Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಅಂಬಾನಿ ಪಕ್ಕದ ಮನೆಯ ಈ ಉದ್ಯಮಿ ಯಾರು ಗೊತ್ತಾ? ಭಾರತದ 2ನೇ ದೊಡ್ಡ ಮನೆ ಅವರದ್ದೆ..!
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕುರಿತು ನೀವು ಕೇಳಿರುತ್ತೀರಿ. ಬರೋಬ್ಬರಿ 9.6 ಲಕ್ಷ ಕೋಟಿ ಆಸ್ತಿ ಹೊಂದಿರುವ ಅವರು ವಿಶ್ವದ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲೂ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ವಾಸವಿರುವ ಅವರು ದೊಡ್ಡ ದೊಡ್ಡ ಉದ್ಯಮಗಳ ಹುಟ್ಟುಹಾಕಿದವರು.
ಇನ್ನು ಅವರ ಆಸ್ತಿಯಲ್ಲಿ ಅತ್ಯಂತ ಆಕರ್ಷಣೀಯ ಅಂದ್ರೆ ಅದು ಮುಂಬೈನ ಅವರ ಬಹುಕೋಟಿ ಮೌಲ್ಯದ ನಿವಾಸ. ವಿಶ್ವದ ಅತ್ಯಂತ ದುಬಾರಿ ಮನೆ ಎಂದು ಕರೆಯಲ್ಪಡುವ ಆಂಟಿಲಿಯಾ ಅತ್ಯಂತ ಎತ್ತರದ ಮನೆ ಕೂಡ ಹೌದು. ಮೂರು ಹೆಲಿಪ್ಯಾಡ್‌ಗಳನ್ನು ಮತ್ತು ವಿದೇಶದಲ್ಲಿ ಮುಂಬೈ ಮತ್ತು ಅರೇಬಿಯನ್ ಸಮುದ್ರದ ಸ್ಕೈಲೈನ್‌ಗಳನ್ನು ಹೊಂದಿದೆ. ಆಂಟಿಲಿಯಾ ಮನೆಯು ಸುಮಾರು 173 ಮೀಟರ್ ಎತ್ತರವಾಗಿದೆ, 27 ಅಂತಸ್ತು ಹೊಂದಿದೆ.

ಆದರೆ ಈ ಐಷಾರಾಮಿ ಮನೆಯ ಪಕ್ಕದ ಮನೆಯ ಕುರಿತು ನಿಮಗೆ ಗೊತ್ತಾ? ಹೌದು ಅಂಬಾನಿ ಮನೆಯ ಪಕ್ಕದಲ್ಲಿ ಮತ್ತೊಂದು ಬಹುಕೋಟಿ ಮನೆ ಇದೆ. ಅದು ಸಹ ಬಹುಕೋಟಿ ಉದ್ಯಮಿಯ ಮನೆ ಆಗಿದ್ದು, ನೋಡಲು ಅಂಬಾನಿ ನಿವಾಸ ಆಂಟಿಲಿಯಾದಂತೆಯೇ ವಿನ್ಯಾಸವನ್ನೂ ಹೊಂದಿದೆ.
ಮುಂಬೈನ ಐಷಾರಾಮಿ ಅಲ್ಟಾಮೌಂಟ್ ರಸ್ತೆಯಲ್ಲಿ, ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಅವರಿಗೆ ಈ ಐಷಾರಾಮಿ ನಿವಾಸ ಸೇರಿದೆ. ಅಂಬಾನಿ ಅವರ ನಿವಾಸದಿಂದ ಕೆಲವೇ ಕೆಲವು ಮೀಟರ್ ದೂರದಲ್ಲಿ ಈ ನಿವಾಸವೂ ಇದೆ.
ಗೌತಮ್ ಸಿಂಘಾನಿಯಾ ಅವರ ಖಾಸಗಿ ನಿವಾಸ, ಜೆಕೆ ಹೌಸ್, 6,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ. ಈ ನಿವಾಸ ಕೆಳಗೆ ಐಷಾರಾಮಿ ರೇಮಂಡ್ಸ್ ಶೂರೂಮ್ ಸಹ ಇದೆ. ನೋಡಲು ಆಂಟಿಲಿಯಾದಂತೆಯೇ ವಿನ್ಯಾಸವೂ ಇದೆ. ಮೊದಲು ಯಾರಾದು ಇದನ್ನೇ ಅಂಬಾನಿ ನಿವಾಸ ಎಂದುಕೊಳ್ಳುವಷ್ಟು ಸಾಮ್ಯತೆ ಇದೆ.
