Latest Updates
-
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು
ಮೇ ತಿಂಗಳ ಸಂಖ್ಯಾಶಾಸ್ತ್ರ ಈ ತಿಂಗಳು ನಿಮಗೆ ಹೇಗಿರಲಿದೆ ನೋಡಿ
ಸಂಖ್ಯಾ ಶಾಸ್ತ್ರದಲ್ಲಿ ನಮ್ಮ ಜನ್ಮ ದಿನಾಂಕದಲ್ಲಿ 1-9 ಸಂಖ್ಯೆಗಳು ಬರುವುದು, ಉದಾಹರಣೆಗೆ ನಿಮ್ಮ ದಿನಾಂಕ 10 ಆದರೆ ನಿಮ್ಮ ಸಂಖ್ಯೆ 1+0=1 ಆಗಿದೆ. ಸಂಖ್ಯಾಶಾಸ್ತ್ರ ಪ್ರಕಾರ ಮೇ ತಿಂಗಳ ಭವಿಷ್ಯ ಹೇಗಿರಲಿದೆ ಎಂದು ನೋಡೋಣ ಬನ್ನಿ:

ಸಂಖ್ಯೆ 1
ಆರೋಗ್ಯದ ಬಗ್ಗೆ ಹೇಳುವುದಾದರೆ ಮೇ ತಿಂಗಳು ನಿಮಗೆ ತುಂಬಾ ಒಳ್ಳೆಯದಿದೆ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಈ ಅವಧಿಯಲ್ಲಿ ಸುಧಾರಿಸಲಿದೆ. ವಿದ್ಯಾರ್ಥಿಗಳಿಗೆ ಈ ಅವಧಿ ಉತ್ತಮವಾಗಿದೆ, ಪರೀಕ್ಷೆ ಬರೆದಿದ್ದರೆ ಉತ್ತಮ ಫಲಿತಾಂಶ ದೊರೆಯಲಿದೆ. ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ. ವ್ಯಾಪಾರಸ್ಥರು ತಿಂಗಳಿನಲ್ಲಿ ಉತ್ತಮ ಲಾಭ ಗಳಿಸುವಿರಿ. ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಉತ್ತಮವಾಗಿರಲಿದೆ.
ಅದೃಷ್ಟದ ಸಂಖ್ಯೆ: 25
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ದಿನ: ಭಾನುವಾರ
ಸಂಖ್ಯೆ 2
ಈ ತಿಂಗಳು ನಿಮಗೆ ತುಂಬಾ ಉತ್ತಮವಾಗಿರಲಿದೆ. ತುಂಬಾ ಲವಲವಿಕೆಯಿಂದ ಇರುತ್ತೀರಿ. ವೃತ್ತಿಜೀವನದಲ್ಲಿ ನೀವು ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ನಿಮ್ಮ ಹಾಗೂ ಸಂಗಾತಿ ನಡುವೆ ಏನಾದರೂ ಭಿನ್ನಾಭಿಪ್ರಾಯವಿದ್ದರೆ ಸರಿಪಡಿಸಲು ಪ್ರಯತ್ನಿಸಿ, ಬಾಂಧವ್ಯ ಮತ್ತಷ್ಟು ಉತ್ತಮವಾಗಲಿದೆ. ಕುಟುಂಬ ಜೀವನದಲ್ಲಿ ಏರಳಿತಗಳಿರಬಹುದು.
ಅದೃಷ್ಟದ ಸಂಖ್ಯೆ: 21
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ದಿನ: ಬುಧವಾರ
ಸಂಖ್ಯೆ 3
ಈ ಮೇ ತಿಂಗಳಿನಲ್ಲಿ ಹಲವು ಸವಾಲುಗಳು ಎದುರಾದರೂ ಅದನ್ನು ಜಯಿಸಲು ಸಾಧ್ಯವಾಗುವುದು. ನೀವು ಆರೋಗ್ಯದ ಕಡೆಗೆ ಗಮನಹರಿಸಬೇಕಾಗಿದೆ. ಆಹಾರಕ್ರಮದ ಕಡೆಗೆ ಗಮನ ಹರಿಸುವುದು ಒಳ್ಳೆಯದು. ಕೆಲಸದಲ್ಲಿ ಕೆಲವು ಘಟನೆಗಳಿಂದಾಗಿ ನೀವು ಕೆಲಸ ಬದಲಾಯಿಸಲು ಯೋಚಿಸಬಹುದು. ವಿರುದ್ಧ ಲಿಂಗದ ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ. ವ್ಯಾಪಾರಸ್ಥರಿಗೆ ಈ ತಿಂಗಳು ಸಾಧಾರಣವಾಗಿರಲಿದೆ.
