Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
Budh Gochar June 2023 Effects : ಜೂನ್ 24ಕ್ಕೆ ಬುಧ ಸಂಚಾರ: ದ್ವಾದಶ ರಾಶಿಗಳ ಮೇಲೆ ಬುಧ ಗೋಚಾರ ಪ್ರಭಾವ ಹೀಗಿರಲಿದೆ
ಬುಧನು ಜೂನ್ 7ಕ್ಕೆ ವೃಷಭ ರಾಶಿಗೆ ಪ್ರವೇಶಿಸಿತ್ತು, ಇದೀಗ ಜೂನ್ 24ಕ್ಕೆ ಮಿಥುನ ರಾಶಿಗೆ ಪ್ರವೇಶಿಸಲಿದೆ. ಬುಧನು ಮಿಥುನ ರಾಶಿಯ ಅಧಿಪತಿಯೂ ಹೌದು. ಬುಧನು ಮಿಥುನ ರಾಶಿಗೆ ಸಂಚರಿಸಿದಾಗ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು ಈ ಸಂಚಾರ ಪ್ರತಿಯೊಂದು ರಾಶಿಯ ಮೇಲೆ ಯಾವ ರೀತಿಯ ಪ್ರಭಾವ ಬೀರಿದೆ ಎಂದು ನೋಡೋಣ ಬನ್ನಿ:
ಮೇಷ ರಾಶಿ
ಮೇಷ ರಾಶಿಯವರಿಗೆ ಬುಧ 3ನೇ ಮತ್ತು 6ನೇ ಮನೆಯ ಅಧಿಪತಿಯಾಗಿದ್ದು ಬುಧನು ನಿಮ್ಮ 3ನೇ ಮನೆಯಲ್ಲಿ ಮಿಥುನ ರಾಶಿಯಲ್ಲಿ ಸಾಗಲಿದೆ. ಈ ಸಾಗಣೆಯ ಪ್ರಭಾವದಿಂದಾಗಿ ನಿಮ್ಮ ಸಂವಹನ ಕೌಶಲ್ಯದ ಬಲದಿಂದ ನೀವು ಸಾಧನೆ ಮಾಡುತ್ತೀರಿ. ನಿಮ್ಮ ಸಹೋದ್ಯೋಗಿಗಳೊಂದಿಗೆ ನೀವು ಉತ್ತಮ ಸಾಮರಸ್ಯ ಹೊಂದಿರುತ್ತೀರಿ. ಈ ಸಮಯದಲ್ಲಿ ಹೆಚ್ಚು ಪ್ರಯಾಣ ಮಾಡಬಹುದು. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಅದರಿಂದ ಪ್ರಯೋಜನ ಪಡೆಯುತ್ತಾರೆ. ನೀವು ಮಾಧ್ಯಮ ಅಥವಾ ಮಾರ್ಕೆಟಿಂಗ್ ವ್ಯವಹಾರದೊಂದಿಗೆ ಸಂಬಂಧ ಹೊಂದಿದ್ದರೆ ಈ ಅವಧಿ ನಿಮಗೆ ತುಂಬಾನೇ ವಿಶೇಷವಾಗಿರಲಿದೆ.
ಪರಿಹಾರ: ಬುಧವಾರದಂದು ಹಸಿರು ತರಕಾರಿಗಳನ್ನು ದಾನ ಮಾಡಿ.

ವೃಷಭ ರಾಶಿ
ಬುಧವು ನಿಮ್ಮ ಎರಡನೇ ಮತ್ತು ಐದನೇ ಮನೆಯ ಅಧಿಪತಿಯಾಗಿದ್ದು, ಮಿಥುನ ರಾಶಿಯಲ್ಲಿ ಬುಧ ಸಂಕ್ರಮಣವಾದಾಗ ಬುಧ ಅದು ನಿಮ್ಮ ಎರಡನೇ ಮನೆಗೆ ಪ್ರವೇಶಿಸುತ್ತದೆ. ಇದು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಈ ಅವಧಿಯಲ್ಲಿ, ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಉತ್ತಮ ಸಾಮರಸ್ಯವನ್ನು ಹೊಂದಿರುತ್ತೀರಿ. ಕುಟುಂಬದಲ್ಲಿ ಇರುವ ಕಲಹ ಬಗೆಹರಿಯಲಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ಹಣಕಾಸಿನ ಸ್ಥಿತಿ ಚೆನ್ನಾಗಿರುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು, ಆದರೆ ನೀವು ಅವುಗಳನ್ನು ಕ್ರಮೇಣ ಬಗೆಹರಿಸಲು ಸಾಧ್ಯವಾಗುವುದು. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ಸಿಗಲಿದೆ. ಆಸ್ತಿ ಖರೀದಿಗೆ ಈ ಸಮಯ ಉತ್ತಮವಾಗಿರಲಿದೆ. ಉದ್ಯೋಗದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ.
