Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ನಿಮ್ಮ ಆಯಸ್ಸು ಎಷ್ಟು..? ಎಐ ವೆಬ್‌ಸೈಟ್ ಹೇಳುತ್ತೆ ನಿಖರ ಭವಿಷ್ಯ..! ಮುಗಿಬಿದ್ದ ಬಳಕೆದಾರರು!
ಎಐ ತಂತ್ರಜ್ಞಾನ ಈಗ ಎಲ್ಲಾ ವಲಯದಲ್ಲೂ ಯಾರು ಊಹಿಸಿದ ರೀತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಅದರಲ್ಲೂ ನೀವು ಅಂದುಕೊಂಡಿದ್ದಕ್ಕಿಂತ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಎಐ ಎಲ್ಲಾ ವಯಲಯದಲ್ಲಿ ಆತಂಕಕಾರಿಯಾಗಿ ವೆಳೆಯುತ್ತಿರುವುದು ನೋಡಬಹುದು. ಅದರಲ್ಲೂ ಚೀನಾ, ಅಮೆರಿಕದಂತಹ ದೇಶಗಳು ಎಐ ತಂತ್ರಜ್ಞಶಾನಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ವ್ಯಯಿಸುತ್ತಿವೆ. ದೊಡ್ಡ ದೊಡ್ಡ ಉದ್ಯಮಿಗಳು ಎಐ ಕಡೆಗೆ ಒಲವು ತೋರಿದ್ದಾರೆ.
ಎಐ ತಂತ್ರಜ್ಞಾನ ಮಾಡದ ಕೆಲಸವೇ ಇಲ್ಲ ಎನ್ನುವಂತಾಗಿದೆ. ಈಗ ಡ್ರೈವರ್ ಲೆಸ್ ಕಾರು, ಟ್ರೈನ್‌ಗಳಲ್ಲೂ ಎಐ ಪಾತ್ರ ವಹಿಸುತ್ತಿದೆ. ಮಾನವನಿಂದ ಮಾಡಲ್ಪಡುತ್ತಿದ್ದ ಹಲವು ಕೆಲಸಗಳಲ್ಲಿ ಈಗ ಎಐ ನಿಯಂತ್ರಣ ಸಾಧಿಸುತ್ತಿದೆ. ಕೆಲವು ವಲಯದಲ್ಲಿ ಉದ್ಯೋಗ ನಷ್ಟದ ಭೀತಿ ಇದ್ದರೆ ಮತ್ತೆ ಕೆಲವು ಕಡೆ ಹೊದ ಉದ್ಯೋಗ ಸೃಷ್ಟಿಗೂ ಇದು ಕಾರಣವಾಗುತ್ತಿದೆ.

ಆದ್ರೆ ಈಗ ಎಐಗಳು ಭವಿಷ್ಯದಲ್ಲಿ ನಡೆಯಲಿರುವ ಘಟನೆಗಳು, ವಿಚಾರಗಳನ್ನೂ ಕೂಡ ನಿಖರವಾಗಿ ಹೇಳಲು ಮುಂದಾಗಿವೆ. ಎಐ ಮೂಲಕ ನೀವು ಎಲ್ಲಾ ವಿಚಾರ ತಿಳಿಯಬಹುದಾಗಿದೆ. ಇನ್ನು ವ್ಯಕ್ತಿಯೊಬ್ಬನ ಸಾವು ಕೂಡ ಎಐ ಮೂಲಕ ತಿಳಿಯಬಹುದು. ಹೌದು ಸಾವು ಎಂಬುದು ಯಾವಾಗ ಬರುತ್ತೆ ಅನ್ನೋದನ್ನು ಯಾರು ಕೂಡ ನಿಖರವಾಗಿ ಊಹಿಸಲು ಸಾಧ್ಯವಿಲ್ಲ ಎಂಬ ಮಾತಿತ್ತು. ಆದ್ರೆ ಈ ಕಾಲದಲ್ಲಿ ಇದು ಕೂಡ ಸಾಧ್ಯವಾಗುತ್ತಿದೆ.
ನೀವು ಯಾವ ವಯಸ್ಸಿನಲ್ಲಿ ಸಹಜ ಸಾವಿಗೆ ಒಳಗಾಗುತ್ತೀರಿ ಎಂಬುದನ್ನು ಎಐ ನಿಖರವಾಗಿ ಹೇಳಲಿದೆ. ನಿಮಗೆ ಇದು ಅಚ್ಚರಿ ಎನಿಸಬಹುದು. ಆದ್ರೆ ಈ ರೀತಿಯ ಎಐ ವೆಬ್‌ಸೈಟ್‌ವೊಂದು ಭಾರೀ ಸಂಚಲನಕ್ಕೆ ಕಾರಣವಾಗಿದೆ. 'ಡೆತ್ ಕ್ಲಾಕ್' ಎಂಬ ಎಐ ಚಾಲಿತ ವೆಬ್‌ಸೈಟ್ ಈ ರೀತಿ ನಿಮ್ಮ ಆಯಸ್ಸಿನ ಕುರಿತು ನಿಖರವಾಗಿ ಹೇಳುತ್ತಿದೆ. ಈ ವಿಚಾರ ತಿಳಿದ ಮಂದಿ ವೆಬ್‌ಸೈಟ್ ಹುಡುಕಾಡಲು ಮುಂದಾಗಿದ್ದಾರೆ.
