ಜುಲೈ 25ಕ್ಕೆ ಸಿಂಹ ರಾಶಿಗೆ ಬುಧ ಸಂಚಾರ: ಈ 8 ರಾಶಿಯವರು ಜಾಗ್ರತೆವಹಿಸಬೇಕಾಗಿದೆ

ವೈದಿಕಶಾಸ್ತ್ರದ ಪ್ರಕಾರ ಬುಧ ರಾಶಿ ಬದಲಾವಣೆ ಮಾಡಿದಾಗ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಬುಧನು ನಮ್ಮ ನಮ್ಮ ಬುದ್ಧಿವಂತಿಕೆ ಹಾಗೂ ಮಾತಿನ ಮೇಲೆ ಪ್ರಭಾವ ಬೀರುವ ಗ್ರಹವಾಗಿದೆ. ಜುಲೈ 25ಕ್ಕೆ ಬುಧ ಸಿಂಹ ರಾಶಿಗೆ ಸಂಚರಿಸುವುದು.

ಬುಧ ಸಿಂಹ ರಾಶಿಯಲ್ಲಿದ್ದಾಗ ಬಹುತೇಕ ರಾಶಿಗಳ ಮೇಲೆ ಅನುಕೂಲಕರ ಪ್ರಭಾವ ಬೀರುತ್ತಿಲ್ಲ, ಈ ಅವಧಿಯಲ್ಲಿ ಸಾಕಷ್ಟು ಸವಾಲು ಎದುರಿಸಬೇಕಾಗುವುದು. ಜ್ಯೋತಿಷ್ಯದ ಪ್ರಕಾರ ಈ ಸಂಚಾರ ಪ್ರತಿಯೊಂದು ರಾಶಿಯ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂದು ನೀಡಲಾಗಿದೆ ನೋಡಿ:

Mercury Transit In Leo On July 25: Affects On 12 Zodiac Signs In Kannada

ಮೇಷ ರಾಶಿ
ಮೇಷ ರಾಶಿಯವರಲ್ಲಿ ಬುಧನ ಈ ಸಂಚಾರ ನಿಮಗೆ ಅನುಕೂಕರವಲ್ಲ, ಈ ಅವಧಿಯಲ್ಲಿ ಹಣಕಾಸಿನ ಸಮಸ್ಯೆ ಎದುರಿಸಬಹುದು. ಹಣಕಾಸಿನ ಅಭದ್ರತೆ ಕಾಡಬಹುದು, ಅಲ್ಲದೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಕಾಡುವುದು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಕೊರತೆ ಕಂಡು ಬರುವುದು, ವೃತ್ತಿ ಜೀವನದಲ್ಲೂ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗದ ಕಾರಣ ಅತೃಪ್ತಿ ಉಂಟಾಗಲಿದೆ.
ವ್ಯಾಪಾರಸ್ಥರಿಗೂ ಅವಧಿಯಲ್ಲಿ ಲಾಭ ಕಡಿಮೆ ಇರಲಿದೆ. ಈ ಅವಧಿಯಲ್ಲಿ ಗಳಿಕೆಗಿಂತ ಅಧಿಕ ಖರ್ಚು ಬರಬಹುದು. ವೈವಾಹಿಕ ಹಾಗೂ ಕುಟುಂಬ ಜೀವನದಲ್ಲೂ ಒತ್ತಡದ ಪರಿಸ್ಥಿತಿ ಇರಲಿದೆ. ಆರೋಗ್ಯದ ದೃಷ್ಟಿಯಿಂದ ನೀವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ಒಟ್ಟಿನಲ್ಲಿ ಬುಧ 5ನೇ ಮನೆಯಲ್ಲಿದ್ದಾಗ ಮೇಷ ರಾಶಿಯವರಿಗೆ ಅನುಕೂಲಕರವಲ್ಲ.
ಪರಿಹಾರ: "ಓಂ ನಮೋ ಭಗವತೇ ವಾಸುದೇವಾಯ" ಎಂಬ ಮಂತ್ರವನ್ನು ಪ್ರತಿದಿನ 41 ಬಾರಿ ಜಪಿಸಿ.

