Latest Updates
-
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ! -
ಮಳೆಗಾಲದಲ್ಲಿ ಡೆಂಗ್ಯೂ ಕಾಟ: ಮನೆಯಲ್ಲೇ 7 ನಿಮಿಷದ ಈ ಚೆಕ್ ಲಿಸ್ಟ್ ಪಾಲಿಸಿ, ಸುರಕ್ಷಿತವಾಗಿರಿ!
Valentines Day 2025: ಈ ವರ್ಷವೂ ನೀವು ಸಿಂಗಲ್ ಆಗಿದ್ದೀರಾ..? ಆನ್‌ಲೈನ್‌ನಲ್ಲಿ ಮೀಮ್ಸ್ ಸುರಿಮಳೆ..!!
ವಿಶ್ವದಾದ್ಯಂತ ಇದು ಪ್ರೇಮಿಗಳ ದಿನ ಆಚರಿಸಲಾಗುತ್ತಿದೆ. ಪ್ರೇಮಿಗಳು ಇಂದು ತಮ್ಮ ಭಾವನೆಯನ್ನು ಹೊರಹಾಕಲು ಇರುವಂತಹ ಒಂದೇ ಒಂದು ದಿನ. ಜಗತ್ತಿನಾದ್ಯಂತ ನಾವಿಂದು ಪ್ರೇಮಿಗಳು ತಮ್ಮ ಮನದಾಳದ ಭಾವನೆಗಳ ಹಂಚಿಕೊಳ್ಳುವುದು ನೋಡಬಹುದು. ಹಾಗೆ ಜೀವನದ ಉದ್ದಕ್ಕೂ ಜೊತೆಯಾಗಿರಲು ಹೊಸ ಭಾಷೆ ಪಡೆಯಬಹುದು.
ಆದ್ರೆ ಬ್ಯಾಚುಲರ್‌ಗಳ ಪಾಡೇನು? ಹೌದು ಪ್ರೇಮಿಗಳ ದಿನದಂದು ಸಿಂಗಲ್‌ಗಳು ತಮ್ಮ ಮನದಾಳದ ಮಾತು ಯಾರ ಬಳಿ ಹೇಳಿಕೊಳ್ಳಬೇಕು. ಪ್ರೇಮಿಗಳ ದಿನದ ಬಳಿಕ ಬ್ರೇಕ್‌ಅಪ್ ಡೇ ಕೂಡ ಇದೆ. ಆದ್ರೆ ಸಿಂಗಲ್ಸ್‌ಗಳಿಗೆ ಯಾವ ಆಚರಣೆ ಇದೆ? ಆದ್ರೆ ಚೀನಾದಲ್ಲಿ ಸಿಂಗಲ್ಸ್ ಡೇ ಆಚರಿಸುತ್ತಾರೆ. ಮತ್ತೆ ಬೇರೆ ಎಲ್ಲೂ ಈ ಆಚರಣೆ ಜಾರಿಯಲ್ಲಿ ಇದ್ದಂತೆ ಕಾಣುತ್ತಿಲ್ಲ.

ಈ ಪ್ರೇಮಿಗಳ ದಿನದಂದು ಪ್ರೇಮಿಗಳು ಪರಸ್ಪರ ಗಿಫ್ಟ್ ನೀಡುವುದು, ಸಿನಿಮಾ, ಪಾರ್ಕ್ ಎಂದು ಸುತ್ತಾಡುತ್ತಾರೆ. ಆದ್ರೆ ಸಿಂಗಲ್ಸ್ ಏನು ಮಾಡುತ್ತಾರೆ ಅನ್ನೋ ವಿಚಾರ ಈ ಸಾಮಾಜಿಕ ಜಾಲಾತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಒಬ್ಬರೇ ಇರುವವರು ಈ ಪ್ರೇಮಿಗಳ ದಿನದಂದು ಏನು ಮಾಡುತ್ತಾರೆ ಅನ್ನೋದು ಎಲ್ಲರ ಕುತೂಹಲ ಮೂಡಿಸಿದೆ.
