ತುಲಾದಲ್ಲಿ ಬುಧ, ಸೂರ್ಯ, ಮಂಗಳ ಗ್ರಹಗಳ ಸಂಯೋಗ: 12 ರಾಶಿಗಳ ಮೇಲೆ ಬಿರುವ ಪ್ರಭಾವವೇನು?

ಅಕ್ಟೋಬರ್ ತಿಂಗಳಿನಲ್ಲಿ ತುಲಾ ರಾಶಿಯಲ್ಲಿ ಬುಧ, ಸೂರ್ಯ, ಮಂಗಳ 3 ಗ್ರಹಗಳ ಸಂಚಾರವಾಗಲಿದ್ದು, ಈ ನೂರು ಗ್ರಹಗಳ ಸಂಯೋಗ ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವವೇನು?

ಮೇಷ ರಾಶಿ
ನಿಮಗೆ ಮಕ್ಕಳಿದ್ದರೆ ಅವರ ಜೊತೆ ತುಂಬಾ ಉತ್ತಮ ಸಮಯ ಕಳೆಯುತ್ತೀರಿ. ನೀವು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತೀರಿ. ಸಂಗಾತಿಯೊಂದಿಗೆ ಜೀವನ ಚೆನ್ನಾಗಿರಲಿದೆ. ಪ್ರೇಮಗಳಿಗೂ ಈ ಅವಧಿ ಅನುಕೂಲಕರವಾಗಿದೆ. ಅವಾಹಿತರಿಗೆ ವಿವಾಹ ಪ್ರಸ್ತಾಪ ಬರಬಹುದು.ಈ ಮೂರು ಗ್ರಹಗಳ ಸಂಯೋಗ ನಿಮ್ಮ ರಾಶಿಗೆ ಅನುಕೂಲಕರವಾಗಿದೆ.

Mercury Sun-Mars Transit In Libra

ವೃಷಭ ರಾಶಿ
ನೀವು ಕುಟುಂಬದ ಜೊತೆ ಖುಷಿಯಿಂದ ಕಳೆಯುತ್ತೀರಿ. ಮನೆಯ ಸೌಕರ್ಯ ಹೆಚ್ಚಾಗಲಿದೆ. ಮನೆಯ ವಿನ್ಯಾಸದಲ್ಲಿ ಬದಲಾವಣೆ ಮಾಡಬಹುದು. ಹೃದಯ ಸಂಬಂಧಿ ಸಮಸ್ಯೆ ಇದ್ದರೆ ಅದು ಕಡಿಮೆಯಾಗಲಿದೆ. ಈ ಅವಧಿಯಲ್ಲಿ ರುಚಿಯಾದ ಆಹಾರ ಸೇವನೆ ಕಡೆಗೆ ತುಂಬಾನೇ ಆಸಕ್ತಿ ಹೆಚ್ಚಾಗುವುದು.

ಮೀನ ರಾಶಿ
ಈ ಅವಧಿಯಲ್ಲಿ ನಿಮ್ಮಲ್ಲಿ ಹಠ ಹಾಗೂ ಆತ್ಮವಿಶ್ವಾಸ ಅಧಿಕವಿರಲಿದೆ. ನೀವು ಆತ್ಮವಿಶ್ವಾಸದಿಂದ ಮುನ್ನುಗ್ಗುವುದರಿಂದ ಯಶಸ್ಸು ದೊರೆಯಲಿದೆ. ಬರಹಗಾರರು, ಕಲಾ ಕ್ಷೇತ್ರದಲ್ಲಿ ಇರುವವರು ಉತ್ತಮ ಹೆಸರು ಗಳಿಸುತ್ತಾರೆ.

