Latest Updates
-
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ!
ನಿಮ್ಮ ಭವಿಷ್ಯದ ಮಗು ಹೇಗಿರಲಿದೆ..!? ಎಐ ನೀಡುತ್ತೆ ನಿಖರ ಫೋಟೋ.!
ಭೂಮಿ ಮೇಲಿನ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಮುಂದಿನ ಜೀವನ ಹೇಗಿರಲಿದೆ, ಭವಿಷ್ಯದಲ್ಲಿ ನಾವು ಹೇಗಿರುತ್ತೇವೆ. ನಾನು ಹೇಗಿರುತ್ತೇನೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತೆ. ಅದರಲ್ಲೂ ಭವಿಷ್ಯದಲ್ಲಿ ನಾನು ಯಾವ ರೀತಿ ಜೀವನ ಹೊಂದಿರುತ್ತೇನೆ. ಯಾರನ್ನು ಮದುವೆಯಾಗುತ್ತೇನೆ? ಯಾವಾಗ ಆಗುತ್ತೇನೆ? ಯಾವ ಕೆಲಸ ಮಾಡುತ್ತೇನೆ ಹೀಗೆ ಜೀವನ ಕುರಿತ ಹಲವು ವಿಚಾರ ಮೊದಲೇ ತಿಳಿಯುವ ಆಸಕ್ತಿ ಅವನಲ್ಲಿ ಯಾವಾಗಲು ಇದ್ದೇ ಇರುತ್ತೆ.
ಹಾಗೆ ಜ್ಯೋತಿಷ್ಯಗಳ ನಂಬುವವರು ಅವರು ಹೇಳುವ ಹಲವು ವಿಚಾರಗಳನ್ನು ನಂಬುತ್ತಾರೆ ಕೂಡ. ಆದ್ರೆ ಈಗ ತಂತ್ರಜ್ಞಾನದ ಯುಗದಲ್ಲಿ ಎಲ್ಲವೂ ಅಂಗೈನಲ್ಲಿ ಸಿಗುತ್ತಿದೆ. ಅಚ್ಚರಿ ಅಂದರೆ ಎಐ (Artificial Intelligence) ಈಗ ನಮ್ಮ ನಡುವೆ ನಾವು ಊಹಿಸಲಾಗದಷ್ಟು ಮುಂದೆ ಸಾಗಿದೆ. ಮಾನವರೇ ಸೃಷ್ಟಿಸಿದ ಈ ಎಐ ತಂತ್ರಜ್ಞಾನ ಮಾನವರಿಗೆ ಸವಾಲು ಒಡ್ಡುವ ಮಟ್ಟಕ್ಕೆ ಬೆಳೆದಿದೆ.

ಈಗ ಎಐಯಲ್ಲಿ ನಿಮ್ಮ ಭವಿಷ್ಯದ ಮಗು ಹೇಗಿರಲಿದೆ ಎಂಬುದನ್ನು ಕೂಡ ನೀವು ತಿಳಿದುಕೊಳ್ಳಬಹುದಂತೆ. ಹೌದು ನಿಮಗೆ ಅಚ್ಚರಿ ಆಗಬಹುದು, ನಿಮಗಿನ್ನು ಮಕ್ಕಳಾಗದೆ ಇದ್ದರೆ ಅಥವಾ ನೀವು ಮದುವೆಯಾಗಿ ಇನ್ನು ಮಕ್ಕಳು ಆಗದೆ ಇದ್ದರೆ ನಿಮ್ಮಿಬ್ಬರಿಗೆ ಜನಿಸುವ ಮಕ್ಕಳು ಯಾವ ರೀತಿ ಕಾಣಿಸುತ್ತಾರೆ ಎಂಬುದನ್ನು ಬಹುತೇಕ ಖಚಿತವಾಗಿ ಎಐ ತಂತ್ರಜ್ಞಾನ ನಿಮ್ಮ ಮುಂದಿಡಲಿದೆ.
ಎಐ ತಂತ್ರಜ್ಞಾನ ಬರುವ ಮುನ್ನವೇ ನಿಮ್ಮ ಮಕ್ಕಳ ಭವಿಷ್ಯದ ಮುಖವನ್ನು ನೀವು ನೋಡಬಹುದಿತ್ತು, ಇದಕ್ಕೆಂದೇ ಹತ್ತು ಹಲವು ಆಪ್‌ಗಳು ಪ್ಲೇಸ್ಟೋರ್, ವೆಬ್‌ಸೈಟ್, ಆಪಲ್ ಸ್ಟೋರ್‌ನಲ್ಲಿ ಲಭ್ಯವಿದ್ದವು. ಇವು ನಿಮ್ಮ ಫೋಟೋಗಳ ಬಳಸಿಕೊಂಡು ನಿಮ್ಮ ಮುಖ ಚಹರೆಯನ್ನೇ ಹೋಲುವಂತೆ ನೀವು ಚಿಕ್ಕವರಿದ್ದಾಗ ಹೇಗಿದ್ದಿರಿ ಎಂಬುದನ್ನು ನಿಮ್ಮ ಮುಂದೆ ಇಡುತ್ತಿತ್ತು. ಆದರೆ ಎಐ ತಂತ್ರಜ್ಞಾನ ಇದಕ್ಕಿಂತ ಸ್ವಲ್ಪ ಭಿನ್ನವಾಗಿದೆ.
