Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಷ್ಟ್ರಪತಿ ಭವನದಲ್ಲಿ ವಿವಾಹವಾಗುತ್ತಿರುವ ಮೊದಲ ವ್ಯಕ್ತಿ ಈಕೆ..! ಯಾರು ಈ ಸಿಆರ್‌ಪಿಎಫ್ ಸಿಬ್ಬಂದಿ..?
ಹಲವರು ತಮ್ಮ ವಿವಾಹ ಯಾವ ಸ್ಥಳದಲ್ಲಿ ಆಗಬೇಕು ಅನ್ನೋದಕ್ಕೇ ದೊಡ್ಡ ಕನಸು ಕಂಡಿರುತ್ತಾರೆ. ಅದ್ಭುತ ರೆಸಾರ್ಟ್‌ಗಳು, ಹಿಲ್ ಸ್ಟೇಷನ್ ಹೀಗೆ ಹತ್ತಿ ಹಲವು ಡೆಸ್ಟಿನೇಷನ್ ವಿವಾಹಗಳ ನಾವು ನೋಡಬಹುದು. ಆದ್ರೆ ಮತ್ತೆ ಕೆಲವೊಂದು ವಿವಾಹಗಳು ಸಾಮಾನ್ಯ ಸಂಪ್ರದಾಯದಂತೆಯೂ ನಡೆಯುತ್ತವೆ. ಆದ್ರೆ ಇಲ್ಲೊಂದು ಮದುವೆ ಈಗ ಇಡೀ ದೇಶದಲ್ಲಿ ಸುದ್ದಿಯಾಗುವಂತೆ ಮಾಡಿದೆ.
ಇದೇ ಮೊದಲ ಬಾರಿಗೆ ದೇಹಲಿಯ ರಾಷ್ಟ್ರಪತಿ ಭವನದಲ್ಲಿ ಮದುವೆಯೊಂದು ನಿಶ್ಚಯವಾಗಿದೆ. ಸರ್ಕಾರಿ ಕಟ್ಟಡದಲ್ಲಿ ಮದುವೆ ಸಮಾರಂಭ ನಡೆಯುತ್ತಿರುವುದು ಇದೇ ಮೊದಲು. ಆದ್ರೆ ಮದುವೆಯಾಗುತ್ತಿರುವುದು ದೊಡ್ಡ ಹುದ್ದೆಯಲ್ಲಿರುವ ವ್ಯಕ್ತಿ ಅಲ್ಲ. ಬದಲಿಗೆ ಸಾಮಾನ್ಯ ಸರ್ಕಾರಿ ಹುದ್ದೆಯಲ್ಲಿರುವ ಯುವತಿ.

ಹೌದು ಕಳೆದ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದ ಆಕೆಗೆ ಈಗ ರಾಷ್ಟ್ರಪತಿ ಭವನದಲ್ಲೇ ಮದುವೆಯಾಗುವ ಯೋಗ ಲಭಿಸಿದೆ. ಸಿಆರ್‌ಪಿಎಫ್ (ಸೆಂಟ್ರಲ್ ರಿಸರ್ವ್ ಪೊಲೀಸ್ ಪೋರ್ಸ್)ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯುವತಿಗೆ ಈ ಅವಕಾಶ ಬಂದೊದಗಿದೆ. ಪೂನಂ ಗುಪ್ತಾ ಎಂಬ ಯುವತಿ ಈಗ ರಾಷ್ಟ್ರಪತಿ ಭವನದಲ್ಲೇ ಮದುವೆಯಾಗುತ್ತಿದ್ದಾರೆ.
ಫೆಬ್ರವರಿ 12 ರಂದು ಪೂನಂ ಗುಪ್ತಾ ಮದುವೆಯಾಗುತ್ತಿರುವುದಾಗಿ ತಿಳಿದುಬಂದಿದೆ. 74 ನೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಸಿಆರ್‌ಪಿಎಫ್‌ನ ಸಂಪೂರ್ಣ ಮಹಿಳಾ ತುಕಡಿಯ ನೇತೃತ್ವ ವಹಿಸಿದ್ದ ಸಹಾಯಕ ಕಮಾಂಡೆಂಟ್ ಪೂನಂ ಗುಪ್ತಾ ಅವರಿಗೆ ರಾಷ್ಟ್ರಪತಿ ಭವನವು ಈ ಅವಕಾಶ ನೀಡಿದೆ. ಆಕೆಯ ಸೇವೆ ಹಾಗೂ ಕರ್ತವ್ಯ ನಿಷ್ಠೆ ಮತ್ತು ಮಹಿಳಾ ಪ್ರತಿನಿಧಿಯಾಗಿ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಖುದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಆಕೆಯ ವಿವಾಹಕ್ಕೆ ಅನುಮತಿ ನೀಡಿದ್ದಾರೆ.
