ಅಕ್ಟೋಬರ್ 2ಕ್ಕೆ ಕನ್ಯಾ ರಾಶಿಯಲ್ಲಿ ಬುಧ ಮಾರ್ಗಿ: ನಿಮ್ಮ ರಾಶಿಯ ಮೇಲೆ ಇದರ ಪ್ರಭಾವ ಹೇಗಿರಲಿದೆ?

ಅಕ್ಟೋಬರ್‌ 2ರಂದು ಮಧ್ಯಾಹ್ನ 2:03 ಕ್ಕೆ ಕನ್ಯಾರಾಶಿಯಲ್ಲಿ ಬುಧ ನೇರ ಸಂಚಾರದಲ್ಲಿ ಇರಲಿದೆ. ಬುಧ ಹಿಮ್ಮುಖ ಚಲನೆಯಲ್ಲಿರುವಾಗ ನೀವು ತುಂಬಾ ತೊಂದರೆ ಅನುಭವಿಸಿದ್ದರೆ ಬುಧ ಮಾರ್ಗಿಯಾದಾಗ ನೀವು ಉತ್ತಮ ಪರಿಹಾರ ಸಿಗಲಿದೆ. ಬುಧ ಮಾರ್ಗಿಯಾದಾಗ ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಬುಧವು ಮಾರ್ಗಿಯಾಗುವುದರಿಂದ ಮೇಷ ರಾಶಿಯವರು ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಅದರಲ್ಲೂ ಬಹುಕಾಲದಿಂದ ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ಬುಧನು ಮತ್ತೊಮ್ಮೆ ಉತ್ತಮ ಫಲಿತಾಂಶವನ್ನು ನೀಡುತ್ತಾನೆ ಈ ಅವಧಿಯಲ್ಲಿ ಆರೋಗ್ಯದಲ್ಲಿ ಉತ್ತಮ ಬದಲಾವಣೆಯನ್ನು ಕಾಣಬಹುದು. ವೃತ್ತಿ ಜೀವನದ ದೃಷ್ಟಿಯಿಂದ ಕೂಡ ಈ ಸಮಯ ಅನುಕೂಲಕರವಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಈ ಅವಧಿಯಲ್ಲಿ ಉತ್ತಮವಾಗಿದೆ.
ಪರಿಹಾರ: ಹಸುಗಳಿಗೆ ಮೇವು ದಾನ ಮಾಡಿ.

Mercury turns direct in Virgo

ವೃಷಭ ರಾಶಿ
ಬುಧ ಮಾರ್ಗಿಯಾದಾಗ ನಿಮಗೆ ಅನುಕೂಲಕರವಾಗಿದೆ. ಕಳೆದ ಕೆಲವು ದಿನಗಳಿಂದ ತಮ್ಮ ಶಿಕ್ಷಣದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ನಿಮ್ಮ ಹಾಗೂ ಸಂಗಾತಿ ಇರುವ ತಪ್ಪು ಕಲ್ಪನೆ ದೂರಾಗಲಿದೆ. ಆರ್ಥಿಕ ದೃಷ್ಟಿಯಿಂದ ಈ ಸಮಯವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಅಲ್ಲದೆ, ನಿಮ್ಮ ವೃತ್ತಿಜೀವನದಲ್ಲಿ ನೀವು ಈ ಹಿಂದೆ ಮಾಡಿದ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಒಟ್ಟಿನಲ್ಲಿ ಈ ಅವಧಿ ನಿಮಗೆ ಅನುಕೂಲಕರವಾಗಿದೆ.
ಪರಿಹಾರ: ಅಗತ್ಯವಿರುವ ಮಕ್ಕಳಿಗೆ ಶಿಕ್ಷಣ ಸಾಮಗ್ರಿಗಳನ್ನು ದಾನ ಮಾಡುವುದು ನಿಮಗೆ ಪ್ರಯೋಜನಕಾರಿಯಾಗಿದೆ.

