Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕುಂಭಮೇಳಕ್ಕೆ ಹೋಗಿಲ್ವಾ? ಚಿಂತೆ ಬಿಡಿ ₹500 ನೀಡಿ ಮನೆಯಲ್ಲೇ ಕುಳಿತು ಫೋಟೋ ಸ್ನಾನದಿಂದ ಪುಣ್ಯ ಸಂಪಾದಿಸಿ!
ವಿಶ್ವದ ಅತೀ ದೊಡ್ಡ ಧಾರ್ಮಿಕ ಸಮ್ಮೇಳನವಾಗಿರುವ ಮಹಾ ಕುಂಭಮೇಳೆ ಇನ್ನೇನು ಕೆಲವೇ ದಿನದಲ್ಲಿ ಮುಗಿಯಲಿದೆ. 144 ವರ್ಷಗಳಿಗೊಮ್ಮೆ ನಡೆಯುವ ಈ ಮಹಾ ಕುಂಭ ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಯಿಂದಲೂ ಕೋಟಿ ಕೋಟಿ ಭಕ್ತರು ಪ್ರಯಾಗ್‌ರಾಜ್‌ಗೆ ತೆರಳಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಕೋಟಿ ಕೋಟಿ ಜನರು ನದಿ ತೀರಕ್ಕೆ ತೆರಳಿದ್ದಾರೆ. ನಿತ್ಯವೂ ಭಕ್ತರ ಸಂಖ್ಯೆ ಕೋಟಿ ದಾಟುತ್ತಿದೆ. ಹೀಗಾಗಿ ಇದೊಂದು ವಿಶ್ವದಾಖಲೆ ಬರೆಯುತ್ತಿದೆ.
ಇನ್ನು ವಿದೇಶಗಳಿಂದಲೂ ಕೂಡ ಭಕ್ತರು ಆಗಮಿಸುವುದು ನೋಡಬಹುದು. ಹಾಗೆ ಭಾರತದಲ್ಲೂ ಅದೆಷ್ಟೋ ಮಂದಿ ಇಲ್ಲಿಗೆ ತೆರಳಬೇಕು ಎಂಬ ಮಹದಾಸೆ ಇಟ್ಟುಕೊಂಡಿರುತ್ತಾರೆ, ಅದರಲ್ಲೂ ಈ ಮಹಾ ಕುಂಭ 144 ವರ್ಷಕ್ಕೊಮ್ಮೆ ನಡೆಯುವುದರಿಂದ ಎಲ್ಲರು ಒಮ್ಮೆಯಾದರು ಭಾಗಿಯಾಗಬೇಕು ಅಂದುಕೊಳ್ಳುತ್ತಾರೆ. ಆದ್ರೆ ಅದು ಸುಲಭದ ಮಾತಲ್ಲ. ಕೋಟಿ ಕೋಟಿ ಭಕ್ತರ ನಡುವೆ ಪ್ರಯಾಗ್‌ರಾಜ್ ತಲುಪುವುದು ಕೂಡ ಸಾಹಸವೇ ಸರಿ.

ಹೀಗಾಗಿ ಸರ್ಕಾರ ವಿಶೇಷ ರೈಲುಗಳು, ಸಂಚಾರಕ್ಕೆ ಅನುಗುಣವಾದ ಸೌಲಭ್ಯಗಳ ಮಾಡಿರುತ್ತದೆ. ಆದರೂ ಕೆಲವರಿಗೆ ಪ್ರಯಾಗ್‌ರಾಜ್ ಕನಸಾಗಿ ಉಳಿಯುತ್ತದೆ. ಆದ್ರೆ ನೀವೇನಾದರು ಕುಂಭ ಮೇಳಕ್ಕೆ ತೆರಳುವ ಕನಸು ಹೊತ್ತಿದ್ದರೆ ಇನ್ನು ಕೂಡ ಸಮಯವಿದೆ. ಆದ್ರೆ ನಿಮಗೆ ಹೋಗಲು ಸಾಧ್ಯವಿಲ್ಲ ಅಂದರೂ ನಿಮಗಾಗಿ ಹೊಸದಂದು ಯೋಜನೆ ಇದೆ.