ಕರ್ಕ ರಾಶಿ
ಕುಟುಂಬದಲ್ಲಿರುವ ಸಮಸ್ಯೆಗಳು ಕಡಿಮೆಯಾಗಲಿದೆ. ಆರ್ಥಿಕ ಚಿಂತೆ ಕೂಡ ನಿಧಾನಕ್ಕೆ ಕಡಿಮೆಯಾಗಲಿದೆ. ಹಣವನ್ನು ಗಳಿಸಲು ನಿಮಗೆ ಅನೇಕ ಅವಕಾಶಗಳು ಸಿಗಲಿದೆ. ವಿವಾಹ ಮಾತುಕತೆಗೆ ಈ ಸಮಯ ಅನುಕೂಲಕರವಾಗಿದೆ. ನಿಮ್ಮ ಯೋಜನೆಗಳಿಗೆ ಯಶಸ್ಸು ದೊರೆಯಲಿದೆ. ನೀವು 2ನೇ ಮದುವೆ ಬಗ್ಗೆ ಯೋಚಿಸುತ್ತಿದ್ದರೆ ಈ ಸಮಯ ಅನುಕೂಲಕರವಾಗಿದೆ.

ಸಿಂಹ ರಾಶಿ
ಈ ಅವಧಿಯಲ್ಲಿ ನಿಮ್ಮ ಸ್ವಭಾವದಲ್ಲಿನ ಬದಲಾವಣೆ ನಿಮ್ಮ ಸಂಬಂಧದಲ್ಲಿ ಸಮಸ್ಯೆ ಕಂಡು ಬರುವುದು. ಈ ಅವಧಿಯಲ್ಲಿ ನೀವು ವೃತ್ತಿ ಜೀವನದಲ್ಲಿ ತುಂಬಾನೇ ಜಾಗ್ರತೆವಹಿಸಬೇಕಾಗಿದೆ, ನೀವು ಕೆಲಸವನ್ನು ತುಂಬಾ ಶ್ರದ್ಧೆಯಿಂದ ಮಾಡಬೇಕು. ಪ್ರೀತಿ ಜೀವನದಲ್ಲಿ ಕೆಲ ಸವಾಲುಗಳು ಎದುರಾಗಬಹುದು.

ಕನ್ಯಾ ರಾಶಿ
ವೃತ್ತಿ ಜೀವನದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ನಿಮ್ಮ ಕೆಲಸ ಕಾರ್ಯಗಳಿಗೆ ಮೆಚ್ಚುಗೆ ದೊರೆಯಲಿದೆ. ವಿದೇಶ ಪ್ರಯಾಣಕ್ಕೆ ಈ ಅವಧಿ ಅನುಕೂಲಕರವಾಗಿದೆ. ನೀವು ಧಾರ್ಮಿಕ ವಿಷಯಗಳ ಕಡೆ ಗಮನಹರಿಸುತ್ತೀರಿ. ಗುರುವಿನ ಅಥವಾ ಗುರುವಿನಂಥ ವ್ಯಕ್ತಿಯ ಮಾರ್ಗದರ್ಶನ ದೊರೆಯಲಿದೆ.

ತುಲಾ ರಾಶಿ
ಈ ಅವಧಿಯಲ್ಲಿ ನಿಮ್ಮಲ್ಲಿ ಕೋಪ ಅಧಿಕವಿರಲಿದೆ. ನಿಮ್ಮ ನಾಯಕತ್ವದ ಗುಣ ಮತ್ತಷ್ಟು ಉತ್ತಮವಾಗುವುದು. ಹೊಸ ಬ್ಯುಸ್‌ನೆಸ್‌ನಲ್ಲಿ ಯಶಸ್ಸು ದೊರೆಯಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಅವಾಹಿತರು ಈ ಅವಧಿಯಲ್ಲಿ ಜೀವನ ಸಂಗಾತಿಯನ್ನು ಭೇಟಿ ಮಾಡಬಹುದು.

ವೃಶ್ಚಿಕ ರಾಶಿ
ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ರಾಜಕೀಯದಲ್ಲಿ ಇರುವವರಿಗೆ ಈ ಅವಧಿ ಒಳ್ಳೆಯದಿದೆ. ನೀವು ಈ ಅವಧಿಯಲ್ಲಿ ಭವಿಷ್ಯದ ಕುರಿತು ಉತ್ತಮ ಯೋಜನೆಗಳನ್ನು ರೂಪಿಸುತ್ತೀರಿ. ನಿಮ್ಮ ಹಾಗೂ ತಂದೆಯ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ.

