Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
75 ಕೋಟಿ ರೂ. ವೇತನ ಬಿಟ್ಟು ಸನ್ಯಾಸಿಯಾದ ಅಂಬಾನಿ ರೈಟ್ ಹ್ಯಾಂಡ್..! ಯಾರು ಈ ಪ್ರಕಾಶ್ ಶಾ ಗೊತ್ತಾ?
ರಿಲಾಯನ್ಸ್ ಇಂಡಸ್ಟ್ರೀಸ್ ವಿಶ್ವದ ಅತೀ ದೊಡ್ಡ ಇಂಡಸ್ಟ್ರೀ ಎನ್ನಬಹುದು. ಲಕ್ಷಾಂತರ ಜನರಿಗೆ ಉದ್ಯೋಗ ನೀಡಿರುವಂತಹ ಸಂಸ್ಥೆ ಎನ್ನಬಹುದು. ಹಾಗೆ ಮುಖೇಶ್ ಅಂಬಾನಿ ವಿಶ್ವದ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾಗಿದ್ದಾರೆ. ಹಾಗೆ ರಿಲಾಯನ್ಸ್ ಇಂಡಸ್ಟ್ರೀಸ್‌ನಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವುದು ಅಂದ್ರೆ ಎಲ್ಲರಿಗೂ ಕನಸಿನ ಮಾತು. ಏಕೆಂದರೆ ದೊಡ್ಡ ಉದ್ಯಮಿಯ ಜೊತೆಗೆ ಕೆಲಸ ಮಾಡಬೇಕಾರೆ ಅಷ್ಟೇ ಅದೃಷ್ಟವಂತರಾಗಿರಬೇಕು.
ಆದ್ರೆ ಇಲ್ಲೊಬ್ಬ ಮುಖೇಶ್ ಅಂಬಾನಿಯ ಬಲಗೈ ಬಂಟನಂತಿದ್ದ ವ್ಯಕ್ತಿ ಕೋಟಿ ಕೋಟಿ ರೂಪಾಯಿ ವೇತನ ಬಿಟ್ಟು ಸನ್ಯಾಸಿಯಾಗಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಆಪ್ತ ಸಹಾಯಕ ಮತ್ತು ಮಾಜಿ ಉನ್ನತ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಶಾ, ಸನ್ಯಾಸಿಯಾಗಲು ತಮ್ಮ ಉನ್ನತ ಹುದ್ದೆ ಮತ್ತು 75 ಕೋಟಿ ರೂಪಾಯಿ ಸಂಬಳವನ್ನು ತ್ಯಜಿಸಿದ್ದಾರೆ.

ಮಹಾವೀರ ಜಯಂತಿಯ ದಿನದಂದು ಅವರು ಹಾಗೂ ಪತ್ನಿ ನೈನ್ ಶಾ ದೀಕ್ಷೆ ತೆಗೆದುಕೊಂಡಿದ್ದಾರೆ. ಹಾಗೆ ಶಾಂತಿ ಮತ್ತು ಆಧ್ಯಾತ್ಮಿಕ ಜೀವನ ಸ್ವೀಕರಿಸಿದರು. ಕೋಟಿ ಕೋಟಿ ವೇತನ, ಐಷಾರಾಮಿ ಜೀವನ ಬಿಟ್ಟು ಅವರು ಸನ್ಯಾಸತ್ವ ಸ್ವೀಕರಿಸಿದ್ದಕ್ಕೆ ಎಲ್ಲರು ಅಚ್ಚರಿಗೆ ಒಳಗಾಗದರು. ಹಾಗೆ ಇದು ದೊಡ್ಡ ಆಘಾತಕ್ಕೂ ಕಾರಣವಾಗಿದೆ.
ಅವರು ದೀಕ್ಷೆ ಪಡೆದ ಬಳಿಕ ಬಂಗಲೆ, ಐಷಾರಾಮಿ ಕಾರು, ಮೊಬೈಲ್ ಫೋನ್‌ಗಳು, ಆಸ್ತಿಯನ್ನು ತ್ಯಜಿಸಿದರು. ಈ ಮೂಲಕ ಸರ್ವಸ್ವವನ್ನು ತ್ಯಜಿಸಿ ದೇಹ ಅರ್ಪಿಸುವ ಸಂಕಲ್ಪ ಮಾಡಿದ್ದಾರೆ.
ಯಾರು ಈ ಪ್ರಕಾಶ್ ಶಾ?
ಶಾ ರಿಲಯನ್ಸ್ ಇಂಡಸ್ಟ್ರೀಸ್‌ನ ಉಪಾಧ್ಯಕ್ಷರಾಗಿದ್ದರು ಮತ್ತು ಕಂಪನಿಯ ಪ್ರಮುಖ ನಿರ್ಧಾರಗಳಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದರು. ಯಶಸ್ವಿ ವೃತ್ತಿಜೀವನ ಮತ್ತು ಲೌಕಿಕ ಜೀವನವನ್ನು ತೊರೆಯುವ ನಿರ್ಧಾರವು ಅನೇಕರಲ್ಲಿ ಅಚ್ಚರಿಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿನ ಅವರ ಫೋಟೋಗಳು ಅವರು ಸರಳವಾದ ಬಿಳಿ ನಿಲುವಂಗಿಯನ್ನು ಧರಿಸಿ ಬರಿಗಾಲಿನಲ್ಲಿ ನಿಂತಿರುವ ಫೋಟೋಗಳು ಹರಿದಾಡುತ್ತಿವೆ.
