Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
May Horoscope 2023 : ಮೇ ತಿಂಗಳ ರಾಶಿ ಭವಿಷ್ಯ: ಈ ತಿಂಗಳು ಯಾರಿಗೆ ಶುಭ, ಯಾರಿಗಲ್ಲ
ವೈದಿಕ ಶಾಸ್ತ್ರದ ಪ್ರಕಾರ ಈ ಮೇ ತಿಂಗಳು ಹೇಗಿರಲಿದೆ? ಈ ತಿಂಗಳು ಯಾರಿಗೆ ತುಂಬಾನೇ ಶುಭವಾಗಿದೆ, ಯಾವೆಲ್ಲಾ ರಾಶಿಯವರು ಈ ತಿಂಗಳು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ, ಯಾರು ಜಾಗ್ರತೆವಹಿಸಬೇಕು ಎಂಬುವುದನ್ನು ಗ್ರಹಗತಿಗಳ ಆಧಾರದ ಮೇಲೆ ಹೇಳಲಾಗುವುದು. ಈ ತಿಂಗಳು ನಿಮ್ಮ ರಾಶಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಮೇಷ ರಾಶಿ
ಮೇಷ ರಾಶಿಯವರಿಗೆ ಮೇ ತಿಂಗಳು ತುಂಬಾನೇ ಅದೃಷ್ಟಕರವಾಗಿದೆ. ನಿಮ್ಮ ಕೆಲಸದಲ್ಲಿ ಅಭಿವೃದ್ಧಿ ಕಾಣುವಿರಿ. ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಹೆಚ್ಚಳವಾಗಲಿದೆ. ಈ ತಿಂಗಳು ಉದ್ಯಮಿಗಳಿಗೆ ಹಿಂದಿನ ತಿಂಗಳಿಗಿಂತ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ವ್ಯವಹಾರದಲ್ಲಿ ದೊಡ್ಡ ಮತ್ತು ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಧಾರ್ಮಿಕ ವಿಷಯಗಳ ಕಡೆ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ. ಮನೆಯಲ್ಲಿ ಖುಷಿಯ ವಾತಾವರಣ ಇರಲಿದೆ. ಆರೋಗ್ಯದ ವಿಷಯದಲ್ಲಿ ಮಿಶ್ರಫಲ.
ರಾಶಿಚಕ್ರದ ಅಂಶ: ಬೆಂಕಿ
ರಾಶಿ ಅಧಿಪತಿ: ಮಂಗಳ
ಅದೃಷ್ಟದ ಸಂಖ್ಯೆಗಳು: 5, 7, 19, 24, 40, 50
ಅದೃಷ್ಟದ ದಿನಗಳು: ಬುಧವಾರ, ಶುಕ್ರವಾರ, ಮಂಗಳವಾರ, ಭಾನುವಾರ
ಅದೃಷ್ಟದ ಬಣ್ಣಗಳು: ಬಿಳಿ, ಹಳದಿ, ಕಿತ್ತಳೆ, ಹಸಿರು, ಕೆಂಪು

ವೃಷಭ ರಾಶಿ
ಪ್ರೀತಿಯ ವಿಷಯದಲ್ಲಿ ಈ ತಿಂಗಳು ನಿಮಗೆ ತುಂಬಾ ವಿಶೇಷವಾಗಿರಲಿದೆ. ಒಬ್ಬರಿಗೊಬ್ಬರು ಸಾಕಷ್ಟು ಸಮಯ ನೀಡುವ ನೀಡುವುದರಿಂದ ಪರಸ್ಪರ ಪ್ರೀತಿ ಹೆಚ್ಚಾಲಿದೆ. ಪ್ರೇಮಿಗಳು ಮದುವೆಯ ನಿರ್ಧಾರ ತೆಗೆದುಕೊಳ್ಳಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಈ ತಿಂಗಳು ಬೇರೆಯವರ ಜೊತೆ ಯಾವುದೇ ಹಣದ ವ್ಯವಹಾರ ಮಾಡಬೇಡಿ. ಕೆಲಸದ ಬಗ್ಗೆ ಹೇಳುವುದಾದರೆ ಈ ತಿಂಗಳು ಕೆಲಸದ ಒತ್ತಡ ಅಧಿಕವಿರಲಿದೆ, ಆದರೆ ಚಿಂತಿಸಬೇಕಾಗಿಲ್ಲ, ನೆಗೆಟಿವ್ ಚಿಂತನೆಗಳಿಂದ ದೂರವಿದ್ದು ಶ್ರಮವಹಿಸಿ ಕೆಲಸ ಮಾಡುವುದು ಮುಂದುವರೆಸಿ, ಭವಿಷ್ಯದಲ್ಲಿ ಇದರ ಪ್ರಯೋಜನ ಸಿಗಲಿದೆ. ಮನೆಯಲ್ಲಿ ಸಂತೋಷಕ್ಕಾಗಿ ಚಿಕ್ಕ ವಿಷಯವನ್ನು ದೊಡ್ಡದು ಮಾಡಲು ಹೋಗಬೇಡಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆವಿರಬಹುದು.
