Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಚಿನ್ನ, ವಜ್ರಕ್ಕಿಂತಲೂ 10 ಗ್ರಾಮ್ ಮರದ ತುಂಡು ದುಬಾರಿ..! ಇದು ಯಾವ ಮರ ಗೊತ್ತಾ?
ಚಿನ್ನ, ಬೆಳ್ಳಿ, ವಜ್ರಕ್ಕಿಂತಲು ದುಬಾರಿ ವಸ್ತು ಯಾವುದು ಅಂದ್ರೆ ಎಲ್ಲರು ಕೆಲವು ಸಮಯ ಆಲೋಚಿಸಿರಬಹುದು. ಏಕೆಂದರೆ ಭೂಮಿ ಮೇಲಿನ ದುಬಾರಿ ವಸ್ತುಗಳು ಅಂದ್ರೆ ನಮಗೆಲ್ಲಾ ಮೊದಲು ನೆನಪಾಗೋದು ಚಿನ್ನ, ವಜ್ರ. ಆದ್ರೆ ಇದಕ್ಕಿಂತಲೂ ದುಬಾರು ವಸ್ತುಗಳು ಭೂಮಿ ಮೇಲಿವೆ. ಹಾಗೆ ಅತ್ಯಂತ ದುಬಾರಿಯ ಜೊತೆಗೆ ಅಪರೂಪವೂ ಆಗಿವೆ. ಹಾಗಾದ್ರೆ ಅಂತಹ ಕೆಲವು ವಸ್ತುಗಳಲ್ಲಿ ಮರದ ತೊಗಟೆ ಸಹ ಒಂದು ಎಂದರೆ ನೀವು ನಂಬುತ್ತೀರಾ?
ಹೌದು ಈ ವಿಶೇಷ ಮರ ಚಿನ್ನಕ್ಕಿಂತಲೂ ದುಬಾರಿ. ನೀವು ರಕ್ತ ಚಂದನದ ಬಗ್ಗೆ ಕೇಳಿರಬಹುದು. ದುಬಾರಿ ಮರಗಳ ಸಾಲಿನಲ್ಲಿ ಇದು ಕೂಡ ಒಂದು ಹಾಗೆ ಶ್ರೀಗಂಧದ ಮರ ಕೂಡ ಬಹಳ ಬೆಲೆ ಬಾಳುತ್ತದೆ. ಆದ್ರೆ ಈ ಎರಡು ಮರಗಳಿಗಿಂತಲೂ ಹಾಗೆ ನೀವು ಊಹಿಸದಷ್ಟು ದುಬಾರಿಯಾಗಿರುವ ಮರ ಕೂಡ ಇದೆ. ಅಚ್ಚರಿ ಅಂದರೆ ಈ ಮರದ ಕೇವಲ 10 ಗ್ರಾಮ್ ತೂಕಕ್ಕೆ ಇರುವ ಬೆಲೆ 1 ಕೆ.ಜಿ ಚಿನ್ನಕ್ಕೆ ಸಮವಾಗಲಿದೆ ಎಂದರೆ ನಂಬುತ್ತೀರಾ?

ಒಂದು ಒಂದು ಕೆ.ಜಿ ಚಿನ್ನಕ್ಕೆ ನೀಡುವ ಹಣ ಈ ಮರದ 10 ಗ್ರಾಮ್ ತೊಗಟೆಗೆ ನೀಡಬೇಕು. ಹಾಗಾದ್ರೆ ಯಾವುದದು ಮರ? ಎಲ್ಲಿ ನೋಡಲು ಸಿಗುತ್ತೆ? ಅದರ ಉಪಯೋಗವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಕೈನಮ್ ಎಂದು ಕರೆಯಲ್ಪಡುವ ಮರದ ಕೇವಲ 10 ಗ್ರಾಮ್ ಕೆ.ಜಿ ಚಿನ್ನಕ್ಕೆ ಸಮನಾದ ಬೆಲೆ ಹೊಂದಿದೆ. ಇದನ್ನು ದೇವರ ಮರ ಎಂದು ಕೂಡ ಕರೆಯುತ್ತಾರೆ.
