May Month Love Horoscope 2023: ಮೇ ತಿಂಗಳು ಪ್ರೇಮಿಗಳಿಗೆ, ವಿವಾಹಿತರಿಗೆ ಹೇಗಿರಲಿದೆ?

ಗ್ರಹಗ್ರತಿಗಳ ಚಲನೆಯ ಆಧಾರದ ಮೇಲೆ ಭವಿಷ್ಯವನ್ನು ಹೇಳಲಾಗುವುದು. ಮೇ ತಿಂಗಳ ಪ್ರೇಮ ಭವಿಷ್ಯ ನೋಡುವುದಾದರೆ ಈ ತಿಂಗಳು ತುಂಬಾ ರಾಶಿಗಳಿಗೆ ಬಹಳ ಉತ್ತಮವಾಗಿದೆ. ಕೆಲವರ ಜೀವನದಲ್ಲಿ ಇದ್ದಂಥ ಸಮಸ್ಯೆ ಬಗೆಹರಿಯಲಿದೆ. ಈ ತಿಂಗಳು ನಿಮ್ಮ ರಾಶಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ
ಈ ತಿಂಗಳು ಪ್ರೇಮಿಗಳಿಗೆ ಏರಳಿತಗಳಿಂದ ಕೂಡಿರಲಿದೆ, ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗುವುದು, ಆದರೆ ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು. ಆದರೆ ತಿಂಗಳ ಕೊನೆಯಲ್ಲಿ, ಪರಿಸ್ಥಿತಿಗಳಲ್ಲಿ ಸುಧಾರಣೆ ಕಂಡುಬರಬಹುದು. ಈ ಸಮಯದಲ್ಲಿ ನೀವು ಉತ್ತಮ ಮನಸ್ಥಿತಿಯಲ್ಲಿ ಇರುತ್ತೀರಿ, ನಿಮ್ಮಿಬ್ಬರ ನಡುವೆ ಹೊಂದಾಣಿಕೆ ಹೆಚ್ಚಲಿದೆ.

May Month Love Horoscope In Kannada

ವೃಷಭ ರಾಶಿ
ವೃಷಭ ರಾಶಿಯ ಪ್ರೇಮಿಗಳಿಗೆ ಈ ತಿಂಗಳು ತುಂಬಾ ಒಳ್ಳೆಯದಿದೆ. ನಿಮ್ಮಿಬ್ಬರ ಸಂಬಂಧ ಮತ್ತಷ್ಟು ಹೆಚ್ಚಾಗಲಿದೆ. ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ನಿರ್ಧಾರಗಳನ್ನು ಸಹ ನೀವು ತೆಗೆದುಕೊಳ್ಳಬಹುದು. ಪ್ರೇಮ ವಿವಾಹವನ್ನು ಹಮಾಡಿಕೊಳ್ಳಲು ಬಯಸುವುದಾದರೆ ಪೋಷಕರಿಂದ ಒಪ್ಪಿಗೆ ದೊರೆಯಲಿದೆ.

ಮಿಥುನ ರಾಶಿ
ಈ ತಿಂಗಳಿನಲ್ಲಿ ಕೆಲಸ ಕಾರ್ಯಗಳಲ್ಲಿ ತುಂಬಾ ಬ್ಯುಸಿಯಾಗಿರುವುದರಿಂದ ನಿಮ್ಮ ಸಂಗಾತಿಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಈ ತಿಂಗಳು ಸಣ್ಣ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳ ಸಾಧ್ಯತೆಯಿದೆ. ನಿಮ್ಮ ನಡುವೆ ಅಪನಂಬಿಕೆ ಉಂಟಾಗಬಹುದು, ಹೀಗಾದರೆ ಅದನ್ನು ಪರಿಹರಿಸಬೇಕು, ಸಂಬಂಧದಲ್ಲಿ ನಂಬಿಕೆ ತುಂಬಾನೇ ಮುಖ್ಯ. ನಿಮ್ಮ ಪ್ರೇಮ ಸಂಬಂಧದ ಬಗ್ಗೆ ಹೇಳುವುದಾದರೆ ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