ರಾಶಿಚಕ್ರದ ಅಂಶ: ಭೂಮಿ
ರಾಶಿ ಅಧಿಪತಿ: ಶುಕ್ರ
ಅದೃಷ್ಟದ ಸಂಖ್ಯೆಗಳು: 4,12,25,36,43,54
ಅದೃಷ್ಟದ ದಿನಗಳು: ಗುರುವಾರ, ಸೋಮವಾರ, ಮಂಗಳವಾರ, ಶುಕ್ರವಾರ
ಅದೃಷ್ಟದ ಬಣ್ಣಗಳು: ಹಳದಿ, ಆಕಾಶ ನೀಲಿ, ಗುಲಾಬಿ, ಹಸಿರು, ನೀಲಿ
ಮಿಥುನ ರಾಶಿ
ಮಿಥುನ ರಾಶಿಯವರಿಗೆ ತಿಂಗಳ ಆರಂಭವು ನಿಮಗೆ ಒಳ್ಳೆಯದಲ್ಲ. ಈ ಅವಧಿಯಲ್ಲಿ, ನೀವು ಕೆಲವು ಸಂದಿಗ್ಧತೆಯಲ್ಲಿ ಸಿಲುಕಿಕೊಳ್ಳಬಹುದು. ಇದರಿಂದ ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗಬಹುದು. ನಕಾರಾತ್ಮಕ ಆಲೋಚನೆಗಳು ಹೆಚ್ಚಾಗುವುದು. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಅಥವಾ ದೊಡ್ಡ ಹೂಡಿಕೆಗಳನ್ನು ಮಾಡುವಾಗ ಈ ಅವಧಿಯಲ್ಲಿ ಯಾವುದೇ ಆತುರಪಡದಿರುವುದು ಒಳ್ಳೆಯದು, ಅಲ್ಲದೆ ಆಪ್ತರ ಸಲಹೆ-ಸೂಚನೆ ಪಾಲಿಸಿ. ವೈವಾಹಿಕ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು. ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಹಣದ ವಿಷಯದಲ್ಲಿ, ಈ ತಿಂಗಳು ನಿಮಗೆ ತುಂಬಾ ದುಬಾರಿಯಾಗಲಿದೆ. ಅನೇಕ ಸಣ್ಣ ವೆಚ್ಚಗಳು ಇರಬಹುದು. ಆರೋಗ್ಯದ ಬಗ್ಗೆ ನೋಡುವುದಾದರೆ ಈ ತಿಂಗಳು ಸಾಧಾರಣವಾಗಿರಲಿದೆ.
