Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
ಮಾಸಿಕ ರಾಶಿಫಲ: ಜುಲೈ ತಿಂಗಳು ಮೀನ ರಾಶಿಯವರ ವೃತ್ತಿ, ಆರ್ಥಿಕ, ಪ್ರೇಮ-ವಿವಾಹ, ಕುಟುಂಬ ಭವಿಷ್ಯ
ಗ್ರಹಗತಿಗಳ ಆಧಾರದ ಮೇಲೆ ಜುಲೈ 2023ರ ರಾಶಿಫಲ ನೀಡಲಾಗಿದ್ದು ನಾವಿಲ್ಲಿ ಮೀನ ರಾಶಿಯವರಿಗೆ ಜೂನ್ ತಿಂಗಳು ಹೇಗಿರಲಿದೆ? ಅವರ ಆರ್ಥಿಕ ಭವಿಷ್ಯ, ವೃತ್ತಿ ಜೀವನ ಭವಿಷ್ಯ, ವ್ಯಾಪಾರ, ಆರೋಗ್ಯ, ಕುಟುಂಬ ಹಾಗೂ ಪ್ರೀತಿಯ ಭವಿಷ್ಯದ ಬಗ್ಗೆ ಹೇಳಲಾಗಿದೆ. ಅಷ್ಟಕ್ಕು ಜುಲೈ ತಿಂಗಳಲ್ಲಿ ಮೀನ ರಾಶಿಯವರ ಬಾಳಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ ಅನ್ನೋದನ್ನು ತಿಳಿಯೋಣ.
ಮೀನ ರಾಶಿಯ ಅಧಿಪತಿ ಗುರು. ಮೀನ ರಾಶಿಯವರಿಗೆ ಈ ತಿಂಗಳು ರಾಹು, ಕೇತು ಮತ್ತು ಶನಿ ಪ್ರತಿಕೂಲ ಸ್ಥಾನದಲ್ಲಿರುತ್ತಾರೆ. ಇನ್ನೂ ಇದರ ಪರಿಣಾಮವಾಗಿ ಮೀನ ರಾಶಿಯವರು ತಮ್ಮ ಆರೋಗ್ಯ, ವೃತ್ತಿ, ಪ್ರೀತಿ ಮತ್ತು ವೈವಾಹಿಕ ಜೀವನ ಮತ್ತು ಆರ್ಥಿಕ ಜೀವನದಲ್ಲಿ ಹೆಚ್ಚು ಗಮನ ಹರಿಸಬೇಕಾಗಬಹುದು. ಶನಿಯು ಈ ತಿಂಗಳು ಹನ್ನೆರಡನೇ ಮನೆಯಲ್ಲಿ ಕುಳಿತಿದ್ದಾನೆ ಮತ್ತು ಇದು ಸಾಡೇ ಸತಿಯನ್ನು ಸೂಚಿಸುತ್ತದೆ. ಈ ರಾಶಿಯವರು ಗುರುವಿನ ಪ್ರಭಾವದಿಂದ ಆರ್ಥಿಕ ಲಾಭವನ್ನು ಪಡೆಯಲಿದ್ದಾರೆ.

ವೃತ್ತಿ ಜೀವನ
ಮೀನ ರಾಶಿಯವರು ಈ ತಿಂಗಳು ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ಕಷ್ಟಗಳನ್ನು ಅನುಭವಿಸುತ್ತಾರೆ. ಈ ತಿಂಗಳು ರಾಹು ಎರಡನೇ ಮನೆಯಲ್ಲಿ ಮತ್ತು ಕೇತು ಎಂಟನೇ ಮನೆಯಲ್ಲಿದೆ. ಇತ್ತ ಶನಿಯು ಈ ತಿಂಗಳಲ್ಲಿ ಹನ್ನೆರಡನೇ ಮನೆಯಲ್ಲಿ ಕುಳಿತಿದ್ದಾನೆ. ಶನಿಯ ಪ್ರಭಾವದಿಂದಾಗಿ ಈ ರಾಶಿಯವರು ತಮ್ಮ ಸಹೋದ್ಯೋಗಿಗಳು ಮತ್ತು ಹಿರಿಯರಿಂದ ಸವಾಲುಗಳನ್ನು ಎದುರಿಸಬೇಕಾಗಬಹುದು.
ವೃತ್ತಿ ಕ್ಷೇತ್ರದಲ್ಲಿ ಈ ತಿಂಗಳಲ್ಲಿ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ಪ್ರಮುಖ ಗ್ರಹಗಳು ಅನುಕೂಲಕರ ಸ್ಥಾನದಲ್ಲಿ ಇರುವುದಿಲ್ಲ. ಹೀಗಾಗಿ ಕೆಲಸದ ಸ್ಥಳದಲ್ಲಿ ಒತ್ತಡವನ್ನು ಎದುರಿಸಬೇಕಾಗಬಹುದು. ಇನ್ನೂ ಕೆಲವರಿಗೆ ಉದ್ಯೋಗ ಬದಲಾಯಿಸಬೇಕಾದ ಸಂದರ್ಭ ಎದುರಾಗಬಹುದು.
