Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಈಕೆ ಭಾರತದ ಶ್ರೀಮಂತ ಹಾಡುಗಾರ್ತಿ..! ಒಟ್ಟು ಆಸ್ತಿ ₹200 ಕೋಟಿ..!
ಸಂಗೀತ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಭಾರತದಲ್ಲಂತು ಈ ಸಂಗೀತ ಸಾಧಕರ ಪಟ್ಟಿಯೇ ಇದೆ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾವಿರಾರು ಮಂದಿ ಸಿಗುತ್ತಾರೆ. ಆದ್ರೆ ನಿಮಗೆ ಅತ್ಯಂತ ಶ್ರೀಮಂತ ಹಾಡುಗಾರರು ಯಾರು ಎಂಬುದು ಗೊತ್ತಾ? ಭಾರತದ ಶ್ರೀಮಂತ ಮಹಿಳಾ ಹಾಡುಗಾರ್ತಿ ಯಾರು ಎಂಬುದು ನಿಮಗೆ ಅಚ್ಚರಿ ಮೂಡಿಸುತ್ತೆ.
ವೇಗವಾಗಿ ಬೆಳೆಯುತ್ತಿರುವ ಭಾರತೀಯ ಸಂಗೀತ ಜಗತ್ತಿನಲ್ಲಿ, ಸುನಿಧಿ ಚೌಹಾಣ್, ಶ್ರೇಯಾ ಘೋಷಾಲ್, ಸೋನು ನಿಗಮ್ ಮತ್ತು ಅರಿಜಿತ್ ಸಿಂಗ್ ಅವರಂತಹ ಹೆಸರುಗಳನ್ನ ನಾವು ಕೇಳಿದ್ದೇವೆ. ಅವರ ಹಾಡುಗಳನ್ನು ನಾವು ಕೇಳಿ ಆನಂದಿಸಿದ್ದೇವೆ. ಆದರೆ ನಿಮಗೆ ಗೊತ್ತಿಲ್ಲದ ಒಂದು ಹೆಸರು ಸಹ ಇದೆ. ಅದೇ ತುಳಸಿ ಕುಮಾರ್. ಆಕೆ ಭಾರತದ ಶ್ರೀಮಂತ ಮಹಿಳಾ ಗಾಯಕಿ ಆಗಿದ್ದಾರೆ.

ಹೌದು ತುಳಸಿ ಕುಮಾರ್ ಎಂಬಾಕೆ ಭಾರತದ ಶ್ರೀಮಂತ ಹಾಡುಗಾರ್ತಿ, ಆಕೆಯ ಆಸ್ತಿಯ ಒಟ್ಟು ಮೌಲ್ಯ ಬರೋಬ್ಬರಿ 200 ಕೋಟಿ ರೂಪಾಯಿ ಆಗಿದೆ.
ಯಾರು ಈ ತುಳಸಿ ಕುಮಾರ್?
ತುಳಸಿ ಕುಮಾರ್ ಹೆಸರು ನಿಮ್ಮಲ್ಲಿ ಕೆಲವೇ ಕೆಲವು ಮಂದಿ ಕೇಳಿರಬಹುದು. ಆಕೆ ಅಷ್ಟೊಂದು ಫೇಮಸ್ ಆಗಿರದಿದ್ದರು. ಆಕೆಯ ಆಸ್ತಿ ಮೌಲ್ಯ ಮಾತ್ರ 200 ಕೋಟಿ. 38 ವರ್ಷದ ತುಳಸಿ ಕುಮಾರ್ ಕೇವಲ ಸಂಗೀತದಿಂದ ಇಷ್ಟು ಆಸ್ತಿ ಮಾಡಿಲ್ಲ ಬದಲಾಗಿ ಆಕೆಯ ಕುಟುಂಬ ವ್ಯಾಪಾರ-ವ್ಯವಹಾರದಲ್ಲೂ ತೊಡಗಿದೆ.
ತುಳಸಿ ಕುಮಾರ್ ಟಿ ಸೀರಿಸ್ ಮ್ಯೂಸಿಕ್ ಕಂಪನಿಯ ಸಂಸ್ಥಾಪಕ ದಿವಂಗತ ಗುಲ್ಶನ್ ಕುಮಾರ್ ಅವರ ಪುತ್ರಿಯಾಗಿದ್ದಾರೆ. ಟಿ ಸೀರಿಸ್ ಹೆಸರನ್ನು ನೀವು ಕೇಳಿರುತ್ತೀರಿ. ಏಕೆಂದರೆ ಭಾರತದ ಅತ್ಯಂತ ದೊಡ್ಡ ಸಂಗೀತ ವಿತರಕ ಹಾಗೂ ಸಿನಿಮಾ ನಿರ್ಮಾಣ ಸಂಸ್ಥೆಯಾಗಿದೆ. ಜೊತೆಗೆ ಭಾರತದ ಅತೀ ಹೆಚ್ಚು ಚಂದಾದಾರರ ಹೊಂದಿರುವ ಯೂಟ್ಯೂಬ್ ಚಾನಲ್ ಸಹ ಇದಾಗಿದೆ.