ವೃಷಭ ರಾಶಿ
ಈ ಅವಧಿ ನಿಮಗೆ ಸರಾಸರಿಯಾಗಿದೆ ಎಂದು ಹೇಳಬಹುದು. ಈ ಅವಧಿಯಲ್ಲಿ ನೀವು ಬಯಸಿದಂತೆ ಯಾವುದೇ ಕಾರ್ಯ ನಡೆಯದಿದ್ದಾಗ ಸ್ವಲ್ಪ ಒತ್ತಡ ಉಂಟಾಗಬಹುದು, ವೃತ್ತಿ ಜೀವನದಲ್ಲೂ ಈ ಅವಧಿಯಲ್ಲಿ ಕೆಲವೊಂದು ಸವಾಲುಗಳನ್ನು ಎದುರಿಸಬಹುದು. ನಿಮ್ಮಲ್ಲಿ ಕೆಲವರು ಉದ್ಯೋಗವನ್ನು ಕೂಡ ಬದಲಾಯಿಸಬಹುದು. ಸ್ವಂತ ಉದ್ಯೋಗ ಮಾಡುವವರೂ ಈ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸಲು ಕಷ್ಟವಾಗಬಹುದು. ಬುಧದ ಸಂಕ್ರಮಣವು ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಸಂಬಂಧದಲ್ಲಿ ಪ್ರೀತಿ ಮತ್ತು ಸಂತೋಷವನ್ನು ಕಾಪಾಡಿಕೊಳ್ಳಲು ತಾಳ್ಮೆ ಅಗತ್ಯವಿರುತ್ತದೆ. ಈ ಅವಧಿಯಲ್ಲಿ ಆಹಾರಕ್ರಮದ ಕಡೆ ಗಮನಹರಿಸಿ. ಕೆಲಸದ ಬಗ್ಗೆ ಹೇಳುವುದಾದರೆ ಬಡ್ತಿಯನ್ನು ನಿರೀಕ್ಷಿಸುತ್ತಿದ್ದರೆ ಇನ್ನು ಸ್ವಲ್ಪ ಕಾಯಬೇಕು.
ಪರಿಹಾರ: ಪ್ರತಿದಿನ 21 ಬಾರಿ "ಓಂ ಬುಧಾಯ ನಮಃ" ಜಪಿಸಿ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ಅವಧಿ ಅನುಕೂಲಕರವಾಗಿದೆ. ಈ ಸಮಯದಲ್ಲಿ ಮಾಡುವ ಪ್ರಯಾಣ ನಿಮಗೆ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ಹೂಡಿಕೆ ಮಾಡಲ ಸಹಕಾರಿಯಾಗಿದೆ. ಒಟ್ಟಾರೆಯಾಗಿ, ಸಿಂಹ ರಾಶಿಯಲ್ಲಿ ಬುಧದ ಸಂಚಾರವು ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ವೃತ್ತಿ ಜೀವನದ ವಿಷಯದಲ್ಲಿ ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಕೆಲಸದ ಸ್ಥಳದಲ್ಲಿ ಬಡ್ತಿ ಮತ್ತು ವಿಶೇಷ ಪ್ರೋತ್ಸಾಹವನ್ನು ಪಡೆಯುವ ಸಾಧ್ಯತೆಗಳಿವೆ. ಸ್ವಂತ ವ್ಯವಹಾರವನ್ನು ಹೊಂದಿರುವವರು ಈ ಅವಧಿಯಲ್ಲಿ ಹೆಚ್ಚಿನ ಹಣದ ಲಾಭವನ್ನು ಗಳಿಸಲು ಸಾಧ್ಯವಾಗುವುದು. ಈ ಅವಧಿಯಲ್ಲಿ, ನಿಮ್ಮ ವ್ಯವಹಾರದ ಕಡೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗುವುದು. ಈ ಅವಧಿಯಲ್ಲಿ ಹಣದ ಉಳಿತಾಯ ಮಾಡಲು ಸಾಧ್ಯವಾಗುವುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರೆ ಈ ಅವಧಿ ಅನುಕೂಲಕರವಾಗಿದೆ. ಬುಧನ ಈ ಸಂಚಾರ ನಿಮಗೆ ಅನುಕೂಲಕರವಾಗಿದೆ.

ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಬುಧ 2ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ನೀವು ಸರಾಸರಿ ಲಾಭವನ್ನು ಪಡೆಯಬಹುದು. ಅಭಿವೃದ್ಧಿಯಲ್ಲಿ ಕೆಲವು ಅಡೆತಡೆಗಳು ಇರಬಹುದು. ನಿಮ್ಮ ವೃತ್ತಿಜೀವನದ ಬಗ್ಗೆ ಹೇಳುವುದಾದರೆ ಬುಧದ ಸಂಚಾರವು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಕೆಲಸದ ಜಾಗದಲ್ಲಿ ಹೆಚ್ಚು ಒತ್ತಡ ಇರಲಿದೆ. ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಕಿರಿಕಿರಿ ಇರಬಹುದು. ವೃತ್ತಿ ಜೀವನದಲ್ಲಿ ಹೆಚ್ಚಿನ ಲಾಭವನ್ನು ಗಳಿಸಲು ನೀವು ಅಧಿಕ ಶ್ರಮಿಸಬೇಕಾಗುತ್ತದೆ. ವಿದೇಶದಲ್ಲಿ ವ್ಯಾಪಾರ ಮಾಡುವವರಿಗೆ ಮಾತ್ರ ಈ ಅವಧಿ ಉತ್ತಮವಾಗಿರುತ್ತದೆ. ಸಂಬಂಧದಲ್ಲಿ ಸಾಮರಸ್ಯದ ಕೊರತೆಯಿಂದಾಗಿ ನಿಮ್ಮ ಸಂಬಂಧ ದುರ್ಬಲವಾಗಬಹುದು. ಜೀವನವನ್ನು ಸಂತೋಷವಾಗಿಡಲು, ನಿಮ್ಮ ಸಂಗಾತಿಯೊಂದಿಗೆ ಹೊಂದಾಣಿಕೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಆರೋಗ್ಯದಲ್ಲಿ ಸಮಸ್ಯೆಗಳಿರಬಹುದು.
ಪರಿಹಾರ: ಪ್ರತಿದಿನ 11 ಬಾರಿ "ಓಂ ಸೋಮಾಯ ನಮಃ" ಜಪಿಸಿ.

