Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಜ್ಯೋತಿಷ್ಯ ಪ್ರಕಾರ ಮೇ ತಿಂಗಳಿನಲ್ಲಿ ಈ 7 ರಾಶಿಯವರಿಗೆ ಆರ್ಥಿಕ ಪ್ರಗತಿಯ ಬಲವಾದ ಸೂಚನೆಯಿದೆ
ಬಹುತೇಕ ಕಂಪನಿಗಳಲ್ಲಿ ಅಪ್ರೈಸಲ್ ಟೈಮ್, ಉದ್ಯೋಗಿಗಳು ತಮ್ಮ ಶ್ರಮಕ್ಕೆ ಉತ್ತಮ ಪ್ರತಿಫಲ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಇರುತ್ತಾರೆ. ನಮ್ಮ ಜೀವನದಲ್ಲಿ ಕಠಿಣ ಶ್ರಮದ ಜೊತೆಗೆ ಅದೃಷ್ಟ ಚೆನ್ನಾಗಿದ್ದರೆ ಬದುಕು ತುಂಬಾ ಚೆನ್ನಾಗಿರುತ್ತದೆ.
ಈ ತಿಂಗಳಿನಲ್ಲಿ ಗ್ರಹಗತಿಗಳ ಸ್ಥಾನ ಈ ರಾಶಿಯವರಿಗೆ ತುಂಬಾ ಒಳ್ಳೆಯದಿದೆ, ಆದ್ದರಿಂದ ಈ ಅವಧಿಯಲ್ಲಿ ನಿಮ್ಮ ನಿರೀಕ್ಷೆಯಂತೆಯೇ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ ನೋಡಿ:

ಮೇಷ ರಾಶಿ
ಮೇಷ ರಾಶಿಯವರಿಗೆ ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ತುಂಬಾ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ನೀವು ಊಹಿಸಿದಂತೆಯೇ ಪ್ರಗತಿ ಸಿಗಲಿದೆ. ನಿಮ್ಮ ಸಂಬಳ ಹೆಚ್ಚಾಗುವುದರಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುವುದು. ಸಾಲ ಮಾಡಿದ್ದರೆ ಶೀಘ್ರದಲ್ಲಿ ಸಾಲ ತೀರಿಸಲು ಸಾಧ್ಯವಾಗುವುದು, ಇನ್ನು ಮೇಷ ರಾಶಿಯವರು ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ ಶೀಘ್ರದಲ್ಲಿಯೇ ಕೆಲಸ ದೊರೆಯಲಿದೆ. ಕೆಲ ಬದಲಾಯಿಸಲು ಕೂಡ ಈ ಅವಧಿ ತುಂಬಾ ಚೆನ್ನಾಗಿರಲಿದೆ.
ಮಿಥುನ ರಾಶಿ
ಮಿಥುನ ರಾಶಿಯ ಉದ್ಯೋಗಿಗಳು ಮೇ ತಿಂಗಳಿನಲ್ಲಿ ಖುಷಿಯ ಸುದ್ದಿ ಪಡೆಯುತ್ತೀರಿ, ನಿಮ್ಮ ಸಂಬಳ ಹೆಚ್ಚಾಗಲಿದೆ. ಇನ್ನು ನೀವು ಉದ್ಯೋಗಕ್ಕೆ ಸಂದರ್ಶನ ನೀಡಿದ್ದರೆ ಒಳ್ಳೆಯ ಸಂಬಳದಲ್ಲಿ ಕೆಲಸ ಸಿಗಲಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಮೇ ತಿಂಗಳು ಅನುಕೂಲಕರವಾಗಿರಲಿದೆ, ಈ ಅವಧಿಯಲ್ಲಿ ನಿರೀಕ್ಷೆ ಮಾಡಿದಂತೆ ಉತ್ತಮ ಫಲಿತಾಂಶ ಸಿಗಲಿದೆ. ನಿಮ್ಮ ಕೆಲಸದ ಸ್ಥಾನದಲ್ಲಿ ಉತ್ತಮ ಬಡ್ತಿ ಸಿಗಲಿದೆ. ಇನ್ನು ಉದ್ಯೋಗ ಬದಲಾಯಿಸಲು ಯತ್ನಿಸಿದರೆ ಒಳ್ಳೆಯ ಸಂಬಳಕ್ಕೆ ಕೆಲಸ ಸಿಗುವ ಸೂಚನೆಯಿದೆ.
