Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಮರೆಯಾಗಲಿವೆ ದಶಕಗಳ ಕಾಲ ಶತ್ರುಗಳ ಕಾಡಿದ್ದ ಮಿಗ್-21 ಜೆಟ್: ಆ ಜಾಗಕ್ಕೆ ಫೈಟರ್ ಎಂಟ್ರಿ!
ಭಾರತೀಯ ಆರ್ಮಿಯು ವಿಶ್ವದಲ್ಲೇ 2ನೇ ಅತೀ ದೊಡ್ಡ ಸೇನೆಯಾಗಿದೆ. ಹಾಗೆ ಅದರಲ್ಲಿ ಹಲವು ವಿಭಾಗಗಳಿವೆ. ಇನ್ನು ಆಗಸದಲ್ಲಿ ತಮ್ಮ ಬಲ ಪ್ರದರ್ಶನ ಮಾಡುವಂತಹ ವಾಯುಸೇನೆ ಭಾರತೀಯ ಸೇನೆಯ ಬೆನ್ನೆಲುಬಾಗಿದೆ. ಹತ್ತು ಹಲವು ಯುದ್ದಾಂತಂಕಗಳು, ಕಾರ್ಯಾಚರಣೆಗಳಲ್ಲಿ ವಾಯುಸೇನೆಯ ಕೊಡುಗೆ ಅಪಾರವಾಗಿದೆ. ಹಾಗೆ ವಾಯುಸೇನೆಯಲ್ಲಿನ ಒಂದೊಂದು ಯುದ್ಧ ವಿಮಾನಗಳು ಕೂಡ ದೇಶದ ಸಂಪತ್ತಾಗಿದೆ.
ಈಗ ದಶಕಗಳ ಸೇವೆ ಸಲ್ಲಿಸಿದ್ದ ಭಾರತೀಯ ಯುದ್ದ ವಿಮಾನ ಮಿಗ್-21 ನಿವೃತ್ತಿಗೆ ಮುಂದಾಗಿದೆ. ದಶಕಗಳಿಂದ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ ಮಿಗ್ 21 ಫೈಟರ್ ಜೆಟ್ ಈ ತಿಂಗಳ ಅಂತ್ಯದಲ್ಲಿ ವಿದಾಯ ಹೇಳಲಿವೆ. ಈ ಬೀಳ್ಕೊಡುಗೆಗೆ ಅನೌಪಚಾರಿಕ ಸಮಾರಂಭ ಏರ್ಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಮಿಗ್ 21 ವಿಮಾನಗಳಿಗೆ ಈ ಮೊದಲೇ ನಿವೃತ್ತಿ ನೀಡಲು ಮುಂದಾಗಲಾಗಿತ್ತು. ಆದ್ರೆ ಈ ಜೆಟ್‌ಗಳ ಬದಲಿಗೆ ತೇಜಸ್ ಎಂಕೆ1ಎ ವಿಮಾನಗಳನ್ನು ಸೇನೆಗೆ ಸೇರಿಸಲು ಇಚ್ಛಿಸಲಾಗಿತ್ತು. ಆದ್ರೆ ಈ ಯುದ್ಧ ವಿಮಾನಗಳ ವಿತರಣೆಯಲ್ಲಿ ತಡವಾದ ಹಿನ್ನಲೆಯಲ್ಲಿ ಮಿಗ್ 21 ಫೈಟರ್ ಜೆಟ್ ವಿಮಾನಗಳ ನಿವೃತ್ತಿ ತಡವಾಗಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
2019 ರ ಬಾಲಕೋಟ್ ವೈಮಾನಿಕ ದಾಳಿಯ ಸಮಯದಲ್ಲಿ, ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ MiG-21 ಬೈಸನ್‌ನಲ್ಲಿ ಹಾರಾಟ ನಡೆಸುವಾಗ ಪಾಕ್ ವಾಯು ಪ್ರದೇಶದಲ್ಲಿ ಸಿಲುಕಿದ್ದರು. ಹಾಗೆ ತರಬೇತಿ ನಿರತ ಮಿಗ್ 21 ಫೈಟರ್ ಜೆಟ್ ಪತನವಾಗಿದ್ದು ಕೂಡ ನಾವಿಲ್ಲಿ ನೆನೆಯಬಹುದು. ಹಾಗೆ ಈಗ ಈ ಮಿಗ್ 21 ಬೈಸನ್‌ನ ಹೊಸ ರೂಪಾಂತರ ಮಾತ್ರವೇ ಸೇನೆಯಲ್ಲಿದೆ.
