ಜ್ಯೋತಿಷ್ಯ ಪ್ರಕಾರ ದೇಹ ಯಾವ ಭಾಗದಲ್ಲಿ ಮಚ್ಚೆ ಇದ್ದರೆ ಏನರ್ಥ?

ಪ್ರತಿಯೊಬ್ಬರ ದೇಹದಲ್ಲಿ ಮಚ್ಚೆಗಳಿರುತ್ತದೆ. ಕೆಲವರಿಗೆ ಮುಖ, ಕೈ , ಕಾಲು ಹೀಗೆ ಕಾಣುವ ಭಾಗದಲ್ಲಿದ್ದರೆ ಇನ್ನು ಕೆಲವರಿಗೆ ಬೆನ್ನು, ತೊಡೆ, ಹೊಟ್ಟೆ ಹೀಗೆ ದೇಹದ ಯಾವುದಾದರೂ ಒಂದು ಭಾಗದಲ್ಲಿ ಇರುತ್ತದೆ. ಈ ಮಚ್ಚೆಯಿಂದಲೇ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತೇವೆ ಕೂಡ.

ಮಚ್ಚೆ ಎಲ್ಲರಿಗೆ ಒಂದೇ ರೀತಿ ಇರುವುದಿಲ್ಲ. ಅದರ ಗಾತ್ರ, ಬಣ್ಣದಲ್ಲಿ ವ್ಯತ್ಯಾಸಗಳಿರುತ್ತದೆ. ಆದರೆ ಜ್ಯೋತಿಷ್ಯಶಾಸ್ತ್ರವು ಈ ಮಚ್ಚೆಯ ಗಾತ್ರ, ಅದು ನಮ್ಮ ದೇಹದಲ್ಲಿ ಯಾವ ಭಾಗದಲ್ಲಿರುತ್ತದೆ, ಅದರ ಬಣ್ಣ ಎಲ್ಲವೂ ಒಂದೊಂದು ಅರ್ಥವನ್ನು ಸೂಚಿಸುತ್ತದೆ, ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ ಎಂದು ಹೇಳಿದೆ. ಹಾಗಾದರೆ ಜ್ಯೋತಿಷ್ಯಶಾಸ್ತ್ರ ಏನು ಹೇಳಿದೆ ಎಂದು ನೋಡೋಣವೆ?

Moles On Different Parts Of Body What Does It Mean As Per Astrology In Kannada

ಮಚ್ಚೆ ಮತ್ತು ಅದರ ಗುಣಗಳು

ಅದರ ಗಾತ್ರ: ಅದರ ಗಾತ್ರದ ಆಧಾರದ ಮೇಲೆ ಸಾಮಾನ್ಯವಾಗಿ 3 ಭಾಗಗಳಾಗಿ ವಿಂಗಡಿಸಲಾಗಿದೆ
ಚಿಕ್ಕದು: ಇದು ಹೆಚ್ಚೇನು ಪ್ರಭಾವ ಬೀರುವುದಿಲ್ಲ
ದೊಡ್ಡದು ಮತ್ತು ರೌಂಡ್ ಶೇಪ್‌ ಇರುವಂಥ ಮಚ್ಚೆ: ತುಂಬಾನೇ ಶುಭ
ಉದ್ದದ ಮಚ್ಚೆ: ಶುಭ

ಮಚ್ಚೆಯ ಶೇಪ್‌ನ ಆಧಾರದ ಮೇಲೆ ಈ ರೀತಿ ಹೇಳಿದೆ

ತ್ರಿಕೋನಾಕರ: ಮಿಶ್ರ ಫಲ
ಜಿಜ್‌ಜಾಗ್: ಒಳ್ಳೆಯದಲ್ಲ
ರೌಂಡ್: ಅದೃಷ್ಟ ತರಲಿದೆ
ಚೌಕಾಕಾರ: ಕೊನೆಯವರೆಗೂ ಏನಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ.

