Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಕೊಲೆಗಾತಿ ಮುಸ್ಕಾನ್ ಪತಿ ಸೌರಭ್ ಜೊತೆ ಡ್ಯಾನ್ಸ್ ಮಾಡುತ್ತಿರುವ ವೀಡಿಯೋ ವೈರಲ್
ಮೀರತ್ ಕೊಲೆ ಕೇಸ್ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ, ಈಗ ವೈರಲ್ ಆಗುತ್ತಿರುವ ವೀಡಿಯೋ ನೋಡುವಾಗ ತಣ್ಣನೆಯ ನಡುಕ
ಹುಟ್ಟಿಸುತ್ತೆ, ಆಕೆ ಎಷ್ಟೊಂದು ಕ್ರೂರಿ, ನಂಬಿಸಿ ಕುತ್ತಿಗೆ ಕುಯ್ಯುವುದು ಅಂತಾರೆ ಅದರಂತೆಯೇ ಈ ಕ್ರೂರಿ ನಡೆದುಕೊಂಡಿದ್ದಾಳೆ. ಪಾಪ ಆ ಸೌರಬ್ ಇವಳ ದುಷ್ಟ ಬುದ್ಧಿಯ ಒಂದಿಷ್ಟು ಸುಳಿವು ಸಿಗದೆ ಅವಳನ್ನು ಸಂಪೂರ್ಣ ನಂಬಿ ಪ್ರಾಣ ಕಳೆದುಕೊಂಡಿದ್ದಾನೆ. ಖುಷಿ ಖುಷಿಯಾಗಿ ಕುಣಿದು ಕುಪ್ಪಳಿಸಿದ ಪತ್ನಿ ಕೊಲೆಗೆ ಸಂಚು ರೂಪಿಸಿದ್ದಾಳೆಂದು ಪಾಪ ಅವನು ತಾನೆ ಹೇಗೆ ಊಹಿಸಲು ಸಾಧ್ಯ?

ಆ ವೀಡಿಯೋ ಫೆಬ್ರವರಿ 28ಕ್ಕೆ ತೆಗೆದಿರುವುದು ಎಂದು ಹೇಳಲಾಗುವುದು. ಆತ ಮಗಳ ಹುಟ್ಟುಹಬ್ಬದಂದು ಪತ್ನಿ ಮಗಳ ಜೊತೆ ರೆಸ್ಟೋರೆಂಟ್‌ಗೆ ಹೋದಾಗ ಕುಣಿದು ಕುಪ್ಪಳಿಸುತ್ತಿರುವ ವೀಡಿಯೋ ಇದಾಗಿದೆ. ಎಷ್ಟೊಂದು ಖುಷಿಯಾಗಿದ್ದ, ಅನೈತಿಕ ಸಂಬಂಧಕ್ಕಾಗಿ ಅಷ್ಟೊಂದು ಸುಂದರವಾದ ಸಂಸಾರವನ್ನು ಹಾಳು ಮಾಡಿ ಜೈಲು ಕಂಬಿ ಎಣಿಸುತ್ತಿದ್ದಾಳೆ.
ಶ್ರದ್ಧಾ ವಾಕರ್ ಕೊಲೆ ಕೇಸ್ ನೆನಪಿಸುತ್ತೆ ಈ ಮರ್ಡರ್
ಶ್ರದ್ಧಾ ವಾಕರ್ ಅನ್ನು ಆಕೆಯ ಪ್ರಿಯತಮ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟರೆ, ಈಕೆ ತನ್ನ ಪ್ರಿಯತಮನ ಜೊತೆ ಸೇರಿ ಪತಿಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿ ಡ್ರಮ್‌ನಲ್ಲಿ ಹಾಕಿ ಸಿಮೆಂಟ್ ಹಾಕಿ ಕಾಂಕ್ರಿಟ್ ಮಾಡಿ ನಂತರ ಬಾಯ್‌ಫ್ರೆಂಡ್ ಜೊತೆ ಶಿಮ್ಲಾ ಸುತ್ತಾಡಿಕೊಂಡು ಬರಲು ಹೋದವಳು.
ಮುಸ್ಕೋನ್‌ಳನ್ನು ಪ್ರೀತಿಸಿ ಮದುವೆಯಾಗಿದ್ದ ಸೌರಭ್
ಸೌರಭ್ ಒಳ್ಳೆಯ ಕೆಲಸದಲ್ಲಿದ್ದ, ಈಕೆಯನ್ನು ಪ್ರೀತಿಸಿ ಮದುವೆಯಾಗಿದ್ದ, ಮದುವೆಯ ನಂತರ ಈಕೆಗಾಗಿ ತನ್ನ ಒಳ್ಳೆಯ ಕೆಲಸ ಬಿಟ್ಟು ಈಕೆಯ ಜೊತೆಯೇ ಇರಲಾರಂಭಿಸಿದ, ನಂತರ ಆಕಯ ಸಲಹೆಯಂತೆಯೇ ಲಂಡನ್‌ಗೆ ಕೆಲಸಕ್ಕೆ ಹೋದ, ಸೌರಭ್ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಲೆಂದು ಲಂಡನ್‌ಗೆ ಹಾರಿದರೆ ಮುಸ್ಕಾನ್ ತನ್ನ ಬಾಯ್‌ಫ್ರೆಂಡ್ ಸಾಹಿಲ್ ಜೊತೆ ಅನೈತಿಕ ಸಂಬಂಧದಲ್ಲಿದ್ದಳು. ಪತಿ ಲಂಡನ್‌ನಿಂದ ಮಗಳ ಹುಟ್ಟುಹಬ್ಬಕ್ಕೆಂದು ಬಂದಾಗ ತಾನು ಗರತಿಯಂತೆ ಅವನ ಜೊತೆ ಖುಷಿ ಖುಷಿಯಿಂದ ಇದ್ದಳು ಎಂಬುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ. ಈ ವೀಡಿಯೋ ಮಾಡಿದ ನಾಲ್ಕೇ ದಿನಕ್ಕೆ ಕೊಲೆಯಾಗಿ ಹೋಗಿದ್ದ.
