Latest Updates
-
ಬಿಸಿಗಾಳಿ ಕಾಟ: ಮದುವೆ ಡೇಟಿಂಗ್ ಪ್ಲಾನ್ ಹಾಳಾಗದಂತೆ ತಡೆಯುವುದು ಹೇಗೆ? -
ಬಾಲ್ಕನಿ ಅಲಂಕಾರ: ಹಬ್ಬದ ಸಂಭ್ರಮಕ್ಕೆ 10 ನಿಮಿಷದ ಮ್ಯಾಜಿಕ್ -
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ
ಶ್ರೀಮಂತ ಉದ್ಯಮಿ ಅಂಬಾನಿ ಪುತ್ರನೊಂದಿಗೆ ಮೆಸ್ಸಿ; ಫುಟ್‌ಬಾಲ್ ದಿಗ್ಗಜನ ಆಸ್ತಿ ಎಷ್ಟು ಗೊತ್ತಾ?
ಫುಟ್‌ಬಾಲ್ ಲೋಕದ ದಿಗ್ಗಜರ ಸಾಲನಲ್ಲಿ ಲಿಯೋನಲ್ ಮೆಸ್ಸಿ ಅಗ್ರಗಣ್ಯ ಆಟಗಾರ. ಅರ್ಜೇಂಟೀನಾ ತಂಡದ ಪರವಾಗಿ ಆಡುವ ಅವರು ವಿಶ್ವದ ಅತ್ಯಂತ ಶ್ರೇಷ್ಟ ಆಟಗಾರರಲ್ಲಿ ಒಬ್ಬರು. ಸದ್ಯ ಅವರೀಗ ಭಾರತ ಪ್ರವಾಸದಲ್ಲಿರುವುದು ನಿಮಗೆಲ್ಲಾ ತಿಳಿದಿರಬಹುದು. GOAT ಪ್ರವಾಸ ಆರಂಭಿಸಿರುವ ಮೆಸ್ಸಿ ಭಾರತದ ಪ್ರಮುಖ ನಗರದಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚಿಗೆ ಕೋಲ್ಕತ್ತಾದಲ್ಲಿ ಕಾಣಿಸಿಕೊಂಡ ಅವರು ದೊಡ್ಡ ಸುದ್ದಿಯಾದರು, ಹಾಗೆ ಸ್ಟೇಡಿಯಂನಲ್ಲಿ ಸೇರಿದ್ದ ಅಭಿಮಾನಿಗಳು ಅವರು ಸರಿಯಾಗಿ ಕಾಣಿಸಿಕೊಳ್ಳಲಿಲ್ಲ ಎಂದು ಕ್ರೀಡಾಂಗಣದಲ್ಲಿ ದಾಂಧಲೆ ನಡೆಸಿದ್ದರು, ಹಾಗೆ ಅಲ್ಲಿದ್ದ ಸಾಮಗ್ರಿಗಳ ಧ್ವಂಸ ಮಾಡಿದ್ದರು. ಈ ಘಟನೆಯ ಬಳಿಕ ಮೆಸ್ಸಿ ಭಾರತದಿಂದ ಮರಳಲಿದ್ದಾರೆ ಎನ್ನಲಾಗಿತ್ತು. ಆದ್ರೆ ಬಳಿಕ ಅವರು ಹಲವು ಕಡೆಗಳಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಈಗ ಮತ್ತೊಂದಿಷ್ಟು ದಿನ ಭಾರತದಲ್ಲೇ ಇರುವ ಮುನ್ಸೂಚನೆ ನೀಡಿದ್ದಾರೆ. ಇಂದು ಅನಂತ್ ಅಂಬಾನಿ ಅವರ ಸ್ವಾಗತಕ್ಕೆ ಮುಂದಾಗಲಿದ್ದಾರೆ. ಇಂದು ಅವರು ಜಾಮ್ನಗರದಲ್ಲಿನ ವನ್ಯಜೀವಿ ರಕ್ಷಣಾ ಮತ್ತು ಮನರ್ವಸತಿ ಕೇಂದ್ರ ಆಗಿರುವ ವಂಟಾರಗೆ ಭೇಟಿ ನೀಡಲಿದ್ದಾರೆ. ಬಿಗಿ ಭದ್ರತೆಯ ನಡುವೆ ಅವರು ಗುಜರಾತ್ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲಿ ಅನಂತ್ ಅಂಬಾನಿ ಅವರೊಂದಿಗೆ ವಂಟಾರ ಭೇಟಿ ನಿಗದಿಯಾಗಿದೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ವಂಟಾರಗೆ ಭೇಟಿ ನೀಡಿದ್ದರು. ಈಗ ಲಿಯೋನಲ್ ಮೆಸ್ಸಿ ಕೂಡ ಭೇಟಿ ನೀಡುತ್ತಿರುವುದು ಗಮನ ಸೆಳೆದಿದೆ. ಅವರ ಕೋಲ್ಕತ್ತಾ ಭೇಟಿಯಲ್ಲಿ ಉಂಟಾಗಿದ್ದ ಅಡಚಣೆ ಮತ್ತೆ ಎದುರಾಗಬಾರದು ಎಂದು ಹಲವು ರೀತಿಯಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆಯಂತೆ.