ಸಿಂಹ ರಾಶಿ
ಬುಧನು ನಿಮ್ಮ ರಾಶಿಗೆ ಸಂಚರಿಸಲಿದೆ. ಈ ಸಮಯದಲ್ಲಿ ನಿಮ್ಮ ಆಸೆಗಳು ಈಡೇರುತ್ತವೆ, ಈ ಸಮಯದಲ್ಲಿ ನಿಮ್ಮಲ್ಲಿ ಹಣ ಚೆನ್ನಾಗಿರಲಿದೆ. ಬುಧದ ಸಾಗಣೆಯ ಸಮಯದಲ್ಲಿ, ನೀವು ದೂರದ ಪ್ರಯಾಣವನ್ನು ಮಾಡಬೇಕಾಗಬಹುದು. ವೃತ್ತಿ ಜೀವನದ ದೃಷ್ಟಿಯಿಂದ ಕೂಡ ಬುಧದ ಸಂಚಾರವು ನಿಮಗೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ, ನಿಮ್ಮ ನಾಯಕತ್ವದ ಗುಣಮಟ್ಟದಿಂದಾಗಿ, ನಿಮ್ಮ ಎಲ್ಲಾ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುವುದು. ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ವ್ಯವಹಾರ ಮಾಡುವವರು ಈ ಅವಧಿಯಲ್ಲಿ ಉತ್ತಮ ಲಾಭ ಪಡೆಯಬಹುದು. ಈ ಅವಧಿಯಲ್ಲಿ ಖರ್ಚು ಅಧಿಕವಿರುವುದರಿಂದ ನೀವು ಸಾಲ ತೆಗೆದುಕೊಳ್ಳಬಹುದು. ಈ ಅವಧಿಯಲ್ಲಿ ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಬುಧದ ಸಂಚಾರವು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ.
ಪರಿಹಾರ: ಪ್ರತಿದಿನ 41 ಬಾರಿ "ಓಂ ಮಹಾ ವಿಷ್ಣವೇ ನಮಃ" ಎಂದು ಜಪಿಸಿ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ಅವಧಿಯಲ್ಲಿ ಭವಿಷ್ಯದ ಚಿಂತೆ ಕಾಡಬಹುದು. ವೃತ್ತಿಜೀವನದ ದೃಷ್ಟಿಯಿಂದ ಸಿಂಹ ರಾಶಿಯಲ್ಲಿ ಬುಧದ ಸಾಗಣೆಯು ನಿಮಗೆ ಅಷ್ಟೊಂದು ಅನುಕೂಲಕರವಲ್ಲ. ವ್ಯವಹಾರಸ್ಥರಿಗೆ ಲಾಭ ಸಿಗದಿರುವ ಸಾಧ್ಯತೆಯಿದೆ. ಉತ್ತಮ ಅವಕಾಶಗಳಿಗಾಗಿ ನೀವು ಉದ್ಯೋಗವನ್ನು ಬದಲಾಯಿಸಬಹುದು. ನಿಮ್ಮಲ್ಲಿ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಈ ಸಮಯದಲ್ಲಿ, ಉದ್ಯಮಿಗಳು ನಷ್ಟವನ್ನು ಎದುರಿಸಬೇಕಾಗಬಹುದು, ಹೆಚ್ಚಿನ ಲಾಭವನ್ನು ಗಳಿಸುವ ಸಾಧ್ಯತೆಯಿಲ್ಲ. ಈ ಅವಧಿಯಲ್ಲಿ ವ್ಯಾಪಾರಸ್ಥರು ಕಠಿಣ ಸ್ಪರ್ಧೆಯನ್ನು ಕಾಣಬಹುದು. ಆರ್ಥಿಕವಾಗಿ, ಸಿಂಹ ರಾಶಿಯಲ್ಲಿ ಬುಧದ ಸಂಚಾರವು ನಿಮಗೆ ಅನುಕೂಲಕರವಾಗಿಲ್ಲ. ಈ ಸಮಯದಲ್ಲಿ ಪ್ರಯಾಣ ಮಾಡುವಾಗ ಹೆಚ್ಚು ಜಾಗ್ರತೆವಹಿಸಿ. ಖರ್ಚು ಅಧಿಕ ಬರುವುದರಿಂದ ಸಾಲ ತೆಗೆದುಕೊಳ್ಳಬೇಕಾಗಬಹುದು. ಇನ್ನು ಕುಟುಂಬ ಜೀವನದ ಬಗ್ಗೆ ನೋಡುವುದಾದರೆ ಈ ಅವಧಿಯಲ್ಲಿ ನಿಮ್ಮ ಸಂಬಂಧದಲ್ಲಿ ಸಾಮರಸ್ಯದ ಕೊರತೆ ಉಂಟಾಗಬಹುದು, ಇದರಿಂದ ಸಂಸಾರದಲ್ಲಿ ಸಮಸ್ಯೆ ಉಂಟಾಗಬಹುದು. ಈ ಸಮಯದಲ್ಲಿ ಆರೋಗ್ಯದ ಕಡೆ ತುಂಬಾನೇ ಗಮನಹರಿಸಿ.
ಪರಿಹಾರ: ಬುಧವಾರ ಬುಧ ಬೀಜ ಮಂತ್ರ ಪಠಿಸಿ.

ತುಲಾ ರಾಶಿ
ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಬೆಂಬಲವಿರಲಿದೆ. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮದ ಪರಿಣಾಮವಾಗಿ ನೀವು ವಿದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಪಡೆಯುತ್ತೀರಿ. ಸ್ವಂತ ವ್ಯವಹಾರ ಮಾಡುತ್ತಿರುವವರು ಈ ಅವಧಿಯಲ್ಲಿ ಉತ್ತಮ ಲಾಭಗಳಿಸಬಹುದು. ಈ ಅವಧಿಯಲ್ಲಿ ನೀವು ಹೊಸ ಕೆಲಸ ಪ್ರಾರಂಭಿಸಿದರೆ ಉತ್ತಮ ಲಾಭಗಳಿಸಲು ಸಾಧ್ಯವಾಗುವುದು. ಆರ್ಥಿಕ ಜೀವನದ ದೃಷ್ಟಿಯಿಂದ ಈ ಅವಧಿ ತುಂಬಾನೇ ಚೆನ್ನಾಗಿದೆ. ಸಂಗಾತಿಯ ಜೊತೆ ಹೊಂದಾಣಿಕೆ ಚೆನ್ನಾಗಿ ಇರಲಿದೆ. ಕುಟುಂಬದಲ್ಲಿ ನೆಮ್ಮದಿ, ಸಂತೋಷ ಇರಲಿದೆ. ಆರೋಗ್ಯದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ.
ಪರಿಹಾರ: ಪ್ರತಿದಿನ 11 ಬಾರಿ "ಓಂ ಭಾರ್ಗವಾಯ ನಮಃ" ಜಪಿಸಿ.