ಮಿಥುನ ರಾಶಿ
ಬುಧ ಕನ್ಯಾರಾಶಿಯಲ್ಲಿ ನೇರವಾಗಿ ಚಲಿಸಿದಾಗ ನಿಮ್ಮ ಮನೆ ಮತ್ತು ಕುಟುಂಬವನ್ನು ಮತ್ತೆ ಸಂತೋಷದಿಂದ ತುಂಬುತ್ತಾನೆ. ಯಾವುದೇ ಆಸ್ತಿ ಅಥವಾ ಯಾವುದೇ ವಾಹನವನ್ನು ಖರೀದಿಸಲು ಯೋಚಿಸುತ್ತಿದ್ದರೆ ಈ ಅವಧಿಯು ತುಂಬಾ ಅನುಕೂಲಕರವಾಗಿರುತ್ತದೆ. ನಿಮ್ಮ ಕೌಟುಂಬಿಕ ಜೀವನ ತುಂಬಾ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಹೊಸದನ್ನು ಕಲಿಯಬಹುದು, ಸಿಕ್ಕ ಅವಕಾಶವನ್ನು ಮಿಸ್ ಮಾಡಬೇಡಿ.
ಪರಿಹಾರ: ಪ್ರತಿನಿತ್ಯ ತುಳಸಿಗೆ ಪೂಜೆ ಮಾಡಿ.

ಕರ್ಕ ರಾಶಿ
ಕರ್ಕ ರಾಶಿಯವರಿಗೆ ಕನ್ಯಾದಲ್ಲಿ ಬುಧ ಮಾರ್ಗಿಯಾದಾಗ ನಿಮ್ಮ ಹಾಗೂ ಸಂಗಾತಿ ನಡೆಯುತ್ತಿರುವ ಭಿನ್ನಾಭಿಪ್ರಾಯ ಕೊನೆಗೊಳ್ಳಲಿದೆ. ವೃತ್ತಿ ಜೀವನಕ್ಕೆ ಈ ಅವಧಿ ಉತ್ತಮವಾಗಿದೆ. ವೃತ್ತಿ ಜೀವನದಲ್ಲಿ ಇದ್ದ ಸಮಸ್ಯೆಗಳಿಗೆ ಬಗೆಹರಿಯಲಿದೆ. ಈ ಅವಧಿಯಲ್ಲಿ ನಿಮ್ಮ ಸಂವಹನ ಉತ್ತಮವಾಗಿರಲಿದೆ.
ಪರಿಹಾರ: ಪ್ರತಿದಿನ 108 ಬಾರಿ "ಓಂ ನಮೋ ಭಗವತೇ ವಾಸುದೇವಾಯ" ಜಪಿಸಿ.

ಸಿಂಹ ರಾಶಿ
ಬುಧ ಮಾರ್ಗಿಯಾದಾಗ ನೀವು ಅನುಭವಿಸಿರುವ ನಷ್ಟ ಸರಿದೂಗಿಸಲು ಸಾಧ್ಯವಾಗುವುದು. ಕುಟುಂಬದಲ್ಲಿ ಇರುವ ಸಮಸ್ಯೆಗಳು ದೂರಾಗಲಿದೆ. ಫೈನಾನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ಅವಧಿಯು ವಿಶೇಷವಾಗಿ ಒಳ್ಳೆಯದು. ನಿಮ್ಮ ಕೆಲಸಕ್ಕೆ ಕುಟುಂಬದವರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ.
ಪರಿಹಾರ: ತುಳಸಿ ಗಿಡಕ್ಕೆ ಪ್ರತಿನಿತ್ಯ ನೀರು ಹಾ ಕಿ ಮತ್ತು ಪ್ರತಿದಿನ ಒಂದು ತುಳಸಿ ಎಲೆಯನ್ನು ಸೇವಿಸಿ.