ಅದರ ಬಣ್ಣ ಪ್ರಕಾರ

ತೆಳು ಬಣ್ಣ: ಮಚ್ಚೆ ಕೆಂಪು, ಜೇನಿನ ಬಣ್ಣ , ಹಸಿರು ಬಣ್ಣದಲ್ಲಿದ್ದರೆ ಶುಭ ಎಂದು ಪರಿಗಣಿಸುವುದು.
ಕಪ್ಪು: ಇದನ್ನು ಅಷ್ಟು ಶುಭ ಎಂದು ಪರಿಗಣಿಸುವುದಿಲ್ಲ

ದೇಹದಲ್ಲಿ ಯಾವ ಭಾಗದಲ್ಲಿದ್ದರೆ ಏನು ಸೂಚನೆ

  • ಹಣೆಯ ಮೇಲಿದ್ದರೆ

ಹಣೆಯಲ್ಲಿ ಮಚ್ಚೆ ಇದ್ದರೆ ಎಲ್ಲರ ದೃಷ್ಟಿಗೂ ಬೀಳುವುದು. ಹಣೆಯ ಮಧ್ಯಭಾಗದಲ್ಲಿ ಮಚ್ಚೆ ಇದ್ದರೆ ಆ ವ್ಯಕ್ತಿ ಶಾಂತಿ ಸ್ವಭಾವದವರಂತೆ, ಬುದ್ಧಿವಂತರಾಗಿರುತ್ತಾರೆ, ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಮಾಡಿಕೊಳ್ಳುವುದಿಲ್ಲ ಎಂದು ಹೇಳಲಾಗುವುದು.

  • ಹಣೆಯ ಬಲ ಬದಿಯಲ್ಲಿದ್ದರೆ ಸಂಪತ್ತು ಹೆಚ್ಚುವುದಂತೆ
  • ಹಣೆಯ ಎಡ ಬದಿಯಲ್ಲಿಯಲ್ಲಿದ್ದರೆ ತುಂಬಾ ಸವಾಲುಗಳಿರುತ್ತದೆ ಅಲ್ಲದೆ ಆ ವ್ಯಕ್ತಿಯಲ್ಲಿ ಸ್ವಾರ್ಥ ಅಧಿಕವಂತೆ.

ಹುಬ್ಬಿನ ಬಳಿ ಇದ್ದರೆ

  • ಹುಬ್ಬಿನ ಬಳಿ ಇದ್ದರೆ ಬೇಗನೆ ಗೋಚರಿಸುವುದಿಲ್ಲ, ಒಂದು ವೇಳೆಇದ್ದರೆ ಅವರಲ್ಲಿ ನಾಯಕತ್ವದ ಗುಣ ಅಧಿಕವಂತೆ, ಇವರು ಯಶಸ್ಸು ಗಳಿಸುತ್ತಾರೆ ಎಂದು ಹೇಳಲಾಗುವುದು.
  • ಬಲ ಬದಿಯ ಹುಬ್ಬಿಲನಲ್ಲಿದ್ದರೆ ಅವರ ವೈವಾಹಿಕ ಜೀವನ ತುಂಬಾನೇ ರೊಮ್ಯಾಂಟಿಕ್ ಆಗಿರಲಿದೆ.
  • ಅದೇ ಎಡ ಬದಿಯಲ್ಲಿದ್ದರೆ ಅಂಜುಬುರುಕರು. ಇವರು ವೃತ್ತಿ ಜೀವನದಲ್ಲಿ ತುಂಬಾ ಸಮಸ್ಯೆ ಎದುರಿಸುತ್ತಾರೆ ಎಂದು ಹೇಳಲಾಗುವುದು.

ಕಣ್ಣಿನಲ್ಲಿ ಮಚ್ಚೆ ಇದ್ದರೆ

  • ಎಡಗಣ್ಣಿನಲ್ಲಿ ಮಚ್ಚೆ ಇದ್ದರೆ ಅಹಂಕಾರ, ಸ್ವಾರ್ಥ ಬುದ್ಧಿ ಅಧಿಕವಂತೆ
  • ಬಲ ಬದಿಯ ಕಣ್ಣಿನಲ್ಲಿ ಮಚ್ಚೆ ಇದ್ದರೆ ಆ ವ್ಯಕ್ತಿ ನಿಯತ್ತಿನ ಸ್ವಭಾವದವರು, ಶ್ರಮ ಜೀವಿಗಳಂತೆ