ಖ್ಯಾತ ಸಂಗೀತ ಮತ್ತು ಚಲನಚಿತ್ರ ನಿರ್ಮಾಪಕ ದಿವಂಗತ ಗುಲ್ಶನ್ ಕುಮಾರ್ ಅವರ ಪುತ್ರಿ ತುಳಸಿ ಕುಮಾರ್ ಅವರು ಭಾರತೀಯ ಸಂಗೀತ ಉದ್ಯಮದಲ್ಲಿ ಸಂಪೂರ್ಣ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಹೆಸರು ಮಾಡಿದ್ದಾರೆ. ತುಳಸಿ ಕುಮಾರ್ ಬಾಲ್ಯದಿಂದಲೂ ಹಾಡುಗಾರಿಕೆಯಲ್ಲಿ ತೊಡಗಿದ್ದರಂತೆ. ಆಕೆಯ ತಂದೆಯಿಂದ ಸ್ಪೂರ್ತಿ ಪಡೆದಿದ್ದ ಆಕೆ ಸಂಗೀತ ಆರಂಭಿಸಿದ್ದರು.
ತುಳಸಿ ಕುಮಾರ್ 2009 ರಲ್ಲಿ ತನ್ನ ಆಲ್ಬಂ "ಲವ್ ಹೋ ಜಾಯೆ" ನೊಂದಿಗೆ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿಂದ, ಅವರು "ಶ್ರೀಕಾಂತ್," "ಸತ್ಯಪ್ರೇಮ್ ಕಿ ಕಥಾ," ಮತ್ತು "ಭೂಲ್ ಭುಲೈಯಾ 2" ನಂತಹ ಜನಪ್ರಿಯ ಚಲನಚಿತ್ರಗಳಲ್ಲಿ ಹಾಡಿದ್ದಾರೆ.
ತುಳಸಿ ಕುಮಾರ್ ಜೈಪುರದ ಉದ್ಯಮಿ ಹಿತೇಶ್ ರಹ್ಲಾನ್ ಅವರನ್ನು ಫೆಬ್ರವರಿ 18, 2015 ರಂದು ನವದೆಹಲಿಯಲ್ಲಿ ವಿವಾಹವಾದರು. ತುಳಸಿ ಕುಮಾರ್ ಅವರು ಭಾರತದ ಶ್ರೀಮಂತ ಮಹಿಳಾ ಗಾಯಕಿ ಎಂಬ ಬಿರುದನ್ನು ಹೊಂದಿದ್ದರೂ, ಇತರ ಗಮನಾರ್ಹ ಗಾಯಕರು ಸಹ ಸಾಕಷ್ಟು ಸಂಪತ್ತನ್ನು ಸಂಗ್ರಹಿಸಿದ್ದಾರೆ. ಶ್ರೇಯಾ ಘೋಷಾಲ್ ಕೂಡ 180 ರಿಂದ 190 ಕೋಟಿ ರೂಪಾಯಿ ಅಷ್ಟು ನಿವ್ವಳ ಆಸ್ತಿ ಹೊಂದಿದ್ದಾರೆ.
ಸದ್ಯ ಟಿ ಸೀರಿಸ್ ಸಂಸ್ಥೆಯಲ್ಲಿ ತುಳಸಿ ಕುಮಾರ್ ಹಾಗೂ ಆಕೆಯ ಸಹೋದರರ ಪಾಲು ಹೊಂದಿದ್ದಾರೆ. ಹೀಗಾಗಿ ಅವರ ಆಸ್ತಿ ಮೌಲ್ಯ 200 ಕೋಟಿ ರೂಪಾಯಿ ಆಗಿದೆ. ಈಗ ಬಾಲಿವುಡ್‌ನ ಬಹುಕೋಟಿ ಸಿನಿಮಾಗಳಲ್ಲೂ ಟಿ ಸೀರಿಸ್ ಹಣ ಹೂಡುತ್ತದೆ. ಯೂಟ್ಯೂಬ್‌ನಲ್ಲಿ ಅತೀ ಹೆಚ್ಚು ಸಂಪಾದನೆ ಮಾಡುತ್ತಿರುವ ಭಾರತದ ಮೊದಲ ಚಾನಲ್ ಇದಾಗಿದೆ. ಸುಮಾರು 260 ಮಿಲಿಯನ್‌ಗೂ ಅಧಿಕ ಚಂದಾದಾರರನ್ನು ಟಿ ಸೀರಿಸ್ ಸಂಪಾದಿಸಿದೆ.



Click it and Unblock the Notifications