ಸಿಂಹ ರಾಶಿ
ಮೇ ತಿಂಗಳಿನಲ್ಲಿ ಆದಾಯ ಹೆಚ್ಚಾಗುವ ಸೂಚನೆಯಿದೆ, ನಿಮ್ಮ ಸಂಬಳದಲ್ಲಿ ಏರಿಕೆ ಕಂಡು ಬರಲಿದೆ. ಕೆಲಸ ಬದಲಾವಣೆಗೂ ಈ ಸಮಯ ಒಳ್ಳೆಯದಿದೆ. ಈ ಅವಧಿಯಲ್ಲಿ ವ್ಯಾಪಾರಿಗಳು ಕೂಡ ಉತ್ತಮ ಲಾಭಗಳಿಸಬಹುದು. ನಿಮ್ಮೆಲ್ಲಾ ಆರ್ಥಿಕ ತೊಂದರೆ ಬಗೆಹರಿಯಲಿದೆ.
ಧನು ರಾಶಿ
ಧನು ರಾಶಿಯವರಿಗೆ ಮೇ ತಿಂಗಳ ಹಣದ ವಿಷಯದಲ್ಲಿ ಧನಾತ್ಮಕವಾಗಿರಲಿದೆ. ನೀವು ಯಾರಿಗಾದರೂ ಹಣ ನೀಡಿದ್ದರೆ ಮರಲಿ ಸಿಗುವ ಸಾಧ್ಯತೆ ಇದೆ. ಹಣದ ಸ್ಥಿತಿಯಲ್ಲಿ ಏರಿಕೆ ಕಂಡು ಬರಲಿದೆ, ಆರ್ಥಿಕವಾಗಿ ಉತ್ತಮವಾಗಿರುವುದರಿಂದ ನೀವು ಆಸೆಪಟ್ಟ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುವುದು, ಶೀಘ್ರದಲ್ಲಿಯೇ ನಿಮ್ಮ ಸೌಕರ್ಯ ಹೆಚ್ಚಾಗಲಿದೆ.
ಮಕರ ರಾಶಿ
ಮಕರ ರಾಶಿಯವರು ವೃತ್ತಿ ಬದುಕಿನಲ್ಲಿ ಆರ್ಥಿಕ ಪ್ರಗತಿ ಕಾಣಬಹುದು, ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ, ಸಂಬಳ ಹೆಚ್ಚಾಗಲಿದೆ, ವ್ಯಾಪಾರಿಗಳು ಉತ್ತಮ ಧನಲಾಭ ಪಡೆಯಬಹುದು. ಇನ್ನು ಹಣ ಉಳಿತಾಯವಾಗುವುದರಿಂದ ಹೂಡಿಕೆ ಕಡೆ ಗಮನಹರಿಸುತ್ತೀರಿ.
ಮೀನ ರಾಶಿ
ಮೀನ ರಾಶಿಯವರಿಗೆ ಕೆಲಸದಲ್ಲಿ ಸಂಬಳ ಹೆಚ್ಚಾಗುವ ಸೂಚನೆಯಿದೆ, ಆದರೆ ಖರ್ಚು ಕೂಡ ಇರಲಿದೆ. ವ್ಯಾಪಾರಿಗಳು ಉತ್ತಮ ಆರ್ಥಿಕ ಲಾಭ ಪಡೆಯಬಹುದು. ಉದ್ಯೋಗಿಗಳಿಗೆ ಈ ಅವಧಿ ತುಂಬಾ ಚೆನ್ನಾಗಿರುವುದರಿಂದ ವಿದೇಶದಲ್ಲಿ ಕೆಲಸಕ್ಕೆ ಶ್ರಮಿಸುತ್ತಿದ್ದರೆ ಶುಭ ಸೂಚನೆಯಿದೆ.



Click it and Unblock the Notifications











