Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
Raj Shamani: ವಿಜಯ್ ಮಲ್ಯ ಸಂದರ್ಶನ ಮಾಡಿದ ರಾಜ್ ಶಮಾನಿ ಯಾರು? ಆತನ ಆದಾಯ ಎಷ್ಟು ಕೋಟಿ ಗೊತ್ತಾ?
ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ಸಾಲ ಮರುಪಾವತಿಸಲಾಗದೆ ದೇಶ ತೊರೆದ ಉದ್ಯಮಿ ವಿಜಯ್ ಮಲ್ಯ ಸದ್ಯ ಆರ್ಥಿಕ ಅಪರಾಧಿಯಾಗಿದ್ದಾರೆ. ಅವರು ಲಂಡನ್‌ನಲ್ಲಿ ನೆಲೆಸಿ ಬರೋಬ್ಬರಿ 9 ವರ್ಷ ಕಳೆದಿದೆ. ಭಾರತ ಅವರನ್ನು ದೇಶಕ್ಕೆ ಕರೆತರಲು ಹರಸಾಹಸ ಮಾಡುತ್ತಿದೆ. ಹಾಗೆ ಇನ್ನೊಂದು ಕಡೆ ಭಾರತದಲ್ಲಿ ಅವರ ಆಸ್ತಿಯ ಹರಾಜು ಹಾಗೆ ಬ್ಯಾಂಕ್‌ಗೆ ಬರಬೇಕಿದ್ದ ಹಣವನ್ನು ಮರಳಿ ಪಡೆಯಲು ಯತ್ನಿಸಲಾಗುತ್ತಿದೆ.
ಹಾಗೆ ಲಂಡನ್‌ನಿಂದ ಅವರನ್ನು ಬಂಧಿಸಿ ಹಸ್ತಾಂತರ ಮಾಡುವಂತೆಯೂ ಅಲ್ಲಿನ ಅಧಿಕಾರಿಗಳಿಗೆ ಮನವಿ ಕೂಡ ಮಾಡಲಾಗಿತ್ತು. ಇನ್ನು ಹಲವು ವರ್ಷದಿಂದ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇದ್ದ ಅವರು, ಪುತ್ರನ ವಿವಾಹ ಸೇರಿ ಕೆಲವೊಂದು ಸಣ್ಣ ಪುಟ್ಟ ಸಮಾರಂಭಗಳು ಸೇರಿ ಲಂಡನ್ ಬೀದಿಯಲ್ಲಿ ಆಗಾಗ ಕಾಣಿಸಿಕೊಂಡಿದ್ದರು.

ಆದ್ರೆ ಈಗ ರಾಯಲ್ ಚಾಲೆಂಜರ್ಸ್ ಈ ಬಾರಿಯ ಐಪಿಎಲ್ ಕಪ್ ಗೆಲ್ಲುತ್ತಿದ್ದಂತೆ ಅವರೊಂದು ಸಂದರ್ಶನದಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದಾರೆ. ಹೌದು ಭಾರತದ ಯುವ ಯುಟ್ಯೂಬರ್ ರಾಜ್ ಶಮಾನಿ ಅವರ ಚಾನಲ್‌ನಲ್ಲಿ ಅವರ ಸಂದರ್ಶನ ಈಗ ವೈರಲ್ ಆಗುತ್ತಿದೆ. ಅವರು ಕಿಂಗ್‌ಫಿಶರ್ ಸಾಮ್ರಾಜ್ಯ ಕಟ್ಟಿದ್ದರಿಂದ ಹಿಡಿದು ಸಾಲ ಮಾಡಿದ್ದು ಏಕೆ ಎಂಬ ಕುರಿತಂತೆ ಸುದೀರ್ಘವಾಗಿ ಮಾತನಾಡಿದ್ದಾರೆ.
ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರ ಈ ಸಂದರ್ಶನದ ವಿಡಿಯೋ ಮಿಲಿಯನ್ ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಯಾರು ಊಹಿಸದ ರೀತಿಯಲ್ಲಿ ಅವರ ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದೆ. ಅದರ ಜೊತೆಗೆ ಈ ರಾಜ್ ಶಮಾನಿ ಯಾರು? ಪ್ರಭಾವಿ ಉದ್ಯಮಿಯನ್ನು ಅವರು ಸಂದರ್ಶನ ಮಾಡಿದ್ದು ಹೇಗೆ? ಎಂಬ ಪ್ರಶ್ನೆಗಳು ಕೂಡ ಕಾಡಲು ಆರಂಭಿಸಿವೆ.
ಯಾರು ಈ ರಾಜ್ ಶಮಾನಿ?
