Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೇ ತಿಂಗಳು ಈ 5 ರಾಶಿಯವರಿಗೆ ತುಂಬಾನೇ ಅದೃಷ್ಟಕರ
ಗ್ರಹಗಳ ಸ್ಥಾನದ ಆಧಾರದ ಮೇಲೆ ಜ್ಯೋತಿಷ್ಯ ಹೇಳಲಾಗುವುದು. ವರ್ಷದ ನಾಲ್ಕು ತಿಂಗಳು ಕಳೆದಿದೆ, 5ನೇ ತಿಂಗಳನ್ನು ಸ್ವಾಗತಿಸುತ್ತಿದ್ದೇವೆ. ವೈದಿಕ ಶಾಸ್ತ್ರದ ಪ್ರಕಾರ ಮೇ ತಿಂಗಳು ಕೆಲವೊಂದು ರಾಶಿಗಳಿಗೆ ತುಂಬಾನೇ ಅನುಕೂಲರವಾಗಿದೆ. ಈ ತಿಂಗಳು ಯಾವುದೇ ದೊಡ್ಡ ಸಮಸ್ಯೆಯಿಲ್ಲದೆ ಕಳೆಯಬಹುದು, ಆ ಅದೃಷ್ಟದ ರಾಶಿಗಳಾವುವು ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯವರಿಗೆ ಮೇ ತಿಂಗಳು ತುಂಬಾನೇ ಚೆನ್ನಾಗಿರಲಿದೆ, ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ನಿಮ್ಮ ಯೋಜನೆಯಂತೆಯೂ ಮುಂದುವರೆಯುವುದರಿಂದ ಯಾವುದೇ ಸಮಸ್ಯೆ ಇರಲ್ಲ. ಉದ್ಯಮಿಗಳು ಕೂಡ ಈ ತಿಂಗಳಿನಲ್ಲಿ ಒಳ್ಳೆಯ ಲಾಭ ಗಳಿಸುತ್ತಾರೆ. ಈ ತಿಂಗಳಿನಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಮನೆಯ ವಾತಾವರಣ ಧನಾತ್ಮಕವಾಗಿರಲಿದೆ. ಪ್ರೇಮಿಗಳು, ಅವಾಹಿತರು ತಮ್ಮ ಸಂಗಾತಿಯೊಂದಿಗೆ ತುಂಬಾ ಚೆನ್ನಾಗಿರುತ್ತಾರೆ. ಆರೋಗ್ಯದ ಕಡೆ ಮಾತ್ರ ಸ್ವಲ್ಪ ಗಮನಹರಿಸಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ತಿಂಗಳು ಅದೃಷ್ಟ ತಿಂಗಳಾಗಲಿದೆ. ಈ ತಿಂಗಳು ನಿಮ್ಮ ಶ್ರಮಕ್ಕೆ ನೀವು ಒಳ್ಳೆಯ ಫಲಿತಾಂಶ ಪಡೆಯುತ್ತೀರಿ. ಕಳೆದ ತಿಂಗಳು ನಿಮ್ಮ ಕೆಲಸ ಕಾರ್ಯದಲ್ಲಿ ಏನಾದರೂ ಸಮಸ್ಯೆ ಎದುರಿಸಿದ್ದರೆ ಈ ತಿಂಗಳು ಬಗೆಹರಿಯಲಿದೆ. ಹಣಕಾಸಿನ ಸಮಸ್ಯೆ ಇರಲ್ಲ. ವೈವಾಹಿಕ ಜೀವನದಲ್ಲಿಯೂ ಯಾವುದೇ ಸಮಸ್ಯೆಗಳಿರಲ್ಲ, ಆದರೆ ಕೋಪ ಸ್ವಬಾವ ನಿಯಂತ್ರಿಸಿದರೆ ಒಳ್ಳೆಯದು. ತಿಂಗಳ ಕೊನೆಯಲ್ಲಿ ಸಂಗಾತಿಯ ಆರೋಗ್ಯದ ಕಡ ಗಮನಹರಿಸಬೇಕು.