ವೃಶ್ಚಿಕ ರಾಶಿ
ಬುಧ ನಿಮ್ಮ 10ನೇ ಮನೆಯಲ್ಲಿ ಇರುವುದರಿಂದ ನಿಮ್ಮ ಕೆಲಸದಲ್ಲಿ ಅಧಿಕ ಒತ್ತಡ ಇರಲಿದೆ. ಕೆಲಸದ ಕಡೆ ಹೆಚ್ಚು ಗಮನಹರಿಸುತ್ತೀರಿ. ಸ್ವಂತ ವ್ಯವಹಾರ ಮಾಡುತ್ತಿದ್ದರೆ ಈ ಅವಧಿಯಲ್ಲಿ ಕಠಿಣ ಪ್ರತಿಸ್ಪರ್ಧೆ ಎದುರಿಸಬಹುದು. ಆರ್ಥಿಕ ಜೀವನದ ದೃಷ್ಟಿಯಿಂದ ನೋಡುವುದಾದರೆ ಸಿಂಹ ರಾಶಿಯಲ್ಲಿ ಬುಧದ ಸಾಗಣೆಯು ನಿಮಗೆ ಅನುಕೂಲಕರವಾಗಿಲ್ಲ. ಏಕೆಂದರೆ ನೀವು ವಿತ್ತೀಯ ಲಾಭಗಳನ್ನು ಪಡೆಯುವಲ್ಲಿ ಏರಿಳಿತಗಳನ್ನು ಎದುರಿಸಬಹುದು. ಈ ಸಮಯದಲ್ಲಿ ನೀವು ಹಣವನ್ನು ಗಳಿಸಲು ಸಾಧ್ಯವಾಗುತ್ತದೆ, ಹೆಚ್ಚಿನ ಜವಾಬ್ದಾರಿಗಳಿಂದಾಗಿ ಹಣವನ್ನು ಉಳಿಸಲು ಕಷ್ಟವಾಗುವುದು. ಸಂಬಂಧದಲ್ಲಿ ಅಹಂಕಾರದಿಂದ ಸಮಸ್ಯೆ ಉಂಟಾಗಬಹುದು. ಸಂಗಾತಿಯೊಂದಿಗೆ ಮಾತನಾಡುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ. ಆರೋಗ್ಯದ ಬಗ್ಗೆ ಗಮನಹರಿಸಿ, ಇಲ್ಲದಿದ್ದರೆ ಹೆಚ್ಚು ಖರ್ಚು ಬರಲಿದೆ.
ಪರಿಹಾರ: "ಓಂ ಭೂಮಿ ಪುತ್ರಾಯ ನಮಃ" ಎಂದು ಪ್ರತಿದಿನ 11 ಬಾರಿ ಜಪಿಸಿ.

ಧನು ರಾಶಿ
ಧನು ರಾಶಿಯವರಲ್ಲಿ ಬುಧ 9ನೇ ಮನೆಗೆ ಸಂಚರಿಸಲಿದೆ. ವೃತ್ತಿ ಜೀವನದ ದೃಷ್ಟಿಯಿಂದ ನೋಡುವುದಾದರೆ ಸಿಂಹ ರಾಶಿಯಲ್ಲಿ ಬುಧದ ಸಂಚಾರವು ನಿಮಗೆ ಅದ್ಭುತವಾಗಿದೆ. ಈ ಸಮಯದಲ್ಲಿ ನೀವು ಉದ್ಯೋಗದಲ್ಲಿ ಅನೇಕ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಅಲ್ಲದೆ, ಉದ್ಯೋಗಕ್ಕೆ ಸಂಬಂಧಿಸಿದಂತೆ ನೀವು ವಿದೇಶ ಪ್ರವಾಸ ಮಾಡಬೇಕಾಗಬಹುದು. ನಿಮ್ಮಲ್ಲಿ ಕೆಲವರು ಉದ್ಯೋಗ ಬದಲಾವಣೆ ಕೂಡ ಮಾಡಬಹುದು. ವ್ಯಾಪಾರಸ್ಥರಿಗೆ ಈ ಅವಧಿ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಹಣ ಖರ್ಚಾಗಬಹುದು. ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿಯ ಜೀವನದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದು.
ತಂದೆಯ ಆರೋಗ್ಯದ ಬಗ್ಗೆ ಗಮನಹರಿಸಿ. .
ಪರಿಹಾರ: ಗುರುವಾರ ಶ್ರೀವಿಷ್ಣುವನ್ನು ಆರಾಧಿಸಿ.