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಬಣ್ಣ:ಸಾಸಿವೆ
ಅದೃಷ್ಟದ ದಿನ: ಮಂಗಳವಾರ
ಸಂಖ್ಯೆ 4
ಆರೋಗ್ಯದ ವಿಷಯದಲ್ಲಿ ಈ ತಿಂಗಳು ಉತ್ತಮವಾಗಿದೆ. ಹಾಗಂತ ಏನಾದರೂ ಆರೋಗ್ಯ ಸಮಸ್ಯೆ ಉಂಟಾದರೆ ನಿರ್ಲಕ್ಷ್ಯ ಮಾಡಲೂ ಬೇಡಿ. ಕೆಲಸದ ಸ್ಥಳದಲ್ಲಿ ಬಡ್ತಿ ಅಥವಾ ಸಂಬಳ ಹೆಚ್ಚಳದ ಸಾಧ್ಯತೆಗಳಿವೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಅವಾಹಿತರು ಮದುವೆಗಾಗಿ ಸಂಬಮಧ ಹುಡುಕುತ್ತಿದ್ದರೆ ಸ್ವಲ್ಪ ಕಾಯುವುದು ಒಳ್ಳೆಯದು. ಪ್ರೇಮ, ವೈವಾಹಿಕ ಜೀವನದಲ್ಲಿ ಏರಳಿತಗಳಿದ್ದರೂ ಎಲ್ಲವೂ ಬಗೆಹರಿಯಲಿದೆ.
ಅದೃಷ್ಟದ ಸಂಖ್ಯೆ:11
ಅದೃಷ್ಟದ ಬಣ್ಣ: ಬೆಳ್ಳಿ
ಅದೃಷ್ಟದ:ಸೋಮವಾರ
ಸಂಖ್ಯೆ 5
ಈ ವಾರ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದು ಒಳ್ಳೆಯದು. ಯೋಗ, ಪ್ರಾಣಾಯಾಮ ಮತ್ತು ಧ್ಯಾನವು ನಿಮ್ಮ ಆರೋಗ್ಯ ಉತ್ತಮಪಡಿಸುತ್ತದೆ. ಉದ್ಯೋಗಿಗಳಲ್ಲಿ ಕೆಲವರು ಬರಡ್ತಿ ಪಡೆಯಬಹುದು. ಏನಾದರೂ ಹೊಸ ಕಾರ್ಯ ಮಾಡುವುದಾದರೆ ಮನೆಯಲ್ಲಿ ಹಿರಿಯರ ಸಲಹೆ ಪಡೆಯಿರಿ. ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವವರಿಗೆ ಸಮಯ ಅನುಕೂಲಕರವಾಗಿದೆ.
ಅದೃಷ್ಟದ ಸಂಖ್ಯೆ: 19
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ದಿನ: ಮಂಗಳವಾರ
ಸಂಖ್ಯೆ 6
ಮೇ ತಿಂಗಳಿನಲ್ಲಿ ನೀವು ವೃತ್ತಿ ಬದುಕಿಗಿಂತ ಬೇರೆ ಕಡೆ ಅಧಿಕ ಗಮನ ಹರಿಸುವಿರಿ. ಇದರಿಂದ ಕೆಲಸದಲ್ಲಿ ನಿರ್ಲಕ್ಷ್ಯ ತೋರುವಿರಿ, ಆದರೆ ಹಾಗೆ ಮಾಡದಿರುವುದು ನಿಮ್ಮ ವೃತ್ತಿ ಜೀವನದ ದೃಷ್ಟಿಯಿಂದ ಒಳ್ಳೆಯದು ಎಂಬ ಸಲಹೆ ನೀಡಲಾಗಿದೆ. ವೈಯಕ್ತಿಕವಾಗಿ ಈ ತಿಂಗಳು ಚೆನ್ನಾಗಿದೆ. ನಿಮ್ಮ ಸಂಬಂಧ ಚೆನ್ನಾಗಿರಲಿದೆ. ನಿಮ್ಮ ನಡುವೆ ಬಾಂಧವ್ಯ ಗಟ್ಟಿಯಾಗಲಿದೆ.