ತುಲಾ ರಾಶಿ
ಮೇ ತಿಂಗಳು ತುಲಾ ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿದೆ. ಈ ತಿಂಗಳಿನಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಫಲ ಪಡೆಯುತ್ತೀರಿ. ಉದ್ಯೋಗಿಗಳಿಗೆ ಈ ಅವಧಿಯಲ್ಲಿ ಒಳ್ಳೆಯ ಬಡ್ತಿ ಸಿಗಲಿದೆ. ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಪಡೆಯಬಹುದು. ನೀವು ವಿದೇಶಕ್ಕೆ ಹೋಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಪ್ರಯತ್ನ ಯಶಸ್ವಿಯಾಗಲಿದೆ. ಕೌಟುಂಬಿಕ ಜೀವನದಲ್ಲಿ ಖುಷಿ, ಸಂತೋಷ ಇರಲಿದೆ.
ಮಕರ ರಾಶಿ
ಮಕರ ರಾಶಿಯವರು ಈ ತಿಂಗಳಿನಲ್ಲಿ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ನಿಮ್ಮ ಎಲ್ಲಾ ಕಾರಗಯಗಳು ಅಡೆತಡೆಯಿಲ್ಲದೆ ನೆರವೇರಲಿದೆ. ಅದು ನೀವು ಸರ್ಕಾರಿ ಕೆಲಸಕ್ಕಾಗಿ ಶ್ರಮಿಸುತ್ತಿದ್ದರೆ ಈ ತಿಂಗಳಿನಲ್ಲಿ ಖುಷಿಯ ಸುದ್ದಿ ಸಿಗಲಿದೆ. ಚಿಕ್ಕ ಹಾಗೂ ದೊಡ್ಡ ವ್ಯಾಪಾರಿಗಳಿಗೆ ಈ ತಿಂಗಳು ತುಂಬಾನೇ ಅನುಕೂಲಕರವಾಗಿದೆ. ವಿಶೇಷವಾಗಿ ನೀವು ಆಮದು ರಫ್ತಿಗೆ ಸಂಬಂಧಿಸಿದ ಕೆಲಸವನ್ನು ಮಾಡುತ್ತಿದ್ದರೆ, ಈ ತಿಂಗಳು ನಿಮಗೆ ತುಂಬಾನೇ ಲಾಭದಾಯಕವಾಗಿರಲಿದೆ. ಕೌಟುಂಬಿಕ ಜೀವನದಲ್ಲಿ ಇದ್ದ ಸಮಸ್ಯೆಗಳು ಬಗೆಹರಿಯಲಿದೆ, ಕುಟುಂಬ ಜೀವನದಲ್ಲಿ ಸಂತೋಷ ತುಂಬಿರಲಿದೆ.
ಕುಂಭ ರಾಶಿ
ಈ ತಿಂಗಳು ನಿಮಗೆ ತುಂಬಾನೇ ಚೆನ್ನಾಗಿರಲಿದೆ. ನ್ಯಾಯಾಲಯದಲ್ಲಿ ಏನಾದರೂ ಪ್ರಕರಣ ಇದ್ದರೆ ತೀರ್ಪು ನಿಮ್ಮ ಪರವಾಗಿ ಬರಲಿದೆ. ಉದ್ಯಮಿಗಳಿಗೆ ಭಾರಿ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಒಳ್ಳೆಯ ಫಲಿತಾಂಶ ಪಡೆಯುವಿರಿ. ನೀವು ನಿರುದ್ಯೋಗಿಗಳಾಗಿದ್ದು ಕೆಲಸಕ್ಕೆ ಹುಡುಕುತ್ತಿದ್ದರೆ ಈ ಅವಧಿಯಲ್ಲಿ ನಿಮಗೆ ಒಳ್ಳೆಯ ಕೆಲಸ ಸಿಗಲಿದೆ. ತಿಂಗಳ ಮಧ್ಯದಲ್ಲಿ, ಬಯಸಿದ ಉದ್ಯೋಗವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿಗಿರಲಿದೆ, ಹಾಗಂತ ಖರ್ಚು ತುಂಬಾ ಮಾಡದಿರಿ. ಆರೋಗ್ಯ ಚೆನ್ನಾಗಿರಲಿದೆ. ಕೌಟುಂಬಿಕ ಜೀವನದ ಬಗ್ಗೆ ಹೇಳುವುದಾದರೆ ಅನುಮಾನ ಸಲ್ಲದು.



Click it and Unblock the Notifications