ಡೆತ್ ಕ್ಲಾಕ್ ಎಂಬ ಉಚಿತ ವೆಬ್‌ಸೈಟ್ ವಯಸ್ಸು, ಬಾಡಿ ಮಾಸ್ ಇಂಡೆಕ್ಸ್, ಆಹಾರ ಪದ್ಧತಿ, ವ್ಯಾಯಾಮ, ಧೂಮಪಾನದ ಅಭ್ಯಾಸ, ಮದ್ಯಪಾನದ ಅಭ್ಯಾಸ ಸೇರಿ ಹಲವು ಅಂಶಗಳ ಲೆಕ್ಕಾಚಾರ ಹಾಕಲಿದೆ. ಈ ಡೇಟಾಗಳ ಆಧಾರದ ಮೇಲೆ ನೀವು ಎಷ್ಟು ವರ್ಷ ಬದುಕುತ್ತೀರಿ ಎನ್ನುವ ದಿನಾಂಕವನ್ನು ವಿಶ್ಲೇಷಣೆ ಮಾಡಲಿದೆ. ಅಲ್ಲದೆ ನೀವು ಯಾವ ರೀತಿ ಸಾಯುತ್ತೀರಿ ಅನ್ನೋದನ್ನು ಕೂಡ ವಿವರಿಸಲಿದೆ.
ನೀವು ಎಲ್ಲಿ ವಾಸಿಸುತ್ತಿದ್ದೀರಿ, ಅಲ್ಲಿನ ಹವಾಮಾನ, ವಾಯು ಮಾಲಿನ್ಯ ಆಹಾರ ಕ್ರಮ ಕೂಡ ಈ ಜೀವನ ಮಟ್ಟ ನಿರ್ಧಾರಕ ಅಂಶವಾಗಿದೆ. ಈ ಎಐ ತಂತ್ರಾಂಶವು
ಎಷ್ಟು ವರ್ಷಗಳ ಕಾಲ ಬದುಕುತ್ತಾರೆ ಎಂಬುದನ್ನು ನಿಖರವಾದ ವಯಸ್ಸಿನ ಲೆಕ್ಕಾಚಾರ ಮಾಡುತ್ತದೆ ಮತ್ತು ಗ್ರಿಮ್ ರೀಪರ್ ಬರುವವರೆಗೆ ಉಳಿದಿರುವ ದಿನಗಳು, ಗಂಟೆಗಳು, ನಿಮಿಷಗಳು ಮತ್ತು ಸೆಕೆಂಡುಗಳನ್ನು ಎಣಿಸುತ್ತದೆ.
ನಿಮ್ಮ ಕುರಿತ ಪ್ರತಿಯೊಂದು ಮಾಹಿತಿಯನ್ನು ಕೂಡ ನಮೂದಿಸಿದರೆ ಅಂತಿಮ ಉತ್ತರ ನೀಡಲಿದೆ. ಆದರೆ ನೀವು ನೀಡಿದ ಮಾಹಿತಿಯಲ್ಲಿ ಲೋಪವಿದ್ದರೆ ನಿಮ್ಮ ಫಲಿತಾಂಶದಲ್ಲೂ ಬದಲಾವಣೆ ಆಗಲಿದೆ. ಈ ಎಐ ಚಾಲಿತ ವೆಬ್‌ಸೈಟ್ ಸುಮಾರು 63 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರ ಸಾಯುವ ದಿನಾಂಕವನ್ನು ನಿಖರವಾಗಿ ಗುರುತಿಸಿದೆಯಂತೆ.
ಸದ್ಯ ಈ ವೆಬ್‌ಸೈಟ್ ಬಹಳ ವೈರಲ್ ಆಗಿದೆ. ಬಳಕೆದಾರರು ತಮ್ಮ ಕೊನೆಯ ದಿನ ನೋಡುವ ಉದ್ದೇಶದಿಂದ ಮಾಹಿತಿಗಳ ಹಂಚಿಕೊಳ್ಳಲು ಮುಂದಾಗಿದ್ದಾರೆ. ಆದ್ರೆ ಇದು ಎಷ್ಟು ನಿಖರವಾಗಿ ನಿಮ್ಮ ಕೊನೆಯ ದಿನವನ್ನು ಹೇಳುತ್ತಿದೆ ಎಂಬುದನ್ನು ಖಚಿತವಾಗಿ ನಂಬುವುದು ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದು ಉಚಿತ ವೆಬ್‌ಸೈಟ್ ಆಗಿರೋದ್ರಿಂದ ಬಳಕೆದಾರರು ಮುಗಿಬಿದ್ದಿರುವುದು ನೋಡಬಹುದು.



Click it and Unblock the Notifications