ಅದೃಷ್ಟದ ಸಂಖ್ಯೆ: 18
ಅದೃಷ್ಟದ ಬಣ್ಣ : ಕಪ್ಪು
ಅದೃಷ್ಟದ ದಿನ: ಶನಿವಾರ
ಸಂಖ್ಯೆ 7
ಈ ಅವಧಿಯಲ್ಲಿ ಹಣ ಹೆಚ್ಚು ಖರ್ಚು ಮಾಡುವಿರಿ. ಈ ತಿಂಗಳು ವಿದ್ಯಾರ್ಥಿಗಳಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಕೆಲಸ ಬದಲಾಯಿಸಲು ಯೋಚಿಸುತ್ತಿದ್ದರೆ ಈ ತಿಂಗಳು ಅನುಕೂಲಕರವಾಗಿದೆ. ವಿದೇಶ ಪ್ರಯಾಣವನ್ನು ಸಾಧ್ಯವಾದರೆ ಸ್ವಲ್ಪ ಮುಂದೂಡಿ. ಹಣದ ವ್ಯವಹಾರದಲ್ಲಿ ಅತ್ಯಂತ ಜಾಗರೂಕರಾಗಿರಿ. ವೈಯಕ್ತಿಕ ಸಂಬಂಧಗಳ ವಿಷಯದಲ್ಲಿ ನೋಡುವುದಾದರೆ ಈ ಅವಧಿ ಧನಾತ್ಮಕವಾಗಿದೆ.
ಅದೃಷ್ಟದ ಸಂಖ್ಯೆ:13
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ದಿನ: ಗುರುವಾರ
ಸಂಖ್ಯೆ 8
ವೃತ್ತಿಪರ ಕ್ಷೇತ್ರದಲ್ಲಿ ಹೊಸ ಅವಕಾಶಗಳು ನಿಮಗೆ ಸಿಗಲಿದೆ. ಪತ್ರಕರ್ತರು ಮತ್ತು ರಾಜಕಾರಣಿಗಳಿಗೆ ಈ ತಿಂಗಳು ಉತ್ತಮವಾಗಿದೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ. ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವವರಿಗೆ ಅವಕಾಶಗಳು ದೊರೆಯಲಿದೆ. ಪ್ರೇಮಿಗಳಿಗೆ ಇದು ಅದ್ಭುತ ಸಮಯವಾಗಿರಲಿದೆ, ಅವಾಹಿತರಿಗೆ ಮದುವೆ ಯೋಗ ಕೂಡಿ ಬರಬಹುದು.
ಅದೃಷ್ಟದ ಸಂಖ್ಯೆ: 30
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ದಿನ: ಶನಿವಾರ
ಸಂಖ್ಯೆ 9
ಈ ಸಮಯದಲ್ಲಿ ಒತ್ತಡ ಮತ್ತು ಆತಂಕ ಹೆಚ್ಚಾಗುವುದರಿಂದ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುವುದು. ಧ್ಯಾನದ ಮುಖಾಂತರ ಮಾನಸಿಕ ಒತ್ತಡ ಕಡಿಮೆ ಮಾಡುವುದು ಒಳ್ಳೆಯದು. ಆಹಾರಕ್ರಮದ ಕಡೆಗೆ ಗಮನಹರಿಸಿ. ಕೆಲಸ ಹುಡುಕುತ್ತಿದ್ದರೆ ಅವಕಾಶಗಳು ದೊರೆಯಲಿದೆ. ಈ ತಿಂಗಳು ನಿಮ್ಮ ಕೆಲಸವು ಕಷ್ಟಕರವಾಗಿರಬಹುದು ನಿಮ್ಮ ಸುತ್ತಲೂ ಸಾಕಷ್ಟು ಗೊಂದಲವನ್ನು ನೀವು ಕಾಣಬಹುದು.
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ದಿನ : ಶುಕ್ರವಾರ



Click it and Unblock the Notifications