Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಆಟೋ ಓಡಿಸದೆ ನಿತ್ಯ 30 ಸಾವಿರ ದುಡಿಯುವ ಚಾಲಕ..! ಆತನ ಟ್ರಿಕ್ಸ್ ಏನು ಗೊತ್ತಾ?
ಜನ ಈಗ ಅಡ್ವಾನ್ಸ್ ಆಗುತ್ತಿದ್ದಾರೆ. ಹಣ ಮಾಡೋಕೆ ಯಾವೆಲ್ಲಾ ದಾರಿ ಇದೇ ಎಂಬುದನ್ನು ನೀವ್ಯಾರು ಯೋಚಿಸದ ರೀತಿಯಲ್ಲಿ ಮಾಡಿರುತ್ತಾರೆ. ಅದರಲ್ಲೂ ಸ್ಟಾರ್ಟಪ್‌ಗಳು, ಹೊಸ ರೀತಿಯ ಐಡಿಯಾಗಳು ಜನರನ್ನು ಕೂಡ ಅಚ್ಚರಿಗೆ ತಳ್ಳಲಿದೆ. ಹಾಗೆ ಇಲ್ಲೊಬ್ಬ ಆಟೋ ಡ್ರೈವರ್ ಕೂಡ ಅಚ್ಚರಿಯ ಐಡಿಯಾದಿಂದ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾನೆ. ಯಾರು ಕೂಡ ಊಹಿಸದ ರೀತಿಯ ಆತನ ಐಡಿಯಾ ತಿಂಗಳಿಗೆ 5ರಿಂದ 8 ಲಕ್ಷ ರೂಪಾಯಿ ಗಳಿಸುತ್ತಿರುವುದು ಎಲ್ಲರನ್ನು ಅಚ್ಚರಿಗೆ ತಳ್ಳಿದೆ.
ಮುಂಬೈಯಲ್ಲಿರುವ ಆಟೋ ಚಾಲಕ ತನ್ನ ಆಟೋ ಓಡಿಸದೆಯೇ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾನೆ. ಆತನ ನಿತ್ಯದ ಆದಾಯ ಅಂದಾಜು 30 ಸಾವಿರ ಆಗಿರಬಹುದು. ಹೌದು ಆತನ ಒಂದು ಐಡಿಯಾದಿಂದ ಯಾವ ಐಟಿ ಉದ್ಯೋಗಿಗೂ ಕಡಿಮೆ ಇಲ್ಲದಂತೆ ಆದಾಯ ತಂದು ಕೊಡುತ್ತಿದೆ. ಹಾಗಾದ್ರೆ ಆತನಿಗೆ ಇಷ್ಟೊಂದು ಆದಾಯ ತರುತ್ತಿರುವ ಐಡಿಯಾ ಯಾವುದು? ತಿಂಗಳಿಗೆ ಆತ 8 ಲಕ್ಷ ರೂಪಾಯಿವರೆಗೂ ದುಡಿಯುತ್ತಿರುವುದು ಹೇಗೆ ಗೊತ್ತಾ?

ಆತ ಮನೆಯಿಂದ ಬೆಳಗ್ಗೆ ಆಟೋ ತೆಗೆದುಕೊಂಡು ಹೋದರೆ ಸಂಜೆ ಬರುವಾಗ ಕನಿಷ್ಟ 20ರಿಂದ 30 ಸಾವಿರ ದುಡಿಯುತ್ತಾನೆ. ಆದ್ರೆ ಆತ ಆಟೋ ಓಡಿಸುವುದಿಲ್ಲ. ಹೌದು ನಿಮಗೂ ಇದು ಅಚ್ಚರಿ ತರಬಹುದು. ಈ ಆಟೋ ಓಡಿಸಿದರೂ ಇಷ್ಟು ಹಣ ದುಡಿಯಲು ಆಗೋದಿಲ್ಲ ಆದ್ರೆ ಆತ ಆಟೋ ಓಡಿಸದೆ ಇಷ್ಟೊಂದು ಹಣ ಗಳಿಸುತ್ತಿರುವುದು ಹೇಗೆ ಅನ್ನೋದು ನಿಮಗೂ ಕಾಡುತ್ತಿರುವ ಪ್ರಶ್ನೆಯಾಗಿರಬಹುದು. ಹಾಗಾದ್ರೆ ಅದರ ಉತ್ತರ ಇಲ್ಲಿದೆ ನೋಡಿ.
