Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ಭಾರತೀಯ ಸೇನೆಯ ಮೊಟ್ಟ ಮೊದಲ ಮಹಿಳಾ ಸ್ನೈಪರ್ ಈಕೆ..! ಶತ್ರುಗಳ ಹುಟ್ಟಡಗಿಸುವ ನಾರಿ.!
ಭಾರತೀಯ ಸೇನೆ ಸೇರಬೇಕು, ದೇಶಸೇವೆ ಮಾಡಬೇಕು ಎಂಬುದು ಕೋಟ್ಯಂತರ ಮಂದಿಯ ಕನಸಾಗಿರುತ್ತದೆ. ಆದರೆ ಇದರಲ್ಲೊ ಕೆಲವೇ ಮಂದಿ ಈ ಕನಸು ನನಸು ಮಾಡಿಕೊಳ್ಳುತ್ತಾರೆ. ಏಕೆಂದರೆ ಸೇನೆಗೆ ಸೇರಬೇಕಾದರೆ ನಾನಾ ರೀತಿಯ ಅರ್ಹತೆಗಳ ಪಡೆದಿರಬೇಕಾಗುತ್ತದೆ. ಇನ್ನು ಮಹಿಳೆಯರಿಗೆ ಸೇನೆ ಎಂಬುದು ಕೆಲ ವರ್ಷಗಳ ಹಿಂದೆ ಗಗನಕುಸುಮವಾಗಿತ್ತು. ಆದರೆ ಈಗ ಮಹಿಳೆಯರು ಸೇನೆಯಲ್ಲೂ ತಮ್ಮ ಚಾಪು ಮೂಡಿಸುತ್ತಿದ್ದಾರೆ.
ಅಗ್ನಿವೀರ್ ಸೇರಿ, ವಾಯು ಪಡೆಯಲ್ಲಿಯೂ ಮಹಿಳೆಯವರು ಸ್ಥಾನ ಪಡೆದಿದ್ದಾರೆ. ಆದರೆ ನಿಮಗೆ ಸೇನೆಯ ಮೊಟ್ಟ ಮೊದಲ ಮಹಿಳಾ ಸ್ನೈಪರ್ ಬಗ್ಗೆ ಗೊತ್ತಿದ್ಯಾ? ಹೌದು ನಿಮಗೂ ಅಚ್ಚರಿಯಾಗಬಹುದು. ಭಾರತೀಯ ಸೇನೆಯಲ್ಲಿ ಮಹಿಳಾ ಸ್ನೈಪರ್ ಇದ್ದಾರೆ. ಸ್ನೈಪರ್‌ಗಳೆಂದರೆ ಯಾರ ಕಣ್ಣಿಗೂ ಬೀಳದೆ ಗೌಪ್ಯ ಸ್ಥಳದಿಂದ ನೂರಾರು ಮೀಟರ್ ದೂರಕ್ಕೆ ಗುರಿಯಿಟ್ಟು ಬಂದೂಕು ಚಲಾಯಿಸುವ ಒಂದು ನೈಪುಣ್ಯ ತಂಡವಾಗಿದೆ.
ಈ ತಂಡದಲ್ಲಿ ಮೊದಲ ಮಹಿಳಾ ಸ್ನೈಪರ್ ಆಗಿರುವ ಸುಮನ್ ಕುಮಾರಿ ಬಗ್ಗೆ ನೀವು ಕೇಳಿದ್ದೀರಾ? ನೀವು ಈಕೆಯ ಬಗ್ಗೆ ಕೇಳಿಲ್ಲ ಅಂದ್ರೆ ನಾವಿಂದು ಹೇಳುತ್ತೇವೆ ನೋಡಿ. ಪಂಜಾಬ್‌ನಲ್ಲಿ ಪ್ಲಾಟೂನ್‌ಗೆ ಕಮಾಂಡರ್ ಆಗಿರುವಾಗ ಗಡಿಯಾಚೆಯಿಂದ ಸ್ನೈಪರ್ ದಾಳಿಯ ಬೆದರಿಕೆಯನ್ನು ಕಂಡ ನಂತರ ಸುಮನ್ ಸ್ನೈಪರ್ ಕೋರ್ಸ್‌ಗೆ ಸ್ವಯಂಸೇವಕರಾದರು.

ಸುಮನ್ ಕುಮಾರಿ ಎಂಬ ಸಬ್ ಇನ್ಸ್‌ಪೆಕ್ಟರ್ ಗಡಿ ಭದ್ರತಾ ಪಡೆಯ ಮೊದಲ ಮಹಿಳಾ ಸ್ನೈಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಇತ್ತೀಚೆಗೆ ಇಂದೋರ್‌ನಲ್ಲಿರುವ ಸೆಂಟ್ರಲ್ ಸ್ಕೂಲ್ ಆಫ್ ವೆಪನ್ಸ್ ಅಂಡ್ ಟ್ಯಾಕ್ಟಿಕ್ಸ್‌ನಲ್ಲಿ (CSWT) ಎಂಟು ವಾರಗಳ ಸ್ನೈಪರ್ ಕೋರ್ಸ್ ಅನ್ನು ಪೂರ್ಣಗೊಳಿಸಿದರು ಮತ್ತು 'ಬೋಧಕ ಗ್ರೇಡ್' ಸಾಧಿಸಿದರು.