ನೀವು ತ್ರಿವೇಣಿ ಸಂಗಮನದಲ್ಲಿ ಸ್ನಾನ ಮಾಡುವ ಕನಸು ಹೊತ್ತಿದ್ದರು ಅದರ ಪುಣ್ಯ ಪಡೆಯಬೇಕು ಎಂದುಕೊಂಡಿದ್ದರೆ ಮನೆಯಲ್ಲೇ ಕುಳಿತು ಪುಣ್ಯ ಪಡೆಯಬಹುದು. ನಿಮಗೆ ಅಚ್ಚರಿ ಎನಿಸಬಹುದು. ಕೇವಲ 500 ರೂಪಾಯಿ ನೀಡಿದರೆ ತ್ರಿವೇಣಿ ಸಂಗಮದಲ್ಲಿನ ಸ್ನಾನದ ಫೋಟೋ ನಿಮ್ಮ ಮನೆಗೆ ಬರುತ್ತೆ. ನಿಮ್ಮ ಫೋಟೊವನ್ನು ಬಳಸಿ ನೀವು ತ್ರಿವೇಣಿ ಸಂಗಮನದಲ್ಲಿ ಸ್ನಾನ ಮಾಡುತ್ತಿರುವಂತೆ ಫೋಟೋವನ್ನು ಕಳುಹಿಸಲಾಗುತ್ತದೆ.
ಇಂತಹ ವಿನೂತನ ಐಡಿಯಾ ಇರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಮ್ಮ ಫೋಟೋವನ್ನು ವಾಟ್ಸಾಪ್ ಮೂಲಕ ಕಳುಹಿಸಿದರೆ ಸಾಕು. ನೀವು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಿರುವ ಫೋಟೋ ನಿಮ್ಮ ಕೈ ಸೇರಲಿದೆ. ಈ ಮೂಲಕವೂ ನೀವು ಆತ್ಮ ಶುದ್ಧಿಯಿಂದ ಪುಣ್ಯ ಸಂಪಾದಿಸಬಹುದು ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಆನ್‌ಲೈನ್‌ನಲ್ಲಿ 500 ರೂಪಾಯಿ ಪೇಮೆಂಟ್ ಮಾಡಿ ಅವರಿಗೆ ಸ್ಕೀನ್ ಶಾಟ್ ಕಳುಹಿಸಿ ನಿಮ್ಮ ಫೋಟೋ ಹಾಕಿದರೆ ಮನೆಗೆ ನಿಮ್ಮ ಫೋಟೋ ಬರಲಿದೆ. ಹಾಗೆ ಫೋಟೋ ಜೊತೆಗೆ ಪುಣ್ಯವೂ ನೀವು ಕುಳಿತಲ್ಲಿಯೇ ಬರಲಿದೆ.
ಈ ಪೋಸ್ಟ್ ನೋಡಿದ ಮಂದಿ ಅಚ್ಚರಿಗೆ ಒಳಗಾಗಿದ್ದಾರೆ. ಈ ಜಾಹಿರಾತು ನೀಡಿದ್ದು ಯಾರು? ಅವರ ಆಲೋಚನೆಗೆ ಸರಿ ಎನ್ನಬೇಕೋ ಅಥವಾ ಇದೊಂದು ವ್ಯಾಪಾರ ಎನ್ನಬೇಕೋ ಎಂದು ತಿಳಿಯದೆ ಬಳಕೆದಾರರು ಕೂಡ ಗೊಂದಲಕ್ಕೆ ಸಿಲುಕಿದ್ದಾರೆ. ಮತ್ತೆ ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಮನೆಯಲ್ಲಿ ಕುಳಿತಲ್ಲೇ ಪುಣ್ಯ ಸಂಪಾದಿಸುವ ಈ ಮಾರ್ಗವನ್ನ ಕಂಡು ಅಚ್ಚರಿ ಹೊರಹಾಕಿದ್ದಾರೆ.
ತ್ರಿವೇಣಿ ಸಂಗಮಕ್ಕೆ ಬಂದು ಅಲ್ಲಿ ಸ್ನಾನ ಮಾಡಿ ವಾಪಾಸು ತೆರಳಲು ನಿಮಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತೆ. ಆದ್ರೆ ಇಲ್ಲಿ ಬರಿ 500 ರೂಪಾಯಿಗೆ ಸುಲಭವಾಗಿ ಮನೆಯಲ್ಲೇ ಕುಳಿತು ಪುಣ್ಯ ಪಡೆಯಬಹುದು ಎಂದು ಹೇಳಲಾಗಿದೆ. ಇದೊಂದು ಡಿಜಿಟಲ್ ಇಂಡಿಯಾಗೆ ಸಾಕ್ಷಿ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈವರೆಗೆ 20 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇನ್ನು ಇದರಲ್ಲೇ ಒಂದಿಷ್ಟು ಮಂದಿ ಈ ಫೋಟೋ ಕಾಪಿ ತರಿಸಿಕೊಂಡಿರಬಹುದು.



Click it and Unblock the Notifications