ಪರಿಹಾರ: ನೀವು ಪ್ರತಿದಿನ ಸ್ವಲ್ಪ ಬೆಲ್ಲ ಬಾಯಿಗೆ ಹಾಕಿ.
ಮಿಥುನ ರಾಶಿ
ಮಿಥುನ ರಾಶಿಯವರ ಮೊದಲ ಮತ್ತು ನಾಲ್ಕನೇ ಮನೆಯ ಅಧಿಪತಿಯಾಗಿರುವ ಬುಧ ನಿಮ್ಮ ಮೊದಲನೇ ಮನೆಗೆ ಸಂಚರಿಸಲಿದೆ. ಈ ಅವಧಿಯಲ್ಲಿನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆಗಳು ದೂರಾಗಲಿದೆ. ಜೀವನ ಸಂಗಾತಿಯೊಂದಿಗೆ ಮನಸ್ತಾಪವಿದ್ದರೆ ಅದು ಕೂಡ ದೂರವಾಗಿ ನಿಮ್ಮಿಬ್ಬರ ನಡುವೆ ಹೊಂದಾಣಿಕೆ ಹೆಚ್ಚಾಗಲಿದೆ. ಕೌಟುಂಬಿಕ ಸಮಸ್ಯೆಗಳೂ ದೂರಾಗಲಿದೆ. ನೀವು ಮಾಧ್ಯಮ, ಬರವಣಿಗೆ ಅಥವಾ ಯಾವುದೇ ಕಲೆಯೊಂದಿಗೆ ಸಂಬಂಧ ಹೊಂದಿದ್ದರೆ ಈ ಅವಧಿ ನಿಮಗೆ ತುಂಬಾ ಒಳ್ಳೆಯದು. ನಿಮ್ಮ ವ್ಯಾಪಾರವನ್ನು ಕೂಡ ವಿಸ್ತರಿಸಬಹುದು. ಉದ್ಯೋಗಿಗಳು ತಮ್ಮ ಕೆಲಸ ಕಾರ್ಯದ ಕಡೆಗೆ ಮತ್ತಷ್ಟು ಗಮನಹರಿಸಿ.
ಪರಿಹಾರ: ನೀವು ಬುಧ ಬೀಜ ಮಂತ್ರ ಪ್ರತಿದಿನ ಪಠಿಸಿ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ, ಬುಧ ಮೂರನೇ ಮತ್ತು ಹನ್ನೆರಡನೆಯ ಮನೆಯ ಅಧಿಪತಿಯಾಗಿದ್ದು ಈ ಸಂಚಾರದ ಸಮಯದಲ್ಲಿ 12ನೇ ಮನೆಯಲ್ಲಿ ಇರಲಿದೆ. ಹನ್ನೆರಡನೇ ಮನೆಯಲ್ಲಿ ಬುಧ ಇರುವುದರಿಂದ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ಅವಧಿ ಒಳ್ಳೆಯದಿದೆ. ಈ ಅವಧಿಯಲ್ಲಿ ಖರ್ಚು ಅದಿಕವಾಗಲಿದೆ. ನೀವು ದೈಹಿಕ ಆರೋಗ್ಯದ ಕಡೆಗೆ ಗಮನಹರಿಸಬೇಕು, ಅಲ್ಲದೆ ನಿಮ್ಮ ಇಮೇಜ್‌ಗೆ ಕಳಂಕ ಬರುವ ಯಾವುದೇ ಕೆಲಸ ಮಾಡಬೇಡಿ. ಕೌಟುಂಬಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ನೀವು ತಾಳ್ಮೆಯಿಂದ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿ.
