Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕುಂಭಮೇಳದ ಮೋನಾಲಿಸಾಗೆ ಸಿನಿಮಾ ಆಫರ್..! ಸಿನಿಮಾ, ಮಾಡೆಲಿಂಗ್, ಯೂಟ್ಯೂಬ್ ತೆರೆದ ಚೆಲುವೆ..!
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳವು ಹಲವು ರೀತಿಯ ವಿಶೇಷಗಳಿಂದ ಸುದ್ದಿಯಾಗುತ್ತಿದೆ. ಅಲ್ಲಿನ ವಿಶೇಷ ಅಘೋರಿಗಳು, ಸಾಧುಗಳು, ಸಂತರು, ವಿದೇಶಿ ಭಕ್ತರು ಕೂಡ ಕಂಡುಬಂದಿದ್ದಾರೆ. ಹಾಗೆ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ಯುವತಿಯೊಬ್ಬಳು ಎಲ್ಲರ ಗಮನ ಸೇಳೆದಿದ್ದಾಳೆ. ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯದ್ದೇ ಫೋಟೋಗಳು, ವಿಡಿಯೋಗಳು ಹರಿದಾಡುತ್ತಿವೆ.
ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿರುವ ಈ ಹುಡುಗಿಯ ಫೋಟೋಗಳು ವೈರಲ್ ಆಗಿರುವ ಜೊತೆಗೆ ಈ ಯುವತಿ ಕೂಡ ಮೋನಾಲಿಸ ಎಂಬುದಾಗಿ ಫೇಮಸ್ ಆಗುತ್ತಿದ್ದಾಳೆ. ಹಾಗೆ ಸಾಕಷ್ಟು ಕ್ಯಾಮರಾಗಳು ಆಕೆಯನ್ನೇ ಹಿಂಬಾಲಿಸಿದ್ದಾರೆ. ಐಶ್ವರ್ಯ ರೈ ಅತಿ ಸುಂದರಿ ಎಂದು ಕರೆಸಿಕೊಂಡಿದ್ದು ಅವರ ಆ ನೀಲಿ ಕಣ್ಣುಗಳಿಂದಲೇ ಅದೇ ರೀತಿ ಈ ಯುತಿಯ ಕಣ್ಣುಗಳು ಕೂಡ ವಿಶೇಷವಾಗಿ ಗಮನ ಸೆಳೆಯುತ್ತಿವೆ.

ಗೋಧಿಬಣ್ಣ ಮೈ ಕಟ್ಟು, ಅತ್ಯಾಕರ್ಷಕ ಕಣ್ಣು, ತುಟಿಯಲ್ಲಿ ಕಿರುನಗೆ, ಮೈ ಮೇಲೆ ಕೆಲ ಮಾಲೆಗಳು, ಹಣೆಯಲ್ಲಿ ಚಿಕ್ಕ ಬೊಟ್ಟು, ತುಂಬಾನೇ ಸರಳ ಅಲಂಕಾರದಲ್ಲಿರುವ ಈ ಹೆಣ್ಮಗಳು ನ್ಯಾಷನಲ್ ಕ್ರಷ್ ಆಗಿದ್ದಾಳೆ.
ಆದ್ರೆ ಈಗ ಆಕೆ ಸಾಮಾಜಿಕ ಜಾಲತಾಣದಿಂದಲೇ ಫೇಮಸ್ ಆಗಿದ್ದು, ಸಿನಿಮಾ ನಿರ್ಮಾಪಕರೊಬ್ಬರು ತಮ್ಮ ಸಿನಿಮಾವೊಂದರಲ್ಲಿ ಪ್ರಮುಖ ಪಾತ್ರ ನೀಡಿದ್ದಾರೆ ಎಂದು ವರದಿಯಾಗಿದೆ. ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಸನೋಜ್ ಮಿಶ್ರಾ ತಮ್ಮ ಮುಂದಿನ ಸಿನಿಮಾದಲ್ಲಿ ಒಂದು ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಿದ್ದಾರಂತೆ. ಡೈರಿ ಆಫ್ ಮಣಿಪುರ ಎಂಬ ಸಿನಿಮಾ ತಯಾರಿಯ ಕೆಲಸದಲ್ಲಿದ್ದು ಈ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಆಕೆಯನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಆಕೆಗೆ ನಟನೆಯ ಕುರಿತು ಯಾವುದೇ ಅನುಭವವಿಲ್ಲದಿದ್ದರು ಸಂಪೂರ್ಣ ತರಬೇತಿ ನೀಡಲಾಗುವುದಂತೆ. ಹಾಗೆ ಮಾಡೆಲಿಂಗ್‌ನಲ್ಲೂ ಆಕೆಗೆ ಒಂದಿಷ್ಟ ಅವಕಾಶ ಬಂದಿದೆ ಎಂದು ಹೇಳಲಾಗಿದೆ. ಸದ್ಯ ಆಕೆಯ ಮೇಕ್ ಓವರ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮೊನಾಲಿಸಾ ಅವರ ಈ ಸ್ಪೂರ್ತಿದಾಯಕ ಕಥೆಯು ಯಾರ ಜೀವನ ಯಾವಾಗ ಬೇಕಾದರು ಬದಲಾಗಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಸರಳ ಜೀವನವನ್ನು ನಡೆಸುವ ಮತ್ತು ಒಂದು ಕಾಲದಲ್ಲಿ ತನ್ನನ್ನು ತಾನು ಸಾಮಾನ್ಯ ಎಂದು ಪರಿಗಣಿಸಿದ್ದ ಆಕೆಗೆ ಇಂದು ಎಲ್ಲಾ ಅದೃಷ್ಟಗಳು ಒಲಿದು ಬಂದಿದೆ. ಹಾಗೆ ಆಕೆ ಈಗ ಬಾಲಿವುಡ್ ಮಂದಿಯ ಕಣ್ಣಿಗೂ ಬಿದ್ದಿರುವುದು ಆಕೆಯ ಜೀವನದಲ್ಲಿ ಬಹುದೊಡ್ಡ ತಿರುವು ಪಡೆದುಕೊಳ್ಳುತ್ತಿದೆ.
