ಎಲ್ಲಿ ಖರ್ಚು ಹೆಚ್ಚಾಗುತ್ತಿದೆ ಅಂತ ಗೊತ್ತಾದಾಗ ಆ ದುಡ್ಡನ್ನು ಉಳಿತಾಯ ಮಾಡಿ. ಈ ರೀತಿ ಬಜೆಟ್ ಪಟ್ಟಿ ತಯಾರಿಸಿದರೆ ಖರ್ಚು ಹಾಗೂ ವೆಚ್ಚ ಮಿತವಾಗಿರುತ್ತದೆ.
2. ದುಂದು ವೆಚ್ಚಕ್ಕೆ ಬ್ರೇಕ್ ಹಾಕಿ
ಕೆಲವೊಂದು ಸಾರಿ ನಿಮಗೆ ಗೊತ್ತಿಲ್ಲದ ಹಾಗೆ ದುಡ್ಡು ನೀರಿನಂತೆ ಹರಿದು ಹೋಗುತ್ತಿರುತ್ತದೆ. ಹೀಗಾಗಿ ಕೆಲವೊಂದು ವಿಚಾರದ ಬಗ್ಗೆ ಗೃಹಿಣಿಯರು ತುಂಬಾನೇ ಜಾಗರೂಕತೆ ವಹಿಸಬೇಕು. ಕೇಬಲ್ ಬಿಲ್‌ನಲ್ಲಿ ಹೆಚ್ಚಿದ್ದಾಗ ನಿಮಗೆ ಬೇಡದಿರೋ ಚಾನೆಲ್‌ಗಳನ್ನು ತೆಗೆಸಿ ಅತೀ ಕಡಿಮೆ ಪ್ಯಾಕೇಜ್ ಹಾಕಿಕೊಳ್ಳಿ. ಪ್ರತಿ ಸಾರಿ ಹೊರಗಡೆ ಹೋಗಿ ಊಟ ಮಾಡುವುದರ ಬದಲು. ಮನೆಯಲ್ಲೇ ರುಚಿಯಾದ ಖಾದ್ಯ ತಯಾರಿಸಿ ಮನೆಯರೆಲ್ಲಾ ಒಟ್ಟಾಗಿ ತಿನ್ನಬಹುದು. ಈ ತರ ಕೆಲ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಿಮ್ಮ ಖರ್ಚು ಮಿತವ್ಯಯವಾಗಿರುತ್ತದೆ.
3. ರಿಯಾಯಿತಿ ದರ ಇರೋವಾಗ ಶಾಪಿಂಗ್ ಮಾಡಿ
ನಮ್ಮ ಮನೆ ಪಕ್ಕದಲ್ಲೇ ಇರೋ ಖಿರಾಣಿ ಅಂಗಡಿಯಿಂದ ಸ್ವಲ್ಪ ಸ್ವಲ್ಪ ಮನೆ ಸಾಮಾಗ್ರಿಗಳನ್ನು ತಂದಿಟ್ಟುಕೊಳ್ಳುವ ಬದಲು. ಡಿ-ಮಾರ್ಟ್‌ನಂತರ ಮಾರ್ಕೆಟ್‌ಗೆ ತೆರಳಿದಾಗ ಅಲ್ಲಿ ನಿಮಗೆ ರಿಯಾಯಿತಿ ದರದಲ್ಲಿ ಮನೆಗೆ ಬೇಕಾಗುವ ಎಲ್ಲಾ ಸಾಮಾಗ್ರಿಗಳು ಲಭ್ಯವಾಗುತ್ತದೆ. ಇದರಿಂದಾಗಿ ನೀವು ತಿಂಗಳಿಗೆ ಇಂತಿಷ್ಟು ಉಳಿತಾಯ ಕೂಡ ಮಾಡಬಹುದು.
4. ನಗದು ಹಣವನ್ನೇ ಬಳಕೆ ಮಾಡಿ
ನೀವು ಎಲ್ಲೇ ಹೊರಗಡೆ ಹೋದರು. ಅಥವಾ ಯಾವುದಾದರೂ ವಸ್ತುಗಳನ್ನು ಖರೀದಿಸಬೇಕಾದರೂ ನಗದು ಅಥವಾ ಕ್ಯಾಶ್ ಬಳಸೋದು ತುಂಬಾನೇ ಮುಖ್ಯ. ಯಾಕಂದ್ರೆ ನಾವು ಎಲ್ಲಾ ಕಡೆ ಯುಪಿಐ ಸ್ಕ್ಯಾನರ್ ಬಳಕೆ ಮಾಡಿದ್ರೆ ಖರ್ಚಾದ ದುಡ್ಡಿಗೆ ಲೆಕ್ಕ ಸಿಗೋದಿಲ್ಲ. ಅದೇ ಕ್ಯಾಶ್ ಬಳಕೆ ಮಾಡಿದ್ರೆ ಎಷ್ಟು ಖರ್ಚಾಯಿತು ಅನ್ನೋ ಲೆಕ್ಕ ಇರುತ್ತೆ. ಹಾಗೆ ಮುಂದೆ ಏನಾದ್ರು ಖರೀದಿ ಮಾಡಬೇಕಾದರೆ ನೂರು ಸಾರಿ ಯೋಚನೆ ಮಾಡ್ತೀವಿ.