ಕನ್ಯಾ ರಾಶಿ
ಬುಧನು ನಿಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಬುಧ ಹಿಮ್ಮುಖ ಚಲನೆಯಲ್ಲಿದ್ದಾಗ ಕಾಣಿಸಿದ ಆರೋಗ್ಯ ಸಮಸ್ಯೆ ಬುಧ ಮಾರ್ಗಿಯಾದಾಗ ಆರೋಗ್ಯ ಸುಧಾರಿಸಲಿದೆ. ಫಿಟ್‌ನೆಸ್‌ ಕಡೆಗೆ ತುಂಬ ಗಮನಹರಿಸುವುದು ಒಳ್ಳೆಯದು. ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಾಗುವುದು. ಸಂಗಾತಿಯೊಂದಿಗೆ ಇರುವ ಭಿನ್ನಾಭಿಪ್ರಾಯ ಕೊನೆಗೊಳಿಸಲು ಮುಕ್ತವಾಗಿ ಮಾತನಾಡಿ.
ಪರಿಹಾರ: ಬುಧವಾರದಂದು ಪಂಚಧಾತು ಅಥವಾ ಚಿನ್ನದ ಉಂಗುರದಲ್ಲಿ ಧರಿಸುವುದರಿಂದ ಕನ್ಯಾ ರಾಶಿಯವರಿಗೆ ಶುಭ ಫಲ ದೊರೆಯುತ್ತದೆ.

ತುಲಾ ರಾಶಿ
ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಬುಧ ಉತ್ತಮ ಲಾಭವನ್ನು ನೀಡುವ ಅವಕಾಶ ಸಿಗಲಿದೆ. ಅಲ್ಲದೆ, ಆಮದು-ರಫ್ತಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡುತ್ತಿರುವವರು ಆದಾಯ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಖರ್ಚು ಅಧಿಕವಾಗಲಿದೆ. ಈ ಕಾರಣದಿಂದಾಗಿ, ನಿಮ್ಮ ವೆಚ್ಚಗಳು ಮತ್ತು ನಷ್ಟಗಳ ಬಗ್ಗೆ ಮೊದಲಿನಿಂದಲೂ ಜಾಗರೂಕರಾಗಿರಲು ಸಲಹೆ ನೀಡಲಾಗುವುದು.
ಪರಿಹಾರ: ಬುಧ ಮಂತ್ರ ಪಠಿಸಿ.

ವೃಶ್ಚಿಕ ರಾಶಿ
ಬುಧ ಮಾರ್ಗಿಯಾದಾಗ ವೃಶ್ಚಿಕ ರಾಶಿಯವರಿಗೆ ಆರ್ಥಿಕ ಲಾಭ ಕಡಿಮೆಯಾಗಲಿದೆ. ಈ ಅವಧಿಯಲ್ಲಿ ಸಾಮಾಜಿಕ ಪ್ರತಿಷ್ಠತೆ ಹೆಚ್ಚಾಗಲಿದೆ. ಈ ಸಮಯದಲ್ಲಿ ಹಣವನ್ನು ಮರಳಿ ಪಡೆಯಲು ಸಾಧ್ಯವಾಗುವುದು. ಈ ಅವಧಯಲ್ಲಿ ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಬುಧ ಮಾರ್ಗಿಯಾದಾಗ ವೃಶ್ಚಿಕ ರಾಶಿಯವರಿಗೆ ಶುಭ ಫಲ ನೀಡಲಿದೆ.
ಪರಿಹಾರ: ನಿಮ್ಮ ಹಿರಿಯ ಸಹೋದರನಿಗೆ ಹಸಿರು ಬಣ್ಣದ ಉಡುಗೊರೆ ನೀಡಿ.

