Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ರಷ್ಯಾದ ದ್ವೀಪದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪನ...ಜಪಾನ್, ಅಮೆರಿಕದಲ್ಲೂ ಸುನಾಮಿ ಎಚ್ಚರಿಕೆ!
ಭೂಕಂಪನಗಳ ನಾಡು ಜಪಾನ್ ಮತ್ತೊಮ್ಮೆ ಕಂಪಿಸಿದೆ. ಈ ಬಾರಿ ಅಪಾಯದ ತೀವ್ರತೆ ಅಧಿಕವಾಗಿದ್ದು, ರಿಕ್ಟರ್ ಮಾಪಕದಲ್ಲಿ ಬರೋಬ್ಬರಿ 8.8 ತೀವ್ರತೆ ವರದಿಯಾಗಿದೆ. ದಶಕಗಳ ಬಳಿಕ ಸಂಭವಿಸಿದ ಅತ್ಯಂತ ಹೆಚ್ಚಿನ ತೀವ್ರತೆಯ ಭೂಕಂಪನ ಇದಾಗಿದೆ. ಜಪಾನ್‌ನಲ್ಲಿ 1 ಮೀಟರ್‌ಗಿಂತ ದೊಡ್ಡ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಅಲರ್ಟ್ ನೀಡಲಾಗಿದೆ.
ಈ ಕಂಪನವು ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಇದು ಅಮೆರಿಕಾ, ರಷ್ಯಾ, ಜಪಾನ್ ಕರಾವಳಿ ತೀರಗಳಿಗೆ ಅಪಾಯ ತಂದೊಡ್ಡಿದೆ. ಸುನಾಮಿ ಅಲೆಗಳು ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. ಅಲಾಸ್ಕಾ ಮೂಲದ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರವು ಕ್ಯಾಲಿಫೋರ್ನಿಯಾ, ಒರೆಗಾನ್ ಮತ್ತು ವಾಷಿಂಗ್ಟನ್ ಸೇರಿದಂತೆ ಅಲ್ಯೂಟಿಯನ್ ದ್ವೀಪಗಳು ಮತ್ತು ಯುಎಸ್ ಪಶ್ಚಿಮ ಕರಾವಳಿಯ ಕೆಲವು ಭಾಗಗಳಿಗೆ ಸುನಾಮಿ ಎಚ್ಚರಿಕೆ ನೀಡಿದೆ.

ಕಮ್ಚಟ್ಕಾ ಮತ್ತು ರಷ್ಯಾದ ದೂರದ ಪೂರ್ವವು ಪೆಸಿಫಿಕ್ ರಿಂಗ್ ಆಫ್ ಫೈರ್ ಉದ್ದಕ್ಕೂ ಹರಡಿದೆ. ಈ ಪ್ರದೇಶ ಭೂಕಂಪನ ಹಾಗೂ ಜ್ವಾಲಾಮುಖಿಗಳ ಸಕ್ರೀಯ ಪ್ರದೇಶವಾಗಿದೆ. ಭೂಕಂಪನ ಸಂಭವಿಸಿ ಬರೋಬ್ಬರಿ 90 ನಿಮಿಷಗಳ ಬಳಿಕ ಅಲೆಗಳು ಸಮುದ್ರದ ದಡ ಸೇರುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಫೆಸಿಫಿಕ್ ರಿಂಗ್ ಆಫ್ ಫೈರ್‌ನಲ್ಲಿ ನೆಲೆಗೊಂಡಿರುವ ಜಪಾನ್, ಜಾಗತಿಕವಾಗಿ ಭೂಕಂಪ ಪೀಡಿತ ದೇಶಗಳಲ್ಲಿ ಒಂದಾಗಿದೆ.
ಜಪಾನ್‌ಗಿಂತ ರಷ್ಯಾಗೆ ಅಪಾಯ ಹೆಚ್ಚು
ಭೂಕಂಪನದ ಕೇಂದ್ರ ಬಿಂದು ರಷ್ಯಾದ ದ್ವೀಪದಲ್ಲಿದೆ, ಹೀಗಾಗಿ ರಷ್ಯಾದ ಕಡಲ ತೀರಕ್ಕೆ ಬರೋಬ್ಬರಿ 3ರಿಂದ 4 ಮೀಟರ್ ಎತ್ತರದ ಸಮುದ್ರದ ಅಲೆಗಳು ಅಪ್ಪಳಿಸಲಿವೆ ಎಂದು ಹೇಳಲಾಗಿದೆ. ಹೀಗಾಗಿ ಕರಾವಳಿ ಪ್ರದೇಶದಲ್ಲಿನ ಜನರನ್ನು ಬೇರೆಡೆಗೆ ತೆರಳಲು ಸೂಚಿಸಲಾಗಿದೆ. ಹಾಗೆ ಜನರು ಮುಂದಿನ ಆದೇಶದ ವರೆಗೂ ಕರಾವಳಿ ಪ್ರದೇಶದ ಸುತ್ತ ಬರಬಾರದು ಎಂದು ಸೂಚಿಸಿದೆ.
