Latest Updates
-
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು!
ಗಂಡು ಹುಳುವಿನ ಸಂಪರ್ಕವಿಲ್ಲದೆಯೂ ಲಕ್ಷಾಂತರ ವರ್ಷದಿಂದ ಬದುಕುಳಿದ ಜೀವಿ!!
ಯಾವುದಾದರು ಜೀವ ಸಂಕುಲ ಬದುಕುಳಿಯಬೇಕಾದರೆ ಅದು ತನ್ನ ಮುಂದಿನ ಪೀಳಿಗೆಯನ್ನು ಭೂಮಿಗೆ ತರಬೇಕು. ಇಲ್ಲದಿದ್ದರೆ ನಶಿಸಿ ಹೋಗುತ್ತದೆ. ಎಲ್ಲಾ ಜೀವಿಗಳು ತಮ್ಮ ಸಂತಾನೋತ್ಪತ್ತಿಯ ಮೂಲಕ ಮುಂದಿನ ಪೀಳಿಗೆಯನ್ನು ಭೂಮಿಯಲ್ಲಿ ಜೀವಂತವಾಗಿಡಲು ಯತ್ನಿಸುತ್ತವೆ. ಆದ್ರೆ ಯಾವ ಜೀವಿಗಳು ತಮ್ಮ ಸಂತಾನೋತ್ಪತ್ತಿ ನಿಲ್ಲಿಸುತ್ತವೆಯೋ ಆಗ ಭೂಮಿಯಿಂದ ಕಣ್ಮರೆಯಾಗುತ್ತವೆ.
ಆದ್ರೆ ಸಂತಾನೋತ್ಪತ್ತಿ ಹಾಗೂ ಮಿಲನ ಕ್ರಿಯೆಗೆ ಒಳಗಾಗದೆಯೇ ಲಕ್ಷಾಂತರ ವರ್ಷದಿಂದ ಭೂಮಿಯಲ್ಲಿ ಒಂದು ಜೀವಿ ಬದುಕುಳಿದಿದೆ. ನಿಮಗಿದು ಅಚ್ಚರಿ ತರಬಹುದು. ಆದರೂ ಇದೊಂದು ಅಚ್ಚರಿಯ ವಿದ್ಯಮಾನ ಎಂದರೂ ತಪ್ಪಾಗುವುದಿಲ್ಲ. ಇದು ವಿಜ್ಞಾನಕ್ಕೊಂದು ಸವಾಲು ಹಾಕುವಂತಹ ಕ್ರಿಯೆಯಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸುವ ವಿಚಾರವಾಗಿದೆ.

ಸಂತಾನೋತ್ಪತ್ತಿ ಮಾಡದೆಯೇ ಲಕ್ಷಾಂತರ ವರ್ಷದಂದ ಬದುಕುಳಿದ ಆ ಜೀವಿ ಒಂದು ಅರಾಕ್ನಿಡ್ ಆಗಿದೆ. ಅಂದರೆ ಮೈಟ್ಸ್ ಅಥವಾ ಚಿಕ್ಕ ಹುಳು. ಇದು ಸಾಮಾನ್ಯವಾಗಿ ನಿಮ್ಮ ಬರಿಗಣ್ಣಿಗೆ ಕಾಣುವುದಿಲ್ಲ. ಆದರೆ ಭೂಮಿಯಲ್ಲಿ ಲಕ್ಷಾಂತರ ವರ್ಷದಿಂದಲೂ ಬದುಕುಳಿದಿದೆ. ಅದೂ ಸಹ ಯಾವುದೇ ಗಂಡು ಹೆಣ್ಣಿನ ಸಂಯೋಗವಿಲ್ಲದೆ, ಸಂತಾನೋತ್ಪತ್ತಿ ಕ್ರಿಯೆಗೆ ಒಳಗಾಗದೇ ಇದು ಉಳಿದಿರುವುದು ಅಚ್ಚರಿ ಮೂಡಿಸಿದೆ.
ಈ ಕ್ರಿಯೆಗೆ ಮೆಸೆಲ್ಸನ್ ಪರಿಣಾಮ ಎಂದು ಕರೆಯಲಾಗಿದೆ. ಇದರಲ್ಲಿ ಗಂಡು ವರ್ಣತಂತುಗಳ ಸಹಾಯವೇ ಇಲ್ಲದೆ ಹೆಣ್ಣು ಹುಳು ಸಂತಾನೋತ್ಪತ್ತಿ ಮಾಡುವ ಅಪರೂಪದ ಪ್ರಕ್ರಿಯೆಯಾಗಿದೆ. ವಿಕಸನದ ಯಾವುದೇ ಸಿದ್ದಾಂತದಲ್ಲಿ ಈ ರೀತಿ ಗಂಡು ಹುಳುಗಳ ಸಂಪರ್ಕವಿಲ್ಲದೆ ಸಂತಾನೋತ್ಪತ್ತಿ ಮಾಡುವಂತಹ ಪ್ರಕ್ರಿಯೆ ಬಹಳ ಅಪರೂಪವಾಗಿದೆ.