ಪಂಜಾಬ್‌ನಲ್ಲಿ ಪ್ಲಾಟೂನ್‌ಗೆ ಕಮಾಂಡರ್ ಆಗಿರುವಾಗ ಗಡಿಯಾಚೆಯಿಂದ ಸ್ನೈಪರ್ ದಾಳಿಯ ಬೆದರಿಕೆಯನ್ನು ಕಂಡ ನಂತರ ಸುಮನ್ ಸ್ನೈಪರ್ ಕೋರ್ಸ್‌ಗೆ ಸ್ವಯಂಸೇವಕರಾದರು. ಆಕೆಯ ದೃಢ ನಿರ್ಧಾರವನ್ನು ನೋಡಿದ ನಂತರ ಆಕೆಯ ಮೇಲಧಿಕಾರಿಗಳು ಸುಮನ್ ಈ ಕೋರ್ಸ್‌ನಲ್ಲಿ ಭಾಗವಹಿಸುವುದಕ್ಕೆ ಅನುಮತಿ ನೀಡುವ ಜೊತೆಗೆ ಪ್ರೋತ್ಸಾಹ ನೀಡಿದರು. ಹೀಗಾಗಿ ಆಕೆ ಕೋರ್ಸ್‌ನಲ್ಲಿ ಉತ್ತೀರ್ಣರಾಗಿ ಈಗ ಸೇನೆಯ ಮೊದಲ ಮಹಿಳಾ ಸ್ನೈಪರ್ ಆಗಿದ್ದಾರೆ.
ಈ ಸ್ನೈಪರ್ ಕೋರ್ಸ್‌ನಲ್ಲಿ 56 ಪುರುಷರು ತರಬೇತಿ ಪಡೆದರು, ಆದರೆ ಸುಮನ್ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದರು. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯವರಾದ ಸುಮನ್ ಅವರು ಮಧ್ಯಮವರ್ಗದ ಕುಟುಂಬದಿಂದ ಬಂದವರು. ಆಕೆಯ ತಂದೆ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಾರೆ ಮತ್ತು ಆಕೆಯ ತಾಯಿ ಗೃಹಿಣಿ. ಹೀಗಿದ್ದರು ಆಕೆ ಗಡಿ ಭದ್ರತಾ ಪಡೆಯನ್ನು ಆಯ್ಕೆ ಮಾಡಿಕೊಂಡು ಯಾರಿಗಿಂತ ಮಹಿಳೆ ಕಡಿಮೆಯಿಲ್ಲ ಎಂಬುದನ್ನು ಸಾಧಿಸಿ ತೋರಿಸಿದಳು.
2021ರಲ್ಲಿ ಬಿಎಸ್‌ಎಫ್‌ಗೆ ಸೇರಿದ್ದ ಸುಮನ್ ಕುಮಾರಿ ಆರಂಭದಲ್ಲಿ ಪಂಜಾಬ್‌ನಲ್ಲಿ ಪ್ಲಾಟೂನ್‌ಗೆ ಕಮಾಂಡರ್ ಆಗಿದ್ದರು. ಗಡಿಯಾಚೆಯಿಂದ ಸ್ನೈಪರ್ ದಾಳಿಯ ಬೆದರಿಕೆಯನ್ನು ನೋಡಿದ ಬಳಿಕ ನಾನೊಬ್ಬ ಸ್ನೈಪರ್ ಆಗಬೇಕು ಎಂದು ದೃಢನಿರ್ಧಾರ ಮಾಡಿದಳು. ಸ್ನೈಪರ್ ಆದವರು ಮಲಗಿಕೊಂಡು ಶತ್ರುಗಳತ್ತ ಗನ್ ಗುರಿ ಹಿಡಿದಿರಬೇಕಾಗುತ್ತದೆ. ಸ್ನೈಪರ್ ಗನ್‌ನಲ್ಲಿರುವ ಸ್ಕೋಪ್‌ನಿಂದಾಗಿ ಬಹಳ ದೂರದ ಶತ್ರುಗಳು ಅವರಿಗೆ ಕಾಣುತ್ತಾರೆ. ಹಾಗಂತ ಇದೇನು ಸುಲಭದ ಕೆಲಸವಲ್ಲ.
ಸ್ನೈಪರ್ ಆದವರು ಏಕಾಗೃತೆ ಮತ್ತು ಒಂದೇ ಕಡೆ ಕುಳಿತು ಕೆಲಸ ಮಾಡಲು ಸಿದ್ಧರಿರಬೇಕು. ಒಂದೆ ಜಾಗದಲ್ಲಿ ಗಂಟೆಗಳ ಕಾಲ ಒಂಚೂರು ಅಲುಗಾಡದೆ ಕುಳಿತಿರಬೇಕು. ಜೊತೆಗೆ ಎಂತಹ ಪರಿಸ್ಥಿತಿಯಲ್ಲೂ ಕರ್ತವ್ಯಕ್ಕೆ ಸಿದ್ಧರಿರಬೇಕು. ಹೀಗಾಗಿ ಈ ಸುಮನ್ ಸ್ನೈಪರ್ ತಂಡ ಸೇರಿರುವುದು ಇತರ ಮಹಿಳೆಯರಿಗೂ ಮಾದರಿಯಾಗಿದ್ದು, ಸೇನೆ ಎಂಬುದು ಕೇವಲ ಪುರುಷರೇ ತುಂಬಿರುವ ಮೈದಾನವಲ್ಲ, ಮಹಿಳೆಯರೂ ಸಹ ಅಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಸುಮನ್ ಸಾಧಿಸಿದ್ದಾರೆ. ಇವರಿಂದ ಮತ್ತಷ್ಟು ಮಂದಿ ಪ್ರೇರಿತರಾಗಿ ಸೇನೆ ಸೇರಲು ಮುಂದಾಗುವುದು ನಿಶ್ಚಿತ.



Click it and Unblock the Notifications