ಮೂಗಿನ ಮೇಲೆ ಮಚ್ಚೆ ಇದ್ದರೆ

  • ಮೂಗಿನ ತುದಿಯಲ್ಲಿ ಮಚ್ಚೆ ಇದ್ದರೆ ಯೋಚಿಸದೆ ಪಟ್‌ ಅಂತ ನಿರ್ಧಾರ ತೆಗೆದುಕೊಳ್ಳುವ ಸ್ವಭಾವದವರು
  • ಮೂಗಿನ ಬಲ ಬದಿಯಲ್ಲಿ ಮಚ್ಚೆ ಇದ್ದರೆ ಸ್ವಲ್ಪ ಶ್ರಮದಿಂದ ತುಂಬಾನೇ ಯಶಸ್ಸು ಪಡೆಯುತ್ತಾರೆ. ಅಲ್ಲದೆ ಪೂರ್ವಜರ ಆಸ್ತಿ ಕೂಡ ಇವರಿಗೆ ತುಂಬಾನೇ ಇರಲಿದೆ.
  • ಅದೇ ಎಡ ಬದಿಯ ಮೂಗಿನಲ್ಲಿದ್ದರೆ ಯಶಸ್ಸು ಪಡೆಯಲು ತುಂಬಾ ಕಷ್ಟಪಡಬೇಕಾಗುತ್ತದೆ ಎಂದು ಹೇಳಲಾಗುವುದು.
  • ಮೂಗಿನ ಕೆಳಗಡೆ ಮಚ್ಚೆ ಇದ್ದರೆ ವಿರುದ್ಧ ಲಿಂಗದವರನ್ನು ತುಂಬಾನೇ ಆಕರ್ಷಿಸುತ್ತಾರೆ.

ಕೆನ್ನೆಯಲ್ಲಿ ಮಚ್ಚೆ ಇದ್ದರೆ

  • ಬಲ ಬದಿಯ ಕೆನ್ನೆಯಲ್ಲಿ ಮಚ್ಚೆ ಇದ್ದರೆ ತಾವು ಹೇಳಿದ್ಧೇ ಆಗಬೇಕು ಎಂಬ ಸ್ವಭಾವದರಂತೆ. ಇವರು ಚೆನ್ನಾಗಿ ಸಂಪಾದಿಸುತ್ತಾರೆ.
  • ಎಡಗೆನ್ನೆಯಲ್ಲಿ ಮಚ್ಚೆ ಇದ್ದರೆ ಬೇಗನೆ ಕೋಪ ಬರುತ್ತದೆ. ಅಲ್ಲದೆ ಯಾರ ಜೊತೆಗೆ ಹೆಚ್ಚಾಗಿ ಬೆರೆಯುವುದಿಲ್ಲ.

ಮಚ್ಚೆ ಕಿವಿಯಲ್ಲಿದ್ದರೆ

ಮಚ್ಚೆ ಕಿವಿಯ ಯಾವುದೇ ಭಾಗದಲ್ಲಿದ್ದರೂ ಅವರಿಗೆ ತುಂಬಾನೇ ಲಕ್ಷುರಿ ಬದುಕು ಸಿಗುವುದಂತೆ. ಅಲ್ಲದೆ ಕಿವಿಯ ಮೇಲೆ ಅಥವಾ ಕಿವಿಯ ತುದಿಯಲ್ಲಿ ಮಚ್ಚೆ ಇದ್ದರೆ ತುಂಬಾ ಬುದ್ಧಿವಂತರು ಕೂಡ ಹೌದಂತೆ.

ಮಚ್ಚೆ ತುಟಿಯಲ್ಲಿದ್ದರೆ

ಮಚ್ಚೆ ತುಟಿಯಲ್ಲಿ ರುಚಿಯಾದ ಅಡುಗೆ ಬಯಸುವವರು. ಊಟದ ಬಗ್ಗೆ ತುಂಬಾನೇ ವಿಮರ್ಶೆ ಮಾಡುತ್ತಾರೆ. ಅಲ್ಲದೆ ಇವರು ಸ್ವಲ್ಪ ಅಧಿಕ ತಿನ್ನುತ್ತಾರೆ, ಸ್ಥೂಲಕಾಯ ಹೊಂದಿರುತ್ತಾರೆ.
ನಾಲಗೆಯಲ್ಲಿ ಮಚ್ಚೆ ಇದ್ದರೆ
ನಾಲಗೆಯಲ್ಲಿ ಮಚ್ಚೆ ಇದದ್ರೆ ಆರೋಗ್ಯ ಹಾಗೂ ಮಾತಿಗೆ ಸಂಬಂಧಿಸಿದ ಸಮಸ್ಯೆ ಇರುತ್ತದೆ. ಇವರಿಗೆ ಶಿಕ್ಷಣದಲ್ಲೂ ತೊಂದರೆ ಉಂಟಾಗುವುದು ಎಂದು ಹೇಳಲಾಗುವುದು. ನಾಲಗೆ ತುದಿಯಲ್ಲಿ ಮಚ್ಚೆ ಇರುವವರು ಎಂಥದ್ದೇ ಪರಿಸ್ಥಿತಿ ಇರಲಿ ಚೆನ್ನಾಗಿ ನಿಭಾಯಿಸುತ್ತಾರಂತೆ.

