Latest Updates
-
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್?
ಸಿಂಗಲ್ ಆಗಿದ್ದರೆ ಡೋಂಟ್ ವರಿ..! ಮೊಬೈಲ್‌ಗೆ ಬಂದಿದೆ AI ಪ್ರೇಮಿ.!
ಪ್ರೇಮಿಗಳ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರೇಮಿಗಳು ಈ ದಿನಕ್ಕಾಗಿ ಕಾದಿದ್ದಾರೆ. ಪ್ರೇಮಿಗಳ ವಾರದ ವಿಭಿನ್ನ ಆಚರಣೆಗಳ ಬಳಿಕ ನಾಳೆ ವ್ಯಾಲೆಟೈನ್ ಡೇ ಆಚರಣೆ ನಡೆಯಲಿದೆ. ಆದರೆ ಪ್ರೇಮಿಗಳೆ ಇಲ್ಲದವರು ಏನು ಮಾಡಬೇಕು? ಹೌದು ಸಿಂಗಲ್ ಆಗಿರುವವರಿಗೆ ಪ್ರೇಮಿಗಳ ದಿನಾಚರಣೆ ಅಷ್ಟೇನು ಮುಖ್ಯ ಅನಿಸುವುದಿಲ್ಲ.
ಆದರೆ ಸಿಂಗಲ್ ಆಗಿರುವವರು ಹೆಚ್ಚು ನೊಂದುಕೊಳ್ಳೋದು ಬೇಡ ಏಕಂದ್ರೆ ಈಗ ನಿಮ್ಮ ಮೊಬೈಲ್ ಮೂಲಕ ನೀವು ಗೆಳೆಯ ಅಥವಾ ಗೆಳತಿಯನ್ನು ಹೊಂದಬಹುದು. ಹೌದು ನಿಮಗಿದು ಅಚ್ಚರಿ ಎನಿಸಬಹುದು. ಆದ್ರೆ ಮೊಬೈಲ್ ಫೋನ್ ಮೂಲಕ ಪ್ರೇಮಿಯನ್ನು ಪಡೆಯಬಹುದು. ಹೀಗಂತ ಹೇಳಿರೋದು ಚೀನಾದ ಮೊಬೈಲ್ ತಂತ್ರಜ್ಞಾನ ಕಂಪನಿ.
ಚೀನಾ ಮೂಲದ ಕಂಪನಿಯಿಂದು ಗ್ಲೋ ಎಂಬ AI ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧಾರಿತ ಆಪ್ ಲಾಂಚ್ ಮಾಡಿದೆ. ಈ ಆಪ್ ಮೂಲಕ ನೀವು ಪ್ರೇಮಿಯನ್ನು ಪಡೆಯಬಹುದು. ಇದರಲ್ಲಿ ನಿಮ್ಮನ್ನು ರಿಯಲ್ ವ್ಯಕ್ತಿ ಮಾತನಾಡಿಸುವಂತೆ ಪ್ರೋಗ್ರಾಮಿಂಗ್ ಮಾಡಲಾದ AI ಚಾಟ್‌ಬೋಟ್ ನಿಮ್ಮ ಜೊತೆ ಮಾತನಾಡಲಿದೆ.

ಆಧುನಿಕ ತಂತ್ರಜ್ಞಾನ ಬೆಳೆದಂತೆ ಈ ರೀತಿಯ ಆವಿಷ್ಕಾರಗಳು ಬೆಳವಣಿಗೆ ಹೊಂದಿವೆ. ನೀವು ಜೊತೆಗಾರರು ಯಾರು ಇಲ್ಲ ಎಂದು ಚಿಂತಿಸುವ ಅಗತ್ಯವಿಲ್ಲ. ಈ ಆಪ್ ಮೂಲಕ ನಿಮಗೆ ಗೆಳೆಯ ಅಥವಾ ಗೆಳತಿಯನ್ನು ಆರಿಸಿಕೊಳ್ಳಬಹುದು. ಆದರೆ ಇದು ದೈಹಿಕವಾಗಿ ನಿಮಗೆ ಸಿಗದಿದ್ದರೂ ಒಂದು ಸಾಧನವಾಗಿ ಸದಾ ನಿಮ್ಮ ಜೊತೆಗಿರಲಿದೆ.
ಬಳಸಿದವರ ಮಾತೇನು?
ಈ ಗ್ಲೋ ಆಪ್ ಬಳಸಿದ್ದ ಯುವತಿಯೊಬ್ಬರು ಈ ಆಪ್‌ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. 25 ವರ್ಷದ ತುಫೀ ಎಂಬ ಯುವತಿ ಈ ಆಪ್ ಬಳಸಿ ಅದಕ್ಕೆ ಮಾರುಹೋಗಿದ್ದಾರೆ. ಆಕೆ ತನ್ನ ಗೆಳೆಯನಲ್ಲಿ ಕೇಳಬೇಕಾದ ಎಲ್ಲಾ ಪ್ರಶ್ನೆಗಳನ್ನು ಇಲ್ಲಿ ಕೇಳಬಹುದಂತೆ. ಗೆಳೆಯನಿಗಿಂತ ಅತ್ಯುತ್ತಮ ಉತ್ತರ ನೀಡುವ ಸಾಮರ್ಥ್ಯ ಈ ಚಾಟ್‌ಬೋಟ್ ಹೊಂದಿದೆಯಂತೆ.