ರಾಜ್ ಶಮಾನಿ ರಾತ್ರೋ ರಾತ್ರಿ ಫೇಮಸ್ ಆಗಿರುವ ಯುವಕನಲ್ಲ. ಆತನ ವರ್ಷಗಳ ಕಾಲದ ಪರಿಶ್ರಮ ಈಗ ಫಲ ನೀಡುತ್ತಿದೆ. ಅವರ ಕುಟುಂಬ ಸಾಬೂನು ಹಾಗೂ ಪುಡಿ ಮಾರಾಟ ಮಾಡುತ್ತಿದ್ದರು. ನಂತರ ಅವರ ತಂದೆ ಅನಾರೋಗ್ಯಕ್ಕೆ ಒಳಗಾದರು. ಈ ವೇಳೆ ಅವರ ವ್ಯಾಪಾರ ಕುಸಿತಗೊಂಡಿತ್ತು. ಆಸ್ಪತ್ರೆ ವೆಚ್ಚ ಹಾಗೆ ಅವರ ಶೈಕ್ಷಣಿಕ ವೆಚ್ಚ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ಅವರು ಚಿಕ್ಕ ವಯಸ್ಸಿನಲ್ಲೇ ದುಡಿಮೆ ಮಾಡಬೇಕಾಗುತ್ತದೆ. ಹಾಗೆ ಅವರಿಗೆ ಚಿಕ್ಕ ವಯಸ್ಸಿನಲ್ಲಿ ವೇದಿಕೆ ಏರಲು ಕೂಡ ಭಯವಾಗಿತ್ತಂತೆ.
ಹಲವು ಕಷ್ಟಗಳ ನಡುವೆ ಅವರಿಗೆ ಚೆನ್ನಾಗಿ ಓದಲು ಆಗಿಲ್ಲವಂತೆ. ಅವರು ಆರಂಭದಲ್ಲಿ ಸೋಪ್ ಫ್ಯಾಕ್ಟರಿ ಆರಂಭಿಸುವ ಉದ್ದೇಶದಿಂದ ಇಂಧೋರ್‌ನ ಮನೆ ಮಾರಾಟಕ್ಕೆ ಮುಂದಾದರು. ಅವರ 28ನೇ ವಯಸ್ಸಿನಲ್ಲಿ 200 ಕೋಟಿ ವಹಿವಾಟುಗಳ ಮಾಡುವ ಯುವ ಉದ್ಯಮಿಯಾಗಿ ಈಗ ಬದಲಾಗಿದ್ದಾರೆ. ಅವರು ತಮ್ಮದೆ ಬ್ರಾಂಡ್ ಜಾದುಗರ್ ಡ್ರಾಪ್ ಅನ್ನು ಆರಂಭಿಸಿದರು. ಹಾಗೆ ಬಳಿಕ ಶಮಾನಿ ಇಂಡಸ್ಟ್ರೀಸ್ ಆರಂಭಿಸಿದರು. ಇದು ಅವರ ಕಂಪನಿ ಆದಾಯ ದುಪ್ಪಟ್ಟಾಗಿಸಿತು.
ಇದಾದ ಬಳಿಕ ಅವರು ಚಿಕ್ಕ ಪುಟ್ಟ ವಿಯೋಗಳನ್ನು ಇನ್ಸ್‌ಸ್ಟಾಗ್ರಾಮ್, ಯುಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. ಹಾಗೆ ಅಲ್ಲಿಯೂ ಅವರು ಜನಪ್ರಿಯತೆ ಗಳಿಸಿದರು. ಅವರ ಸ್ಟಾರ್ಟ್ ಅಪ್ ಕಥೆಗಳು, ನಿತ್ಯದ ಜೀವನದ ಕುರಿತಾದ ವಿಡಿಯೋ ಹಂಚಿಕೊಂಡರು. ನಿಧಾನವಾಗಿ ಫೇಮಸ್ ಆಗಲು ಆರಂಭಿಸಿದ ಅವರು ಯುಟ್ಯೂಬ್‌ನಲ್ಲಿ ತೊಡಗಿಸಿಕೊಂಡರು. 2021ರಲ್ಲಿ ಫಿಗರಿಂಗ್ ಔಟ್ ಎಂಬ ಚಾನಲ್ ಜನಪ್ರಿಯವಾಯಿತು.
ಜೂನ್ 2025 ರ ಹೊತ್ತಿಗೆ ರಾಜ್ 11.1 ಮಿಲಿಯನ್ ಯೂಟ್ಯೂಬ್ ಚಂದಾದಾರರನ್ನು ಮತ್ತು 3.7 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 91 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಯುಟ್ಯೂಬ್‌ನಿಂದ ಅವರು ವಾರ್ಷಿಕವಾಗಿ 15 ಕೋಟಿ ರೂಪಾಯಿಗೂ ಹೆಚ್ಚು ಗಳಿಸುತ್ತಾರೆ ಎಂದು ಹೇಳಲಾಗಿದೆ.



Click it and Unblock the Notifications