ಗಲ್ಲದಲ್ಲಿ ಮಚ್ಚೆ ಇದ್ದರೆ

ಇವರಿಗೆ ಪ್ರಯಾಣ ಮಾಡುವುದೆಂದರೆ ತುಂಬಾನೇ ಇಷ್ಟ. ಅದರಲ್ಲೂ ಗುಂಪಿನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಅಲ್ಲದೆ ತುಂಬಾ ಲಾಜಿಕ್ ಆಗಿ ಯೋಚಿಸುವವರು.
ಕುತ್ತಿಗೆ ಭಾಗದಲ್ಲಿ ಮಚ್ಚೆ ಇದ್ದರೆ
ಕುತ್ತಿಗೆ ಮುಂಭಾಗದಲ್ಲಿ ಮಚ್ಚೆ ಇದ್ದರೆ ಇವರ ಉಚ್ಛಾರಣೆ ತುಂಬಾ ಚೆನ್ನಾಗಿರುತ್ತದೆ, ಅಲ್ಲದೆ ಅದೃಷ್ಟವಂತರು. ಅದೇ ಕುತ್ತಿಗೆ ಹಿಂಭಾಗದಲ್ಲಿದ್ದರೆ ತುಂಬಾನೇ ಕೋಪಿಷ್ಟರಂತೆ.

ಮಚ್ಚೆ ಭುಜದಲ್ಲಿದ್ದರೆ

ತುಂಬಾ ಹಠದ ಸ್ವಭಾವದವರು. ಧೈರ್ಯವಂತರು. ಅಲ್ಲದೆ ತಾವು ಪ್ರೀತಿಸುವವರಿಗಾಗಿ ಏನು ಮಾಡಲು ಸಿದ್ಧರಂತೆ.
ಕೈಯಲ್ಲಿದ್ದರೆ
ಬುದ್ದಿವಂತರಾಗಿರುತ್ತಾರೆ ಎಂದು ಹೇಳಲಾಗುವುದು, ಸರಳ ಸ್ವಭಾವದರು, ಲಕ್ಷುರಿ ಬದುಕು ತುಂಬಾ ಇಷ್ಟಪಡುವವರು.
ಮೊಣಕೈಯಲ್ಲಿದ್ದರೆ ಒಳ್ಳೆಯ ಕಲಾಗಾರರು, ಪ್ರಯಾಣ ಮಾಡುವುದು ಇಷ್ಟಪಡುತ್ತಾರೆ.
ಮಣಿಗಂಟಿನಲ್ಲಿ ಮಚ್ಚೆ ಇದ್ದರೆ
ತುಂಬಾನೇ ಕ್ರಿಯೇಟಿವ್ ವ್ಯಕ್ತಿಗಳಂತೆ
ಅಂಗೈನಲ್ಲಿ ಮಚ್ಚೆ ಇದ್ದರೆ
ಅಂಗೈನಲ್ಲಿ ಮಚ್ಚೆ ಇದ್ದರೆ ಹಲವು ಸವಾಲುಗಳು ಎದುರಾಗುವುದು, ಆದರೆ ಅವುಗಳಿಂದ ಪಾಠ ಕಲಿಯುತ್ತೀರಿ.
ಮಚ್ಚೆ ಕೈ ಬೆರಳಿನಲ್ಲಿ ಇದ್ದರೆ
ಇವರು ತುಂಬಾನೇ ವರ್ಣಿಸಿ ಹೇಳುವ ಸ್ವಭಾವದರು.
ಪಕ್ಕೆಲುಬು ಬಳಿ ಮಚ್ಚೆ ಇದ್ದರೆ
ಈ ವ್ಯಕ್ತಿ ಬೇಗನೆ ಸುಳ್ಳು ಹೇಳುತ್ತಾರೆ, ಆತ್ಮವಿಶ್ವಾಸ ಕಡಿಮೆ ಎಂದು ಹೇಳಲಾಗುವುದು.