ಬಹುಶಃ ಸೌರಬ್ ರಜಪೂತ್‌ಗೆ ತನ್ನ ಪತ್ನಿಯ ಕಳ್ಳಾಟ ತಿಳಿದಿರಬಹುದು
ತಾನು ಲಂಡನ್‌ನಿಂದ ಮರಳಿದ ಬಳಿಕ ಸೌರಭ್‌ಗೆ ತನ್ನ ಪತ್ನಿ ಅನೈತಿಕ ಸಂಬಂಧದ ಸುಳಿವು ಸಿಕ್ಕಿರಬಹುದು, ಇದರ ಭಯಬಿದ್ದ ಆಕೆ ಸೌರಭ್‌ಗೆ ನಿದ್ದೆ ಮಾತ್ರೆ ಹಾಕಿ ನಂತರ ಸಾಹಿಲ್ ಜೊತೆ ಸೇರಿ ಚುಚ್ಚಿ ಕೊಂದಿದ್ದಾಳೆ, ನಂತರ ಆತನ ದೇಹವನ್ನು ತುಂಡು-ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಹಾಕಿ, ನಂತರ ಅದರಲ್ಲಿ ಸಿಮೆಂಟ್ ತುಂಬಿದ್ದಾರೆ.
#Meerut : प्रेमी संग मिल पति की निर्मम हत्या का मामला
— News1India (@News1IndiaTweet) March 20, 2025
पत्नी मुस्कान की डांस करते वीडियो आई सामने
मृतक पति सौरभ संग जमकर नाच रही पत्नी मुस्कान
ब्रह्मपुरी थाना क्षेत्र के इंदिरा नगर में हुई थी सनसनीखेज़ वारदात#MeerutNews #Muskan #Crime #meerutmurder #muskanrastogi #sahilshukla… pic.twitter.com/Itlxpyanjh
ಮಗಳನ್ನು ತಾಯಿ ಮನೆಯಲ್ಲಿ ಬಿಟ್ಟಿದ್ದಳು ಮುಸ್ಕಾನ್
ತಾನು ಮತ್ತು ಸೌರಭ್ ಶಿಮ್ಲಾವರೆಗೆ ಹೋಗಿ ಬರುವುದಾಗಿ ಹೇಳಿ ಮಗಳನ್ನು ತಾಯಿ ಮನೆಯಲ್ಲಿ ಬಿಟ್ಟು ಬಂದು ನಂತರ ಸೌರಭ್‌ಗೆ ನಿದ್ದೆ ಮಾತ್ರೆ ಹಾಕಿ, ಬಳಿಕ ಪ್ರಿಯತಮ ಸಾಹಿಲ್‌ನನ್ನು ಕರೆಸಿ ಕೊಲೆ ಮಾಡಿದ್ದಾಳೆ. ಬಳಿಕ ಸಾಹಿಲ್ ಜೊತೆಗೆ ಸುತ್ತಾಡಿಕೊಂಡು ಬರಲು ಶಿಮ್ಲಾ ಹೋಗಿದ್ದಾಳೆ.
ಸೌರಭ್ ಸಹೋದರ ನನ್ನ ಅಣ್ಣ ಕಾಣೆಯಾಗಿದ್ದಾನೆ ಎಂದು ದೂರು ಕೊಟ್ಟಾಗ ಪರಿಸ್ಥಿತಿ ಬೆಳಕಿಗೆ ಬಂದಿದೆ
ಸೌರಭ್ ಸಹೋದರ ನನ್ನ ಅಣ್ಣ ಕಾಣೆಯಾಗಿದ್ದಾನೆ ಎಂದು ಹೇಳಿ ದೂರು ಕೊಡುತ್ತಾನೆ, ಇದು ಮುಸ್ಕಾನ್‌ಗೆ ತಿಳಿದಾಗ ಭಯಬಿದ್ದ ಆಕೆ ತನ್ನ ತಾಯಿ ಬಳಿ ನಡೆದ ಘಟನೆ ತಿಳಿಸುತ್ತಾಳೆ. ಪಾಪಿ ಮಗಳು ಮಾಡಿದ ಕೃತ್ಯ ತಿಳಿಯುತ್ತಿದ್ದಂತೆ ಆಕೆಯ ಮನೆಯವರು ಆಕೆಗೆ ಶಿಕ್ಷೆಯಾಗಲೇಬೇಕೆಂದು ತೀರ್ಮಾನಿಸಿ ಪೋಲಿಸರಿಗೆ ವಿಷ ತಿಳಿಸಿದಾಗ ಸೌರಭ್ ದೇಹ ತಂಡು ತುಂಡಾಗಿ ಸಿಂಮೆಂಟ್ ತುಂಬಿದ ಡ್ರಮ್‌ನಲ್ಲಿ ಸಿಕ್ಕಿದೆ.



Click it and Unblock the Notifications