Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಇನ್‌ಸ್ಟಾಗ್ರಾಮ್‌ನಿಂದ ಬ್ಯೂಟಿ ಫಿಲ್ಟರ್ ತೆರವು..! ಏಕೆ ಗೊತ್ತಾ?
ನಾವು ನೀವು ಇನ್ಸ್‌ಸ್ಟಾಗ್ರಾಮ್ ಬಳಸದೆ ಇರುವ ದಿನವೇ ಇಲ್ಲ ಎನ್ನಬಹುದು, ದಿನಕ್ಕೆ ಒಮ್ಮೆಯಾದರು ಇನ್ಸ್‌ಸ್ಟಾದಲ್ಲಿ ರೀಲ್ಸ್ ನೋಡಿಯೇ ನೋಡುತ್ತೇವೆ. ಒಮ್ಮೆ ಇನ್‌ಸ್ಟಾಗ್ರಾಮ್ ಓಪನ್ ಮಾಡಿದರೆ ಗಂಟೆಗಳೇ ಉರುಳಿ ಹೋಗಿರುತ್ತವೆ. ಏಕೆಂದರೆ ರೀಲ್ಸ್ ವಿಡಿಯೋಗಳು ನಮ್ಮ ಸಮಯವನ್ನೇ ತಿಂದು ಹಾಕಿರುತ್ತವೆ.
ಇನ್ನು ರೀಲ್ಸ್ ವಿಡಿಯೋ ಮಾಡುವಾಗ ಆಪ್ ಹಲವು ರೀತಿಯ ವೈಶಿಷ್ಟ್ಯಗಳನ್ನು ಬಳಸಲು ಬಳಕೆದಾರರಿಗೆ ಅನುವು ಮಾಡಿ ಕೊಡುತ್ತದೆ. ಅದರಲ್ಲಿ ಹಾಡುಗಳು, ಫಿಲ್ಟರ್‌ಗಳು, ಸ್ಟಿಕರ್‌ಗಳು ಹೀಗೆ ಹಲವು ರೀತಿಯ ಅಂಶ ನಮ್ಮ ಕಣ್ಣ ಮುಂದೆ ಬರುತ್ತದೆ. ಇನ್ನು ಯುವತಿಯರಂತು ಮೆಕ್ ಅಪ್ ಇಲ್ಲದೆ ಈ ರೀಲ್ಸ್ ಮಾಡುವುದೇ ಇಲ್ಲ. ಹಾಗೆ ಫಿಲ್ಟರ್ ಇಲ್ಲದೆಯೂ ಅವರು ಕ್ಯಾಮರಾ ಮುಂದೆ ನಿಲ್ಲುವುದು ಅನುಮಾನ.

ಅದರಲ್ಲೂ ಇನ್‌ಸ್ಟಾದಲ್ಲಿರುವ ಫಿಲ್ಟರ್‌ಗಳನ್ನು ಬಳಸಿದರೆ ಮುಖ ಮತ್ತಷ್ಟು ಹೊಳಪಿನಿಂದ ಕೂಡಿರುವುದಲ್ಲದೆ ಸುಂದರವಾಗಿ, ಕಲೆ ರಹಿತವಾಗಿ ಕಾಣುವುದನ್ನು ನಾವು ನೋಡಿದ್ದೇವೆ. ಹೀಗಾಗಿ ಯುವತಿಯರು ಹೆಚ್ಚಾಗಿ ಫಿಲ್ಟರ್ ಬಳಸಿಯೇ ವಿಡಿಯೋ ಮಾಡುತ್ತಾರೆ. ಆದ್ರೆ ಈಗ ಇನ್ಸ್‌ಸ್ಟಾಗ್ರಾಮ್ ಈ ಬ್ಯೂಟಿ ಫಿಲ್ಟರ್ ಅನ್ನು ತೆಗೆದು ಹಾಕುವುದಾಗಿ ತಿಳಿಸಿದೆ.
ಹೌದು ಅಚ್ಚರಿಯ ಬೆಳವಣಿಗೆಯಲ್ಲಿ ಇನ್‌ಸ್ಟಾಗ್ರಾಮ್ ತನ್ನ ಬ್ಯೂಟಿ ಫಿಲ್ಟರ್ ತೆಗೆಯುವುದಾಗಿ ತಿಳಿಸಿದೆ. ಜನವರಿ 2025 ರಿಂದ Instagram, WhatsApp ಮತ್ತು Facebook ಸೇರಿದಂತೆ ಮೂರನೇ ವ್ಯಕ್ತಿಯ ಆಗ್ಮೆಂಟೆಡ್ ರಿಯಾಲಿಟಿ (AR) ಫಿಲ್ಟರ್‌ಗಳು ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್ನು ಮುಂದೆ ಲಭ್ಯವಿರುವುದಿಲ್ಲ ಎಂದು ಮೆಟಾ ಘೋಷಿಸಿದೆ. ಈ ನಿರ್ಧಾರವು ಎರಡು ಮಿಲಿಯನ್ ಬಳಕೆದಾರ-ರಚಿತ ಫಿಲ್ಟರ್‌ಗಳ ಮೇಲೆ ಪರಿಣಾಮ ಬೀರುತ್ತದೆ.
