Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಅಂಬಾನಿ ಮದುವೆ ಜೋರು ಬಲು ಜೋರು, ಮೀಮ್ಸ್ ಕೂಡ ಅಷ್ಟೇ ಜೋರು
ಭಾರತದ ಬಿಗ್ ಫ್ಯಾಟ್ ಮ್ಯಾರೇಜ್ ಎಂದು ಕರೆಲ್ಪಟುವ ಅನಂತ್ ಅಂಬಾನಿ ಮದುವೆ ಸಡಗರ ಕಳೆಗಟ್ಟಿದೆ. ಪ್ರಸಿದ್ಧ ಪಾಪ್ ಗಾಯಕ ಜಸ್ಟೀನ್ ಬೀಬರ್‌ಗೆ ಕೊಟ್ಟಿರುವುದು 86 ಕೋಟಿ, ಇದು ಒಂದು ಉದಾಹರಣೆ ಅಷ್ಟೇ, ಈ ಮದುವೆಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳಿಗೆ, ಪ್ರಸಿದ್ಧ ಮಾಡೆಲ್‌ಗಳಿಗೆ ಕಾರ್ಯಕ್ರಮನೀಡಲು ಕೋಟಿ ಕೋಟಿ ಹಣ ಸುರಿದಿದೆ.

ಪ್ರೀವೆಡ್ಡಿಂಗ್ 1000 ಕೋಟಿ ಖರ್ಚು ಮಾಡಲಾಗಿತ್ತು, ಮದುವೆಗೆ ಅದರ ದುಪ್ಪಟ್ಟು ಖರ್ಚಾಗುತ್ತಿದೆ. ವಿಷಯ ಅದಲ್ಲ ಅನಂತ್ ಅಂಬಾನಿ ಅಪ್ಪ ಮುಖೇಶ್ ಅಂಬಾನಿ ಅಷ್ಟೊಂದು ಕೋಟಿ ಹಣವಿದೆ, ಏಷ್ಯಾದ ಶ್ರೀಮಂತ ಕುಟುಂಬ ಹಾಗಾಗಿ ಮದುವೆಗೆ ಖರ್ಚು ಮಾಡುತ್ತಿರುವುದರಲ್ಲಿ ಆಶ್ವರ್ಯವಿಲ್ಲ, ಆದರೆ ಈಗ ಈ ಕೋಟಿ ಲೆಕ್ಕದ ಮದುವೆ ಮಾಡುತ್ತಿರುವುದು ನಮ್ಮ ಹಣದಿಂದ ಎಂದು ಮೀಮ್ಸ್.
ಮುಖೇಶ್ ಅಂಬಾನಿ ಮಗುನ ಮದುವೆಯ ಖರ್ಚು ಸರಿದೂಗಿಸಲು ರೀಚಾರ್ಜ್ ಬೆಲೆ ಜಾಸ್ತಿ ಮಾಡಿದ್ದಾರೆ ಎಂದು ಟ್ರೋಲ್, ಮೀಮ್ಸ್ ಹರಿದಾಡುತ್ತಿದೆ. ಜಿಯೋ ಬಳಕೆದಾರರಿಗೆ ಗೊತ್ತಿದೆ ಈ ಮೊದಲು ಎಷ್ಟಿತ್ತು ರೀಚಾರ್ಜ್ ಈಗ ಎಷ್ಟಿದೆ , ಅಲ್ಲದೆ ಮೊದಲು ಫ್ರೀ... ಫ್ರೀ... ಜಿಯೋ ಸಿಮ್ ನೀಡಿದ ಅಂಬಾನಿ ಜನರು ಅದನ್ನು ಬಳಸಿ, ಜಿಯೋ ನೆಟ್‌ಗೆ ಅಡೆಕ್ಟ್ ಆದ ಮೇಲೆ ಬೆಲೆ ಏರಿಸುತ್ತಾ ಹೋದರೂ... ಫ್ರೀ ನೀಡುವ ಮೂಲಕ ತನ್ನ ಪ್ರತಿಸ್ಪರ್ಧಿಗಳನ್ನು ಸಮರ್ಥವಾಗಿ ಬಗ್ಗು ಪಡೆಯಿತು. ನಂತರ ನಿಧಾನಕ್ಕೆ ರೀಚಾರ್ಜ್ ಬೆಲೆ ಏರಿಕೆ ಮಾಡಲಾಯಿತು, ಈಗ ನೋಡಿದರೆ ಜೇಬುಗೆ ಕತ್ತರಿ ಹಾಕಿವಷ್ಟು ಬೆಲೆ ಏರಿಕೆ ಮಾಡಿದೆ.