ಮಕರ ರಾಶಿ
ಮಕರ ರಾಶಿಯವರಲ್ಲಿ 8ನೇ ಮನೆಯಲ್ಲಿ ಇರಲಿದೆ, ಈ ಅವಧಿಯಲ್ಲಿ ಅದೃಷ್ಟದ ಬೆಂಬಲ ಕಡಿಮೆ ಇರಲಿದೆ. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ತೃಪ್ತಿ ಇಲ್ಲದಿರಬಹುದು. ಇದಲ್ಲದೆ, ಕೆಲಸದ ಸ್ಥಳದಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ನೀವು ಎಷ್ಟೇಶ್ರಮಪಟ್ಟರೂ ಅಧಿಕ ತಕ್ಕ ಪ್ರತಿಫಲ ಸಿಗಲು ಕಷ್ಟವಾಗಬಹುದು. ಸಿಂಹ ರಾಶಿಯಲ್ಲಿ ಬುಧ ಸಂಕ್ರಮಣವು ಮಕರ ರಾಶಿಯ ವ್ಯಾಪಾರಸ್ಥರಿಗೆ ಸವಾಲಾಗಿ ಪರಿಣಮಿಸಬಹುದು. ಈ ಸಮಯದಲ್ಲಿ ಯಶಸ್ಸನ್ನು ಸಾಧಿಸಲು ನಿಮಗೆ ಕಷ್ಟವಾಗಬಹುದು ಹಾಗೆಯೇ ವ್ಯಾಪಾರಕ್ಕಾಗಿ ಹೆಚ್ಚಿನ ಮೌಲ್ಯಗಳು ಅಥವಾ ಮಾನದಂಡಗಳನ್ನು ಹೊಂದಿಸುವುದು ಸುಲಭವಾಗಿ ಸಾಧ್ಯವಾಗುವುದಿಲ್ಲ. ಈ ಸಾಗಣೆಯ ಸಮಯದಲ್ಲಿ ವ್ಯಾಪಾರದಲ್ಲಿ ಕಠಿಣ ಸ್ಪರ್ಧೆಯಿರಬಹುದು. ಆರ್ಥಿಕ ಅಭದ್ರತೆ ಕಾಡಬಹುದು. ಸಂಬಂಧದಲ್ಲೂ ಭಿನ್ನಾಭಿಪ್ರಾಯಗಳಿರಬಹುದು, ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕಾಗಿದೆ.
ಪರಿಹಾರ: ಶನಿವಾರದಂದು ಶನಿ ದೇವನಿಗೆ ಎಳ್ಳೆಣ್ಣೆ ಅರ್ಪಿಸಿ.

ಕುಂಭ ರಾಶಿ
ಕುಮಭ ರಾಶಿಯವರಲ್ಲಿ ಬುಧ 7ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ವ್ಯವಹಾರದ ಕಡೆ ಹೆಚ್ಚು ಗಮನಹರಿಸಿ. ಏಕಾಗ್ರತೆಯ ಕೊರತೆಯಿಂದ ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾಗುವ ಸಾಧ್ಯತೆಯಿದೆ. ಸ್ವಂತ ವ್ಯಾಪಾರ ಹೊಂದಿರುವ ಜನರಿಗೆ, ಈ ಅವಧಿಯಲ್ಲಿ ಹೆಚ್ಚು ಲಾಭ ಗಳಿಸುವುದು ಕಷ್ಟವಾಗಬಹುದು. ನೀವು ಪ್ರತಿಸ್ಪರ್ಧಿಗಳಿಂದ ಕಠಿಣ ಸ್ಪರ್ಧೆಯನ್ನು ಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ, ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಲು ಹೊಂದಾಣಿಕೆಗಳನ್ನು ಮಾಡುವ ಅವಶ್ಯಕತೆಯಿದೆ. ಆರ್ಥಿಕ ದೃಷ್ಟಿಯಿಂದ, ಸಿಂಹ ರಾಶಿಯಲ್ಲಿ ಬುಧದ ಸಂಚಾರವು ನಿಮ್ಮ ಖರ್ಚುಗಳನ್ನು ಹೆಚ್ಚಿಸಬಹುದು. ಈ ಅವಧಿಯಲ್ಲಿ ನೀವು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಿರ್ಲಕ್ಷ್ಯದಿಂದ ಹಣ ನಷ್ಟವಾಗುವ ಸಂಭವವಿದೆ. ಕುಟುಂಬದಲ್ಲಿಯೂ ಕೆಲ ಸಮಸ್ಯೆಗಳಿರಬಹುದು, ಆರೋಗ್ಯ ಸಮಸ್ಯೆಗಳು ಕಾಡಬಹುದು.
ಪರಿಹಾರ: ಪ್ರತಿದಿನ "ಓಂ ವಾಯುಪುತ್ರಾಯ ನಮಃ" ಜಪಿಸಿ, ಮಂಗಳವಾರ, ಶನಿವಾರ ಹನುಮಂತನ ಆರಾಧಿಸಿ.