ಎಐನಲ್ಲಿ ನಿಮ್ಮ ಫೋಟೋ ನಿಮ್ಮ ಸಂಗಾತಿಯ ಫೋಟೋವನ್ನು ಹಾಕಿದ ಬಳಿಕ ಅದನ್ನು ಎಐ ತುಲನೆ ಮಾಡಿದ ಬಳಿಕ ನಿಮ್ಮ ಭವಿಷ್ಯದ ಮಗು ಈ ರೀತಿ ಜನಿಸಲಿದೆ ಎಂಬ ಉತ್ತರ ನಿಮ್ಮ ಮುಂದಿಡಲಿದೆ. ಇದು ಉಳಿದೆಲ್ಲಾ ಆಯ್ಕೆಗಳಿಗಿಂತ ಹೆಚ್ಚು ನಿಖರವಾಗಿ ಹೇಳಲಿದೆ. ಇತ್ತೀಚಿಗೆ ರೆಡ್ ಇಟ್ ಎಂಬ ಮಾಧ್ಯಮದಲ್ಲಿ ಬಳಕೆದಾರರೊಬ್ಬರು ಈ ಎಐ ರಚಿಸಿದ ಭವಿಷ್ಯದ ಮಗುವಿನ ಚಿತ್ರ ಹಾಗೂ ಅದರ ಹಿಂದಿನ ಕಥೆ ಹಂಚಿಕೊಂಡಿದ್ದರು. ಈ ಬರಹ ಬಹಳ ವೈರಲ್ ಆಗಿತ್ತು.
ಅವರ ಪ್ರಕಾರ ಎಐ ತಂತ್ರಾಂಶ ಸೃಷ್ಟಿಸಿದ ಅವರ ಭವಿಷ್ಯ ಮಗುವಿನ ಚಿತ್ರ ಬಹಳ ವಿಚಿತ್ರ ಎನಿಸಿತ್ತಂತೆ. ಪತಿ ಹಾಗೂ ಪತ್ನಿಯ ಫೋಟೋವನ್ನು ವಿಮರ್ಷೆಗೆ ಒಳಪಡಿಸಿ ನೀಡಿದ್ದ ಮಗುವಿನ ಚಿತ್ರವು ಇಬ್ಬರ ಮುಖಕ್ಕೂ ಹೊಂದಿಕೆಯಾಗುತ್ತಿರಲಿಲ್ಲ. ಇದು ಎಐನಲ್ಲಿ ಮೂಡುವ ಸಾಮಾನ್ಯ ಮಕ್ಕಳ ಚಿತ್ರದಂತೆಯೇ ಇತ್ತು ಎಂದು ಅವರು ಹೇಳಿಕೊಂಡಿದ್ದರು.
ಅವರ ಈ ಬರಹ ಬಹಳ ವೈರಲ್ ಆಗಿತ್ತು. ಎಐನಲ್ಲಿ ನಿಖರವಾಗಿ ಭವಿಷ್ಯದ ಫೋಟೋಗಳನ್ನು ಪಡೆಯಲು ಸಾಧ್ಯ ಎಂಬ ಬಹುದೊಡ್ಡ ಯಶಸ್ಸಿನ ನಡೆಯಲ್ಲಿ ಈ ಪ್ರಕರಣ ವಿಶೇಷ ಎನಿಸಿತ್ತು. ಆದರೆ ಅವರು ಯಾವ ಎಐ ಮಾಡೆಲ್ ಬಳಸಿದ್ದಾರೆ ಎಂಬುದನ್ನು ಹೇಳಿರಲಿಲ್ಲ. ಹೀಗಾಗಿ ಅವರ ಎಐ ಮಾಡೆಲ್‌ನಲ್ಲಿ ಭವಿಷ್ಯದ ಮಗುವಿನ ಚಿತ್ರದ ಕುರಿತಾದ ಉತ್ತರ ನೀಡಲು ಸೂಕ್ತ ತಂತ್ರಾಂಶ ಕಾರ್ಯನಿರ್ವಹಿಸಿಲ್ಲ ಎಂಬುದಾಗಿ ವಿಶ್ಲೇಷಣೆ ಮಾಡಲಾಗಿತ್ತು.
ಹಾಗೆ ಮಗು ಎನ್ನುವುದು ತಂದೆ ಹಾಗೂ ತಾಯಿಯ ಸಂತಸ, ಖುಷಿ ಹೆಚ್ಚಿಸುವ ಒಂದು ಸುಂದರ ಗಳಿಗೆಯಾಗಿರುತ್ತದೆ, ಅದನ್ನು ಮೊದಲೇ ಯಾರು ಕೂಡ ನಾಶ ಮಾಡಬಾರದು. 9 ತಿಂಗಳ ನಂತರ ಜನಿಸುವ ಮಗುವಿನ ಕುರಿತು ಆ ಕುತೂಹಲ ಹಾಗೆಯೇ ಉಳಿಯಲು ಬಿಡಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಇನ್ನು ಕೆಲವು ಟೆಕ್ ತಂತ್ರಜ್ಞರು ಈ ಕುರಿತಂತೆ ವಿಭಿನ್ನ ಅಭಿಪ್ರಾಯ ಹಂಚಿಕೊಂಡಿದ್ದರು.



Click it and Unblock the Notifications