ಧನು ರಾಶಿ
ಈ ಅವಧಿಯಲ್ಲಿ ನೀವು ಕೆಲಸದ ಸ್ಥಳದಲ್ಲಿ ಬಹಳಷ್ಟು ಪ್ರಯೋಜನಗಳನ್ನು ಪಡೆಯುವ ಅವಕಾಶ ಸಿಗಲಿದೆ.ಈ ಸಮಯದಲ್ಲಿ ಕುಟುಂಬದ ವಾತಾವರಣ ಅನುಕೂಲಕರವಾಗಿರುತ್ತದೆ. ಒಟ್ಟಾರೆಯಾಗಿ, ಧನು ರಾಶಿಯವರು ಈ ಅವಧಿಯನ್ನು ಉತ್ತಮವಾಗಿ ಬಳಸಿಕೊಳ್ಳಲು ಸಲಹೆ ನೀಡಲಾಗಿದೆ.
ಪರಿಹಾರ: ವ್ಯವಹಾರದಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡುವುದು ನಿಮಗೆ ಉತ್ತಮವಾಗಿದೆ

ಮಕರ ರಾಶಿ
ಮಕರ ರಾಶಿಯವರಿಗೆ ಈ ಅವಧಿಯಲ್ಲಿ ನಿಮ್ಮ ಇಮೇಜ್ ಹೆಚ್ಚಾಗಬಹುದು. ತಂದೆಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನರಿಸಿ. ಈ ಅವಧಿಯಲ್ಲಿ ಧಾರ್ಮಿಕ ವಿಷಯಗಳಲ್ಲಿ ಒಲವು ಹೆಚ್ಚಾಗಲಿದೆ.
ಪರಿಹಾರ: ಹೆಸರುಕಾಳನ್ನು ದೇವಾಲಯಕ್ಕೆ ದಾನ ಮಾಡಿ.

ಕುಂಭ ರಾಶಿ
ಬುಧ ಮಾರ್ಗಿಯಾದಾಗ ನೀವು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಸಿಗಲಿದೆ. ಅಜಾಗರೂಕತೆಯಿಂದಾಗಿ, ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ಅಲ್ಲದೆ, ಈ ಸಮಯದಲ್ಲಿ ಬೆನ್ನು ಮತ್ತು ಕೈಗಳಿಗೆ ಸಮಸ್ಯೆಯಿರಬಹುದು. ಬುಧದ ನೇರ ಸಂಚಾರ ಸಂಶೋಧನಾ ವಿದ್ಯಾರ್ಥಿಗಳಿಗೆ ತುಂಬಾನೇ ಅನುಕೂಲಕರವಾಗಿದೆ.
ಪರಿಹಾರ: ಮಂಗಳಮುಖಿಯರಿಗೆ ಹಸಿರು ಬಣ್ಣದ ಉಡುಗೊರೆ ನೀಡಿ.

ಮೀನ ರಾಶಿ
ಬುಧ ಮಾರ್ಗಿಯಾದಾಗ ಮೀನ ರಾಶಿಯವರಿಗೆ ಸಾಮಾನ್ಯಕ್ಕಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿ ಹೊಂದುತ್ತೀರಿ. ನಿಮ್ಮ ವೈಯಕ್ತಿಕ ಜೀವನದಲ್ಲಿಯೂ ಖುಷಿಯಾಗಿರುತ್ತೀರಿ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ವ್ಯಾಪಾರಸ್ಥರು ಈ ಅವಧಿಯಲ್ಲಿ ಲಾಭ ಪಡೆಯಬಹುದು.
ಪರಿಹಾರ: ಬುಧವಾರ ಗಣೇಶನನ್ನು ಆರಾಧಿಸಿ

English summary

Mercury turns direct in Virgo October 2 2023: Effects On 12 Zodiac Signs In Kannada

Mercury turns direct in Virgo: Budha Margi in Kanya rashi Effects On 12 zodiac signs, read on.
Story first published: Friday, September 29, 2023, 15:52 [IST]
X
Desktop Bottom Promotion