ಆರೋಗ್ಯ
ಮೀನ ರಾಶಿಯವರಿಗೆ ಈ ತಿಂಗಳಲ್ಲಿ ನಿಮ್ಮ ರೋಗನಿರೋಧಕ ಶಕ್ತಿ ಮತ್ತು ಆತ್ಮವಿಶ್ವಾಸವು ದುರ್ಬಲವಾಗಬಹುದು. ಇದರಿಂದಾಗಿ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ. ಮತ್ತೊಂದೆಡೆ ಏಳನೇ ಮನೆಯಲ್ಲಿ ಮಂಗಳನ ಉಪಸ್ಥಿತಿಯು ಮೀನ ರಾಶಿಯವರಿಗೆ ಆತಂಕ, ಒತ್ತಡ ಮತ್ತು ಜೀರ್ಣಕಾರಿ ಸಮಸ್ಯೆಗಳು ಕಾಡುತ್ತದೆ. ಆದಷ್ಟು ಒತ್ತಡ ಮತ್ತು ಆತಂಕದಿಂದ ದೂರವಿದ್ದರೆ ಒಳ್ಳೆಯದು.
ಶನಿ, ರಾಹು ಮತ್ತು ಕೇತುಗಳು ಈ ತಿಂಗಳು ಪ್ರತಿಕೂಲವಾದ ಸ್ಥಾನದಲ್ಲಿದೆ. ಇದರ ಪರಿಣಾಮವಾಗಿ ಮೀನ ರಾಶಿಯವರಿಗೆ ಕೆಮ್ಮು, ಕಾಲುಗಳು ಮತ್ತು ಕೀಲುಗಳಲ್ಲಿ ನೋವಿನ ಸಮಸ್ಯೆ ಎದುರಾಗುತ್ತದೆ. ಇನ್ನೂ ಒತ್ತಡ ಮತ್ತು ಆತಂಕವು ನಿಮ್ಮೊಳಗೆ ಅಭದ್ರತೆಯ ಭಾವನೆಯನ್ನು ಉಂಟುಮಾಡಬಹುದು.
ಈ ತಿಂಗಳಲ್ಲಿ ನಿಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಇಲ್ಲದಿದ್ದರೆ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಎದುರಾಗಿ ಈ ತಿಂಗಳು ಸಿಕ್ಕಾಪಟ್ಟೆ ಖರ್ಚು ಮಾಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ.
ಪ್ರೀತಿ ಮತ್ತು ವೈವಾಹಿಕ ಜೀವನ
ಈ ತಿಂಗಳು ಮೀನ ರಾಶಿಯವರ ಎರಡನೇ ಮನೆಯಲ್ಲಿ ರಾಹು, ಎಂಟನೇ ಮನೆಯಲ್ಲಿ ಕೇತು ಮತ್ತು ಮೊದಲ ಮನೆಯಲ್ಲಿ ಶನಿಯ ಉಪಸ್ಥಿತಿಯು ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಕಷ್ಟಕರ ಪರಿಸ್ಥಿತಿ ಎದುರಿಸುವಂತೆ ಮಾಡುತ್ತದೆ. ಪ್ರೀತಿಯ ಗ್ರಹವಾಗಿರುವ ಶುಕ್ರ ಈ ತಿಂಗಳು ಪ್ರತಿಕೂಲ ಸ್ಥಾನದಲ್ಲಿ ಕುಳಿತಿದ್ದಾನೆ. ಈ ತಿಂಗಳು ಶುಕ್ರನು ಮೂರನೇ ಮತ್ತು ಎಂಟನೇ ಮನೆಯ ಅಧಿಪತಿಯಾಗಿ ಏಳನೇ ಮನೆಯಲ್ಲಿ ಉಪಸ್ಥಿತನಿದ್ದಾನೆ. ಇದರಿಂದಾಗಿ ಪ್ರೀತಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ.
ಪ್ರೀತಿಯ ಬಂಧನದಲ್ಲಿರುವ ಜನರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಆದರೆ ವಿವಾಹಿತರು ತಮ್ಮ ದಾಂಪತ್ಯದಲ್ಲಿ ಸಂತೋಷದ ಕೊರತೆಯನ್ನು ಅನುಭವಿಸಬಹುದು. ಇನ್ನೂ ಈ ತಿಂಗಳು ಮದುವೆಯ ಆಲೋಚನೆ ಮಾಡಬೇಡಿ. ಯಾಕಂದ್ರೆ ಈ ತಿಂಗಳು ಮದುವೆ ಸಾಧ್ಯವಿಲ್ಲದ ಕಾರಣ ಅದನ್ನು ಮುಂದೂಡಿದರೆ ಒಳ್ಳೆಯದು.
ಈ ತಿಂಗಳು ಪ್ರೀತಿ ಮತ್ತು ದಾಂಪತ್ಯ ಜೀವನದಲ್ಲಿ ಯಾವುದೇ ಹುಳುಕು ಉಂಟಾಗದಂತೆ ಸಂಬಂಧದಲ್ಲಿ ಪರಸ್ಪರ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವುದು ಉತ್ತಮ. ಗುರು ಮೂರನೇ ಮನೆಯಲ್ಲಿ ಕುಳಿತಿದ್ದಾನೆ. ಇದರ ಪರಿಣಾಮವಾಗಿ ವಿವಾಹಿತರ ಜೀವನದಲ್ಲಿ ಅನಗತ್ಯ ವಿವಾದಗಳು ಉಂಟಾಗಬಹುದು. ಹೀಗಾಗಿ ಜಾಗರೂಕರಾಗಿರಿ.
ಪರಿಹಾರ
ಆಂಜನೇಯನ ಆರಾಧನೆ ಮಾಡಿ.
"ಓಂ ಬುಧಾಯ ನಮಃ" ಮಂತ್ರವನ್ನು ಪ್ರತಿದಿನ 108 ಬಾರಿ ಜಪಿಸಿ.
ಮಂಗಳವಾರ ರಾಹು ಮತ್ತು ಕೇತುಗಳಿಗೆ ಹೋಮ-ಹವನ ಮಾಡಿ.



Click it and Unblock the Notifications