ಹಾಗೆ ಇತ್ತೀಚಿಗೆ ಪ್ರೇಮಿಗಳಿಗಿಂತ ಸಿಂಗಲ್ಸ್‌ಗಳಾಗಿ ಉಳಿಯುವವರ ಸಂಖ್ಯೆಯೇ ಹೆಚ್ಚಾಗಿದೆಯಂತೆ. ಆದ್ರೆ ಅವರೆಲ್ಲ ಹೊರಜಗತ್ತಿಗೆ ಮಿಂಗಲ್ ಆಗಿರುವವರಂತೆ ತೋರಿಸಿಕೊಳ್ಳುತ್ತಾರೆ ಅಂತಲೂ ಹೇಳಲಾಗುತ್ತದೆ. ಆದ್ರೆ ಈ ಪ್ರೇಮಿಗಳ ದಿನದಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮೀಮ್‌ಗಳ ಮಳೆಯಾಗುತ್ತಿದೆ. ಅದರಲ್ಲೂ ಎಕ್ಸ್ (ಟ್ವಿಟರ್)ನಲ್ಲಿ ಹಲವು ಬಗೆಯ ಮೀಮ್‌ಗಳು ಹರಿದಾಡಿವೆ.
ಪ್ರೇಮಿಗಳ ದಿನ ಅಂದ್ರೆ ದೊಡ್ಡ ದೊಡ್ಡ ಟೆಡ್ಡಿಗಳು, ಗಿಫ್ಟ್‌ಗಳು, ಹಾರ್ಟ್, ಹೀಗೆ ಹತ್ತಾರು ಗಿಫ್ಟ್ ನೋಡಬಹುದು. ಆದ್ರೆ ಈ ಮೀಮ್‌ಗಳು ಇದನ್ನೇ ಬಂಡವಾಳ ಮಾಡಿಕೊಂಡು ಹಲವು ರೀತಿಯ ತಮಾಷೆಯ ಕಮೆಂಟ್‌ಗಳ ಪಾಸ್ ಮಾಡಿವೆ. ಸಿಂಗಲ್ಸ್ ಈ ದಿನದಂದು ಮನೆಯಲ್ಲೇ ಕಾಲ ಕಳೆಯುತ್ತಾರೆ ಎಂಬ ಮೀಮ್ ಒಂದು ವೈರಲ್ ಆಗಿದೆ.
ಹೀಗಾಗಿ ನಾವಿಂದು ಈ ಪ್ರೇಮಿಗಳ ದಿನದಂದು ನೋಡಿರುವ ಕೆಲವೊಂದು ತಮಾಷೆಯ ಮೀಮ್‌ಗಳನ್ನು ಆರಿಸಿ ತಂದಿದ್ದೇವೆ. ಅದರಲ್ಲಿ ಕೆಲವು ನಿಮ್ಮಲ್ಲಿ ನಗು ತರಿಸುವುದು ಖಚಿತ, ಮತ್ತೆ ಕೆಲವು ಈ ಜಗತ್ತಿನ ಸತ್ಯಾಂಶ ನಿಮ್ಮ ಮುಂದಿಡಬಹುದು. ಸಿಂಗಲ್ಸ್‌ಗಳ ಪಾಡು ಈ ಪ್ರೇಮಿಗಳ ದಿನದಂದು ತಿಳಿಯಬಹುದು. ಇದರಲ್ಲಿ ಬಹುತೇಕ ಸಿಂಗಲ್ಸ್‌ಗಳ ಕುರಿತು ಮಾಡಿರುವ ಮೀಮ್‌ಗಳು ಕಾಣಸಿಗುತ್ತವೆ.
ಇನ್ನು ಪ್ರೇಮಿಗಳ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತೆ, ಈ ದಿನದ ಆಚರಣೆಯ ಹಿಂದೆ ಹಲವು ರೀತಿಯ ಇತಿಹಾಸದ ಕಥೆಗಳಿವೆ. ಆದರೆ ಯಾವುದು ನಿಖರ ಎಂಬುದು ತಿಳಿದಿಲ್ಲ.
ಇನ್ನು ಈ ಜಗತ್ತಿನ 10 ದೇಶಗಲ್ಲಿ ಪ್ರೇಮಿಗಳ ದಿನ ಆಚರಿಸುವಂತಿಲ್ಲ. ಇಲ್ಲಿ ಪ್ರೇಮಿಗಳ ದಿನದ ಆಚರಣೆಯೇ ಇಲ್ಲ ಎಂಬುದು ನಿಮಿಗೆ ಗೊತ್ತಾ? ಹೌದು ನಾವಿಂದು ಇಂತಹ 10 ದೇಶಗಳು ಯಾವುದು ಎಂಬುದನ್ನು ಹೇಳಿದ್ದೇವೆ ನೋಡಿ.