ರಾಶಿಚಕ್ರದ ಅಂಶ: ವಾಯು
ರಾಶಿ ಅಧಿಪತಿ: ಬುಧ
ಅದೃಷ್ಟದ ಸಂಖ್ಯೆಗಳು: 2,15,20,36,46,52
ಅದೃಷ್ಟದ ದಿನಗಳು: ಬುಧವಾರ, ಭಾನುವಾರ, ಶುಕ್ರವಾರ, ಮಂಗಳವಾರ
ಅದೃಷ್ಟದ ಬಣ್ಣಗಳು: ಕೆಂಪು, ಹಳದಿ, ನೇರಳೆ, ಹಸಿರು, ಕಂದು
ಕರ್ಕ ರಾಶಿ
ಈ ತಿಂಗಳು ನಿಮ್ಮ ಹಿತ ಶತ್ರುಗಳ ಬಗ್ಗೆ ಜಾಗ್ರತೆ, ಅವರು ನಿಮಗೆ ಸಮಸ್ಯೆ ಉಂಟು ಮಾಡಲು ಪ್ರಯತ್ನಿಸಬಹುದು. ನೀವು ಉದ್ಯಮಿಗಳಾಗಿದ್ದರೆ ಹಣದ ಬಗ್ಗೆ ಚೆನ್ನಾಗಿ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ತಿಂಗಳು ನಿಮಗೆ ಕಷ್ಟಕರವಾಗಿರಲಿದೆ. ಉದ್ಯೋಗಿಗಳು ಹೊಸ ಕೆಲಸಕ್ಕೆ ಹುಡುಕುತ್ತಿದ್ದರೆ ಹೊಸ ಅವಕಾಶಗಳು ಸಿಗಲಿದೆ. ಆರ್ಥಿಕ ದೃಷ್ಟಿಕೋನದಿಂದ, ಈ ತಿಂಗಳು ನಿಮಗೆ ಉತ್ತಮ ಪರಿಹಾರವನ್ನು ನೀಡಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಆರೋಗ್ಯಕರ ಜೀವನಸೈಲಿ ಕಡೆ ಗಮನಹರಿಸಿ.
ರಾಶಿಚಕ್ರದ ಅಂಶ: ನೀರು
ರಾಶಿ ಅಧಿಪತಿ: ಚಂದ್ರ
ಅದೃಷ್ಟದ ಸಂಖ್ಯೆಗಳು: 1,4,10,26,32,40
ಅದೃಷ್ಟದ ದಿನಗಳು: ಭಾನುವಾರ, ಸೋಮವಾರ, ಬುಧವಾರ, ಶನಿವಾರ
ಅದೃಷ್ಟದ ಬಣ್ಣಗಳು: ಮರೂನ್, ಹಸಿರು, ಬಿಳಿ, ನೇರಳೆ, ಗುಲಾಬಿ
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ತಿಂಗಳು ಶುಭವಾಗಿದೆ. ಈ ಅವಧಿಯಲ್ಲಿ, ಬಾಸ್ ನಿಮ್ಮ ಶ್ರಮವನ್ನು ಗಮನಿಸುತ್ತಾರೆ, ಇದರ ಸರಿಯಾದ ಫಲಿತಾಂಶಗಳನ್ನು ಪಡೆಯಬಹುದು. ಉದ್ಯಮಿಗಳ ಯೋಜನೆಯ ದಾರಿಯಲ್ಲಿ ಯಾವುದೇ ಅಡೆತಡೆಗಳಿದ್ದರೆ, ಈ ತಿಂಗಳು ಯಶಸ್ಸನ್ನು ಪಡೆಯಬಹುದು. ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ. ವೈವಾಹಿಕ ಜೀವನದಲ್ಲಿ ಮುಂಗೋಪ ಕಡಿಮೆ ಮಾಡಿದರೆ ಒಳ್ಳೆಯದು, ಅನಗತ್ಯ ಕೋಪ ನಿಮ್ಮ ಸಂಬಂಧಕ್ಕೆ ಒಳ್ಳೆಯದಲ್ಲ. ತಿಂಗಳ ಕೊನೆಯಲ್ಲಿ, ಸಂಗಾತಿಯ ಆರೋಗ್ಯದಲ್ಲಿ ಭಾರಿ ಕುಸಿತ ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಅವರಿಗೆ ಸರಿಯಾದ ಆರೈಕೆಯ ಅಗತ್ಯವಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆಯೂ ನೀವು ಸಂಪೂರ್ಣ ಕಾಳಜಿ ವಹಿಸಬೇಕಾಗಿದೆ.