ರಾಷ್ಟ್ರಪತಿ ಭವನದ ಮದರ್ ತರೇಸಾ ಕ್ರೌನ್ ಕಾಂಪ್ಲೆಕ್ಸ್‌ನಲ್ಲಿ ಸಮಾರಂಭಕ್ಕೆ ಅವಕಾಶ ನೀಡಲಾಗಿದ್ದು, ಆಹ್ವಾನಿತರು ಭಾಗಿಯಾಗಲು ಸೂಚಿಸಲಾಗಿದೆಯಂತೆ. ಸದ್ಯ ಈಗ ಸಿಆರ್‌ಪಿಎಫ್ ಸಿಬ್ಬಂದಿ ಪೂನಂ ರಾಷ್ಟ್ರಪತಿ ಭವನದಲ್ಲಿ ಪಿಎಸ್‌ಒ ಆಗಿ ನೇಮಕಗೊಂಡಿದ್ದಾರೆ. ಹಾಗೆ ಸೀಮಿತಿ ಸಂಖ್ಯೆಯ ಆಹ್ವಾನಿತರಿಗೆ ಭಾಗಿಯಾಗಲು ಅವಕಾಶ ನೀಡಲಾಗಿದೆ.
ಯಾರು ಈ ಸಿಆರ್‌ಪಿಎಫ್ ಸಿಬ್ಬಂದಿ ಪೂನಂ ಗುಪ್ತಾ?
ಪೂನಂ ಗುಪ್ತಾ ಸಿಆರ್‌ಪಿಎಫ್‌ನಲ್ಲಿ ಸಹಾಯಕ ಕಮಾಂಡೆಂಟ್ ಆಗಿದ್ದಾರೆ. 74ನೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಅವರು ಸಿಆರ್‌ಪಿಎಫ್‌ನ ಮಹಿಳಾ ತುಕಡಿಯ ಸಂಪೂರ್ಣ ನೇತೃತ್ವ ವಹಿಸಿದ್ದರು. ಈ ವೇಳೆ ರಾಜಪಥದಲ್ಲಿ ಮೆರವಣಿಗೆ ಸಾಗುವಾಗ ಅವರು ತುಕಡಿಯ ಮುಂದಾಳತ್ವ ವಹಿಸಿ ಗಮನ ಸೆಳೆದಿದ್ದರು. 2018 ರಲ್ಲಿ, ಅವರು ಯುಪಿಎಸ್‌ಸಿ ಸಿಎಪಿಎಫ್ ಪರೀಕ್ಷೆಯಲ್ಲಿ 81ನೇ ರ‍್ಯಾಂಕ್ ಗಳಿಸಿದ್ದರು. ಆರಂಭದಲ್ಲಿ ಅವರು ಬಿಹಾರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಅದರಲ್ಲೂ ನಕ್ಸಲ್ ಪೀಡಿತ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಗ್ವಾಲಿಯರ್‌ನ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಅವರು ಗಣಿತಶಾಸ್ತ್ರ ಪದವಿ ಹಾಗೂ ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಬಿಎಡ್ ಕೂಡ ಪೂರ್ಣಗೊಳಿಸಿದ್ದಾರೆ. ಆದರೆ ಸರ್ಕಾರಿ ಹುದ್ದೆಗೇರುವ ಕನಸು ಕಂಡಿದ್ದ ಅವರು, ಯುಪಿಎಸ್‌ಸಿ ಸಿಆರ್‌ಪಿಎಫ್ ಪರೀಕ್ಷೆ ಬರೆದು 81ನೇ ರ‍್ಯಾಂಕ್ ಪಡೆದಿದ್ದರು. ಇದಿಷ್ಟೇ ಅಲ್ಲ ಆವರು ಸಾಮಾಜಿಕ ಜಾಲತಾಣಗಳಲ್ಲೂ ಸಕ್ರೀಯರಾಗಿದ್ದು, ಇನ್ಸ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋಗಳು, ಫೋಟೋಗಲ ಹಂಚಿಕೊಳ್ಳುತ್ತಾರೆ.
ಸದ್ಯ ಈಗ ರಾಷ್ಟ್ರಪತಿ ಭವನದಲ್ಲಿ ವಿವಾಹವಾಗುತ್ತಿರುವ ಮೊದಲ ಭಾರತೀಯ ಪ್ರಜೆಯಾಗಿದ್ದಾರೆ. ಹಾಗೆ ಅವರೇ ಕೊನೆಯವರು ಕೂಡ ಆಗಿರಬಹುದು. ಸರ್ಕಾರಿ ಕಟ್ಟಡಗಳನ್ನು ಈ ರೀತಿಯ ವೈಯಕ್ತಿಕ ಸಮಾರಂಭಗಳಿಗೆ ಬಳಸಿಕೊಂಡಿರುವ ಉದಾಹರಣೆಗಳಿಲ್ಲ. ಆದರೆ ಅವರ ಸೇವೆ ಗುರುತಿಸಿದ್ದ ರಾಷ್ಟ್ರಪತಿ ಮುರ್ಮು ಈ ಅಪರೂಪದ ಅವಕಾಶ ನೀಡಿದ್ದಾರೆ.



Click it and Unblock the Notifications