5. ಗೃಹಿಣಿಯರಾದರೆ ಸಣ್ಣ ಪುಟ್ಟ ಕೆಲಸಗಳಿಂದ ಹಣ ಸಂಪಾದಿಸಿ
ಸಾಮಾನ್ಯವಾಗಿ ಗೃಹಿಣಿಯರು ಮನೆ ಕೆಸಗಳೆಲ್ಲಾ ಮುಗಿದ ಮೇಲೆ ಆರಾಮಾಗಿರುತ್ತಾರೆ. ಈ ಸಮಯದಲ್ಲಿ ವರ್ಕ್ ಫ್ರಮ್ ಹೋಮ್ ಕೆಲಸಗಳು, ಫ್ರೀಲಾನ್ಸಿಂಗ್ ಹೀಗೆ ಅನೇಕ ಕೆಲಸಗಳನ್ನು ಮಾಡಬಹುದು. ಇಲ್ಲವಾದರೆ ವಿವಿಧ ಬಗೆಯ ಖಾದ್ಯ ತಯಾರಿಸಿ ಅದನ್ನು ಕೂಡ ಮಾರಾಟ ಮಾಡಬಹುದು. ನಿಮ್ಮ ಮನೆಯಲ್ಲಿ ಇನ್ನೊಂದು ಭಾಗ ಖಾಲಿ ಇದ್ದರೆ ಅದನ್ನು ಬಾಡಿಗೆಗೆ ನೀಡಬಹುದು. ಅಥವಾ ಟೈಲರಿಂಗ್, ಕಸೂತಿ ಹೀಗೆ ಒಂದಾ ಎರಡಾ ದುಡಿಯುವ ಮನಸ್ಸಿದ್ದರೆ ಎಷ್ಟೊಂದು ಕೆಲಸಗಳಿದೆ. ಇದರಿಂದ ಬಂದ ಹಣದಿಂದ ನೀವು ಉಳಿತಾಯ ಮಾಡಿಕೊಳ್ಳಬಹುದು.
6. ಮನೆಯ ಎಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ಕೊಂಚ ಗಮನಕೊಡಿ
ದಿನ ಕಳೆದಂತೆ ಯುನಿಟ್ ಕರೆಂಟ್ ಬೆಲೆ ಹೆಚ್ಚಾಗುತ್ತಿದೆ. ಹೀಗಿರಬೇಕಾದರೆ ಮನೆಯಲ್ಲಿ ಅನವಶ್ಯಯಕವಾಗಿ ಫ್ಯಾನ್ ತಿರುಗೋದಕ್ಕೆ ಬಿಡಬೇಡಿ. ಎಸಿ ಬದಲು ಸಾಧ್ಯವಾದಷ್ಟು ಫ್ಯಾನ್ ಬಳಸಿ. ಇನ್ನೂ ಹಗಲಿನಲ್ಲಿ ಸುಖಾಸುಮ್ಮನೆ ಲೈಟ್ ಹೊತ್ತಿಸೋದು ಬೇಡ. ಸೂರ್ಯನ ಬೆಳಕಿನಿಂದ ಬರೋ ಬೆಳಕು ಸಾಕು. ಈ ರೀತಿ ಕರೆಂಟ್ ಬಿಲ್‌ನಲ್ಲೂ ಕೂಡ ಕೊಂಚ ಉಳಿತಾಯ ಮಾಡಬಹುದು.
7. ಮಿತವ್ಯಯ ಜೀವನಕ್ಕೆ ಒಗ್ಗಿಕೊಳ್ಳಿ
ಗುಣಮಟ್ಟದ ಜೀವನವನ್ನೇ ಸಾಗಿಸಿ. ಆದರೆ ಸಿಕ್ಕಾಪಟ್ಟೆ ಖರ್ಚು ಮಾಡೋದು ಬೇಡ. ನಿಮ್ಮ ಮನೆಯ ಎದುರುಗಡೆ ಜಾಗವಿದ್ದರೆ ಅಲ್ಲಿ ತರಕಾರಿ ಬೆಳೆಯಿರಿ. ಟೊಮೆಟೋ, ಸೊಪ್ಪು, ಅಲೂಗಡ್ಡೆಯನ್ನು ಹೀಗೆ ನಮ್ಮ ಮಣ್ಣಿನಲ್ಲಿ ಬೆಳಯಲು ಸಾಧ್ಯವಿರೋ ತರಕಾರಿ ಬೆಳೆಯಬಹುದು. ಇನ್ನೂ ಯಾವುದಾದರೊಂದು ವಸ್ತು ಹಾಳಾದರೆ ಹೊಸದು ತರೋ ಬದಲು ಅದನ್ನು ರಿಪೇರಿ ಮಾಡಿಸಿ ಮತ್ತೆ ಬಳಕೆ ಮಾಡಿದರೆ ಉತ್ತಮ.
ಮನುಷ್ಯ ಜೀವನದಲ್ಲಿ ಆರ್ಥಿಕವಾಗಿ ಸಬಲವಾಗಿರೋದು ಕೂಡ ತುಂಬಾನೇ ಮುಖ್ಯವಾಗುತ್ತದೆ. ಸುಖಾ ಸುಮ್ಮನೆ ಖರ್ಚು ಮಾಡೋ ಬದಲು ಭವಿಷ್ಯಕ್ಕಾಗಿ ಉಳಿತಾಯ ಮಾಡೋದು ತುಂಬಾನೇ ಮುಖ್ಯವಾಗುತ್ತದೆ. ಇದೆಲ್ಲಾ ಅಂಶವನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರು ಮನೆ ನಡೆಸಬೇಕು.



Click it and Unblock the Notifications