ತಮ್ಮದೆ ಯೂಟ್ಯೂಬ್ ಚಾನಲ್ ಸಹ ಆರಂಭ
ಆಕೆ ಫೇಮಸ್ ಆದ ಬಳಿಕ ಎಲ್ಲಾ ಕಡೆ ಆಕೆಯದ್ದೇ ಮಾತು ಕೇಳಿಬರುತ್ತಿತ್ತು. ಹಲವು ಹಲವು ಮಂದಿ ಆಕೆ ಸಂದರ್ಶನ ಪಡೆದಿದ್ದಾರೆ. ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಾಟ ಮಾಡುವುದಾಗಿ ಆಕೆ ಹೇಳಿಕೊಂಡಿದ್ದಳು. ಹಾಗೆ ಈಗ ಆಕೆ ತನ್ನ ಯೂಟ್ಯೂಬ್ ಚಾನಲ್ ಸಹ ತೆರೆದಿದ್ದಾಳೆ. ಹಾಗೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿಯೂ ಖಾತೆಗಳ ತೆರೆದೊದ್ದು ಕ್ಷಣದಲ್ಲಿ ಫಾಲೋವರ್ಸ್ ಗಿಟ್ಟಿಸಿದ್ದಾಳೆ. ಸದ್ಯ ಆಕೆಯ ಒಂದು ಮೇಕ್ ಓವರ್ ವಿಡಿಯೋ ಈಗ ವೈರಲ್ ಆಗುತ್ತಿದೆ. ಬ್ಯೂಟಿಷಿಯನ್ ಆಕೆಯ ಸೌಂದರ್ಯ ದುಪ್ಪಟ್ಟುಗೊಳಿಸುವಂತಹ ಮೇಕ್‌ಅಪ್ ಮಾಡಿದ್ದು, ಎಲ್ಲಾ ಕಡೆ ಆಕೆಯ ಸೌಂದರ್ಯದ ಕುರಿತು ಮಾತುಗಳು ಕೇಳಿಬರುತ್ತಿದೆ.
ಸದ್ಯ ಈಗ ಬಾಲಿವುಡ್‌ನಿಂದ ಸಿನಿಮಾ ಆಫರ್ ಸಹ ಬಂದಿದ್ದು ಮುಂದೆ ಟಿವಿಯ ರಿಯಾಲಿಟಿ ಶೋ ಅಥವಾ ಯಾವುದಾದರು ಕಾರ್ಯಕ್ರಮಕ್ಕೂ ಆಕೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದ್ರೆ ತಾನಾಯಿತು ತನ್ನ ಕೆಲವಾಯಿತು ಎಂದುಕೊಂಡಿದ್ದ ಆಕೆಯನ್ನು ಈ ಕ್ಯಾಮರಾ ಲೋಕ ಇನ್ನೆಲ್ಲಿಗೋ ತಂದು ನಿಲ್ಲಿಸಿದೆ. ಆಕೆ ಜೀವನ ಕಟ್ಟಿಕೊಂಡರೆ ಒಂದಿಷ್ಟು ಜನರಿಗೆ ಆಕೆ ಸಹ ಜೀವನ ಮಾಡುವ ಮಾರ್ಗ ತೋರಿಸಬಹುದು ಆದ್ರೆ ಕ್ಷಣದಲ್ಲಿ ಆಕೆಯ ಇಡೀ ಕನಸು ನನಸಾಗದೆ ನಾಶವಾಗಲೂಬಹುದು.



Click it and Unblock the Notifications