ರಾಶಿಚಕ್ರದ ಅಂಶ: ಬೆಂಕಿ
ರಾಶಿ ಅಧಿಪತಿ: ಸೂರ್ಯ
ಅದೃಷ್ಟದ ಸಂಖ್ಯೆ: 5,11,20,39,41,55
ಅದೃಷ್ಟದ ದಿನಗಳು: ಮಂಗಳವಾರ, ಸೋಮವಾರ, ಶುಕ್ರವಾರ, ಭಾನುವಾರ
ಅದೃಷ್ಟದ ಬಣ್ಣಗಳು: ಕೆಂಪು, ಕಿತ್ತಳೆ, ಗುಲಾಬಿ, ಹಳದಿ, ಹಸಿರು
ಕನ್ಯಾ ರಾಶಿ
ಕೆಲಸದ ವಿಷಯದಲ್ಲಿ ಈ ತಿಂಗಳು ನಿಮಗೆ ಮಿಶ್ರಫಲ. ನೀವು ಕೆಲಸ ಮಾಡುತ್ತಿದ್ದರೆ ಮತ್ತು ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ ಸ್ವಲ್ಪ ಕಾಯುವುದು ಒಳ್ಳೆಯದು, ಆತುರದ ನಿರ್ಧಾರ ಒಳ್ಳೆಯದಲ್ಲ. ವ್ಯಾಪಾರಸ್ಥರು ತಮ್ಮ ವಿರೋಧಿಗಳೊಂದಿಗೆ ಜಾಗರೂಕರಾಗಿರಬೇಕು. ಇದರ ಹೊರತಾಗಿ ಯಾರನ್ನೂ ಕುರುಡಾಗಿ ನಂಬದೇ ಇದ್ದರೆ ಒಳ್ಳೆಯದು. ಅತ್ಯಧಿಕ ಒತ್ತಡದ ಕಾರಣ ನಿಮ್ಮ ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡಲು ನಿಮಗೆ ಸಾಧ್ಯವಾಗದಿರಬಹುದು. ಇದರಿಂದ ಸಂಸಾರದಲ್ಲಿ ಸಮಸ್ಯೆ ಬರಬಹುದು, ಕೆಲಸ, ಕುಟುಂಬವನ್ನು ಬ್ಯಾಲೆನ್ಸ್ ಮಾಡಿ. ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸಿ.
ರಾಶಿಚಕ್ರದ ಅಂಶ: ಭೂಮಿ
ರಾಶಿ ಅಧಿಪತಿ: ಬುಧ
ಅದೃಷ್ಟದ ಸಂಖ್ಯೆಗಳು: 2,17,29,36,46,51
ಅದೃಷ್ಟದ ದಿನಗಳು: ಶುಕ್ರವಾರ, ಗುರುವಾರ, ಬುಧವಾರ, ಮಂಗಳವಾರ
ಅದೃಷ್ಟದ ಬಣ್ಣಗಳು: ಕಂದು, ಕಿತ್ತಳೆ, ಹಳದಿ, ಪೀಚ್, ಕೆಂಪು
ತುಲಾ ರಾಶಿ
ತುಲಾ ರಾಶಿಯವರಿಗೆ ಕೆಲಸದ ದೃಷ್ಟಿಯಿಂದ ಮೇ ತಿಂಗಳು ನಿಮಗೆ ತುಂಬಾನೇ ಅದೃಷ್ಟದ ದಿನವಾಗಿದೆ ಉದ್ಯೋಗ ಅಥವಾ ವ್ಯವಹಾರವಾಗಿರಲಿ, ಈ ಸಮಯದಲ್ಲಿ ನೀವು ನಿಮ್ಮ ಶ್ರಮಕ್ಕೆ ತಕ್ಕಂತೆ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಉದ್ಯೋಗದಲ್ಲಿದ್ದರೆ ಬಡ್ತಿ ಸಿಗಲಿದೆ. ಈ ಸಮಯದಲ್ಲಿ, ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಉದ್ಯಮಿಗಳು ತಮ್ಮ ವ್ಯವಹಾರವನ್ನು ಮುಂದುವರಿಸಲು ಅವಕಾಶವನ್ನು ಪಡೆಯುತ್ತೀರಿ. ವಿದೇಶದಲ್ಲಿ ಕೆಲಸ ಮಾಡಲು ಬಯಸುವವರ ಆಸೆ ನೆರವೇರಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ಈ ಅವಧಿಯಲ್ಲಿ, ನಿಮ್ಮ ಮನೆಯಲ್ಲಿ ಶುಭ ಕಾರ್ಯಕ್ರಮವನ್ನು ಆಯೋಜಿಸಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರಾಗುವ ಲಕ್ಷಣಗಳಿವೆ. ನೀವು ನಿರೀಕ್ಷೆಗಿಂತ ಹೆಚ್ಚಿನ ಹಣವನ್ನು ಪಡೆಯಬಹುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಸಮಸ್ಯೆಗಳಿರಬಹುದು.