ಪರಿಹಾರ: ನೀವು ಶ್ರೀ ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪವನ್ನು ಹಚ್ಚಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಬುಧನು ಎರಡು ಮತ್ತು ಹನ್ನೊಂದನೇ ಮನೆಯ ಅಧಿಪತಿಯಾಗಿದ್ದು ಈ ಸಂಚಾರದ ಸಮಯದಲ್ಲಿ 11ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನಿಮಗೆ ಒಡಹುಟ್ಟಿದವರ ಬೆಂಬಲ ಸಿಗಲಿದೆ. ಆರ್ಥಿಕವಾಗಿ ಕೂಡ ನಿಮಗೆ ಸಹಾಯ ಮಾಡುತ್ತಾರೆ. ಕೆಲಸದ ಜಾಗದಲ್ಲೂ ಈ ಅವಧಿ ನಿಮಗೆ ಅನುಕೂಲಕರವಾಗಿರುತ್ತದೆ. ವಿದ್ಯಾರ್ಥಿಗಳಿಗೂ ಈ ಅವಧಿ ಅನುಕೂಲಕರವಾಗಲಿದೆ. ಪ್ರೇಮಿಗಳು ಮನೆಯಲ್ಲಿ ತಮ್ಮ ವಿವಾಹಕ್ಕೆ ಅನುಮತಿ ಪಡೆಯಲು ಈ ಅವಧಿ ಅನುಕೂಲಕರವಾಗಿದೆ. ವಿವಾಹಿತರು ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಕೇಳುತ್ತಾರೆ. ವ್ಯಾಪಾರಸ್ಥರು ಲಾಭವನ್ನು ಪಡೆಯಲಿದ್ದಾರೆ.
ಪರಿಹಾರ: ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ನಿಮ್ಮ ಮೊದಲ ಮತ್ತು ಹತ್ತನೇ ಮನೆಯ ಅಧಿಪತಿಯಾಗಿದ್ದು ಈ ಅವಧಿಯಲ್ಲಿ ನಿಮ್ಮ 10ನೇ ಮನೆಯಲ್ಲಿಯೇ ಇರಲಿದೆ. ಈ ಅವಧಿ ಅನುಕೂಲಕರವಾಗಿದೆ. ಕೆಲಸದ ಜಾಗದಲ್ಲೂ ಎಲ್ಲವೂ ನಿಮಗೆ ಅನುಕೂಲಕರವಾಗೊರಲಿದೆ. ಆದರೆ ಈ ಅವಧಿಯಲ್ಲಿ ತಮಾಷೆ ಮಾಡಲು ಹೋಗಬೇಡಿ, ಅದುವೇ ನಿಮಗೆ ಕಷ್ಟವಗಬಹುದು. ಕುಟುಂಬದ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ ನೀವು ನಿಮ್ಮ ಸಂಗಾತಿಯ ಜೊತೆಗೆ ಮಾತನಾಡಿ ನಂತರ ನಿರ್ಧಾರ ತೆಗೆದುಕೊಳ್ಳಿ. ವ್ಯಾಪಾರಸ್ಥರಿಗೆ ಈ ಅವಧಿ ಅನುಕೂಲಕರವಾಗಿದೆ. ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ಅವಧಿ ಅನುಕೂಲಕರವಾಗಿದೆ.
ಪರಿಹಾರ: ಬುಧವಾರ ಮಂಗಳಮುಖಿಯರಿಗೆ ಹಸಿರು ಬಳೆ, ವಸ್ತ್ರ ನೀಡಿ.
ತುಲಾ ರಾಶಿ
ತುಲಾ ರಾಶಿಯವರಲ್ಲಿ ಒಂಬತ್ತು ಮತ್ತು ಹನ್ನೆರಡನೇ ಮನೆಯ ಅಧಿಪತಿಯಾಗಿರುವ ಬುಧ ಈ ಸಂಚಾರದ ಸಮಯದಲ್ಲಿ 9ನೇ ಮನೆಯಲ್ಲಿಯೇ ಇರಲಿದೆ. ಈ ಸಾರಿಗೆ ನಿಮಗೆ ಮಿಶ್ರಫಲಿತಾಂಶ ನೀಡಲಿದೆ. ಈ ಅವಧಿಯಲ್ಲಿ ನೀವು ಕೆಲಸದ ಕಡೆಗೆ ಹೆಚ್ಚಿನ ಗಮನ ನೀಡಿ. ಈ ಸಮಯದಲ್ಲಿ ನೀವು ಸಂವಹನ ಕೌಶಲ್ಯದಿಂದ ನಿಮ್ಮ ಕಾರ್ಯಗಳನ್ನು ಸಾಧಿಸಲು ಸಾಧ್ಯವಾಗುವುದು. ಆರೋಗ್ಯದ ಬಗ್ಗೆ ಹೇಳುವುದಾದರೆ ಯೋಗ ಹಾಗೂ ಧ್ಯಾನದ ಕಡೆಗೆ ಗಮನಹರಿಸಿ. ಉನ್ನತ ಶಿಕ್ಷಣಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಈ ಅವಧಿ ಅನುಕೂಲಕರವಾಗಿದೆ. ಈ ಅವಧಿಯು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ.