ಈ ಜೆ.ಕೆ ಹೌಸ್ ಬರೋಬ್ಬರಿ 30 ಮಹಡಿಗಳ ಹೊಂದಿದ್ದು, ಭಾರತದ ಎರಡನೇ ಅತಿ ಎತ್ತರದ ಖಾಸಗಿ ಕಟ್ಟಡವಾಗಿದೆ. ಇದು ಎರಡು ಈಜುಕೊಳಗಳು, ಐದು ಹಂತದ ಪಾರ್ಕಿಂಗ್, ಹೆಲಿಪ್ಯಾಡ್, ಸ್ಪಾ ಸೌಲಭ್ಯಗಳು, ಜಿಮ್ ಮತ್ತು ಹೋಮ್ ಥಿಯೇಟರ್ ಸೇರಿದಂತೆ ಅದ್ದೂರಿ ಸೌಕರ್ಯಗಳನ್ನು ಒಳಗೊಂಡಿದೆ.
ಉದ್ಯಮಿ ಗೌತಮ್ ಸಿಂಘಾನಿಯಾ ಯಾರು ಗೊತ್ತಾ?
ಸೆಪ್ಟೆಂಬರ್ 1990 ರಲ್ಲಿ ರೇಮಂಡ್ ಗ್ರೂಪ್‌ನ ನಾಯಕತ್ವವನ್ನು ವಹಿಸಿಕೊಂಡ ಗೌತಮ್ ಸಿಂಘಾನಿಯಾ ಬ್ರಾಂಡ್ ಕಟ್ಟಿದರು. ಮುಂಬೈ ವಿಶ್ವವಿದ್ಯಾನಿಲಯದಿಂದ ವಾಣಿಜ್ಯ ಪದವೀಧರರಾಗಿರುವ ಅವರು ರೇಮಂಡ್ ಗ್ರೂಪ್‌ಗಾಗಿ ಅವರ ದೃಷ್ಟಿ ದೇಶೀಯ ಮೆಚ್ಚುಗೆಯನ್ನು ಮೀರಿ ವಿಸ್ತರಿಸಿದೆ. ರೇಮಂಡ್ ಗ್ರೂಪ್‌ನ ಒಟ್ಟು ಮೌಲ್ಯ ಬರೋಬ್ಬರಿ 50,000 ಕೋಟಿ ರೂ.ಗಳನ್ನು ಮೀರಿದೆ.
ಜೊತೆಗೆ ತಂದೆ ವಿಜಯಪತ್ ಸಿಂಘಾನಿಯಾ, ಭಾರತೀಯ ಜವಳಿ ಉದ್ಯಮದಲ್ಲಿ ವಿಶಿಷ್ಟ ವ್ಯಕ್ತಿಯಾಗಿದ್ದು, ರೇಮಂಡ್ ಗ್ರೂಪ್‌ನ ಮಾಜಿ ಅಧ್ಯಕ್ಷರಾಗಿ ಪ್ರಸಿದ್ಧರಾಗಿದ್ದಾರೆ. ಇವರಿಗೆ ಭಾರತ ಸರ್ಕಾರ ಹಲವು ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಈ ನಿವಾಸ ಮುಂಬೈನ ಕೇಂದ್ರ ಭಾಗದಲ್ಲಿರುವುದು ಹಾಗೂ ಮುಖೇಶ್ ಅಂಬಾನಿ ನಿವಾಸದ ಹತ್ತಿರವೇ ಇದೆ. ಹೀಗಾಗಿ ಅವರ ಈ ನಿವಾಸವು ಸಹ ಆಕರ್ಷಣಾ ಕೇಂದ್ರವಾಗಿದೆ.
ಐಷಾರಾಮಿ ಕಾರುಗಳ ಪ್ರೇಮಿಯಾಗಿರುವ ಉದ್ಯಮಿ ಗೌತಮ್, ಈ ಐಷಾರಾಮಿ ಮನೆಯಲ್ಲಿ ಕಾರುಗಳ ನಿಲ್ಲಿಸಲೆಂದೇ ಪ್ರತ್ಯೇಕ ಅಂತಸ್ತು ಮೀಸಲಿಲಾಗಿದೆಯಂತೆ. ಇದರಲ್ಲಿ ಲಂಬೋರ್ಘಿನಿ ಗಲ್ಲಾರ್ಡೊ LP570 ಸೂಪರ್‌ಲೆಗ್ಗೆರಾ, ಲೋಟಸ್ ಎಲಿಸ್ ಕನ್ವರ್ಟಿಬಲ್, ನಿಸ್ಸಾನ್ ಸ್ಕೈಲೈನ್ GTR, ಹೋಂಡಾ S2000, ಫೆರಾರಿ 458 ಇಟಾಲಿಯಾ ಮತ್ತು ಆಡಿ ಕ್ಯೂ7 ಕಾರಿನ ಸಂಗ್ರಹವೇ ಇದೆಯಂತೆ.



Click it and Unblock the Notifications