ಈ ಬ್ಯೂಟಿ ಫಿಲ್ಟರ್ 10x ಬ್ಯೂಟಿ ಹೆಚ್ಚಿಸುವ ಆಪ್ ಆಗಿದ್ದವು, ಇದರಲ್ಲಿ ಕೆಲವೊಂದು ಎಐ ಮೂಲಕ ಕಾರ್ಯ ನಿರ್ವಹಿಸುತ್ತಿದ್ದವು, ಆದರೆ ಇದು ಯುವ ಸಮುದಾಯದ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿರುವುದನ್ನು ಮನಗಂಡಿದ್ದು, ಮಾನಸಿಕ ಆರೋಗ್ಯದ ದೃಷ್ಟಿಯಿಂದಾಗಿ ಈ ಕ್ರಮ ತೆಗೆದುಕೊಳ್ಳುವುದಾಗಿ ಮೆಟಾ ತಿಳಿಸಿದೆ.
ಆದ್ರೆ ಮೆಟಾದಿಂದಲೇ ನಿರ್ಮಿತವಾಗಿರುವ ಇನ್‌ಸ್ಟಾಗ್ರಾಮ್‌ನಲ್ಲಿ ಇನ್‌ಬಿಲ್ಟ್ ಆಗಿರುವ ಬ್ಯೂಟಿ ಫಿಲ್ಟರ್‌ಗಳಲನ್ನು ಬಳಕೆದಾರರು ಬಳಸಬಹುದು ಎಂದಿದೆ. ಇವು ಯಾವುದೇ ಥರ್ಡ್ ಪಾರ್ಟಿ ಡೆವಲೋಪ್ ಮಾಡಿರುವ ಫಿಲ್ಟರ್‌ಗಳಲ್ಲ, ಮೆಟಾ ಸಂಸ್ಥೆಯಿಂದಲೆ ಹೊರಬಂದಿರುವ ಫಿಲ್ಟರ್‌ಗಳಾಗಿವೆ. ಇವುಗಳು ಮಾತ್ರ ಇನ್‌ಸ್ಟಾಗ್ರಾಮ್‌ನಲ್ಲಿ ಬಳಸಬಹುದು.
ಇನ್‌ಸ್ಟಾಗ್ರಾಮ್‌ನಲ್ಲಿರುವ ಸುಮಾರು ಶೇ.87ರಷ್ಟು ಫಿಲ್ಟರ್‌ಗಳು ಮುಖದ ಬಹುತೇಕ ಅಂಗವನ್ನು ಬದಲಾಯಿಸುತ್ತವೆ. ಶೇ. 90ರಷ್ಟು ಫಿಲ್ಟರ್‌ಗಳು ತುಟಿಗಳನ್ನು ದೊಡ್ಡದು ಮಾಡುವುದು, ಕಣ್ಣುಗಳ ಚಿಕ್ಕದು ಮಾಡುವುದು, ಗಲ್ಲವನ್ನು ತೆಳ್ಳಗೆ ಮಾಡುವ ಕಾರ್ಯ ಮಾಡುತ್ತವೆ ಎಂದಿದೆ. ಇದು ಯುವ ಸಮುದಾಯದಲ್ಲಿ ತಮ್ಮ ಐಡೆಂಟಿಟಿ ಕ್ರೈಸಿಸ್‌ನ ಭಾಗವಾಗಿ ಈಗ ಮಾರ್ಪಟ್ಟಿದೆ. ಹೀಗಾಗಿ ಬಹಳ ಸಮಸ್ಯೆ ಉಂಟುಮಾಡುವ ಮುನ್ನ ಮೆಟಾ ಎಚ್ಚೆತ್ತಿದೆ.
ಈ ಥರ್ಡ್ ಪಾರ್ಟಿ ಫಿಲ್ಟರ್‌ಗಳು ಎಐ ಮೂಲಕ ನಿಮ್ಮ ಇಡೀ ಮುಖವನ್ನು ಮತ್ತೊಬ್ಬರ ಮುಖದಂತೆ ತೋರಿಸುವ ಕೆಲಸವನ್ನು ಮಾಡುತ್ತವೆ. ಹೀಗಾಗಿ ಇದೊಂದು ಅಪಾಯಕಾರಿ ಮಾರ್ಗ ಎಂಬುದನ್ನು ಅರ್ಥೈಸಿಕೊಳ್ಳಲಾಗಿದೆ. ಹಾಗೆ ಮುಂದಿನ ಪೀಳಿಗೆಯೂ ಇಂತಹ ಫಿಲ್ಟರ್‌ಗಳಿಂದ ದೂರವಿರುವಂತೆ ಮಾಡಲು ಆಪ್‌ನಲ್ಲಿ 2025ರಿಂದ ಥರ್ಡ್ ಪಾರ್ಟಿ ಫಿಲ್ಟರ್‌ಗಳ ಬ್ಯಾನ್ ಮಾಡಲಾಗಿದೆ.



Click it and Unblock the Notifications