ಆಟೋ ಡ್ರೈವರ್ ದುಡಿಮೆಗೆ ಕಾರಣವಾಗಿರುವುದು ಮುಂಬೈಯಲ್ಲಿರುವ ಯುಎಸ್ ಕಾನ್ಸುಲೇಟ್ ಕಚೇರಿ. ಹೌದು ಈ ಕಚೇರಿಯಲ್ಲಿ ವೀಸಾ ಕುರಿತಾದ ಹಾಗೆ ಪಾಸ್‌ಪೋರ್ಟ್ ಕುರಿತಾದ ವ್ಯವಹಾರಗಳಿಗೆ ಜನರು ಆಗಮಿಸುತ್ತಾರೆ. ಇದನ್ನೇ ಆಟೋ ಚಾಲಕ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾನೆ. ಹೌದು ಯುಸ್ ಕಾನ್ಸುಲೇಟ್ ಕಚೇರಿಯ ಒಳಗೆ ನಿಮ್ಮ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ದಾಖಲೆಗಳನ್ನು ಮಾತ್ರವೇ ಒಳಗೆ ತೆಗದುಕೊಂಡು ಹೋಗಲು ಅನುಮತಿ ನೀಡಲಾಗುತ್ತದೆ.
ಈ ನಿಯಮವೇ ಈ ಆಟೋ ಡ್ರೈವರ್‌ಗೆ ಬಂಡವಾಗಳವಾಗಿದೆ. ಆತ ಈ ಕಚೇರಿಗೆ ಬರುವವರ ಬಳಿ ತಮ್ಮ ಲಗೇಜ್ ಅನ್ನು ಅಥವಾ ಬ್ಯಾಗ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಹೊಸ ವ್ಯವಹಾರಕ್ಕೆ ಮುಂದಾಗಿದ್ದಾನೆ. ಏಕೆಂದರೆ ಬ್ಯಾಗ್ ಇಡಲು ಕಚೇರಿಯಲ್ಲಿ ಬೇರೆ ವ್ಯವಸ್ಥೆ ಇಲ್ಲ. ಹೊರಗೂ ಕೂಡ ಎಲ್ಲಿಯೂ ಇಡಲಾಗುವುದಿಲ್ಲ. ನಿಮ್ಮ ವಾಹನವನ್ನು ಸಹ ಹೊರಗೆ ನಿಲ್ಲಿಸಿರುತ್ತೀರಿ. ಹೀಗಾಗಿ ನೀವು ಬೇರೊಬ್ಬರ ಸಹಾಯ ಪಡೆಯಬೇಕಾಗುತ್ತದೆ.
ಇದನ್ನೇ ಐಡಿಯಾ ಆಗಿ ಬಳಸಿಕೊಂಡಿರುವ ಆಟೋ ಡ್ರೈವರ್ ಅಲ್ಲಿಗೆ ಬರುವ ಗ್ರಾಹಕರ ಬ್ಯಾಗ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು 1 ಸಾವಿರ ರೂಪಾಯಿ ಶುಲ್ಕ ವಿಧಿಸುತ್ತಾನೆ. ಅವರು ಎಷ್ಟೇ ಸಮಯ ಬೇಕಾದರು ಕಚೇರಿಯಲ್ಲಿ ಕಳೆಯಬಹುದು. ಆ ಬ್ಯಾಗ್ ಅನ್ನು ಆತ ಸುರಕ್ಷಿತವಾಗಿ ಇಡುತ್ತಾನೆ. ನಿತ್ಯ 20ರಿಂದ 30 ಮಂದಿಯ ಬ್ಯಾಗ್ ಅನ್ನು ಆತ ಸುರಕ್ಷಿತವಾಗಿ ಇಡಲು ಮುಂದಾಗುತ್ತಾನೆ. ಹೀಗಾಗಿ 20ರಿಂದ 30 ಸಾವಿರ ನಿತ್ಯ ಆತನ ದುಡಿಮೆ ಆಗಿರಲಿದೆ.
ಈ ಕುರಿತಾಗಿ ಬೆಂಗಳೂರು ಮೂಲದ ರಾಹುಲ್ ರೂಪಾಣಿ ಲಿಂಕ್ಡ್‌ಇನ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗ ವೈರಲ್ ಸಹ ಆಗುತ್ತಿದೆ.
ಈ ಆಟೋ ಚಾಲಕನ ಹೊಸ ಐಡಿಯಾ ಕುರಿತು ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಹಾಗೆ ಆತನಿಗೆ 1 ಸಾವಿರ ಶುಲ್ಕ ನೀಡಿ ಬ್ಯಾಗ್ ನೀಡುವುದರಿಂದ ನನಗೆ ಯಾವುದೇ ಸಮಸ್ಯೆ ಆಗಲಿಲ್ಲ. ಬ್ಯಾಗ್ ಕುರಿತಾದ ಆತಂಕ ಕೂಡ ಇರುವುದಿಲ್ಲ. ಇದೊಂದು ಒಳ್ಳೆಯ ಐಡಿಯಾ ಎಂದು ಹೇಳಿಕೊಂಡಿದ್ದಾರೆ. ಆತನ ಈ ಹೊಸ ಐಡಿಯಾ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.



Click it and Unblock the Notifications