ಪರಿಹಾರ: 'ಓಂ ಬುಂ ಬುಧಾಯ ನಮಃ' ಮಂತ್ರ ಪ್ರತಿದಿನ ಪಠಿಸಿ.
ವೃಶ್ಚಿಕ ರಾಶಿ
ನಿಮ್ಮ ಎಂಟು ಹಾಗೂ ಹನ್ನೊಂದನೇ ಮನೆಯ ಅಧಿಪತಿಯಾಗಿರುವ ಬುಧ ಈ ಅವಧಿಯಲ್ಲಿ 8ನೇ ಮನೆಯಲ್ಲಿಯೇ ಇರಲಿದೆ. ಈ ಅವಧಿಯಲ್ಲಿ ಹಣಕಾಸು ಹಾಗೂ ಆರೋಗ್ಯದ ವಿಷಯದಲ್ಲಿ ತುಂಬಾನೇ ಜಾಗ್ರತೆವಹಿಸಬೇಕು. ಅನಿಶ್ಚಿತತೆಯಿರುವ ಯಾವುದೇ ರೀತಿಯ ಹೂಡಿಕೆಯಿಂದ ದೂರವಿರಿ. ವಿಶೇಷವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ತಪ್ಪಿಸಲು ಪ್ರಯತ್ನಿಸಿ, ಇಲ್ಲದಿದ್ದರೆ ದೊಡ್ಡ ನಷ್ಟವಾಗಬಹುದು. ಜ್ಯೋತಿಷ್ಯದಲ್ಲಿ ನಿಮಗೆ ವಿಶೇಷ ಆಸಕ್ತಿ ಹೆಚ್ಚಾಗಬಹುದು. ಈ ಅವಧಿಯಲ್ಲಿ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕಾಗಿದೆ. ಉದ್ಯೋಗದಲ್ಲಿ ಏರಿಳಿತದ ಪರಿಸ್ಥಿತಿ ಇರಲಿದೆ.
ಪರಿಹಾರ: ವಿಷ್ಣು ಸಹಸ್ತ್ರನಾಮ ಸ್ತೋತ್ರ ಪಠಿಸಿ.
ಧನು ರಾಶಿ
ಧನು ರಾಶಿಯವರಲ್ಲಿ ಏಳನೇ ಮತ್ತು ಹತ್ತನೇ ಮನೆಯ ಅಧಿಪತಿಯಾಗಿರುವ ಬುಧ 7ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಬುಧವಿರುವಾಗ ವ್ಯಾಪಾರಸ್ಥರಿಗೆ ತುಂಬಾನೇ ಅನುಕೂಲಕರವಾಗಿರಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಸ್ವಲ್ಪ ಜಾಗರೂಕರಾಗಿರಿ. ನಿಮ್ಮ ಸಂಬಂಧದಲ್ಲಿ ಮೂರನೇಯವರು ಮೂಗು ತೂರಿಸಲು ಬಿಡಬೇಡಿ, ಇಲ್ಲದಿದ್ದರೆ ನಿಮ್ಮ ಕುಟುಂಬದ ಮೇಲೆ ನಕರಾತ್ಮಕ ಪ್ರಭಾವ ಬೀರಬಹುದು. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ದೂರಾಗಲಿದೆ. ಪ್ರೇಮಿಗಳಿಗೆ ಈ ಅವಧಿ ಅನುಕೂಲಕರವಾಗಿದೆ.
ಪರಿಹಾರ: ನೀವು ಶ್ರೀ ಗಣಪತಿ ಅಥರ್ವಶೀರ್ಷವನ್ನು ಪಠಿಸಬೇಕು.