ಈಗ ಮೀಮ್ಸ್‌ಗಳ ಶುರುಮಳೆ... ಹೇಗೆಲ್ಲಾ ಮೀಮ್ಸ್ ಮಾಡ್ತಾ ಇದ್ದಾರೆ ನೋಡಿ
ಬರಿ ಜಿಯೋಜಾರ್ಜ್ ಬೆಲೆ ಮಾತ್ರ ಹೆಚ್ಚಾಗಿಲ್ಲ, ಈ ಮದುವೆಯ ಪ್ರಯೋಜನವನ್ನು ಇತರ ಉದ್ಯಮಿಗಳು ತೆಗೆದುಕೊಳ್ಳುತ್ತಿದ್ದಾರೆ, ಈಗ ಲಾಭ ಮಾಡದಿದ್ದರೆ ಇನ್ಯಾವಾಗ ಮಾಡಲು ಸಾಧ್ಯ ಎಂಬ ಲೆಕ್ಕಚಾರ ಅವರದ್ದು, ಇದರ ಬಗ್ಗೆ ಕೂಡ ಟ್ರೋಲ್ ಬರುತ್ತಿದೆ. ಮುಂಬೈ ಹೋಟೆಲ್‌ಗಳು ತುಂಬಾನೇ ಬೆಲೆ ಹೆಚ್ಚು ಮಾಡಿದ್ದಾರೆ. ಹದಿಮೂರು ಸಾವಿರ ಇದ್ದ ರೂಂನ ಬಾಡಿಗೆ ಏಕಾಏಕಿ 90 ಸಾವಿರ, 1 ಲಕ್ಷ ಏರಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ.
ಅಂಬಾನಿ ಮದುವೆಗೆ ಭಾಗಿಯಾಗುವ ಅತಿಥಿಗಳಿಗೆ ಡ್ರೆಸ್‌ಕೋಡ್ ಇದೆ
ಹೌದು ಅವರು ವಿದೇಶದಿಂದಲೇ ಬಂದಿರಲಿ, ಈ ಮದುವೆಯಲ್ಲಿ ಭಾಗಿಯಾಗಲು ಭಾರತದ ಉಡುಗೆ ತೊಡುಗೆಯಲ್ಲಿ ಬರಬೇಕು, ಜಸ್ಟೀನ್ ಬೀಬರ್‌ಗೆ ಶೆರವಾನಿ ತೊಡಿಸಲಾಗಿದೆ, ಅವರು ಅಷ್ಟೊಂದು ಚೆನ್ನಾಗಿ ಕಾಣುತ್ತಿದ್ದಾರೆ ಕೂಡ. ಅದು ಕೂಡ ಮೀಮ್ಸ್ ಆಗಿದೆ. ಜಸ್ಟಿನ್ ಬೀಬರ್ ಅವರ ಮದುವೆಗೆ ಹೇಗೆ ಡ್ರೆಸ್ ಮಾಡಿದರು, ಅಂಬಾನಿ ಮದುವೆಗೆ ಬಂದಾಗ ಹೇಗೆ ಡ್ರೆಸ್ ಮಾಡಿದರು ಎಂಬುವುದು ಟ್ರೋಲ್ ಆಗುತ್ತಿದೆ.
ಅಂಬಾನಿ ಮದುವೆಯಲ್ಲಿ ಪ್ರತಿಯೊಂದು ವಿಶೇಷವೇ.... ಇಂದ್ರಲೋಕದ ಬಗ್ಗೆ ಕತೆಯಲ್ಲಿ ಕೇಳಿದ್ದೇವೆ, ಆದರೆ ನಿಜ ಜೀವನದಲ್ಲಿ ನಾವು ವೈಭೋಗ ನೋಡುತ್ತಿರುವುದು ಈ ಮದುವೆಯಲ್ಲಿ ನೋಡಿ....



Click it and Unblock the Notifications
