Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮೈಕ್ರೋಸಾಫ್ಟ್ ಸ್ಥಗಿತದಿಂದ ವಿಶ್ವದಲ್ಲಿ ತಲ್ಲಣ: ಒಂದೇ ದಿನಕ್ಕೆ ಸಾವಿರಾರು ಕೋಟಿ ನಷ್ಟ..!!
ಸಾಫ್ಟ್‌ವೇರ್ ಲೋಕದ ದಿಗ್ಗಜ ಸಂಸ್ಥೆ ಮೈಕ್ರೋಸಾಫ್ಟ್‌ಗೆ ತಾಂತ್ರಿಕ ದೋಷ ಎದುರಾಗಿದ್ದು, ವಿಶ್ವದಾದ್ಯಂತ ಮೈಕ್ರೋಸಾಫ್ಟ್ ಬಳಕೆದಾರರು ಅಡಚಣೆ ಎದುರಿಸಿದ್ದಾರೆ. ವಿಂಡೋಸ್ ಬಳಕೆದಾರರು ಬ್ಲೂ ಸ್ಕ್ರೀನ್ ಆಫ್ ಡೆತ್ (BSOD) ದೋಷವನ್ನು ಎದುರಿಸಿದ್ದು, ಇದು ವಿಮಾನಯಾನ, ಬ್ಯಾಂಕಿಂಗ್, ಆಸ್ಪತ್ರೆ, ಕಂಪನಿಗಳು ಸೇರಿ ಸರ್ಕಾರಿ ಕಚೇರಿಗಳು ಸಹ ಸಮಸ್ಯೆ ಎದುರಿಸಿವೆ. ಕ್ರೌಡ್‌ಸ್ಟ್ರೈಕ್ (Crowdstrike) ಅಪ್‌ಡೇಟ್‌ನಿಂದ ಈ ಸಮಸ್ಯೆ ಉಂಟಾಗುತ್ತಿದೆ ಎಂದು ಮೈಕ್ರೋಸಾಫ್ಟ್ ಮಾಹಿತಿ ನೀಡಿದೆ.
ಈ ತಾಂತ್ರಿಕ ಸಮಸ್ಯೆಯಿಂದಾಗಿ ಜಗತ್ತಿನಾದ್ಯಂತ ಸಾಕಷ್ಟು ಸಮಸ್ಯೆ ಉಂಟಾಗಿದೆ. ಬಹುತೇಕ ಎಲ್ಲರು ತಮ್ಮ ಕಂಪನಿಗಳಲ್ಲಿ ಈ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಕಂಪ್ಯೂಟರ್, ಲ್ಯಾಪ್‌ಟಾಪ್ ಹೊಂದಿರುತ್ತಾರೆ. ಮಾರುಕಟ್ಟೆಯಲ್ಲಿ ಈ ಕಂಪನಿಯದ್ದೇ ಪಾರುಪತ್ಯವಾಗಿದೆ. ಹೀಗಿರುವಾಗ ಎಲ್ಲಾ ರಂಗಕ್ಕೂ ಸಮಸ್ಯೆಯಾಗಿ ಇದು ಪರಿಣಮಿಸಿದೆ.

ಕಂಪ್ಯೂಟರ್ ಆನ್ ಮಾಡಿದ ತಕ್ಷಣ, ಬ್ಲೂ ಸ್ಕ್ರೀನ್ ಬರುವುದಲ್ಲದೆ ಲಾಗ್ ಇನ್ ಮಾಡಲಾಗದೆ ಬಳಕೆದಾರರು ಪರದಾಡಿದ್ದಾರೆ. ಇದು ಸ್ಟಾಪ್ ಕೋಡ್ ದೋಷದಿಂದ ಉಂಟಾದ ಸಮಸ್ಯೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಸಮಸ್ಯೆ ಕಾಣಿಸಿಕೊಂಡ ಸಮಯದಿಂದಲೂ ಇಂಡಿಗೋ, ಸ್ಪೈಸ್‌ಜೆಟ್ ಮತ್ತು ಆಕಾಶ ಏರ್ - ಬುಕಿಂಗ್, ಚೆಕ್-ಇನ್ ಮತ್ತು ಫ್ಲೈಟ್‌ಗಳ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಭಾರತ ಮಾತ್ರವಲ್ಲ ಹಲವು ಕಡೆಗಳಲ್ಲಿ ವಿಮಾನ ಪ್ರಯಾಣಿಕರು ಸಮಸ್ಯೆಗೆ ಒಳಗಾಗಿದ್ದಾರೆ.
ಕರಗಿತು ಮೈಕ್ರೋಸಾಫ್ಟ್ ಸಂಪತ್ತು
ಐಟಿ ದೈತ್ಯ ಸಂಸ್ಥೆಯಾಗಿರುವ ಮೈಕ್ರೋಸಾಫ್ಟ್‌ನ ಈ ತಾಂತ್ರಿಕ ಸಮಸ್ಯೆಯಿಂದಾಗಿ ಶೇರು ಮಾರುಕಟ್ಟೆಯಲ್ಲೂ ತಲ್ಲಣ ಉಂಟಾಗಿದೆ. ವಿಶ್ವದ ಬೃಹತ್ ಸಾಫ್ಟ್‌ವೇರ್ ಕಂಪನಿ ಒಂದೇ ದಿನದಲ್ಲಿ ಸಾವಿರಾರು ಕೋಟಿ ರೂಪಾಯಿ ಕಳೆದುಕೊಂಡಿದೆ. ಮೈಕ್ರೋಸಾಫ್ಟ್‌ನ ಶೇರು ಮೌಲ್ಯ ಶೇ..71ರಷ್ಟು ಕುಸಿತ ಕಂಡಿದೆ. ಅದರ್ಥ ಕಂಪನಿಯೂ ಸುಮಾರು 23 ಶತಕೋಟಿ ಡಾಲರ್ ಮೌಲ್ಯದ ಸಂಪತ್ತು ಕಳೆದುಕೊಂಡಿದೆ. ನಿನ್ನೆ $443.52 ಶೇರು ಮೌಲ್ಯ ಹೊಂದಿದ್ದ ಮೈಕ್ರೋಸಾಫ್ಟ್ ಇಂದು $440.37ಕ್ಕೆ ಕುಸಿತ ಕಂಡಿದೆ.