ಮಕರ ರಾಶಿ
ನಿಮ್ಮ ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿಯಾಗಿರುವ ಬುಧ ಈ ಸಮಯದಲ್ಲಿ ನಿಮ್ಮ 6ನೇ ಮನೆಯಲ್ಲಿಯೇ ಇರಲಿದೆ. ಬುಧದ ಈ ಸಂಕ್ರಮಣವು ನಿಮಗೆ ತುಂಬಾ ಒಳ್ಳೆಯದಿದೆ. ಈ ಅವಧಿಯಲ್ಲಿ ಖರ್ಚುಗಳು ಹೆಚ್ಚಾಗಲಿದೆ, ಈ ಬಗ್ಗೆ ಸ್ವಲ್ಪ ಗಮನಹರಿಸಿ, ಇಲ್ಲದಿದ್ದರೆ ನಂತರ ಸಮಸ್ಯೆಗಳು ಉಂಟಾಗಬಹುದು, ಇಲ್ಲದಿದ್ದರೆ ನಿಮ್ಮ ಆರ್ಥಿ0ಕ ಹೊರೆ ಹೆಚ್ಚಾಗಲಿದೆ. ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ಅವಧಿ ಅನುಕೂಲಕರವಾಗಿದೆ. ಪ್ರೇಮ ಸಂಬಂಧದಲ್ಲಿ ಏರಿಳಿತದ ಸ್ಥಿತಿ ಇರಲಿದೆ. ಈ ಅವಧಿಯಲ್ಲಿ ಸಾಲ ಮಾಡಬೇಡಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಪರಿಹಾರ: ನೀವು ಪ್ರತಿದಿನ ಶ್ರೀ ರಾಮ ರಕ್ಷಾ ಸ್ತೋತ್ರವನ್ನು ಪಠಿಸಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಬುಧ 5ನೇ ಮತ್ತು 8ನೇಯ ಮನೆಯ ಅಧಿಪತಿ. ಇದೀಗ ಬುಧ ನಿಮ್ಮ 5ನೇ ಮನೆಯಲ್ಲಿ ಇರಲಿದೆ. ಈ ಅವಧಿ ಪ್ರೇಮಿಗಳಿಗೆ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ಹೊಸ ವಿಷಯವನ್ನು ಕಲಿಯಲು ಆಸಕ್ತಿ ತೋರಿಸುತ್ತೀರಿ. ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗ ಬದಲಾವಣೆಯ ಕಡೆಗೆ ಗಮನಹರಿಸಿ. ವೃತ್ತಿಪರವಾಗಿ ಈ ಸಂಚಾರವು ಅನುಕೂಲಕರವಾಗಿರುತ್ತದೆ . ಆರ್ಥಿಕ ಸ್ಥಿತಿ ಕೂಡ ಚೆನ್ನಾಗಿರಲಿದೆ.
ಪರಿಹಾರ: ಹಸುವಿಗೆ ಮೇವು ದಾನ ಮಾಡಿ.
ಮೀನ ರಾಶಿ
ಮೀನ ರಾಶಿಯವರಿಗೆ ಬುಧನು ನಾಲ್ಕನೇ ಮತ್ತು ಏಳನೇ ಮನೆಯ ಅಧಿಯಾಗಿದ್ದು ಈ ಅವಧಿಯಲ್ಲಿ 4ನೇ ಮನೆಯಲ್ಲಿ ಇರಲಿದೆ. ಕುಟುಂಬ ಜೀವನದ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ಅನುಕೂಲಕರವಾಗಿದೆ. ಕುಟುಂಬದ ಪ್ರಗತಿಗಾಗಿ ನೀವು ಪ್ರಯತ್ನಿಸುತ್ತೀರಿ. ವೈಯಕ್ತಿಕ ಜೀವನಕ್ಕೆ ಈ ಸಮಯವು ಅನುಕೂಲಕರವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಈ ಅವಧಿ ಅನುಕೂಲಕರವಾಗಿದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನ ಉತ್ತಮವಾಗಿರಲಿದೆ. ವ್ಯಾಪಾರಸ್ಥರಿಗೆ ಈ ಅವಧಿ ಅನುಕೂಲಕರವಾಗಿದೆ.
ಪರಿಹಾರ: ನೀವು ಪ್ರತಿದಿನ ಶ್ರೀ ಗಣೇಶನನ್ನು ಪೂಜಿಸಿ.



Click it and Unblock the Notifications