ಮೀನ ರಾಶಿ
ಮೀನ ರಾಶಿಯವರಲ್ಲಿ ಬುಧ 6ನೇ ಮನೆಯಲ್ಲಿ ಇರಲಿದೆ. ಇದರಿಂದಾಗಿ ಈ ಸಮಯದಲ್ಲಿ ನೀವು ಆರೋಗ್ಯದ ಕಡೆ ಹೆಚ್ಚು ಜಾಗ್ರತೆವಹಿಸಬೇಕು. ವೃತ್ತಿಯಲ್ಲಿ ಹೆಚ್ಚಿನ ಒತ್ತಡವನ್ನು ಎದುರಿಸಬೇಕಾಗಬಹುದು, ಇದರಿಂದಾಗಿ ಕೆಲಸದಲ್ಲಿ ತಪ್ಪುಗಳನ್ನು ಮಾಡುವ ಬಲವಾದ ಸಾಧ್ಯತೆಯಿದೆ. ವ್ಯಾಪಾರ ಮಾಡುವವರಿಗೆ ಸಿಂಹ ರಾಶಿಯಲ್ಲಿ ಬುಧ ಸಂಕ್ರಮಣವು ಸರಾಸರಿ ಲಾಭವನ್ನು ನೀಡುತ್ತದೆ. ಈ ಸಮಯದಲ್ಲಿ, ಹೆಚ್ಚಿನ ಲಾಭವನ್ನು ಪಡೆಯಲು ಮತ್ತು ವ್ಯವಹಾರದ ಅಗತ್ಯಗಳನ್ನು ಪೂರೈಸಲು ನಿಮಗೆ ಕಷ್ಟವಾಗಬಹುದು. ಆರ್ಥಿಕ ದೃಷ್ಟಿಕೋನದಿಂದ, ಈ ಅವಧಿಯಲ್ಲಿ ಹೆಚ್ಚಿನ ಲಾಭದ ಸಾಧ್ಯತೆಯಿಲ್ಲ.ಆದರೆ ಖರ್ಚು ಅಧಿಕವಿರುವುದರಿಂದ ಚಿಂತೆ ಕಾಡಬಹುದು. ಈ ಸಮಯದಲ್ಲಿ ಸಂಬಂಧದಲ್ಲಿ ಪ್ರೀತಿ ಮತ್ತು ಸಂತೋಷದ ಕೊರತೆ ಉಂಟಾಗಬಹುದು. ಇದಲ್ಲದೆ, ಈ ಅವಧಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ನೀವು ಸವಾಲುಗಳನ್ನು ಎದುರಿಸಬಹುದು.ಆರೋಗ್ಯದ ವಿಷಯದಲ್ಲಿ, ಈ ಸಮಯವು ನಿಮಗೆ ವಿಶೇಷವಾಗಿರುವುದಿಲ್ಲ ಏಕೆಂದರೆ ಈ ಸಮಯದಲ್ಲಿ ನೀವು ಅಲರ್ಜಿಯ ಸಮಸ್ಯೆ ಎದುರಿಸಬಹುದು.
ಪರಿಹಾರ: ಗುರುವಾರದಂದು ನಿರ್ಗತಿಕರಿಗೆ ದಾನ ಮಾಡಿ.

English summary

Mercury Transit In Leo On July 25: Affects On 12 Zodiac Signs In Kannada

Mercury Transit In Leo On July 25: How this transit affects on each zodiac signs read on.
X
Desktop Bottom Promotion