ಅವರು ರಿಲಯನ್ಸ್‌ನ ವಿವಿಧ ಮೆಗಾ ಯೋಜನೆಗಳಲ್ಲಿ ನಿರ್ವಹಣೆ, ತಂತ್ರಜ್ಞಾನ ಮತ್ತು ಕಾರ್ಯತಂತ್ರದ ನಿರ್ದೇಶನವನ್ನು ಒದಗಿಸಲು ಕೆಲಸ ಮಾಡಿದರು, ಇದು ಕಂಪನಿಯನ್ನು ಜಾಗತಿಕವಾಗಿ ಬಲಪಡಿಸಿತು. ಮಾಧ್ಯಮ ವರದಿಗಳ ಪ್ರಕಾರ, ನಿವೃತ್ತಿಯ ಸಮಯದಲ್ಲಿ ಪ್ರಕಾಶ್ ಶಾ ಅವರ ವಾರ್ಷಿಕ ವೇತನ ಸುಮಾರು ₹ 75 ಕೋಟಿ ಆಗಿತ್ತು ಎಂದು ತಿಳಿದುಬಂದಿದೆ.
ಆದರೆ ಇದು ಅವರು ಒಂದು ರಾತ್ರಿಯಲ್ಲಿ ತೆಗೆದುಕೊಂಡ ನಿರ್ಧಾರವಲ್ಲವಂತೆ. ಬಹಳ ಹಿಂದೆಯೇ ಬ್ರಹ್ಮಚರ್ಯ ಪಾಲನೆಯಲ್ಲಿಯಲ್ಲಿದ್ದ ಅವರು ಸನ್ಯಾಸತ್ವ ಸ್ವೀಕರಿಸಲು ಹಲವು ದಿನಗಳ ತಯಾರಿ ಮಾಡಿದ್ದರಂತೆ. ಹಲವು ಸಮಯದಿಂದ ಆಧ್ಯಾತ್ಮ ಹಾಗೂ ಈ ಸನ್ಯಾಸತ್ವ ಕಡೆಗೆ ಒಲವು ಹೊಂದಿದ್ದ, ಭೌತಿಕ ಸುಖಗಳ ತ್ಯಜಿಸಲು ಮುಂದಾದರಂತೆ.
ಪ್ರಕಾಶ್ ಶಾ ಅವರು, ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಉನ್ನತ ಶಿಕ್ಷಣ ಮುಗಿಸಿದ್ದಾರೆ. ಹಾಗೆ ಐಐಟಿ ಬಾಂಬೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಿಲಾಯನ್ಸ್ ಇಂಡಸ್ಟ್ರೀಸ್ ಸೇರುವ ಮೊದಲು ಅವರು ಹಲವು ಕಡೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದರು. ಬಳಿಕ ರಿಲಾಯನ್ಸ್ ಇಂಡಸ್ಟ್ರೀಸ್‌ನಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದರು. ಹಾಗೆ ಅವರನ್ನು ಮುಖೇಶ್ ಅಂಬಾನಿಯ ರೈಟ್ ಹ್ಯಾಂಡ್ ಅಂತಲೇ ಕರೆಯುತ್ತಿದ್ದರು.
ಇದಕ್ಕೂ ಮೊದಲು ಕೂಡ ಉದ್ಯಮಿಯ ಪತ್ನಿ ಹಾಗೂ ಪುತ್ರ ಇಬ್ಬರೂ ಒಟ್ಟಿಗೆ ಸನ್ಯಾಸತ್ಬ ಪಡೆದಿದ್ದ ಘಟನೆಯೊಂದು ನಡೆದಿದೆ. ಗುಜರಾತ್‌ನಲ್ಲಿ ಉದ್ಯಮಿಯಾಗಿದ್ದ 30 ವರ್ಷದ ಸ್ವೀಟಿ ಮತ್ತು ಆಕೆಯ ಪುತ್ರ 11 ವರ್ಷದ ಹೃದನ್ ಈಗ ಸನ್ಯಾಸತ್ವ ಪಡೆದಿದ್ದಾರೆ. ಸ್ವೀಟಿ ಗರ್ಭಿಣಿಯಾಗಿದ್ದಾಗಲೇ ದೀಕ್ಷೆ ಪಡೆಯಬೇಕು ಎಂದು ಬಯಸಿದರಂತೆ. ಆ ಕನಸಿನಂತೆ ಇಬ್ಬರು ಎಲ್ಲವನ್ನು ಬಿಟ್ಟು ಕಳೆದ ವರ್ಷ ಸನ್ಯಾಸತ್ವ ಸ್ವೀಕರಿಸಿದ್ದರು. ಅವರು ಸನ್ಯಾಸ ದೀಕ್ಷೆ ತೆಗೆದುಕೊಂಡಿದ್ದ ವಿಡಿಯೋ ಬಹಳ ವೈರಲ್ ಆಗಿತ್ತು.



Click it and Unblock the Notifications