ಕರ್ಕ ರಾಶಿ
ನಿಮ್ಮ ಪ್ರಣಯ ಜೀವನದಲ್ಲಿ ಸ್ಥಿರತೆ ಇರಲಿದೆ. ನಿಮ್ಮ ನಿರ್ಧಾರಗಳಿಗೆ ಸಂಗಾತಿಯ ಬೆಂಬಲ ಸಿಗಲಿದೆ. ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಗೆ ಅಮೂಲ್ಯವಾದ ಉಡುಗೊರೆಯನ್ನು ಸಹ ನೀಡಬಹುದು. ನೀವು ಅವರೊಂದಿಗೆ ಕೆಲವು ಸುಂದರವಾದ ಸ್ಥಳಕ್ಕೆ ಪ್ರವಾಸಕ್ಕೆ ಹೋಗುವ ಸಾಧ್ಯತೆಯಿದೆ. ನೀವು ವಿವಾಹಿತರಾಗಿದ್ದರೆ, ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚಾಗಲಿದೆ. ನೀವು ಪರಸ್ಪರ ಸಂಪೂರ್ಣವಾಗಿ ಸಮರ್ಪಿತರಾಗುತ್ತೀರಿ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ತಿಂಗಳು ಉತ್ತಮವಾಗಿರಲಿದೆ. ಕೆಲವು ಕಾರಣಗಳಿಂದ ನಿಮ್ಮ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದರೆ ಈ ಸಮಯದಲ್ಲಿ ಎಲ್ಲವೂ ಸರಿಯಾಗಲಿದೆ. ಈ ಅವಧಿಯಲ್ಲಿ ನಿಮ್ಮ ಸಂಗಾತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಅವಕಾಶ ಸಿಗಲಿದೆ. ತಿಂಗಳ ಕೊನೆಯಲ್ಲಿ, ನಿಮ್ಮ ಸಂಬಂಧಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರವನ್ನು ಸಹ ನೀವು ತೆಗೆದುಕೊಳ್ಳುತ್ತೀರಿ.

ಕನ್ಯಾ ರಾಶಿ
ಈ ತಿಂಗಳು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಬಹುದು. ನಿಮ್ಮ ಪ್ರಣಯ ಜೀವನದಲ್ಲಿ ಪ್ರೀತಿ ಮತ್ತಷ್ಟು ಗಟ್ಟಿಯಾಗಲಿದೆ. ಇದಲ್ಲದೆ, ನೀವು ನಿಮ್ಮ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗುವುದು. ಸಂಗಾತಿಯೊಂದಿಗೆ ಹೊಂದಾಣಿಕೆ ಇರುವುದರಿಂದ ಸಂತೋಷವಾಗಿರುವಿರಿ.

ತುಲಾ ರಾಶಿ
ಈ ತಿಂಗಳು ಪ್ರೇಮಿಗಳಿಗೆ ಉತ್ತಮವಾಗಿದೆ. ನೀವು ಒಬ್ಬಂಟಿಯಾಗಿದ್ದರೆ ಜಂಟಿಯಾಗಬಹುದು. ನಿಮ್ಮ ಹಾಗೂ ಸಂಗಾತಿ ನಡುವೆ ಪರಸ್ಪರ ಭಾವನಾತ್ಮಕ ಬಾಂಧವ್ಯ ಹೆಚ್ಚಾಗುತ್ತದೆ. ಈ ರಾಶಿಯ ವಿವಾಹಿತರಿಗೆ ಈ ತಿಂಗಳು ಉತ್ತಮವಾಗಿದೆ. ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಮನೆಯ ಜವಾಬ್ದಾರಿಗಳನ್ನು ಪೂರೈಸುವಲ್ಲಿ ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ.

ವೃಶ್ಚಿಕ ರಾಶಿ
ಈ ತಿಂಗಳು ನೀವು ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗಬಹುದು. ಮೂರನೆಯವರ ಹಸ್ತಕ್ಷೇಪದಿಂದಾಗಿ, ನಿಮ್ಮ ಸಂಬಂಧದಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಆದರೆ ನೀವು ನಿಮ್ಮ ನಿರ್ಧಾರಗಳನ್ನು ಬೇರೆಯವರ ಮಾತಿನಿಂದ ಪ್ರಭಾವಿತರಾಗದೆ ತೆಗೆದುಕೊಳ್ಳುವುದು ಒಳ್ಳೆಯದು. ನಿಮ್ಮ ನಡುವೆ ಏನೇ ಸಮಸ್ಯೆ ಇದ್ದರೂ ಮುಕ್ತ ಮನಸ್ಸಿನಿಂದ ವಿಷಯಗಳನ್ನು ಪ್ರಸ್ತುಪಡಿಸಿ ಭಿನ್ನಾಭಿಪ್ರಾಯ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಬೇಕು.