ಆಗ್ನೇಯ ಏಷ್ಯಾ, ಭಾರತ, ಚೀನಾ ಮತ್ತು ಮಧ್ಯಪ್ರಾಚ್ಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಅಗರ್‌ವುಡ್ ವಿಶೇಷ ಸುವಾಸನೆಯ ಕಾರಣದಿಂದ ಹೆಸರುವಾಸಿಯಾಗಿದೆ. ಇದರ ರಾಳದಲ್ಲಿನ ಪರಿಮಳಕ್ಕೆ ದುಬಾರಿ ಬೆಲೆ ಇದೆ. ಸುಗಂಧ ದ್ರವ್ಯದ ಉದ್ಯಮ ಈ ರಾಳ ಇಲ್ಲದೆ ನಡೆಯೋದಿಲ್ಲ. ಹಾಗೆ ಸಾರ ಭರಿತ ತೈಲವಾದ ಔಡ್ (ಪರ್ಫ್ಯೂಮ್) ಉತ್ಪಾದನೆಯಲ್ಲಿ ಇದು ನಿರ್ಣಾಯಕ ಪಾತ್ರ ವಹಿಸಲಿದೆ.
ಇದರ ಸಾಟಿಯಿಲ್ಲದ ಪರಿಮಳವು ಬೇರೆ ಯಾವುದೇ ವಸ್ತುವಿನಿಂದ ಅಥವಾ ರಾಸಾಯನಿಕ ಸಂಯುಕ್ತದಿಂದಲೂ ಪಡೆಯಲು ಸಾಧ್ಯವಿಲ್ಲ ಹೀಗಾಗಿ ನೈಸರ್ಗಿಕವಾಗಿ ಸಿಗುವ ಈ ಮರದ ರಾಳ ಹಾಗೂ ತೊಡಟೆಗೆ ಬಹಳ ದುಬಾರಿ ಹಣ ನೀಡಲಾಗುತ್ತದೆ. ವರದಿಯ ಪ್ರಕಾರ ಕೇವಲ 10 ಗ್ರಾಂ ಕೈನಮ್ ನ ದರ 85.63 ಲಕ್ಷ (ಸುಮಾರು $103,000) ಎಂದು ಅಂದಾಜಿಸಲಾಗಿದೆ. ಇದು ವಿಶ್ವದ ಅತ್ಯಂತ ದುಬಾರಿ ನೈಸರ್ಗಿಕ ವಸ್ತುಗಳಲ್ಲಿ ಒಂದಾಗಿದೆ. 83 ಲಕ್ಷ ಅಂದರೆ ನೀವು ಬಹುತೇಕ ಒಂದು ಕೆ.ಜಿ ಚಿನ್ನ ಖರೀದಿಸಬಹುದು.
ಈ ಮರ ಎಷ್ಟು ವರ್ಷ ಹಳೆಯದಾಗಿದೆ ಎಂಬುದರ ಆದಾರ ಮೇಲೆಯೂ ದರ ನಿಗದಿಯಾಗುತ್ತದೆ. 600 ವರ್ಷ ಹಳೆಯ ಕೈಮ್‌ನ 16 ಕೆ.ಜಿಯ ತುಂಡು 171 ಕೋಟಿ ರೂಪಾಯಿಗೆ ಇತ್ತೀಚಿಗೆ ಮಾರಾಟವಾಗಿತ್ತು. ಇದು ದಾಖಲೆಯಾಗಿತ್ತು, ಹೀಗಾಗಿ ಕೈಮನ್ ಮರಗಳಿಗೆ ಅಷ್ಟೊಂದು ಬೇಡಿಕೆ ಇದೆ. ಕೈನಮ್‌ನ ಅಸಾಧಾರಣ ಮೌಲ್ಯದ ಹಿಂದಿನ ಕಾರಣ ಅದು ಅಪರೂಪದ ಮರವಾಗಿದೆ. ಹಾಗೆ ಅದರಿಂದ ತಯಾರಿಸಲ್ಪಡುವ ಉತ್ಪನ್ನಗಳು ಕೂಡ ದುಬಾರಿ ಜೊತೆಗೆ ಐಷಾರಾಮಿ ಎನಿಸಿದೆ.
ಆದ್ರೆ ಮರದ ಎಲ್ಲಾ ಭಾಗವು ಈ ರೀತಿಯ ಪರಿಮಳ ಹಾಗೆ ಉ್ಪನ್ನ ತಯಾರಿಕೆಗೆ ಸೂಕ್ತವಾಗಿಲ್ಲ. ಇಡೀ ಮರದಲ್ಲಿ ಕೆಲವೇ ಕೆ.ಜಿ ಇದಕ್ಕಾಗಿ ಬಳಸಲಾಗುತ್ತದೆ. ಹೀಗಾಗಿ ಈ ಮರಕ್ಕೆ ಇಷ್ಟೋಂದು ಬೇಡಿಕೆ. ಹಾಗೆ ಇದು ಕೆಲವು ಔಷಧಿ ಪದಾರ್ಥಗಳ ತಯಾರಿಕೆಯಲ್ಲೂ ಬಳಸಲಾಗುತ್ತದೆ.



Click it and Unblock the Notifications