ಅಫ್ಗಾನಿಸ್ತಾನ್: ಇಸ್ಲಾಂ ಆಚರಣೆಯ ದೇಶವಾಗಿರುವ ಅಫ್ಗನ್‌ನಲ್ಲಿ ಪ್ರೇಮಿಗಳ ದಿನ ಆಚರಣೆ ಇಲ್ಲ. ಇದು ಸಂಸ್ಕೃತಿಯ ವಿರುದ್ಧ ಎಂದು ಅವರು ಭಾವಿಸುತ್ತಾರೆ.
ಇರಾನ್: ಇಸ್ಲಾಂ ದೇಶವಾದ ಇರಾನ್‌ನಲ್ಲೂ ಕೂಡ ಪ್ರೇಮಿಗಳ ದಿನ ಆಚರಣೆ ಮಾಡುವಂತಿಲ್ಲ. ಇದು ಪಾಶ್ಚಿಮಾತ್ಯ ಸಂಸ್ಕೃತಿ ಎಂದು ಅಲ್ಲಿನ ಸರ್ಕಾರವೇ ಘೋಷಿಸಿದೆ.
ಪಾಕಿಸ್ತಾನ: ಪಾಕಿಸ್ತಾನದಲ್ಲಿಯೂ ಕೂಡ ಈ ಪ್ರೇಮಿಗಳ ದಿನ ನಿಷಿದ್ಧ. ಆಚರಣೆ ಕಂಡುಬಂದರೆ ಶಿಕ್ಷೆ ಖಚಿತ
ಬ್ರೂನಿ: ಈ ದೇಶದಲ್ಲಿ ಸಾರ್ವಜನಿಕವಾಗಿ ಪ್ರೇಮಿಗಳ ದಿನ ಆಚರಿಸುವಂತಿಲ್ಲ. ಇದು ಇಸ್ಲಾಮಿಕ್ ಮೌಲ್ಯಕ್ಕೆ ವಿರುದ್ಧ ಎಂದು ನಂಬಲಾಗಿದೆ.
ಸೌದಿ ಅರೇಬಿಯಾ: ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರಣಗಳಿಂದಾಗಿ ಪ್ರೇಮಿಗಳ ದಿನ ಆಚರಣೆ ನಿಷೇಧ ಮಾಡಲಾಗಿದೆ.
ಕತಾರ್: ಇಸ್ಲಾಂ ಸಂಸ್ಕೃತಿಗೆ ಇದು ವಿರುದ್ಧ ಎಂಬ ಕಾರಣಕ್ಕೆ ಈ ದಿನ ನಿಷೇಧವಾಗಿದೆ.
ಮಲೇಷ್ಯಾ: ಪ್ರೇಮಿಗಳ ದಿನ ಆಚರಣೆ ಇಲ್ಲಿ ಕಾನೂನು ಬಾಹಿರವಲ್ಲ ಆದ್ರೆ ಪ್ರೇಮಿಗಳ ದಿನದ ಆಚರಣೆಗೆ ಇಲ್ಲಿ ವಿರೋಧವಿದೆ.
ಸೊಮಾಲಿಯಾ: ಧಾರ್ಮಿಕ ನಂಬಿಕೆಗಳಿಂದಾಗಿ ಪ್ರೇಮಿಗಳ ದಿನದ ಆಚರಣೆಯು ಪ್ರೋತ್ಸಾಹಿಸುವುದಿಲ್ಲ, ಹಾಗೆ ಸಾರ್ವಜನಿಕವಾಗಿ ಆಚರಿಸುವಂತಿಲ್ಲ.
ಮೌರಿಟೇನಿಯಾ: ಯುವ ಪ್ರೇಮಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ, ಹಾಗೆ ಪ್ರೇಮಿಗಳ ದಿನದ ಆಚರಣೆ ಕೂಡ ಅಪರೂಪವಾಗಿದೆ.
ಇಂಡೋನೇಷ್ಯಾ: ಇಂಡೋನೇಷ್ಯಾದಲ್ಲಿ ಇತ್ತಿಚಿನ ವರ್ಷಗಳಲ್ಲಿ ಪ್ರೇಮಿಗಳ ದಿನದ ಆಚರಣೆಗೆ ವಿರೋಧ ವ್ಯಕ್ತವಾಗುತ್ತಿದೆ.



Click it and Unblock the Notifications