ಮೆಸ್ಸಿ ಇಂದು ಜಾಮ್ನಗರದಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎಂದು ಸಹ ಹೇಳಲಾಗಿದೆ. ಇದಕ್ಕೆ ಅನಂತ್ ಅಂಬಾನಿ ಅವರೇ ಆತಿಥ್ಯ ನಿರ್ವಹಿಸಲಿದ್ದಾರೆ ಎಂದು ಸಹ ತಿಳಿದುಬಂದಿದೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ರಿಲಾಯನ್ಸ್ ಗ್ರೂಪ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ಕೂಡ ಮೆಸ್ಸಿ ಅವರನ್ನು ಭೇಟಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಶ್ರೀಮಂತ ಫುಟ್‌ಬಾಲ್ ಪಟು ಮೆಸ್ಸಿ
ಮೆಸ್ಸಿ ಫುಟ್‌ಬಾಲ್ ಲೋಕದಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ಹೆಸರಾದವರು, ಅವರಿಗೆ ಕ್ರಿಸ್ಟಿಯಾನೋ ರೊನಾಲ್ಡೋ ನೇರ ಸ್ಪರ್ಧಿ ಎನ್ನಬಹುದು. ಇಬ್ಬರ ಅಭಿಮಾನಿಗಳು ಜಾಲತಾಣಗಳಲ್ಲಿ ಒಬ್ಬರ ಮೇಲೊಬ್ಬರು ಟೀಕೆ ಮಾಡುವುದು ಸಾಮಾನ್ಯ. ಹಾಗೆ ಮೆಸ್ಸಿ ಕೂಡ ಶ್ರೀಮಂತ ಕ್ರೀಡಾಪಟು. 2025ರ ಪ್ರಕಾರ ಮೆಸ್ಸಿ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 850 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಭಾರತೀಯ ರೂಪಾಯಿಗೆ ಹೋಲಿಸಿದರೆ 7,055 ಕೋಟಿ ರೂಪಾಯಿ ಆಗಬಹುದು.
ಮೆಸ್ಸಿ ಪ್ರತಿ ವರ್ಷ ಸರಿಸುಮಾರು 130-135 ಮಿಲಿಯನ್ ಡಾಲರ್ ಗಳಿಸುತ್ತಾರೆ. ಕ್ರೀಡೆಯಿಂದ ಸುಮಾರು 60 ಮಿಲಿಯನ್ ಡಾಲರ್ ಹಣ ಹರಿದು ಬರುತ್ತದೆ. ಹಾಗೆ ಕ್ಲಬ್ ಮಾಲಿಕತ್ವದಲ್ಲಿ ಅವರು ಶೇ.10ರಷ್ಟು ಪಾಲುದಾರಿಕೆ ಕೂಡ ಹೊಂದಿದ್ದಾರೆ, ಇನ್ನುಳಿದಂತೆ ಬ್ರಾಂಡಿಂಗ್, ಜಾಹಿರಾತು, ಉದ್ಯಮದಿಂದ ಸಹ ಹಣ ಗಳಿಸುತ್ತಾರೆ ಎಂದು ಹೇಳಲಾಗಿದೆ. ಅದ್ರಲ್ಲೂ ಅಂತಾರಾಷ್ಟ್ರೀಯ ಬ್ರಾಂಡ್ ಅಡಿಡಾಸ್ ಜೀವಿತಾವಧಿ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗೆ ಪೆಪ್ಸಿ, ಬಡ್ವೈಸರ್, ಗ್ಯಾಟೋರೇಡ್, ಮಾಸ್ಟರ್‌ಕಾರ್ಡ್ ಸೇರಿ ಪ್ರಮುಖ ಬ್ರಾಂಡ್‌ಗಳಿಗೆ ಅವರೆ ಅಂಬಾಸಿಡರ್ ಆಗಿದ್ದಾರೆ.
ಹಾಗೆ ಸೋಶಿಯಲ್ ಮೀಡಿಯಾದಿಂದಲೂ ಅವರು ಕೋಟಿ ಕೋಟಿ ರೂಪಾಯಿ ಗಳಿಸುತ್ತಾರೆ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 510 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಹೀಗಾಗಿ ಪ್ರತಿ ಪೋಸ್ಟ್‌ಗೆ ಅವರು 2.7 ಮಿಲಿಯನ್ ಡಾಲರ್ ಪಡೆಯುತ್ತಾರೆ. ಹಾಗೆ ಅವರ ಐಷಾರಾಮಿ ಜೀವನದಲ್ಲಿ ಹಲವು ಮನೆಗಳು, ಕಾರುಗಳ ದೊಡ್ಡ ಕಲೆಕ್ಷನ್ ಅವರ ಬಳಿ ಇದೆ.



Click it and Unblock the Notifications