ಧನು ರಾಶಿ
ಹಳೆಯ ಚಿಂತೆಗಳೆಲ್ಲಾ ದೂರಾಗಲಿದೆ. ಈ ಅವಧಿಯಲ್ಲಿ ಧಾರ್ಮಿಕ ಒಲವು ಹೆಚ್ಚಾಗಲಿದೆ. ಇದ್ದಕ್ಕಿದ್ದಂತೆ ವಿದೇಶಕ್ಕೆ ಹೋಗುವ ಅವಕಾಶವಿದೆ. ಹೊಸ ಉದ್ಯೋಗ ಅಥವಾ ವ್ಯವಹಾರ ಪ್ರಾರಂಭಿಸಲು ಈ ಅವಧಿ ಉತ್ತಮವಾಗಿದೆ. ಸಂಬಂಧದ ವಿಷಯದಲ್ಲೂ ಈ ಅವಧಿ ಅನುಕೂಲಕರವಾಗಿದೆ.

ಮಕರ ರಾಶಿ
ಈ ಅವಧಿಯಲ್ಲಿ ಭಾವನಾತ್ಮಕ ಗೊಂದಲ ಅಧಿಕವಿರಲಿದೆ. ನಿಮ್ಮ ಬದುಕಿನಲ್ಲಿ ಅನಿರೀಕ್ಷಿತ ಬದಲಾವಣೆಯಾಗಬಹುದು. ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಉಂಟಾಗಬಹುದು, ಜಾಗ್ರತೆವಹಿಸಿ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಜಾಗ್ರತೆವಹಿಸಿ. ಅವಾಹಿತರು ಈ ಅವಧಿಯಲ್ಲಿ ಎಚ್ಚರವಹಿಸಬೇಕು, ಯಾವುದಾದರೂ ಸಂಬಂಧ ಕೂಡಿ ಬಂದರೆ ಅದಕ್ಕೆ ಒಕೆ ಹೇಳುವ ಮುನ್ನ ಅವರ ಬಗ್ಗೆ ಚೆನ್ನಾಗಿ ವಿಚಾರಿಸಿ. ಪ್ರೇಮಿಗಳ ನಡುವೆ ಸಮಸ್ಯೆವಿರಬಹುದು.

ಕುಂಭ ರಾಶಿ
ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಮದುವೆ ಮಾತುಕತೆಗೆ ಈ ಸಮಯ ಅನುಕೂಲಕರವಾಗಿದೆ. ಹೊಸ ಉದ್ಯಮ ಪ್ರಾರಂಭಿಸಲು ಈ ಅವಧಿ ಅನುಕೂಲಕರವಾಗಿದೆ. ಆದರೆ ಪಾಲುದಾರಿಕೆಯ ವ್ಯವಹಾರದಲ್ಲಿ ಜಾಗ್ರತೆವಹಿಸಿ. ನಿಮ್ಮ ಸಾಮಾಜಿಕ ಜೀವನ ತುಂಬಾನೇ ಚೆನ್ನಾಗಿರಲಿದೆ. ಪ್ರೇಮ ಸಂಬಂಧದಲ್ಲಿದ್ದರೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ.

ಮೀನ ರಾಶಿ
ಈ ಅವಧಿಯಲ್ಲಿ ನೀವು ದೈಹಿಕ ಚಟುವಟಿಕೆ ಕಡೆಗೆ ಹೆಚ್ಚಿನ ಗಮನಹರಿಸಬೇಕು. ನಿಮ್ಮ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ವೃತ್ತಿ ಜೀವನದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಆದರೆ ಶತ್ರುಗಳು ಅಧಿಕವಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ , ನಷ್ಟ ಉಂಟಾಗಬಹುದು ಹೆಚ್ಚು ಜಾಗ್ರತೆವಹಿಸಿ. ಪ್ರೇಮ ಸಂಬಂಧದಲ್ಲಿ ಕೆಲವು ಸಮಸ್ಯೆಗಳಿರಬಹುದು, ಬುದ್ಧಿವಂತಿಕೆಯಿಂದ ನಿಭಾಯಿಸಿ.

English summary

Mercury Sun-Mars Triple Transit In Libra: Affects On Zodiac Signs

Mercury Sun-Mars Triple Transit In Libra: These are the affects on 12 zodiac signs, read on..
Story first published: Thursday, October 5, 2023, 16:21 [IST]
X
Desktop Bottom Promotion