ಮೈಕ್ರೋಸಾಫ್ಟ್ ಕಂಪನಿ ಕುರಿತ ಅಚ್ಚರಿಯ ಮಾಹಿತಿಗಳು
ಈ ಕಂಪನಿಗೆ ಮೈಕ್ರೋಸಾಫ್ಟ್ ಎಂದು ನಾಮಕರಣ ಮಾಡಿದ್ದು, ಸಂಸ್ಥೆಯ ಸಹ ಸಂಸ್ಥಾಪಕ ಪಾಲ್ ಅಲೆನ್, ಮೈಕ್ರೋ ಕಂಪ್ಯೂಟರ್ ಹಾಗೂ ಸಾಫ್ಟ್‌ವೇರ್‌ನಿಂದ ಹೆಸರನ್ನು ತೆಗೆದು ಮೈಕ್ರೋಸಾಫ್ಟ್ ಎಂದು ನಾಮಕರಣ ಮಾಡಲಾಗಿತ್ತು, ಅಂದಿನಿಂದ ಕಂಪನಿ ಹೆಸರು ಬದಲಾವಣೆ ಮಾಡಿಲ್ಲ.
ಸಂಗೀತಗಾರ ಬ್ರಿಯಾನ್ ಎನೋ ಮೈಕ್ರೋಸಾಫ್ಟ್ 95 ಜಿಂಗಲ್ ಸೃಷ್ಟಿಕರ್ತ
ನೀವು ಹಳೆಯ ಕಂಪ್ಯೂಟರ್ ಆನ ಮಾಡಿದ ತಕ್ಷಣವೇ ಅದರಿಂದ ಒಂದು ಶಬ್ದ ಬರುತ್ತಿತ್ತು, ಅದು ಐಕಾನಿಕ್ ಸೌಂಡ್ ಆಗಿ ಮಾರ್ಪಟ್ಟಿತ್ತು. ಈಗಲ ವಿಂಡೋಸ್ ಬಳಕೆದಾರರು ಈ ಶಬ್ದಗಳು ಕೇಳುತ್ತಾರೆ. ಇದನ್ನು ಡೇವಿಡ್ ಬೋವೀ ಮತ್ತು ಕೋಲ್ಡ್‌ಪ್ಲೇಯಂತಹ ಸಂಗೀತ ಕಾರ್ಯಗಳೊಂದಿಗಿನ ಸಹಯೋಗಕ್ಕಾಗಿ ಹೆಸರುವಾಸಿಯಾದ ಸಮೃದ್ಧ ಸಂಗೀತಗಾರ ಬ್ರಿಯಾನ್ ಎನೋ ಸೃಷ್ಟಿಸಿದ್ದಾರೆ.
ದಿವಾಳಿಯಾಗುತ್ತಿದ್ದ ಆಪಲ್ ಸಂಸ್ಥೆಗೆ ನೆರವಾಗಿದ್ದೇ ಮೈಕ್ರೋಸಾಫ್ಟ್
ಆಪಲ್ 1997 ರಲ್ಲಿ ದಿವಾಳಿತನದ ಅಂಚಿನಲ್ಲಿದ್ದಾಗ, ಮೈಕ್ರೋಸಾಫ್ಟ್ ಈ ಆಪಲ್ ಕಂಪನಿಯಲ್ಲಿ ಬರೋಬ್ಬರಿ $150 ಮಿಲಿಯನ್ ಹೂಡಿಕೆ ಮಾಡಿತು. ಇದು ಆಪಲ್ ಸಂಸ್ಥೆ ಬಾಗಿಲು ಹಾಕುವುದರಿಂದ ಕಾಪಾಡಿತು.
ಅತೀ ಹೆಚ್ಚು ಪೇಟೆಂಟ್ ಹೊಂದಿರುವ ಸಂಸ್ಥೆ
ಮೈಕ್ರೋಸಾಫ್ಟ್ 70,000 ಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಹೊಂದಿದೆ, ಅದರಲ್ಲಿ 50,000 ಕ್ಕಿಂತ ಹೆಚ್ಚು ಪ್ರಸ್ತುತ ಸಕ್ರಿಯವಾಗಿದೆ. ಪ್ರತಿ ವರ್ಷ ಸಾವಿರಾರು ಪೇಟೆಂಟ್‌ಗಳ ಸಲ್ಲಿಸುತ್ತದೆ. ಹೀಗಾಗಿ ವಿಶ್ವದಲ್ಲಿಯೇ ಅತೀ ಹೆಚ್ಚು ಪೇಟೆಂಟ್ ಹೊಂದಿರುವ ಸಂಸ್ಥೆ ಇದಾಗಿದೆ. ಈಗಳೂ ಮೈಕ್ರೋಸಾಫ್ಟ್ ದೊಡ್ಡ ಸಾಫ್ಟ್‌ವೇರ್ ಸಂಸ್ಥೆಯಾಗಿದ್ದು, ಮಾರುಕಟ್ಟೆಯಲ್ಲಿ ಬಲಾಢ್ಯವಾಗಿ ಬೆಳೆದು ನಿಂತಿದೆ.



Click it and Unblock the Notifications