ಅದರಲ್ಲೂ ಒಣಗು ಹುಳದ ರೀತಿ ರಚನೆ ಹೊಂದಿರುವ ಒರಿಬಾಟಿಡ್ ಎಂಬ ಹುಳು ಮಿಟೆ ಪ್ಲಾಟಿನೋಥ್ರಸ್ ಪೆಲ್ಟಿಫರ್ ಪಾರ್ಥೆನೋಜೆನೆಸಿಸ್ ಎಂಬ ಪ್ರಕ್ರಿಯೆಯ ಮೂಲಕ ಸಂತಾನೋತ್ಪತ್ತಿ ಮಾಡುತ್ತದೆ. ಇಲ್ಲಿ ಗಂಡು ಹುಳುಗಳ ಸಂಪರ್ಕವೇ ಇಲ್ಲದೆ ಇದು ಸಂತಾನೋತ್ಪತ್ತಿ ಮಾಡುವ ಕಾರಣ ಲಕ್ಷಾಂತರ ವರ್ಷದಿಂದಲೂ ಭೂಮಿ ಮೇಲೆ ಬದುಕುಳಿದಿದೆ.
ಮೊದಲ ಬಾರಿಗೆ ಸಂಶೋಧಕರು ಕ್ರೋಮೋಜೋಮ್‌ಗಳ ಪರೀಕ್ಷೆ ಹಾಗೂ ಜೀನ್‌ಗಳ ವರ್ಗಾವಣೆ ಕುರಿತಂತೆ ಅಧ್ಯಯನ ನಡೆಸಿದ್ದಾರೆ. ಹಾಗೆ ಕ್ರೋಮೋಜೋಮ್‌ಗಳ ನಡುವಿನ ವ್ಯತ್ಯಾಸವನ್ನೂ ಕೂಡ ವಿಶ್ಲೇಷಿಸಿದ್ದಾರೆ. ಇಲ್ಲಿ ತಾಯಿ ಹುಳುಗಳು ಫಲವತ್ತಾದ ಮೊಟ್ಟೆಗಳ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಹೀಗಾಗಿ ಇಡೀ ಹುಳುಗಳಲ್ಲಿ ಒಂದೂ ಕೂಡ ಗಂಡು ಹುಳುಗಳು ಇಲ್ಲ. ಕೇವಲ ಹೆಣ್ಣು ಹುಳುಗಳಿಂದ ಬಂದಿರುವ ಒಂದು ಕ್ರೋಮೋಜೋಮ್‌ನಿಂದ ಕೇವಲ ಹೆಣ್ಣು ಹುಳುಗಳು ಮಾತ್ರವೇ ಹುಟ್ಟಲು ಸಾಧ್ಯವಾಗುತ್ತದೆ. ಹೀಗಾಗಿ ಗಂಡು ಹುಳುಗಳ ಮೇಲೆ ಇವು ಅವಲಂಬನೆ ಇಲ್ಲದೆ ಲಕ್ಷಾಂತರ ವರ್ಷ ಬದುಕುಳಿದಿವೆ. ಇಲ್ಲದಿದ್ದರೆ ಗುಂಡು ಹುಳುಗಳ ಸಂತತಿ ನಾಶವಾಗಿ ಇವು ಕೂಡ ನಾಶವಾಗುತ್ತಿದ್ದವು.
ಈ ಅಪರೂಪದ ಪ್ರಕ್ರಿಯೆಯೂ ಜೀವ ವಿಕಸನದಲ್ಲಿ ಈಗ ಹೊಸ ಅಚ್ಚರಿ ಮೂಡಿಸಿದೆ. ಈ ಮೊದಲು ಚೀನಾದಲ್ಲಿಯೂ ಕೂಡ ಕೇವಲ ಹೆಣ್ಣು ಶಾರ್ಕ್ ಮರಿಗಳಿಟ್ಟಿದ್ದ ನೀರಿನ ಟ್ಯಾಂಕ್‌ನಲ್ಲಿ ಮರಿ ಮೀನುಗಳು ಕಾಣಿಸಿಕೊಂಡಿದ್ದವು. ಅವು ಗಂಡು ಮೀನಿನ ಸಂಪರ್ಕವೇ ಇಲ್ಲದೆ ಸಂತಾನೋತ್ಪತ್ತಿಗೆ ಮುಂದಾದವು. ಇದು ಕೂಡ ವಿಜ್ಞಾನಕ್ಕೆ ಹೊಸ ಅಚ್ಚರಿ ತಂದಿತ್ತು. ವೈ ಕ್ರೋಮೋಜೋಮ್‌ಗಳ ಅಧ್ಯಯನಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು.



Click it and Unblock the Notifications