ರಾಶಿಚಕ್ರದ ಅಂಶ: ವಾಯು
ರಾಶಿ ಅಧಿಪತಿ: ಶುಕ್ರ
ಅದೃಷ್ಟದ ಸಂಖ್ಯೆ: 1,7 10,29,35,40,52
ಅದೃಷ್ಟದ ದಿನಗಳು: ಸೋಮವಾರ, ಬುಧವಾರ, ಭಾನುವಾರ, ಶುಕ್ರವಾರ
ಅದೃಷ್ಟದ ಬಣ್ಣಗಳು: ಗುಲಾಬಿ, ಹಸಿರು, ಆಕಾಶ ನೀಲಿ, ನೀಲಿ, ಹಳದಿ
ವೃಶ್ಚಿಕ ರಾಶಿ
ವ್ಯಾಪಾರಸ್ಥರಿಗೆ ಮೇ ತಿಂಗಳು ಉತ್ತಮವಾಗಿರುತ್ತದೆ. ನೀವು ಹೊಸ ಯೋಜನೆಯಲ್ಲಿ ಕೆಲಸವನ್ನು ಸಹ ಪ್ರಾರಂಭಿಸಬಹುದು. ಇದಲ್ಲದೆ, ನೀವು ಅನೇಕ ಸಣ್ಣ ಕೆಲಸಕ್ಕೆ ಸಂಬಂಧಿಸಿದ ಪ್ರವಾಸಗಳನ್ನು ಮಾಡಬೇಕಾಗಬಹುದು, ಅದು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಉದ್ಯೋಗಿಗಳು ಹಲವು ಸವಾಲುಗಳನ್ನು ಎದುರಿಸಬಹುದು. ನಿಮ್ಮ ನಿರ್ಲಕ್ಷ್ಯವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಸಮಯಕ್ಕೆ ಸರಿಯಾಗಿ ಎಚ್ಚರಿಕೆ ವಹಿಸುವುದು ಉತ್ತಮ. ಕುಟುಂಬ ಜೀವನದಲ್ಲಿ ಯಾವುದೇ ಸಮಸ್ಯೆ ಇರಲ್ಲ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಸಲುವಾಗಿ, ಈ ಅವಧಿಯಲ್ಲಿ ನೀವು ಕೆಲವು ದೊಡ್ಡ ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ದುರ್ಬಲ ಆರೋಗ್ಯದಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ರಾಶಿಚಕ್ರದ ಅಂಶ: ನೀರು
ರಾಶಿಚಕ್ರದ ಅಧಿಪತಿ: ಮಂಗಳ ಮತ್ತು ಪ್ಲುಟೊ
ಅದೃಷ್ಟದ ಸಂಖ್ಯೆಗಳು: 2,14,26,33,47,59
ಅದೃಷ್ಟದ ದಿನಗಳು: ಶುಕ್ರವಾರ, ಮಂಗಳವಾರ, ಭಾನುವಾರ, ಬುಧವಾರ
ಅದೃಷ್ಟದ ಬಣ್ಣಗಳು: ಹಳದಿ, ಹಸಿರು, ನೀಲಿ, ಬಿಳಿ, ಗುಲಾಬಿ, ಕಂದು
ಧನು ರಾಶಿ
ಈ ತಿಂಗಳು ಆರೋಗ್ಯ ಚಿಂತೆ ಹೆಚ್ಚಾಗಲಿದೆ, ಅನಾರೋಗ್ಯದಿಂದಾಗಿ ಸಾಕಷ್ಟು ತೊಂದರೆ ಎದುರಿಸುವಂತಾಗುವುದು. ಈ ಸಮಯದಲ್ಲಿ, ನಿಮ್ಮ ನಡವಳಿಕೆಯಲ್ಲೂ ಬದಲಾವಣೆಯನ್ನು ಕಾಣಬಹುದು. ಚಿಕ್ಕ ಪುಟ್ಟ ವಿಷಯಗಳಿಗೆ ಕೋಪಗೊಳ್ಳುವ ಅಭ್ಯಾಸ ಬಿಡುವುದು ಒಳ್ಳೆಯದು. ಕೆಲಸದ ವಿಷಯದಲ್ಲಿ ಈ ತಿಂಗಳು ತುಂಬಾನೇ ಮುಖ್ಯವಾಗಿದೆ. ಹೆಚ್ಚು ಶ್ರಮಪಟ್ಟು ದುಡಿದರೆ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ಈ ತಿಂಗಳು ನಿಮ್ಮ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಲು ಸಲಹೆ ನೀಡಲಾಗಿದೆ. ತಿಂಗಳ ಕೊನೆಯ ವಾರ ನಿಮಗೆ ಉತ್ತಮವಾಗಿದೆ, ಈ ಅವಧಿಯಲ್ಲಿ ನಿಮ್ಮ ದೊಡ್ಡ ಸಮಸ್ಯೆ ಬಗೆಹರಿಯಲಿದೆ.