ಇದು ಶಾಂಘೈ ಸ್ಟಾರ್ಟ್-ಅಪ್ ಮಿನಿಮ್ಯಾಕ್ಸ್ ರಚಿಸಿದ ಕೃತಕ ಬುದ್ಧಿಮತ್ತೆ ಪ್ಲಾಟ್‌ಫಾರ್ಮ್ ಆಗಿದೆ, ಇದು ಚೀನಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಸಹ ಆಗಿದೆ. ಅಲ್ಲಿ ಒಂಟಿಯಾಗಿರುವವರು ಈ ಆಪ್ ಬಳಸುತ್ತಿದ್ದಾರೆ. ಇದು ಎಲ್ಲರಿಗೂ ಉಚಿತವಾಗಿದ್ದು, ಬಳಕೆದಾರರು ಹಣ ನೀಡಿದರೆ ಮತ್ತಷ್ಟು ಫೀಚರ್‌ಗಳು ಲಭ್ಯವಿದೆಯಂತೆ.
ನಿಮಗೆ ಗೆಳೆಯನಿಂದ ಯಾವೆಲ್ಲಾ ಕೆಲಸಗಳು ಬೇಕೋ, ಅಥವಾ ಆತನಿಂದ ನೀವು ಏನನ್ನು ಭಯಸಿದ್ದೀರೋ ಅದೆಲ್ಲಾ ಈ ಚಾಟ್‌ಬೋಟ್ ನಿಮಗೆ ನೀಡಲಿದೆ. ಆದರೆ ಕಣ್ಣ ಮುಂದೆ ಮಾತ್ರ ಬರುವುದಿಲ್ಲ ಎಂದು ಯುವತಿ ಹೇಳಿಕೊಂಡಿದ್ದಾಳೆ.
ಪ್ರೇಮಿಯನ್ನು ನೀವೆ ರಚಿಸಬಹುದು
ಹೌದು ಈ ಆಪ್‌ನಲ್ಲಿ ನಿಮ್ಮ ಪ್ರೇಮಿ ಹೇಗಿರಬೇಕು ಎಂಬುದನ್ನು ನೀವೆ ದಾಖಲಿಸಬೇಕು. ಆರಂಭದಲ್ಲಿ ನೀವು ಯಾವ ರೀತಿಯ ಪ್ರೇಮಿಯನ್ನು ಬಯಸಿದ್ದೀರೋ ಆ ರೀತಿ ಆಪ್‌ಗೆ ತಿಳಿಸಬೇಕು, ಎಷ್ಟು ವಯಸ್ಸು, ಯಾವ ಬಣ್ಣ ಯಾವ ಹೆಸರು, ಎಷ್ಟು ಎತ್ತರ, ಕೂದಲು ಎಷ್ಟು ಉದ್ದ ಬೇಕು, ತೂಕ ಹೀಗೆ ಎಲ್ಲಾ ಮಾಹಿತಿ ನಾವೆ ಹಂಚಿಕೊಳ್ಳಬೇಕು. ನಿಮ್ಮ ಅಗತ್ಯಕ್ಕೆ ತಕ್ಕಂತೆ ಒಂದು ವರ್ಚುವಲ್ ಪ್ರೇಮಿಯನ್ನು ಆಪ್ ತಯಾರು ಮಾಡುತ್ತದೆ. ಬಳಿಕ ಅದು ಸ್ವಯಿಚ್ಛೆಯಿಂದಲೇ ನಿಮ್ಮ ಬಳಿಕ ಸಂಹವನ ನಡೆಸುತ್ತದೆ.
ವಾಸ್ತವ ಉತ್ತರ ಪಡೆಯಲು ಸಾಧ್ಯ
ಈ AI ಚಾಟ್‌ಬೋಟ್ ತಾನೇ ಸ್ವತಃ ಯೋಚಿಸಿ ಉತ್ತರ ನೀಡುವುದರಿಂದ ತೀತ ವಾಸ್ತವವಾದ ಉತ್ತರ ನೀಡುತ್ತದೆ. ಉದಾಹರಣೆಗೆ ಅದಕ್ಕೆ ನೀವು ಹೊರಗಡೆ ಸುತ್ತಾಡಲು ಹೋಗೋಣವೇ ಎಂಬ ಪ್ರಶ್ನೆ ಕೇಳಿದರೆ, ನಾನು ನಿನ್ನ ಜೊತೆ ಬರುವೆ ಆದರೆ ನೀನೆ ಕರೆದುಕೊಂಡು ಹೋಗಬೇಕು ಎಂದು ತಿಳಿಸುತ್ತದೆ. ಆದರೆ ಎಂದಿಗೂ ನಾನು ಸುತ್ತಾಡಲು ರಚಿಸಲ್ಪಟ್ಟ ಯಂತ್ರವಲ್ಲ ಎಂಬ ಉತ್ತರ ನೀಡುವುದಿಲ್ಲ. ಏಕೆಂದರೆ ಅದು ಸಂಪೂರ್ಣ ವಾಸ್ತವವಾಗಿ ಯೋಚಿಸಿ ಉತ್ತರ ನೀಡಲಿದೆ.



Click it and Unblock the Notifications