ಕೊನೆಯ ವಿಮಾನವು ಪ್ಯಾಂಥರ್ಸ್ ಎಂದೂ ಕರೆಯಲ್ಪಡುವ 23 ಸ್ಕ್ವಾಡ್ರನ್‌ನ ಭಾಗವಾಗಿದ್ದು, ಸೆಪ್ಟೆಂಬರ್ 19 ರಂದು ಚಂಡೀಗಢ ವಾಯುನೆಲೆಯಲ್ಲಿ ಯೋಜಿಸಲಾದ ಸಮಾರಂಭದಲ್ಲಿ ಅಂತಿಮ ವಿದಾಯಕ್ಕೆ ಸಿದ್ದತೆ ನಡೆಸಲಾಗಿದೆ. 1960 ರ ದಶಕದ ನಂತರ ವಾಯುಪಡೆ ಹೊಂದಿರುವ ಅತ್ಯಂತ ಕಡಿಮೆ ಯುದ್ಧ ಸಾಮರ್ಥ್ಯ ಇದಾಗಿದೆ.
1963ರಲ್ಲಿ ಈ ಮಿಗ್ 21 ವಿಮಾನವು ವಾಯುಸೇನೆಗೆ ಸೇರ್ಪಡೆಯಾಗಿತ್ತು. ಸುಮಾರು 62 ವರ್ಷ ಭಾರತೀಯ ಸೇನೆಯ ಸೇವೆಯಲ್ಲಿತ್ತು. 1965 ರ ಪಾಕಿಸ್ತಾನ ವಿರುದ್ಧದ ಯುದ್ಧ, 1971 ರಲ್ಲಿ ಬಾಂಗ್ಲಾದೇಶದ ವಿಮೋಚನೆ, 1999 ರ ಕಾರ್ಗಿಲ್ ಕಾರ್ಯಾಚರಣೆಗಳು ಮತ್ತು 2019 ರಲ್ಲಿ ಬಾಲಕೋಟ್ ದಾಳಿಗಳಲ್ಲಿ ಈ ಫೈಟರ್ ಜೆಟ್‌ಗಳು ಭಾಗಿಯಾಗಿವೆ. ಹಾಗೆ ಆಪರೇಷನ್ ಸಿಂಧೂರ್ ಕಾರ್ಯಚರಣೆಯಲ್ಲೂ ಕೂಡ ಮಿಗ್ 21 ವಿಮಾನಗಳು ಸಿದ್ಧತೆಯಲ್ಲಿದ್ದವು.
ವಾಯುಪಡೆಯಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ದಾಖಲೆಯನ್ನು ಹೊಂದುವುದರ ಜೊತೆಗೆ MiG 21 ಫ್ಲೀಟ್ ಭಾರತದಿಂದ ನಿರ್ವಹಿಸಲ್ಪಟ್ಟ ಅತಿದೊಡ್ಡ ವಿಮಾನವಾಗಿದೆ. ಸುಮಾರು 850 ವಿಮಾನಗಳ ಪೈಕಿ 600 ವಿಮಾನಗಳು ಭಾರತದ ನೆಲೆದಲ್ಲೇ ತಯಾರಿಸಲ್ಪಟ್ಟಿವೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ಈ ವಿಮಾನಗಳು ತಯಾರಾದವು.
ಈ ಮಿಗ್ 21 ಫೈಟರ್ ಜೆಟ್‌ಗಳು ಬಹಳ ಹಿಂದಿನಿಂದಲೂ ನಿವೃತ್ತಿಯೊಂದಿಗೆ ಅಂಟಿಕೊಂಡಿವೆ. ಅವುಗಳು ಹಾರಾಟಕ್ಕೆ ಯೋಗ್ಯವಾಗಿ ಉಳಿದಿಲ್ಲ ಎಂದು ಹೇಳುತ್ತಲೇ ಬರಲಾಗಿತ್ತು. ಅದ್ರಲ್ಲೂ ಅತ್ಯಾಧುನಿಕ ರಾಫೆಲ್ ಜೆಟ್ ಹಾಗೆ ಹಲವು ಫೈಟರ್ ಜೆಟ್‌ಗಳ ಮುಂದೆ ಈ ಮಿಗ್ 21 ಸಾಮರ್ಥ್ಯ ಕಡಿಮೆಯಾಗಿತ್ತು. ಆದ್ರೆ ಆ ಸಮಯದಲ್ಲಿ ನಿವೃತ್ತಿ ನೀಡಿದರೆ ಸ್ಕ್ವಾಡ್ರನ್‌ಗಳಲ್ಲಿ ಸಂಖ್ಯೆ ಕ್ಷೀಣಿಸುತ್ತಿತ್ತು. ಹೀಗಾಗಿ ತಡವಾಗಿ ಈ ವಿಮಾಗಳಿಗೆ ಅಂತಿಮ ವಿದಾಯ ಹೇಳಲಾಗುತ್ತಿದೆ.
ಸದ್ಯ ತೇಜಸ್ Mk1A ಫೈಟರ್ ಜೆಟ್ ವಾಯುಸೇನೆಗೆ ಸೇರ್ಪಡೆಯಾಗುತ್ತಿವೆ. ಹಾಗೆ ಹಲವು ದೇಶೀಯ ಯುದ್ಧ ವಿಮಾನಗಳು ಸೇನೆಗೆ ಸೇರ್ಪಡೆಯಾಗುವುದು ಬಾಕಿ ಉಳಿದಿದೆ.



Click it and Unblock the Notifications