ಧನು ರಾಶಿ
ಈ ತಿಂಗಳು ಪ್ರೇಮಿಗಳಿಗೆ ತುಂಬಾನೇ ಒಳ್ಳೆಯದಿದೆ. ನಿಮ್ಮ ಸಂಗಾತಿಯ ನಡವಳಿಕೆ ಬದಲಾಗಬಹುದು. ಅವರು ನಿಮ್ಮ ನೆಚ್ಚಿನ ಉಡುಗೊರೆಯನ್ನು ನೀಡಬಹುದು. ಇದರ ಹೊರತಾಗಿ, ನಿಮಗೆ ವಿಶೇಷವಾದ ಭಾವನೆ ಮೂಡಿಸಲು ನೀವು ಅದ್ಭುತವಾದದ್ದನ್ನು ಸಹ ಯೋಜಿಸಬಹುದು. ಅವರು ನಿಮಗೆ ಮದುವೆಯ ಪ್ರಸ್ತಾಪವನ್ನು ಮಾಡುವ ಸಾಧ್ಯತೆಯಿದೆ. ನೀವು ಅವಿವಾಹಿತರಾಗಿದ್ದರೆ ಮತ್ತು ನೀವು ಬಯಸಿದ ಸಂಗಾತಿಯನ್ನು ಹುಡುಕುತ್ತಿದ್ದರೆ, ಈ ತಿಂಗಳು ನಿಮ್ಮ ಆಸೆಯನ್ನು ಪೂರೈಸಬಹುದು. ನೀವು ಮೊದಲ ನೋಟದಲ್ಲೇ ಪ್ರೀತಿಯನ್ನು ಹೊಂದಬಹುದು.

ಮಕರ ರಾಶಿ
ನಿಮ್ಮ ಪ್ರಣಯ ಜೀವನದಲ್ಲಿ ಹೊಸ ತಿರುವು ಸಿಗಬಹುದು. ನೀವು ಮದುವೆಗೆ ಏನಾದರೂ ಅಡೆತಡೆಗಳು ಇದ್ದಲ್ಲಿ, ಈ ತಿಂಗಳು ನಿಮ್ಮ ಸಮಸ್ಯೆ ಬಗೆಹರಿಯಲಿದೆ. ಶೀಘ್ರದಲ್ಲೇ ನಿಮ್ಮ ಮದುವೆ ನಡೆಯಲಿದೆ. ವಿವಾಹಿತರು ತಮ್ಮ ಪ್ರಮುಖ ನಿರ್ಧಾರಗಳಲ್ಲಿ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

ಕುಂಭ ರಾಶಿ
ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲವಾಗಿರಲಿದೆ. ನೀವು ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತೀರಿ. ಪ್ರೇಮಿಗಳು ರೊಮ್ಯಾಂಟಿಕ್ ಡೇಟ್‌ಗೆ ಹೋಗಲು ನೀವು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ನಿಮ್ಮ ಪ್ರೇಮ ಸಂಬಂಧಕ್ಕೆ ಕುಟುಂಬದ ಒಪ್ಪಿಗೆ ಸಿಗಲಿದೆ. ವೈವಾಹಿಕ ಜೀವನದಲ್ಲಿ ಖುಷಿ ಇರಲಿದೆ. ಈ ತಿಂಗಳು ನಿಮ್ಮ ಜೀವನ ಸಂಗಾತಿಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.

ಮೀನ ರಾಶಿ
ಈ ತಿಂಗಳು ನೀವು ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಚಿಕ್ಕ-ಪುಟ್ಟ ವಿಷಯಗಳಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ, ನೀವು ಮಾನಸಿಕವಾಗಿ ತುಂಬಾ ಅಸಮಾಧಾನಗೊಳ್ಳುತ್ತೀರಿ. ನಿಮ್ಮ ಸಂಬಂಧದಲ್ಲಿ ಅಂತರ ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ತಾಳ್ಮೆಯಿಂದಿರಲು ಸಲಹೆ ನೀಡಲಾಗಿದೆ. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ.

English summary

May Month Love Horoscope In Kannada

Here are may month love horoscope in Kannada read on.
X
Desktop Bottom Promotion