ರಿಂಗ್ಸ್ ಆಫ್ ಫೈರ್ ಅಂದ್ರೇನು?
ರಿಂಗ್ ಆಫ್ ಫೈರ್ ಪೆಸಿಫಿಕ್ ಮಹಾಸಾಗರದ ಬಹುಭಾಗವನ್ನು ಸುತ್ತುವರೆದಿರುವ ಸಕ್ರಿಯ ಮತ್ತು ಸುಪ್ತ ಜ್ವಾಲಾಮುಖಿಗಳ ಸಾಲಾಗಿದೆ. ಇದು ದಕ್ಷಿಣ ಚಿಲಿಯಿಂದ ಅಮೆರಿಕದ ಪಶ್ಚಿಮ ಕರಾವಳಿಯವರೆಗೆ, ಹಾಗೆ ಅಲಾಸ್ಕಾದ ದ್ವೀಪಗಳ ಮೂಲಕ ಮತ್ತು ಜಪಾನ್‌ನಿಂದ ಫಿಲಿಪೈನ್ಸ್‌ವರೆಗೂ ಹರಡಿಕೊಂಡಿದೆ.
ಈ ಪ್ರದೇಶದಲ್ಲಿ ಟೆಕ್ಟೋನಿಕ್ ಪ್ಲೇಟ್‌ನ ಚಲನೆಯಿಂದಾಗಿ ಈ ಸಾಲುಗಳ ಉದ್ದಕ್ಕೂ ಭೂಕಂಪನ ಸಾಮಾನ್ಯ ಎನ್ನುವಂತಾಗಿದೆ. ದಿನವೂ ಇಲ್ಲಿ ಕಂಪನಗಳು ಸಾಮಾನ್ಯವಾಗಿರಲಿದೆ. ಆದ್ರೆ ಬಹುತೇಕ ಕಂಪನಗಳು ತೀವ್ರತೆ ಉಂಟು ಮಾಡುವುದಿಲ್ಲ. ಹಾಗೆ ಗಮನಕ್ಕೂ ಬರುವುದಿಲ್ಲ.
ಭೂಮಿ ಮೇಲೆ ಸಂಭವಿಸಿದ ಅತೀ ತೀವ್ರತೆಯ ಕಂಪನ 9.5
ಕಂಪನದ ತೀವ್ರತೆ ಎಷ್ಟಿದೆ ಎಂಬುದರ ಆಧಾರದ ಮೇಲೆ ಅದರ ಪರಿಣಾಮವನ್ನು ಅಳತೆ ಮಾಡಲು ರಿಕ್ಟರ್ ಮಾಪಕ ಬಳಸಲಾಗುತ್ತದೆ. ಅದರಲ್ಲಿ ವರದಿಯಾದ ಅಂತ್ಯಂತ ತೀವ್ರತೆಯ ಕಂಪನ ಅಂದರೆ 9.5 ಆಗಿದೆ. 1960ರಲ್ಲಿ ಚಿಲಿಯ ಕರಾವಳಿಯಲ್ಲಿ ಈ ಭೂಕಂಪನ ಸಂಭವಿಸಿತ್ತು. ಇದು ಭೂಪಟದ ಬಹುತೇಕ ಕರಾವಳಿಯ ಮೇಲೆ ಪ್ರಭಾವ ಉಂಟು ಮಾಡಿತ್ತು. 120ಕ್ಕೂ ಹೆಚ್ಚು ಸ್ಥಳಗಳು ಈ ಭೂಕಂಪನದಿಂದ ಪರಿಣಾಮ ಎದುರಿಸಿದ್ದವು.
ಹಾಗೆ 2011ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ 9 ರ ತೀವ್ರತೆಯ ಭೂಕಂಪನವು ಅತೀ ದೊಡ್ಡ ವಿನಾಶಕ್ಕೆ ಕಾರಣವಾಗಿತ್ತು. ಸುಮಾರು 20 ಸಾವಿರ ಮಂದಿ ಮೃತಪಟ್ಟು ಹಲವರು ನಾಪತ್ತೆಯಾದರು, ಆಸ್ತಿ ಪಾಸ್ತಿ ಹಾನಿ ಕೂಡ ಸಂಭವಿಸಿತ್ತು. ಸದ್ಯ ಈಗ 8.8 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಈಗಲೂ ಸುನಾನಿ ಎಚ್ಚರಿಕೆ ನೀಡಲಾಗಿದೆ.



Click it and Unblock the Notifications