ಬೆನ್ನಿನಲ್ಲಿದ್ದರೆ
ಬೆನ್ನಿನಲ್ಲಿ ಮಚ್ಚೆ ಇದ್ದರೆ ಯಶಸ್ಸು ಪಡೆಯುತ್ತಾರೆ, ಇವರಲ್ಲಿ ನಾಯಕತ್ವದ ಗುಣಗಳಿರುತ್ತದೆ

  • ಭುಜದ ಸ್ವಲ್ಪ ಕೆಳಗಡೆ ಮಚ್ಚೆ ಇದ್ದರೆ ಸವಾಲುಗಳನ್ನು ಎದುರಿಸುವ ಧೈರ್ಯ ಅವರಲ್ಲಿರುತ್ತದೆ.

ಮಚ್ಚೆ ಎದೆಯಲ್ಲಿ ಇದ್ದರೆ

  • ಮಹಿಳೆಯರಿಗೆ ಬಲ ಭಾಗದ ಎದೆಯಲ್ಲಿ ಮಚ್ಚೆ ಇದ್ದರೆ ಕೆಟ್ಟ ಅಭ್ಯಾಸಗಳಿರುತ್ತದೆಯಂತೆ
  • ಪುರುಷರಿಗೆ ಬಲ ಭಾಗದ ಎದೆಯಲ್ಲಿ ಮಚ್ಚೆ ಇದ್ದರೆ ಅವರು ತುಂಬಾ ಕಷ್ಟಗಳನ್ನು ಎದುರಿಸಬೇಕಾಗುವುದು
  • ಮಹಿಳೆಯರಿಗೆ ಎಡ ಬದಿಯಲ್ಲಿ ಮಚ್ಚೆ ಇದ್ದರೆ ತುಂಬಾ ಒಳ್ಳೆಯ ಸ್ವಭಾವದವರು
  • ಪುರುಷರಿಗೆ ಎಡ ಬದಿಯಲ್ಲಿ ಮಚ್ಚೆ ಇದ್ದರೆ ಬುದ್ಧವಂತರು ಆದರೆ ಸಂಬಂಧ ಸರಿದೂಗಿಸುವಲ್ಲಿ ಸಮರ್ಥರಲ್ಲ ಎಂದು ಹೇಳಲಾಗುವುದು.

ಹೊಕ್ಕಳಿನ ಭಾಗದಲ್ಲಿ ಮಚ್ಚೆ ಇದ್ದರೆ

ಮಹಿಳೆಯರಿಗೆ ಹೊಕ್ಕಳ ಭಾಗದಲ್ಲಿ ಮಚ್ಚೆ ಇದ್ದರೆ ಅವರ ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ ಎಂದು ಹೇಳಲಾಗುವುದು.

  • ಪುರುಷರಿಗೆ ಹೊಕ್ಕಳ ಭಾಗದಲ್ಲಿ ಇದ್ದರೆ ಸುಂದರ ಕುಟುಂಬ ಜೀವನ ಅನುಭವಿಸುತ್ತಾರೆ ಎಂದು ಹೇಳಲಾಗಿದೆ.

ಹೊಟ್ಟೆಯ ಭಾಗದಲ್ಲಿ ಮಚ್ಚೆ ಇದ್ದರೆ

ಹೊಟ್ಟೆಯ ಭಾಗದಲ್ಲಿ ಮಚ್ಚೆ ಇದ್ದರೆ ಅವರ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ.
ಹೊಟ್ಟೆ ಬಲ ಭಾಗದಲ್ಲಿ ಮಚ್ಚೆ ಇದ್ದರೆ ಇವರು ಸುಲಭದಲ್ಲಿ ಹಣ ಮಾಡುತ್ತಾರೆ, ಅಲ್ಲದೆ ಇವರನ್ನು ನೋಡಿ ಜನರು ಹೊಟ್ಟೆ ಉರಿದುಕೊಳ್ಳುತ್ತಾರೆ.