ರಾಶಿಚಕ್ರದ ಅಂಶ: ಬೆಂಕಿ
ರಾಶಿ ಅಧಿಪತಿ: ಗುರು
ಅದೃಷ್ಟದ ಸಂಖ್ಯೆಗಳು: 5, 17, 20, 35, 42, 55
ಅದೃಷ್ಟದ ದಿನಗಳು: ಸೋಮವಾರ, ಭಾನುವಾರ, ಶುಕ್ರವಾರ, ಮಂಗಳವಾರ
ಅದೃಷ್ಟದ ಬಣ್ಣಗಳು: ಕೆಂಪು, ಗಾಢ ಹಳದಿ, ಆಕಾಶ ನೀಲಿ, ಬಿಳಿ, ಕೆನೆ
ಮಕರ ರಾಶಿ
ಈ ತಿಂಗಳು ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ನಿಮ್ಮ ಎಲ್ಲಾ ಕೆಲಸಗಳು ನಿಮ್ಮ ಯೋಜನೆಯ ಪ್ರಕಾರ ಪೂರ್ಣಗೊಳ್ಳುತ್ತವೆ. ಅದು ನೀವು ಸರ್ಕಾರಿ ಕೆಲಸಕ್ಕಾಗಿ ಶ್ರಮಿಸುತ್ತಿದ್ದರೆ, ಈ ತಿಂಗಳು ಶುಭ ಸುದ್ದಿ ಪಡೆಯುವಿರಿ. ವ್ಯಾಪಾರಸ್ಥರ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ವಿಶೇಷವಾಗಿ ನೀವು ಆಮದು ರಫ್ತಿಗೆ ಸಂಬಂಧಿಸಿದ ಕೆಲಸವನ್ನು ಮಾಡುತ್ತಿದ್ದರೆ, ಈ ತಿಂಗಳು ನಿಮಗೆ ತುಂಬಾ ಲಾಭದಾಯಕವಾಗಿರುತ್ತದೆ. ಕೌಟುಂಬಿಕ ಜೀವನ ಸಂತೋಷವಾಗಿರಲಿದೆ. ನಿಮ್ಮ ಮನೆಯ ಸದಸ್ಯರೊಂದಿಗೆ ನೀವು ಬಿರುಕು ಹೊಂದಿದ್ದರೆ, ಈ ಸಮಯದಲ್ಲಿ ನಿಮ್ಮ ನಡುವಿನ ಎಲ್ಲಾ ಭಿನ್ನಾಭಿಪ್ರಾಯ ಕಡಿಮೆಯಾಗಲಿದೆ.