ಹಿಂಬದಿಯಲ್ಲಿ ಮಚ್ಚೆ ಇದ್ದರೆ

  • ಹಿಂಬದಿಯಲ್ಲಿ ಮಚ್ಚೆ ಇದ್ದರೆ ಅವರಿ ಜಾಲಿ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಸಂಗಾತಿಗೆ ತುಂಬಾ ನಿಯತ್ತಿನಿಂದ ಇರುತ್ತಾರೆ.
  • ಬಲಭಾಗದಲ್ಲಿ ಇದ್ದರೆ ಅವರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ ಅಲ್ಲದೆ ಕ್ರಿಯೇಟಿವ್ ವ್ಯಕ್ತಿಗಳಾಗಿರುತ್ತಾರೆ.

ಗುಪ್ತಾಂಗದಲ್ಲಿದ್ದರೆ

ಗುಪ್ತಾಂಗದಲ್ಲಿದ್ದರೆ ಆ ವ್ಯಕ್ತಿ ತುಂಬಾ ರೊಮ್ಯಾಂಟಿಕ್ ಎಂದು ಹೇಳಲಾಗುವುದು. ಅಲ್ಲದೆ ಇವರು ತುಂಬಾ ಓಪನ್‌ ಮೈಂಡಡ್‌ ವ್ಯಕ್ತಿಗಳಾಗಿರುತ್ತಾರೆ.
ತೊಡೆಯಲ್ಲಿ ಮಚ್ಚೆ ಇದ್ದರೆ
ತೊಡೆಯಲ್ಲಿ ಮಚ್ಚೆ ಇದ್ದರೆ ಸೋಮಾರಿ ಸ್ವಭಾವದವರು. ಇವರಲ್ಲಿ ಭಯ ಎಂಬುವುದು ಹತ್ತಿರಕ್ಕೂ ಸುಳಿಯಲ್ಲ.

ಮಂಡಿಯಲ್ಲಿ ಮಚ್ಚೆ ಇದದ್ರೆ

ಇವರು ಎಂಥದ್ದೇ ರಿಸ್ಕ್‌ ತೆಗೆದುಕೊಳ್ಳಲು ರೆಡಿ ಇರುತ್ತಾರೆ. ಅಲ್ಲದೆ 35ರ ನಂತರ ಇವರು ತುಂಬಾ ಲಕ್ಷುರಿ ಬದುಕು ನಡೆಸುತ್ತಾರೆ ಎಂದು ಹೇಳಲಾಗುವುದು.
ಕಾಲುಗಳಲ್ಲಿ ಮಚ್ಚೆ ಇದ್ದರೆ
ಕಾಲುಗಳಲ್ಲಿ ಮಚ್ಚೆ ಇದ್ದರೆ ಯಾವುದೇ ಆಲೋಚನೆ ಮಾಡದೆ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಮಣಿಗಂಟಿನಲ್ಲಿ ಮಚ್ಚೆ ಇದ್ದರೆ
ಕಾಲಿನ ಮಣಿಗಂಟಿನಲ್ಲಿ ಮಚ್ಚೆ ಇದ್ದರೆ ಆ ವ್ಯಕ್ತಿ ತುಂಬಾ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವವರು ಎಂದರ್ಥ.

ಪಾದಗಳಲ್ಲಿ ಮಚ್ಚೆ

ಬಲಗಾಲಿನಲ್ಲಿ ಮಚ್ಚೆ ಇದ್ದರೆ ಅವರು ತುಂಬಾ ಒಳ್ಳೆಯ ಮನಸ್ಸಿನವರು ಎಂದರ್ಥ, ಅದೇ ಎಡಗಾಲಿನಲ್ಲಿ ಮಚ್ಚೆ ಇದ್ದರೆ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಅಲ್ಲದೆ ಆಗಾಗ ಕಾಯಿಲೆ ಬೀಳುತ್ತಾರೆ ಎಂದು ಹೇಳಲಾಗುವುದು.
ಇವೆಲ್ಲಾ ನಂಬಿಕೆಯಷ್ಟೇ.. ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

English summary

Moles On Different Parts Of Body What Does It Mean As Per Astrology In Kannada

Moles On Different Parts Of Body and different size of mole What Does It Mean As Per Astrology,
Story first published: Saturday, June 10, 2023, 10:26 [IST]
X
Desktop Bottom Promotion