ರಾಶಿಚಕ್ರದ ಅಂಶ: ಭೂಮಿ
ರಾಶಿ ಅಧಿಪತಿ: ಶನಿ
ಅದೃಷ್ಟದ ಸಂಖ್ಯೆಗಳು: 2,19,26,34,44,56
ಅದೃಷ್ಟದ ದಿನಗಳು: ಭಾನುವಾರ, ಬುಧವಾರ, ಶನಿವಾರ, ಮಂಗಳವಾರ
ಅದೃಷ್ಟದ ಬಣ್ಣಗಳು: ಕೆಂಪು, ಹಸಿರು, ಮರೂನ್, ಪೀಚ್, ಹಳದಿ
ಕುಂಭ ರಾಶಿ
ತಿಂಗಳ ಆರಂಭವು ನಿಮಗೆ ಅದ್ಭುತವಾಗಿರಲಿದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಹಳೆಯ ಪ್ರಕರಣದಿಂದ ಮುಕ್ತಿ ಪಡೆಯುತ್ತೀರಿ. ಉದ್ಯಮಿಗಳಿಗೆ ಭಾರಿ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ನಿಮ್ಮ ಕಠಿಣ ಪರಿಶ್ರಮವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಲಡಿದೆ. ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ಉತ್ತಮ ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ತಿಂಗಳು ಒಳ್ಳೆಯ ಅವಕಾಶಗಳು ದೊರೆಯಲಿದೆ. ತಿಂಗಳ ಮಧ್ಯದಲ್ಲಿ, ಬಯಸಿದ ಉದ್ಯೋಗವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ ನೀವು ಹೆಚ್ಚುತ್ತಿರುವ ವೆಚ್ಚವನ್ನು ನಿಯಂತ್ರಿಸಬೇಕಾಗಿದೆ. ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಅನುಮಾನದ ಸ್ವಭಾವದಿಂದ ಸಮಸ್ಯೆ ಹೆಚ್ಚಾಗಬಹುದು, ಆದ್ದರಿಂದ ಸಂಗಾತಿ ಮೇಲೆ ಅನುಮಾನ ಪಡಬೇಡಿ. ಆರೋಗ್ಯದ ದೃಷ್ಟಿಯಿಂದ ಈ ಸಮಯವು ಅನುಕೂಲಕರವಾಗಿರಲಿದೆ
ರಾಶಿಚಕ್ರದ ಅಂಶ: ವಾಯು
ರಾಶಿಚಕ್ರದ ಅಧಿಪತಿ: ಯುರೇನಸ್, ಶನಿ
ಅದೃಷ್ಟದ ಸಂಖ್ಯೆಗಳು: 5,18,27,32,40,51
ಅದೃಷ್ಟದ ದಿನಗಳು: ಸೋಮವಾರ, ಬುಧವಾರ, ಭಾನುವಾರ, ಗುರುವಾರ
ಅದೃಷ್ಟದ ಬಣ್ಣಗಳು: ಕಡು ಹಸಿರು, ಗುಲಾಬಿ, ಬಿಳಿ, ಹಳದಿ, ಕೆಂಪು
ಮೀನ ರಾಶಿ
ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವು ಬಲವಾಗುವುದು. ಈ ತಿಂಗಳು ನಿಮ್ಮ ಉನ್ನತ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳಲಿದೆ, ಹಾಗಂತ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಈ ಸಮಯವು ಉದ್ಯಮಿಗಳಿಗೆ ಕಷ್ಟಕರವಾಗಿರಲಿದೆ. ಈ ಸಮಯದಲ್ಲಿ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಹಣದ ಕೊರತೆಯಿಂದಾಗಿ, ನಿಮ್ಮ ಅನೇಕ ಕಾರ್ಯಗಳು ಅಪೂರ್ಣವಾಗಿ ಉಳಿಯುವ ಸಾಧ್ಯತೆಯಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅಷ್ಟು ಸರಿಯಿರಲ್ಲ, ಮನೆಯ ಸದಸ್ಯರೊಬ್ಬರಿಗೆ ಅನಾರೋಗ್ಯ ಉಂಟಾಗಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ತುಂಬಾ ಆಯಾಸ ಮಾಡಿಕೊಳ್ಳಬೇಡಿ
ರಾಶಿಚಕ್ರದ ಅಂಶ: ನೀರು
ರಾಶಿಚಕ್ರದ ಅಧಿಪತಿ: ನೆಪ್ಚೂನ್, ಗುರು
ಅದೃಷ್ಟ ಸಂಖ್ಯೆಗಳು: 7, 15, 26, 34, 41, 58
ಅದೃಷ್ಟದ ದಿನಗಳು: ಶನಿವಾರ, ಸೋಮವಾರ, ಮಂಗಳವಾರ, ಭಾನುವಾರ
ಅದೃಷ್ಟದ ಬಣ್ಣಗಳು: ಹಸಿರು, ಗುಲಾಬಿ, ಆಕಾಶ ನೀಲಿ, ಬಿಳಿ, ಹಳದಿ



Click it and Unblock the Notifications












